ನಮ್ಮ ಭಯೋತ್ಪಾದಕರೇ ನಮ್ಮ ಬ್ರದರ್ಸ್ ಎನ್ನುತ್ತದೆ ಕಾಂಗ್ರೆಸ್ : ಕೇಂದ್ರ ಸಚಿವ ಜೋಶಿ ವಾಗ್ದಾಳಿ

ಪಾಕಿಸ್ತಾನ ಅಭಿನಂದನ್ ಅವರನ್ನು ಕೊಲ್ಲುತ್ತದೆ. ನಾವಿಲ್ಲಿ ಪ್ರಧಾನಿ ಮೋದಿ ಅವರನ್ನು ಟಾರ್ಗೆಟ್ ಮಾಡಬಹುದು ಎಂದುಕೊಂಡಿತ್ತು ಕಾಂಗ್ರೆಸ್. ಆದರೆ, ಮೋದಿ ಅವರು ಅಭಿನಂದನ್ ಅವರನ್ನು ಸುರಕ್ಷಿತವಾಗಿ ಕರೆ ತರಲು ಮೊದಲೇ ಯೋಜನೆ ರೂಪಿಸಿದ್ದರು ಎಂದು ಪ್ರಲ್ಹಾದ್‌ ಜೋಶಿ ತಿಳಿಸಿದರು.

Written by - Prashobh Devanahalli | Edited by - Krishna N K | Last Updated : Apr 6, 2024, 02:56 PM IST
    • ನಮ್ಮ ಭಯೋತ್ಪಾದಕರು ನಮ್ಮ ಬ್ರದರ್ಸ್
    • ಮೋದಿ ಅವರನ್ನು ಟಾರ್ಗೆಟ್ ಮಾಡಬಹುದು ಎಂದುಕೊಂಡಿತ್ತು ಕಾಂಗ್ರೆಸ್
    • ಕಾಂಗ್ರೆಸ್ ನವರಿಗೆ ತುಷ್ಟಿಕರಣದ ರಾಜಕಾರಣ ಒಂದೇ ಗೊತ್ತಿದೆ.
ನಮ್ಮ ಭಯೋತ್ಪಾದಕರೇ ನಮ್ಮ ಬ್ರದರ್ಸ್ ಎನ್ನುತ್ತದೆ ಕಾಂಗ್ರೆಸ್ : ಕೇಂದ್ರ ಸಚಿವ ಜೋಶಿ ವಾಗ್ದಾಳಿ title=

ಹುಬ್ಬಳ್ಳಿ : ನಮ್ಮ ಭಯೋತ್ಪಾದಕರು ನಮ್ಮ ಬ್ರದರ್ಸ್" ಎಂಬ ನೀತಿ ಕಾಂಗ್ರೆಸ್ ಪಕ್ಷದ್ದು ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಕಿಡಿ ಕಾರಿದರು. ಹುಬ್ಬಳ್ಳಿಯಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿ, ಕಾಂಗ್ರೆಸ್ ನವರಿಗೆ ತುಷ್ಟಿಕರಣದ ರಾಜಕಾರಣ ಒಂದೇ ಗೊತ್ತಿದೆ. ಹಾಗಾಗಿ ಅತ್ಯಂತ ಬಾಲಿಶವಾಗಿ ಮಾತನಾಡುತ್ತಾರೆ ಎಂದು ಆರೋಪಿಸಿದರು.

ಪುಲ್ವಾಮಾ ದಾಳಿ ನಂತರ ದೇಶದಲ್ಲಿ ನಡೆದ ಸರ್ಜಿಕಲ್ ಎರ್ ಸ್ಟ್ರೇಕ್ ನಲ್ಲಿ ಪಾಕ್ ಕೈಗೆ ಅಭಿನಂದನ್ ಸಿಕ್ಕಾಗ ಕಾಂಗ್ರೆಸ್ ನವರಿಗೆ ಖುಷಿಯಾಗಿತ್ತು ಎಂದು ಜೋಶಿ ಹೇಳಿದರು. ಪಾಕಿಸ್ತಾನ ಅಭಿನಂದನ್ ಅವರನ್ನು ಕೊಲ್ಲುತ್ತದೆ. ನಾವಿಲ್ಲಿ ಪ್ರಧಾನಿ ಮೋದಿ ಅವರನ್ನು ಟಾರ್ಗೆಟ್ ಮಾಡಬಹುದು ಎಂದುಕೊಂಡಿತ್ತು ಕಾಂಗ್ರೆಸ್. ಆದರೆ, ಮೋದಿ ಅವರು ಅಭಿನಂದನ್ ಅವರನ್ನು ಸುರಕ್ಷಿತವಾಗಿ ಕರೆ ತರಲು ಮೊದಲೇ ಯೋಜನೆ ರೂಪಿಸಿದ್ದರು ಎಂದರು.

ಇದನ್ನೂ ಓದಿ:ಅಕ್ರಮವಾಗಿ ಗೋ ಮಾಂಸ ಸಾಗಿಸುತ್ತಿದ್ದ ಬುಲೆರೋ ವಾಹನ ಪಲ್ಟಿ..!

ಅಭಿನಂದನ್ ಗೆ ಏನಾದರು ಆದರೆ, ಪಾಕ್ ಗೆ ಸೂಕ್ತ ಪಾಠ ಕಲಿಸುವುದಾಗಿ ಪ್ರಧಾನಿ ಮೋದಿ ಜಾಗತಿಕ ಮಟ್ಟದಿಂದಲೇ ಎಚ್ಚರಿಕೆ ಸಂದೇಶ ರವಾನಿಸಿದರು. ಪರಿಣಾಮ ನಮ್ಮ ಅಭಿನಂದನ್ ಸುರಕ್ಷಿತವಾಗಿ ಭಾರತಕ್ಕೆ ವಾಪಸ್ಸಾದರು ಎಂದು ಸಚಿವ ಜೋಶಿ ಆಗಿನ ಸಂದರ್ಭವನ್ನು ವಿವರಿಸುತ್ತ ಕಾಂಗ್ರೆಸ್ ವಿರುದ್ಧ ಗುಡುಗಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News