Tax saving for salaried: ವೇತನ ವರ್ಗದವರು ತೆರಿಗೆ ಉಳಿಸಲು ಇಲ್ಲಿದೆ ಐದು ಸುಲಭ ಮಾರ್ಗ

ನೌಕರರ ಭವಿಷ್ಯ ನಿಧಿವೇತನ ಪಡೆಯುವ ಜನರಿಗೆ ತೆರಿಗೆ ಉಳಿಸುವ ಸರಳ ಆಯ್ಕೆಗಳಲ್ಲಿ ಒಂದಾಗಿದೆ. ಇದರಲ್ಲಿ, ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ಅಡಿಯಲ್ಲಿ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಲಭ್ಯವಿದೆ.

ನವದೆಹಲಿ : Top 5 tax saving options for salaried: ವೇತನ ವರ್ಗಕ್ಕೆ ತೆರಿಗೆ ಉಳಿತಾಯ ಯಾವಾಗಲೂ ಸವಾಲಾಗಿರುತ್ತದೆ. ಅವರು ತಮ್ಮ ಮಾಸಿಕ ವೆಚ್ಚಗಳ ಜೊತೆಗೆ ಉಳಿತಾಯ, ಹೂಡಿಕೆ ಮತ್ತು ನಿವೃತ್ತಿ ಎಲ್ಲವನ್ನೂ ಯೋಚಿಸಬೇಕು. ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸುವ ಅವಧಿ ಆರಂಭವಾದ ತಕ್ಷಣ ವೇತನ ಪಡೆಯುವ ವ್ಯಕ್ತಿ ತೆರಿಗೆ ಉಳಿತಾಯ ಆರಂಭಿಸಬೇಕು.  
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ನೌಕರರ ಭವಿಷ್ಯ ನಿಧಿವೇತನ ಪಡೆಯುವ ಜನರಿಗೆ ತೆರಿಗೆ ಉಳಿಸುವ ಸರಳ ಆಯ್ಕೆಗಳಲ್ಲಿ ಒಂದಾಗಿದೆ. ಇದರಲ್ಲಿ, ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ಅಡಿಯಲ್ಲಿ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಲಭ್ಯವಿದೆ. ಇಪಿಎಫ್ ಅನ್ನು ಕೇಂದ್ರೀಯ ಆಡಳಿತ ಮಂಡಳಿ  ನಿರ್ವಹಿಸುತ್ತದೆ. ಇಪಿಎಫ್ ನಲ್ಲಿ ನೆನಪಿನಲ್ಲಿಡಬೇಕಾದ ಒಂದು ವಿಷಯವೆಂದರೆ ಪಿಎಫ್ ಖಾತೆಯಲ್ಲಿ ಗಳಿಸಿದ ಬಡ್ಡಿಯು ವಾರ್ಷಿಕವಾಗಿ 2.5 ಲಕ್ಷದವರೆಗೆ ತೆರಿಗೆ ಮುಕ್ತವಾಗಿರುತ್ತದೆ.

2 /5

1.5 ಲಕ್ಷದ ಮಿತಿಯವರೆಗಿನ ತೆರಿಗೆ ಕಡಿತದ ಲಾಭವನ್ನು ರಾಷ್ಟ್ರೀಯ ಪಿಂಚಣಿ ಯೋಜನೆ ಮೇಲೆ ಆದಾಯ ತೆರಿಗೆಯ 80CCE ಅಡಿಯಲ್ಲಿ ಪಡೆಯಬಹುದು. ಇದಲ್ಲದೇ, ಎನ್‌ಪಿಎಸ್‌ನಲ್ಲಿ ಸೆಕ್ಷನ್ 80 ಸಿಸಿಡಿ (1 ಬಿ) ಅಡಿಯಲ್ಲಿ ರೂ .50,000 ಹೆಚ್ಚುವರಿ ತೆರಿಗೆ ವಿನಾಯಿತಿ ಪಡೆಯಬಹುದು. 

3 /5

ಸುರಕ್ಷಿತ ಹೂಡಿಕೆ, ಖಾತರಿಯ ಆದಾಯದೊಂದಿಗೆ ತೆರಿಗೆ ಉಳಿಸಬೇಕಾದರೆ ಬ್ಯಾಂಕ್ ಎಫ್‌ಡಿಗಳು ಅತ್ಯುತ್ತಮ ಆಯ್ಕೆಯಾಗಿದೆ. ಬ್ಯಾಂಕುಗಳಲ್ಲಿ 1.5 ಲಕ್ಷದವರೆಗೆ ತೆರಿಗೆ ಉಳಿಸಬಹುದು. ಇದು 5 ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿದೆ. ಆದರೆ, ತೆರಿಗೆ ಉಳಿಸುವ ಎಫ್‌ಡಿಗಳ ಮುಕ್ತಾಯದ ಮೇಲೆ ಪಡೆದ ಆದಾಯವು ತೆರಿಗೆಗೆ ಒಳಪಟ್ಟಿರುತ್ತದೆ ಎಂಬುದನ್ನು ನೆನಪಿನಲ್ಲಿಡಿ.

4 /5

PPF ಪಬ್ಲಿಕ್ ಪ್ರಾವಿಡೆಂಟ್ (PPF) ಅತ್ಯುತ್ತಮ ತೆರಿಗೆ ಉಳಿತಾಯದ ಆಯ್ಕೆಗಳಲ್ಲಿ ಒಂದಾಗಿದೆ. ಈ ಹೂಡಿಕೆಯಲ್ಲಿ ಮೆಚ್ಯೂರಿಟಿ ಮೊತ್ತ ಮತ್ತು ಬಡ್ಡಿ ಸಹ ತೆರಿಗೆ ಮುಕ್ತವಾಗಿರುತ್ತದೆ. ಅಂದರೆ, ಅದರಲ್ಲಿ ಹೂಡಿಕೆಯೊಂದಿಗೆ, ಮುಕ್ತಾಯದ ಮೇಲೆ ಪಡೆದ ನಿಧಿ ಮತ್ತು ಬಡ್ಡಿಯ ಮೊತ್ತ, ಈ ಮೂರೂ ತೆರಿಗೆ ಮುಕ್ತವಾಗಿರುತ್ತವೆ. ಪಿಪಿಎಫ್ ಖಾತೆಯಲ್ಲಿನ ಹೂಡಿಕೆಯ ಮೇಲೆ ಸೆಕ್ಷನ್ 80 ಸಿ ಅಡಿಯಲ್ಲಿ 1.50 ಲಕ್ಷ ತೆರಿಗೆ ವಿನಾಯಿತಿ ಲಭ್ಯವಿದೆ.  

5 /5

ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ತೆರಿಗೆ ಉಳಿಸಬಹುದು. ಮ್ಯೂಚುವಲ್ ಫಂಡ್‌ಗಳ ಈಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್ (ELSS) ನಲ್ಲಿನ ಹೂಡಿಕೆಯ ಮೇಲೆ ನೀವು ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಕಡಿತದ ಲಾಭವನ್ನು ಪಡೆಯಬಹುದು.  ELSS ನಲ್ಲಿ ಉತ್ತಮ ಆದಾಯದೊಂದಿಗೆ ತೆರಿಗೆ ಉಳಿತಾಯವಿದೆ.