ಸುಖ ನಿದ್ರೆಗೆ ಪಂಚ ಸೂತ್ರ

ಆರೋಗ್ಯ ಚೆನ್ನಾಗಿರಬೇಕು ಎಂದಾದರೆ ನಿದ್ರೆ ಬಹಳ ಮುಖ್ಯ. 

ಆರೋಗ್ಯವಂತರಾಗಿರಲು ಆಹಾರದಂತೆ ನಿದ್ರೆಯೂ ಕೊಡ ಬಹಳ ಮುಖ್ಯ. ಆದರೆ, ಈ ಒತ್ತಡಭರಿತ ಜೀವನಶೈಲಿಯಲ್ಲಿ ನೆಮ್ಮದಿಯಿಂದ ನಿದ್ರೆ ಮಾಡುವುದು ಕೂಡ ಒಂದು ಕನಸಿದ್ದಂತೆ. ಆದರೆ, ನಿಮ್ಮ ಜೀವನಶೈಲಿಯಲ್ಲಿ ಪಂಚ ಸೂತ್ರಗಳನ್ನು ಅನುಸರಿಸಿದರೆ ಸುಖವಾದ ನಿದ್ರೆಯನ್ನು ಪಡೆಯಲು ಇದು ಸಹಕಾರಿ ಎಂದು ಸಾಬೀತುಪಡಿಸಬಹುದು. ಸುಖ ನಿದ್ರೆಗೆ ಆ ಪಂಚಸೂತ್ರಗಳು ಯಾವುವು ಎಂದು ತಿಳಿಯೋಣ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ನೀವು ಪ್ರತಿ ಕೆಲಸಕ್ಕೂ ಟೈಮ್ ಟೇಬಲ್ ರೂಪಿಸುವಂತೆ ಮಲಗಲು ಮತ್ತು ಏಳಲು ಕೂಡ ಟೈ ಟೇಬಲ್ ರೂಪಿಸಿ. ಮಾತ್ರವಲ್ಲ, ನಿಮ್ಮ ನಿಗದಿತ ಸಮಯದಲ್ಲಿ ಮಲಗಲು ಪ್ರಯತ್ನಿಸಿ.

2 /5

ಈ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬರಿಗೂ ಕೂಡ ಮೊಬೈಲ್, ಲ್ಯಾಪ್ಟಾಪ್ ಸೇರಿದಂತೆ ಗ್ಯಾಜೆಟ್ ಗಳನ್ನು ಬಿಟ್ಟಿರುವ ಅಭ್ಯಾಸವೇ ಇಲ್ಲ. ಆದರೆ, ನೀವು ಮಲಗುವ ಸಮಯದಲ್ಲಿ ಗ್ಯಾಜೆಟ್ಗಳಿಂದ ಅಂತರ ಕಾಯ್ದುಕೊಂಡರೆ ಬೇಗ ನಿದ್ದೆ ಬರುತ್ತದೆ.

3 /5

ಬೆಳಕಿಗಿಂತ ಕತ್ತಲಲ್ಲಿ ಉತ್ತಮ ನಿದ್ರೆ ಬರುತ್ತದೆ. ಹಾಗಾಗಿ, ಮಲಗುವ ಕೋಣೆಯಲ್ಲಿ ಉತ್ತಮ ನಿದ್ರೆಯ ವಾತಾವರಣವನ್ನು ಸೃಷ್ಟಿಸುವುದು ಬಹಳ ಮುಖ್ಯ. ಈ ಬಗ್ಗೆ ಗಮನ ಹರಿಸಿ.

4 /5

ನಶೆ ಎಂದೊಡನೆ ಮೊದಲು ನೆನಪಾಗುವುವು ಮದ್ಯಪಾನ. ಆದರೆ, ಮದ್ಯಪಾನ ಮಾತ್ರವಲ್ಲ ರಾತ್ರಿ ಮಲಗುವ ವೇಳೆ ಟೀ-ಕಾಫಿ ಸೇವಿಸುವುದು ಕೂಡ ಬಹಳ ಮುಖ್ಯ.

5 /5

ನಿಯಮಿತ ವ್ಯಾಯಾಮವನ್ನು ರೂಢಿಸಿಕೊಳ್ಳಿ. ಇದು ಕೂಡ ನಿದ್ರಿಸಲು ಸಹಾಯಕವಾಗುತ್ತದೆ.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.