ಜೀವನದಲ್ಲಿ ಯಶಸ್ಸಿನ ಉತ್ತುಂಗಕ್ಕೇರಬೇಕೆ? ಈ 4 ಅಭ್ಯಾಸಗಳಿಗೆ ಟಾಟಾ-ಬೈಬೈ ಹೇಳಿ!

Chanakya Niti - ಆಚಾರ್ಯ ಚಾಣಕ್ಯರು ಓರ್ವ ಮಹಾನ್ ವಿದ್ವಾಂಸರಲ್ಲಿ ಒಬ್ಬರಾಗಿದ್ದರು. ಅವನನ್ನು ವಿಷ್ಣುಗುಪ್ತ ಮತ್ತು ಕೌಟಿಲ್ಯ ಎಂದೂ ಕರೆಯುತ್ತಾರೆ. ಅವರು ತಮ್ಮ ಚಾಣಕ್ಯ ನೀತಿಶಾಸ್ತ್ರವನ್ನು ಬರೆದಿದ್ದಾರೆ, ಅದರಲ್ಲಿ ಮನುಷ್ಯನ ಜೀವನಕ್ಕೆ ಸಂಬಂಧಿಸಿದ ಹಲವು ಸಂಗತಿಗಳ ಕುರಿತು ಉಲ್ಲೇಖಿಸಿದ್ದಾರೆ. 
 

Chanakya Niti In Kannada: ಆಚಾರ್ಯ ಚಾಣಕ್ಯರು ಓರ್ವ ಮಹಾನ್ ವಿದ್ವಾಂಸರಲ್ಲಿ ಒಬ್ಬರಾಗಿದ್ದರು. ಅವನನ್ನು ವಿಷ್ಣುಗುಪ್ತ ಮತ್ತು ಕೌಟಿಲ್ಯ ಎಂದೂ ಕರೆಯುತ್ತಾರೆ. ಅವರು ತಮ್ಮ ಚಾಣಕ್ಯ ನೀತಿಶಾಸ್ತ್ರವನ್ನು ಬರೆದಿದ್ದಾರೆ, ಅದರಲ್ಲಿ ಮನುಷ್ಯನ ಜೀವನಕ್ಕೆ ಸಂಬಂಧಿಸಿದ ಹಲವು ಸಂಗತಿಗಳ ಕುರಿತು ಉಲ್ಲೇಖಿಸಿದ್ದಾರೆ. ದೈನಂದಿನ ಜೀವನದಲ್ಲಿ ಈ ನೀತಿಗಳನ್ನು ಅನುಸರಿಸಿದರೆ ಯಶಸ್ಸನ್ನು ಸಾಧಿಸಬಹುದು. ಚಾಣಕ್ಯ ನೀತಿಯಲ್ಲಿ ವ್ಯಕ್ತಿಯ ಯಾವ ಅಭ್ಯಾಸಗಳು ಆತನ ಯಶಸ್ಸಿಗೆ ಅಡ್ಡಿಯಾಗಬಹುದು ಎಂಬುದನ್ನೂ ಕೂಡ ಹೇಳಲಾಗಿದೆ, ಬನ್ನಿ ತಿಳಿದುಕೊಳ್ಳೋಣ.

 

ಇದನ್ನೂ ಓದಿ-Chanakya Niti: ಹೆಣ್ಣನ್ನು ಖುಷಿಪಡಿಸಲು ಒಂಟೆಯ ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ, ಮೊದಲ ಪ್ರಯತ್ನದಲ್ಲೇ ಫುಲ್ ರಿಸಲ್ಟ್ ಗ್ಯಾರಂಟಿ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

1 /5

ಜೀವನದಲ್ಲಿ ಸತ್ಯ ಸಂಗತಿಗಳನ್ನು ಸ್ವೀಕರಿಸದೆ ಇರುವುದು: ಜೀವನದಲ್ಲಿನ ಸತ್ಯ ಸಗತಿಗಳನ್ನು ಸ್ವೀಕರಿಸಲು ಸಾಧ್ಯವಾಗದ ಯಾವುದೇ ವ್ಯಕ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ. ವ್ಯಕ್ತಿ ತನ್ನ ಜೀವನದಲ್ಲಿ ಪ್ರತಿ ತಪ್ಪಿನಿಂದ ಏನನ್ನಾದರೂ ಕಲಿಯುತ್ತಾನೆ ಎಂದು ಚಾಣಕ್ಯ ನೀತಿ ಹೇಳುತ್ತದೆ. ಜೀವನದಲ್ಲಿ ಮಾಡಿದ ತಪ್ಪುಗಳಿಂದ ಪಾಠ ಅರಿತುಕೊಳ್ಳಿ.  ನೀವು ಯಾವಾಗಲೂ ಸತ್ಯ ಮತ್ತು ವಾಸ್ತವಿಕತೆಯನ್ನು ಒಪ್ಪಿಕೊಳ್ಳಬೇಕು, ಆಗ ಮಾತ್ರ ನೀವು ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಚಾಣಕ್ಯ ನೀತಿ ಹೇಳುತ್ತದೆ.  

2 /5

ಆತ್ಮವಿಶ್ವಾಸದ ಕೊರತೆ: ಚಾಣಕ್ಯ ನೀತಿಯ ಪ್ರಕಾರ, ಯಾವಾಗಲೂ ಸಣ್ಣ ವಿಷಯಗಳಲ್ಲಿ ಇತರರ ಕ್ಷಮೆಯಾಚಿಸುವ ಮತ್ತು ಇತರರ ಮುಂದೆ ದುರ್ಬಲರಾಗುವ ಜನರು ಸುಲಭವಾಗಿ ಯಶಸ್ಸನ್ನು ಸಾಧಿಸುವುದಿಲ್ಲ. ಇಂತಹ ಜನರು ಆತ್ಮವಿಶ್ವಾಸದ ಕೊರತೆಯನ್ನು ಹೊಂದಿರುತ್ತಾರೆ. ಅವರಿಗೆ ಸಮಾಜದಲ್ಲಿ ಗೌರವವೂ ಸಿಗುವುದಿಲ್ಲ.  

3 /5

ನಕಾರಾತ್ಮಕತೆ: ಸದಾ ಋಣಾತ್ಮಕ ಆಲೋಚನೆಗಳ ಸುಳಿಯಲ್ಲಿ ಸಿಲುಕಿ ಋಣಾತ್ಮಕತೆಯಿಂದ ಮುನ್ನಡೆಯಲು ಸಾಧ್ಯವಾಗದ ಜನರು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಹೆಚ್ಚಾಗಿ, ನಕಾರಾತ್ಮಕತೆಯು ಈ ಜನರ ಮೇಲೆ ಪ್ರಭಾವ ಬೀರುತ್ತದೆ. ಇದು ನಿಮ್ಮ ನಡೆಯುತ್ತಿರುವ ಕೆಲಸವನ್ನು ಹಾಳುಮಾಡಬಹುದು.  

4 /5

ಯಾವಾಗಲೂ ತನ್ನ ಭೂತಕಾಲದ ಬಗ್ಗೆ ಆಲೋಚಿಸುವ ವ್ಯಕ್ತಿ : ನಮ್ಮಲ್ಲಿ ಹಲವು ಜನರು ಯಾವಾಗಲೂ ತನ್ನ ಜೀವನದಲ್ಲಿ ಹಿಂದೆ ನಡೆದ ಘಟನೆಗಳ ಬಗ್ಗೆ ಯೋಚಿಸುತ್ತಾರೆ ಮತ್ತು ಈ ಆಲೋಚನೆಗಳಿಂದ ದುಃಖಿತರಾಗುತ್ತಾರೆ ಎಂಬುದನ್ನು ನೀವು ಗಮನಿಸಿರಬೇಕು. ಚಾಣಕ್ಯ ನೀತಿಯ ಪ್ರಕಾರ, ಈ ಕಾರಣದಿಂದಾಗಿ, ಒಬ್ಬ ವ್ಯಕ್ತಿಯು ವರ್ತಮಾನದಲ್ಲಿ ನಡೆಯುತ್ತಿರುವ ಘಟನೆಗಳಿಗೆ ಗಮನ ಕೊಡಲು ಸಾಧ್ಯವಾಗುವುದಿಲ್ಲ, ಅದು ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ವ್ಯಕ್ತಿಯ ಈ ಅಭ್ಯಾಸವು ಯಶಸ್ಸಿಗೆ ದೊಡ್ಡ ಅಡ್ಡಿಯಾಗುತ್ತದೆ.  

5 /5

(ಹಕ್ಕುತ್ಯಾಗ- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು  ಸಂಪರ್ಕಿಸಿ.)