ಪ್ರತಿ ತಿಂಗಳ ಪ್ಲಾನಿಂಗ್ ನಲ್ಲಿ ಈ ಸಣ್ಣ ಉಳಿತಾಯ ಮಾಡಿ, ಕೋಟ್ಯಾಧಿಪತಿಯಾಗಿ

ಸದ್ಯ ನಾವು ನಿಮಗೆ ಹೇಳಲು ಹೊರಟಿರುವ ಈ ಒಂದು ಸ್ಚೀಮ್ ನಲ್ಲಿ ನಿಮ್ಮ ಹೂಡಿಕೆ ಕೇವಲ ಅಲ್ಪ ಪ್ರಮಾಣದಲ್ಲಿ ಇರಲಿದ್ದು, ರಿಟರ್ ಮಾತ್ರ ತುಂಬಾ ಭರ್ಜರಿಯಾಗಿರಲಿದೆ.

Last Updated : Apr 19, 2020, 01:01 PM IST
ಪ್ರತಿ ತಿಂಗಳ ಪ್ಲಾನಿಂಗ್ ನಲ್ಲಿ ಈ ಸಣ್ಣ ಉಳಿತಾಯ ಮಾಡಿ, ಕೋಟ್ಯಾಧಿಪತಿಯಾಗಿ  title=

ನವದೆಹಲಿ: ಕೊರೊನಾ ವೈರಸ್ ಸೋಂಕಿನ ಆತಂಕದ ನಡುವೆಯೂ ಕೂಡ ನೀವು ಕೇವಲ ಸಣ್ಣ ಪ್ರಮಾಣದ ಉಳಿತಾಯ ಮಾಡಿ ಕೋಟ್ಯಾಧಿಪತಿಯಾಗಬಹುದು. ಸತತವಾಗಿ ಕುಸಿಯುತ್ತಿರುವ ಷೇರು ಮಾರುಕಟ್ಟೆಯ ಹಿನ್ನೆಲೆ ಅಲ್ಲಿ ಮಾಡುವ ಉಳಿತಾಯಕ್ಕೆ ರಿಟರ್ನ ಪ್ರಮಾಣ ಇಳಿಮುಖವಾಗಿದೆ. ಇನ್ನೊಂದೆಡೆ ಚಿಲ್ಲರೆ ವ್ಯಾಪಾರ ಹಾಗೂ ಸಣ್ಣ ಹೂಡಿಕೆದಾರರಿಗೂ ಕೂಡ ತಮ್ಮ ಹೂಡಿಕೆಯ ಮೇಲೆ ಲಾಭ ಗಳಿಸುವುದು ಅಷ್ಟೊಂದು ಸುಲಭವಾಗಿ ಉಳಿದಿಲ್ಲ. ಹೀಗಾಗಿ ಸಣ್ಣ ಹೂಡಿಕೆದಾರರು ಹೂಡಿಕೆಗಾಗಿ ಬೇರೆ ಬೇರೆ ಮಾರ್ಗಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಅಷ್ಟೇ ಅಲ್ಲ ಚಿನ್ನದ ಬೆಲೆ ಕೂಡ ಇತ್ತೀಚಿಗೆ ಗಗನಮುಖಿಯಾಗುತ್ತಾ ಹೊರಟಿದೆ. ಈ ಹಿನ್ನೆಲೆಯಲ್ಲಿ ಸದ್ಯ ನಾವು ನಿಮಗೆ ಹೇಳಲು ಹೊರಟಿರುವ ಒಂದು ಯೋಜನೆಯ ಮೂಲಕ ನೀವು ಕೇವಲ ಸಣ್ಣ ಪ್ರಮಾಣದ ಹೂಡಿಕೆ ಮಾಡಿ ಅಪಾರ ಪ್ರಮಾಣದ ರಿಟರ್ನ್ ಪಡೆಯಬಹುದಾಗಿದೆ.

PPF ನಲ್ಲಿದೆ ಗಳಿಕೆಯ ಅವಕಾಶ 
ಪೋಸ್ಟ್ ಆಫೀಸ್ ಮೂಲಕ ನಿರ್ವಹಿಸಲಾಗುವ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆಯಲ್ಲಿ ನೀವು ತಿಂಗಳಿಗೆ ಕೇವಲ ಸಣ್ಣ ಪ್ರಮಾಣದ ಮಾಡಿ, ರಿಟರ್ನ್ ವೇಳೆ ಉತ್ತಮ ಹಣವನ್ನು ಸಂಪಾದಿಸಬಹುದಾಗಿದೆ. ಸದ್ಯ ಪಿಪಿಎಫ್ ಯೋಜನೆಯಡಿ ನಿಮ್ಮ ಹೂಡಿಕೆಗೆ ಶೇ.7.1 ರಷ್ಟು ಬಡ್ಡಿ ಸಿಗುತ್ತಿದೆ. ಒಂದು ವೇಳೆ ನೀವು ನಿಮ್ಮ ವಯಸ್ಸಿನ 25ನೇ ವರ್ಷಕ್ಕೆ ತಿಂಗಳಿಗೆ 6 ಸಾವಿರ ರೂ. ಹಣ ಹೂಡಿಕೆ ಮಾಡಿದರೆ 35 ವರ್ಷಗಳ ಬಳಿಕ ನಿಮಗೆ 1,08,94,971 ರಿಟರ್ನ್ ಸಿಗಲಿದೆ.

ಉಳಿತಾಯ ಮಾಡುವುದು ಇದೀಗ ಇನ್ನಷ್ಟು ಸುಲಭವಾಗಿದೆ
ಒಂದುವೇಳೆ ನೀವು PPF, NSC ಅಥವಾ RD ಖಾತೆಯನ್ನು ಆರಂಭಿಸಲು ಬಯಸುತ್ತಿದ್ದರೆ ಇದೀಗ ನಿಮ್ಮ ಹೂಡಿಕೆ ಪ್ರಕ್ರಿಯೆ ಮೊದಲಿಗಿಂತಲೂ ಕೂಡ ಸುಲಭವಾಗಿದೆ. ಪೋಸ್ಟ್ ಆಫೀಸ್ ಇದೀಗ ಈ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸಿದೆ. ಅಂಚೆ ಕಚೇರಿಯಲ್ಲಿ ಎಲ್ಲ ರೀತಿಯ ಹೂಡಿಕೆಗಳಿಗೆ ಇದೀಗ ಒಂದೇ ರೀತಿಯ ಫಾರ್ಮ್ಯಾಟ್ ಅನಿವಾರ್ಯಗೊಳಿಸಲಾಗಿದೆ. ಈ ಕುರಿತು ಸರ್ಕ್ಯೂಲರ್ ವೊಂದನ್ನು ಜಾರಿಗೊಲಿಸಿರುವ ಅಂಚೆ ಇಲಾಖೆ PPF, ಸುಕನ್ಯಾ ಸಮೃದ್ಧಿ ಖಾತೆ, NSC ಖರೀದಿಗಾಗಿ ಹೂಡಿಕೆದಾರರು ಒಂದೇ ಕಾಮನ್ ಫಾರಂ ಅನ್ನು ಭರ್ತಿ ಮಾಡಬೇಕಾಗಲಿದೆ ಎಂದು ಹೇಳಿದೆ. 

Trending News