ಸನಾತನ ಹಿಂದೂ ಧರ್ಮದ ಉಳಿವಿಗೆ ಮತ್ತೆ ಮೋದಿ ಬೆಂಬಲಿಸಿ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕರೆ

ದೇಶವಾಸಿಗಳಲ್ಲಿ ಧಾರ್ಮಿಕ ನಂಬಿಕೆ ಉಳಿಸುವ ಕೆಲಸವಾಗಬೇಕಿದೆ. ಮತಾಂತರದಂತಹ ಅಹಿತಕರ ಚಟುವಟಿಕೆಗಳಿಂದ ಹಿಂದೂಗಳನ್ನು, ಹಿಂದೂ ಮಹಿಳೆಯರನ್ನು ರಕ್ಷಿಸುವ ಕಾರ್ಯ ಅವಶ್ಯವಾಗಿದೆ. ಧಾರ್ಮಿಕ ಅನುಸರಣೆಗೆ ಸ್ವಾತಂತ್ರ್ಯದ ಅಗತ್ಯವಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

Written by - Prashobh Devanahalli | Edited by - Krishna N K | Last Updated : Apr 24, 2024, 10:47 PM IST
    • ದೇಶದಲ್ಲೇ ಇಂದು ಬಹುಸಂಖ್ಯಾತರಿಗೆ ಸುರಕ್ಷತೆ ಬೇಕಾಗಿದೆ.
    • ಧಾರ್ಮಿಕ ಅನುಸರಣೆಗೆ ಸ್ವಾತಂತ್ರ್ಯದ ಅಗತ್ಯವಿದೆ.
    • ಇದಕ್ಕಾಗಿ ಮತ್ತೆ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರಲೇಬೇಕಿದೆ.
ಸನಾತನ ಹಿಂದೂ ಧರ್ಮದ ಉಳಿವಿಗೆ ಮತ್ತೆ ಮೋದಿ ಬೆಂಬಲಿಸಿ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕರೆ title=

ಹುಬ್ಬಳ್ಳಿ: ದೇಶದಲ್ಲಿ ನಮ್ಮ ಸನಾತನ ಹಿಂದೂ ಧರ್ಮದ ಉಳಿವಿಗಾಗಿ ಇಂದು ನರೇಂದ್ರ ಮೋದಿ ಅವರ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ ಜೋಶಿ ಪ್ರತಿಪಾದಿಸಿದರು.

ನಗರದ ಉಣಕಲ್‌ನಲ್ಲಿ ಬುಧವಾರ ರಾತ್ರಿ ಆಯೋಜಿಸಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ನೇಹಾಳಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಮಾತನಾಡಿದರು. ಬಹುಸಂಖ್ಯಾತರ ದೇಶದಲ್ಲೇ ಇಂದು ಬಹುಸಂಖ್ಯಾತರಿಗೆ ಸುರಕ್ಷತೆ ಬೇಕಾಗಿದೆ. ಅವರವರ ಧರ್ಮಾಚರಣೆಗೆ ಸ್ವಾತಂತ್ರ್ಯ ಬೇಕಾಗಿದೆ ಎಂದು ಹೇಳಿದರು.

ಇದನ್ನೂ ಓದಿ:"ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ಮಿತಿ ಶೇ 50 ಕ್ಕಿಂತಲೂ ಹೆಚ್ಚಳ"

ದೇಶವಾಸಿಗಳಲ್ಲಿ ಧಾರ್ಮಿಕ ನಂಬಿಕೆ ಉಳಿಸುವ ಕೆಲಸವಾಗಬೇಕಿದೆ. ಮತಾಂತರದಂತಹ ಅಹಿತಕರ ಚಟುವಟಿಕೆಗಳಿಂದ ಹಿಂದೂಗಳನ್ನು, ಹಿಂದೂ ಮಹಿಳೆಯರನ್ನು ರಕ್ಷಿಸುವ ಕಾರ್ಯ ಅವಶ್ಯವಾಗಿದೆ. ಧಾರ್ಮಿಕ ಅನುಸರಣೆಗೆ ಸ್ವಾತಂತ್ರ್ಯದ ಅಗತ್ಯವಿದೆ. ಇದಕ್ಕಾಗಿ ಮತ್ತೆ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರಲೇಬೇಕಿದೆ ಎಂದು ಹೇಳಿದರು

ಕಂಡಿರಲಿಲ್ಲ ಇಷ್ಟೊಂದು ಕ್ರೂರ ಹತ್ಯೆ: ನೇಹಾಳಷ್ಟು ಕ್ರೂರ ಹತ್ಯೆಯನ್ನು ಯಾವತ್ತೂ ಕಂಡಿರಲಿಲ್ಲ. ಆರೋಪಿ ಫಯಾಜ್ ಅಷ್ಟೊಂದು ಅಮಾನವೀಯವಾಗಿ ಆಕೆಗೆ 10-14 ಬಾರಿ ಚೂರಿ ಇರಿದು ಕೊಂದಿದ್ದಾನೆ. ಹಾಗಿದ್ದರೂ ರಾಜ್ಯ ಸರ್ಕಾರಕ್ಕೆ ಸ್ವಲ್ಪವೂ ಕನಿಕರವಿಲ್ಲ ಎಂದು ಸಚಿವ ಜೋಶಿ ವಾಗ್ದಾಳಿ ನಡೆಸಿದರು.

ದೇಶಾದ್ಯಂತ ನೇಹಾ ಹತ್ಯೆ ಪ್ರಕರಣ ಪ್ರತಿಧ್ವನಿಸಿದ್ದರಿಂದ ರಾಜ್ಯ ಸರ್ಕಾರ ಸದ್ಯ ಸಿಐಡಿಗೆ ವಹಿಸಿ ನೇಹಾ ಕುಟುಂಬದ ಕಣ್ಣೊರೆಸೋ ಕೆಲಸ ಮಾಡಿದೆ ಅಷ್ಟೇ. ನಿಜವಾಗಿಯೂ ಕಾಂಗ್ರೆಸ್ಸಿಗರಿಗೆ ಕರುಣೆ, ಕಾಳಜಿ ಎಂಬುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ:ಕಾಂಗ್ರೆಸ್ ತುಷ್ಟೀಕರಣ ರಾಜಕೀಯಕ್ಕೆ ಮುಸ್ಲೀಮರಿಗೆ ಮೀಸಲಾತಿಗೆ ಬೆಂಬಲಿಸುತ್ತದೆ: ಬಸವರಾಜ ಬೊಮ್ಮಾಯಿ

ಮೋದಿ ಅಧಿಕಾರದಲ್ಲಿ ಇದ್ರೆ ಮಾತ್ರ ಭಾರತ ವಿಶ್ವಗುರು: ಮೋದಿ ನೇತೃತ್ವದ ಬಿಜೆಪಿ ಸರಕಾರ ಇದ್ದರೆ ಮಾತ್ರ ಭಾರತ ವಿಶ್ವಗುರು ಆಗಲು ಸಾಧ್ಯ. ಜನರೂ ಇದನ್ನು ಮನಗಂಡಿದ್ದಾರೆ ಎಂದ ಸಚಿವರು, ಮತ್ತೆ ಕಮಲದ ಗುರುತಿಗೆ ಮತ ನೀಡುವ ಮೂಲಕ ಮೋದಿ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಈ ಪ್ರಚಾರ ಸಭೆಯಲ್ಲಿ ಆರಂಭಕ್ಕೂ ಮುನ್ನ ಮತಾಂಧನಿಂದ ಹತ್ಯೆಯಾದ ನೇಹಾ ಹಿರೇಮಠಗೆ ಶ್ರದ್ಧಾಂಜಲಿ ಅರ್ಪಿಸಿ, ಆತ್ಮಕ್ಕೆ ಶಾಂತಿ ಕೋರಲಾಯಿತು. ಸಭೆಯಲ್ಲಿ ಬಿಜೆಪಿ ಪ್ರಮುಖರಾದ ರಾಜಣ್ಣ ಕೊರವಿ, ಉಮೇಶ್ ಗೌಡ ಕೌಜಗಿರಿ, ಮಹಾದೇವಪ್ಪ ಮೆಣಸಿನಕಾಯಿ, ಸೋಮನಗೌಡ ಪಾಟೀಲ್, ಪರಶುರಾಮ ಹೊಂಬಾಲ, ರಾಮಣ್ಣ ಕೊಕ್ಕಟಿ, ಶೇಕಣ್ಣ ಸೂರ್ಯವಂಶಿ, ಮೋಹನ್ ಬಡಿಗೇರ, ಯಲ್ಲಪ್ಪ ಕಡಪಟ್ಟಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News