MS Dhoni : ಕ್ಯಾಪ್ಟನ್ ಕೂಲ್ ಧೋನಿಗೆ ಈ ಪಾನಕ ಅಂದ್ರೆ ತುಂಬಾ ಇಷ್ಟ: ಪ್ರ್ಯಾಕ್ಟೀಸ್ ಟೈಂನಲ್ಲೂ ಹೇಗೆ ಕುಡಿಯುತ್ತಿದ್ದಾರೆ ನೋಡಿ

MS Dhoni Love for Tea: ಐಪಿಎಲ್ 2023ರ ತಯಾರಿ ಅಂತಿಮ ಹಂತ ತಲುಪಿದೆ. ಈ ಸೀಸನ್’ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸದ್ಯ ಅಬ್ಬರಿಸುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಇದೀಗ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಒಂದು ಇಂಟ್ರೆಸ್ಟಿಂಗ್ ವಿಷಯವನ್ನು ನಿಮಗೆ ಹೇಳಲಿದ್ದೇವೆ.

1 /5

ರಾಂಚಿಯ ರಾಜಕುಮಾರ, ಟೀಂ ಇಂಡಿಯಾದ ಫೇವರೇಟ್ ಕ್ಯಾಪ್ಟನ್ ಅಂದರೆ ಅದು ಮಹೇಂದ್ರ ಸಿಂಗ್ ಧೋನಿ. ಸದ್ಯ ಇವರಿಗೆ ಸಂಬಂಧಿಸಿದ ಕೆಲ ಫೋಟೋ, ವಿಡಿಯೋಗಳು ವೈರಲ್ ಆಗಿವೆ.

2 /5

ಈ ಫೋಟೋ, ವಿಡಿಯೋಗಳನ್ನು ಚೆನ್ನೈ ಸೂಪರ್ ಕಿಂಗ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಮಹೇಂದ್ರ ಸಿಂಗ್ ಧೋನಿ ಟೀ ಕುಡಿಯುತ್ತಿರುವುದನ್ನು ಕಾಣಬಹುದು. ಧೋನಿ ಹಲವು ಸಂದರ್ಶನಗಳಲ್ಲಿ ಟೀ ಜೊತೆಗಿನ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ.

3 /5

ಇತ್ತೀಚೆಗೆ ಚೆನ್ನೈ ಸೂಪರ್ ಕಿಂಗ್ಸ್ ಧೋನಿ ಬ್ಯಾಟಿಂಗ್ ಮಾಡುವ ವಿಡಿಯೋ ಕೂಡ ಶೇರ್ ಮಾಡಿತ್ತು. ಈ ವಿಡಿಯೋದಲ್ಲಿ ಅವರು ಮತ್ತೊಮ್ಮೆ ತಮ್ಮ ಹಳೆಯ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ

4 /5

ಈ ಐಪಿಎಲ್ ಧೋನಿಯ ಕೊನೆಯ ಐಪಿಎಲ್ ಆಗಿರಬಹುದು ಎಂದು ಹೇಳಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅಭಿಮಾನಿಗಳು ಥಾಲಾ ಆಟವನ್ನು ಕಣ್ತುಂಬಿಕೊಳ್ಳಲು ತುದಿಕಾಲಿನಲ್ಲಿ ಕಾಯುತ್ತಿದ್ದಾರೆ.

5 /5

ಈ ಬಾರಿ ಚೆನ್ನೈ ತಂಡ ಹಲವು ದೊಡ್ಡ ಆಟಗಾರರನ್ನು ಹರಾಜಿನಲ್ಲಿ ಸೇರಿಸಿಕೊಂಡಿದೆ. ತಂಡವು ಬೆನ್ ಸ್ಟೋಕ್ಸ್ ಅವರಂತಹ ಆಟಗಾರರನ್ನು ಹೊಂದಿದ್ದು, ಅವರು ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸಿಕೊಡುವ ಸಾಮಾರ್ಥ್ಯ ಹೊಂದಿದ್ದಾರೆ. ಹೀಗಿರುವಾಗ ಧೋನಿ ನಾಯಕತ್ವದಲ್ಲಿ ಚೆನ್ನೈ ತಂಡ ಅಬ್ಬರಿಸುವುದು ಖಚಿತ ಎನ್ನಲಾಗಿದೆ.