ಗೌತಮ್ ಅದಾನಿಯಿಂದ ಈ ಸಿಮೆಂಟ್ ಕಂಪನಿ ಖರೀದಿ; ಶೇ.15ರಷ್ಟು ಏರಿಕೆ ಕಂಡ ಷೇರು ಬೆಲೆ!

Orient Cement Ltd Share Price: ಕಳೆದ ಕೆಲವು ತಿಂಗಳುಗಳಿಂದ ಗೌತಮ್ ಅದಾನಿ ಜೊತೆಗೆ ಸಿಕೆ ಬಿರ್ಲಾರ ಮಾತುಕತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಟ್ರೆಂಡ್‌ಲೈನ್ ಡೇಟಾ ಪ್ರಕಾರ, ಸೆಪ್ಟೆಂಬರ್ 2023ರ ತ್ರೈಮಾಸಿಕದವರೆಗೆ ಪ್ರವರ್ತಕರು ಕಂಪನಿಯಲ್ಲಿ ಸುಮಾರು ಶೇ.37.9ರಷ್ಟು ಪಾಲನ್ನು ಹೊಂದಿದ್ದಾರೆ.  

ಓರಿಯಂಟ್ ಸಿಮೆಂಟ್ ಲಿಮಿಟೆಡ್ ಷೇರು ಬೆಲೆ: ಅದಾನಿ ಗ್ರೂಪ್ ಸಿಮೆಂಟ್ ವ್ಯವಹಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಜರ್ಮನಿಯ ಹೈಡೆಲ್ಬರ್ಗ್ ಮೆಟೀರಿಯಲ್ಸ್ ಖರೀದಿಸಲು ಮೂರು ದೈತ್ಯರು ಸ್ಪರ್ಧೆಯಲ್ಲಿದ್ದಾರೆಂದು ಇತ್ತೀಚೆಗೆ ಮಾಧ್ಯಮ ವರದಿಗಳು ಹೇಳಿದ್ದವು. ಆದರೆ ಈ ಒಪ್ಪಂದದ ಬಗ್ಗೆ ಅದಾನಿ ಗ್ರೂಪ್ ಯಾವುದೇ ಹೇಳಿಕೆ ನೀಡಿಲ್ಲ. ಉದ್ಯಮಿ ಗೌತಮ್ ಅದಾನಿಯವರು ಸಿಮೆಂಟ್ ಕಂಪನಿ ಖರೀದಿ ಮಾಡುತ್ತಾರೆಂಬ ಸುದ್ದಿ ವೈರಲ್ ಆದ ಬಳಿಕ ಓರಿಯಂಟ್ ಸಿಮೆಂಟ್ ಲಿಮಿಟೆಡ್ ಷೇರು ಬೆಲೆ ಭರ್ಜರಿ ಏರಿಕೆಯಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ವರದಿಯ ಪ್ರಕಾರ ಸಿಕೆ ಬಿರ್ಲಾ ಅವರು ಓರಿಯಂಟ್ ಸಿಮೆಂಟ್‌ನಲ್ಲಿ ತಮ್ಮ Promoters ಪಾಲನ್ನು ಮಾರಾಟ ಮಾಡಲು ಗೌತಮ್ ಅದಾನಿಯನ್ನು ಸಂಪರ್ಕಿಸಿದ್ದಾರೆ. ಇದರ ನಂತರ ಓರಿಯಂಟ್ ಸಿಮೆಂಟ್ ಷೇರುಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಗೌತಮ್ ಅದಾನಿ ಸಿಮೆಂಟ್ ಕಂಪನಿಯ ಷೇರುಗಳನ್ನು ಖರೀದಿಸುವ ವದಂತಿಯ ಬಳಿಕ ಓರಿಯಂಟ್ ಸಿಮೆಂಟ್ ಷೇರುಗಳು 52 ವಾರಗಳ ದಾಖಲೆಯ ಮಟ್ಟವನ್ನು ತಲುಪಿವೆ.    

2 /5

ಮಂಗಳವಾರ ಈ ಷೇರು 189.30 ರೂ.ನಲ್ಲಿ ವಹಿವಾಟು ನಡೆಸುತ್ತಿತ್ತು. ಆದರೆ ಬುಧವಾರ ಬೆಳಗ್ಗೆ ಸುಮಾರು 14.60  ರೂ.(ಶೇ.7.72ರಷ್ಟು) ಏರಿಕೆಯೊಂದಿಗೆ 203.70 ರೂ.ಗೆ ತಲುಪಿತ್ತು. ವಹಿವಾಟಿನ ಅವಧಿಯಲ್ಲಿ ಷೇರಿನ ಗರಿಷ್ಠ ಮಟ್ಟ 216.50 ರೂ.ಗೆ ತಲುಪಿತ್ತು. ಇದಾದ ಬಳಿಕ ಪ್ರಾಫಿಟ್ ಬುಕ್ಕಿಂಗ್‍ನಿಂದಾಗಿ ಶೇರು ಸ್ವಲ್ಪ ಇಳಿಕೆ ಕಂಡಿತು.

3 /5

ದೇಶೀಯ ಹೂಡಿಕೆದಾರರಿಂದ(Domestic players) ಆರಂಭಿಕ ಕೊಡುಗೆಗಳನ್ನು ತಿರಸ್ಕರಿಸಿದ ನಂತರ CK ಬಿರ್ಲಾ ಗೌತಮ್ ಅವರು ಗೌತಮ್ ಅದಾನಿಯನ್ನು ಸಂಪರ್ಕಿಸಿದ್ದಾರೆಂದು ವರದಿಯಾಗಿದೆ. ಈ ವರದಿಯ ಪ್ರಕಾರ, ಅದಾನಿ ಗ್ರೂಪ್‌ಗೆ ಸಂಭವನೀಯ ಒಪ್ಪಂದವನ್ನು ಚರ್ಚಿಸಲು ಎರಡೂ ಕಡೆಯ ಹಿರಿಯ ಮ್ಯಾನೇಜ್‌ಮೆಂಟ್ ಭೇಟಿಯಾಗಿದೆಯಂತೆ.

4 /5

ಅದಾನಿ ಗ್ರೂಪ್ ಈಗಾಗಲೇ ದೇಶದಲ್ಲಿ 2ನೇ ಅತಿದೊಡ್ಡ ಸಿಮೆಂಟ್ ಉತ್ಪಾದಕವಾಗಿದೆ. Sanghi Industriesಇತ್ತೀಚಿನ ಸ್ವಾಧೀನದ ನಂತರ ಇದರ ಒಟ್ಟು ಸಿಮೆಂಟ್ ಉತ್ಪಾದನಾ ಸಾಮರ್ಥ್ಯವು 110 MTPAಗೆ ಹೆಚ್ಚಿದೆ.

5 /5

ಕಳೆದ ಕೆಲವು ತಿಂಗಳುಗಳಿಂದ ಗೌತಮ್ ಅದಾನಿ ಜೊತೆಗೆ ಸಿಕೆ ಬಿರ್ಲಾರ ಮಾತುಕತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಟ್ರೆಂಡ್‌ಲೈನ್ ಡೇಟಾ ಪ್ರಕಾರ, ಸೆಪ್ಟೆಂಬರ್ 2023ರ ತ್ರೈಮಾಸಿಕದವರೆಗೆ ಪ್ರವರ್ತಕರು ಕಂಪನಿಯಲ್ಲಿ ಸುಮಾರು ಶೇ.37.9ರಷ್ಟು ಪಾಲನ್ನು ಹೊಂದಿದ್ದಾರೆ.