ವಿಮಾನಯಾನ ಸಂಸ್ಥೆಗಳಿಂದ ಗ್ರಾಹಕರಿಗೆ ಗುಡ್ ನ್ಯೂಸ್

ನೀವು ಏರ್ ಏಷ್ಯಾ ಅಥವಾ ಇಂಡಿಗೊದ ಗ್ರಾಹಕರಾಗಿದ್ದರೆ, ನಿಮಗೆ ಒಳ್ಳೆಯ ಸುದ್ದಿ ಇದೆ. ದೇಶೀಯ ವಿಮಾನ ಪ್ರಯಾಣದ ಪ್ರಾರಂಭದೊಂದಿಗೆ, ಇಂಡಿಗೊ ಮತ್ತು ಏರ್ ಏಷ್ಯಾ ಇಂಡಿಯಾ ಸಹ ವಿಮಾನ ಪ್ರಯಾಣ ಟಿಕೆಟ್‌ಗಳಿಗೆ ಮರುಪಾವತಿ ನೀಡಲು ಪ್ರಾರಂಭಿಸಿವೆ.

Last Updated : May 29, 2020, 03:12 PM IST
ವಿಮಾನಯಾನ ಸಂಸ್ಥೆಗಳಿಂದ ಗ್ರಾಹಕರಿಗೆ ಗುಡ್ ನ್ಯೂಸ್ title=

ನವದೆಹಲಿ: ನೀವು ಏರ್ ಏಷ್ಯಾ (Air Asia) ಅಥವಾ ಇಂಡಿಗೊದ (Indigo) ಗ್ರಾಹಕರಾಗಿದ್ದರೆ, ನಿಮಗೆ ಒಳ್ಳೆಯ ಸುದ್ದಿ ಇದೆ. ದೇಶೀಯ ವಿಮಾನ ಪ್ರಯಾಣದ ಪ್ರಾರಂಭದೊಂದಿಗೆ, ಇಂಡಿಗೊ ಮತ್ತು ಏರ್ ಏಷ್ಯಾ ಇಂಡಿಯಾ ಸಹ ವಿಮಾನ ಪ್ರಯಾಣ ಟಿಕೆಟ್‌ಗಳಿಗೆ ಮರುಪಾವತಿ ನೀಡಲು ಪ್ರಾರಂಭಿಸಿವೆ. ರದ್ದಾದ ವಿಮಾನಗಳಿಗೆ ಟಿಕೆಟ್‌ಗಳ ಮರುಪಾವತಿ ಮಾಡುವ ಮೂಲಕ ಈ ವಿಮಾನಯಾನ ಸಂಸ್ಥೆಗಳು ಟ್ರಾವೆಲ್ ಏಜೆಂಟರ ಖಾತೆಗಳಿಗೆ ಮನ್ನಣೆ ನೀಡಲು ಪ್ರಾರಂಭಿಸಿವೆ.

ಟ್ರಾವೆಲ್ ಪೋರ್ಟಲ್ ಈಸಿಮೈಟ್ರಿಪ್.ಕಾಮ್ (Easemytrip.com) ಪ್ರಕಾರ ವಾಯುಯಾನ ಕಂಪನಿಗಳ ಈ ಉಪಕ್ರಮವು ಈಗ ಪ್ರಯಾಣಿಕರಿಗೆ ಸಾಕಷ್ಟು ಪರಿಹಾರವನ್ನು ನೀಡುತ್ತದೆ. ಈಗ ಟ್ರಾವೆಲ್ ಏಜೆಂಟರು ತಮ್ಮ ಗ್ರಾಹಕರಿಗೆ ಮರುಪಾವತಿ ನೀಡಲು ಸಾಧ್ಯವಾಗುತ್ತದೆ. ಮರುಪಾವತಿ ಮೊತ್ತದ ಟಿಕೆಟ್‌ನ್ನು ಕ್ರೆಡಿಟ್‌ಗೆ ಹಾಕುವ ಬದಲು ನೇರ ಮರುಪಾವತಿ ಬಯಸುವ ಎಲ್ಲ ಪ್ರಯಾಣಿಕರಿಗೆ ಮರುಪಾವತಿ ನೀಡಲಾಗುವುದು ಎಂದು Easemytrip.comನ CEO ನಿಶಾಂತ್ ಪಿಟ್ಟಿ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

Easemytrip.comಗೆ ಏರ್ ಏಷ್ಯಾ ರದ್ದಾದ ಟಿಕೆಟ್ ಹಣವನ್ನು ಹಿಂದಿರುತಿಸಿದ್ದು ನಾವೂ ಸಹ ಗ್ರಾಹಕರ ಬ್ಯಾಂಕ್ ಖಾತೆಗಳಲ್ಲಿ ಗ್ರಾಹಕರಿಗೆ ಹಿಂದಿರುಗಿಸಿದ್ದೇವೆ. ಆದಾಗ್ಯೂ, ನಾವು ಈ ಮೊತ್ತವನ್ನು ಏರ್ ಏಷ್ಯಾದಿಂದ ಟಿಕೆಟಿಂಗ್ ವ್ಯಾಲೆಟ್ನಲ್ಲಿ ಪಡೆಯುತ್ತಿದ್ದೇವೆ. ಇತರ ವಿಮಾನಯಾನ ಕಂಪನಿಗಳು ಸಹ ಮರುಪಾವತಿಯನ್ನು ಪ್ರಾರಂಭಿಸಿವೆ. ಈಗ ಇಂಡಿಗೊ ನಮ್ಮ ಏಜೆನ್ಸಿಯ ವ್ಯಾಲೆಟ್ನಲ್ಲಿ ಮರುಪಾವತಿ ಮಾಡಲು ಪ್ರಾರಂಭಿಸಿದೆ, ಈ ಮೂಲಕ ನಾವು ಇಂಡಿಗೊದ ಹೊಸ ಟಿಕೆಟ್‌ಗಳನ್ನು ಖರೀದಿಸಬಹುದು ಮತ್ತು ಮತ್ತೊಂದೆಡೆ ನಾವು ಗ್ರಾಹಕರಿಗೆ ಅವರ ಬ್ಯಾಂಕ್ ಖಾತೆಗಳಲ್ಲಿ ಟಿಕೆಟ್‌ಗಳನ್ನು ಮರುಪಾವತಿಸುತ್ತಿದ್ದೇವೆ ಎಂದವರು ತಿಳಿಸಿದರು.

ಕೊರೊನಾವೈರಸ್ ಮಹಾಮರಿಯಿಂದಾಗಿ ಲಾಕ್ ಡೌನ್ ಆಗಿರುವುದರಿಂದ ಮಾರ್ಚ್ 25 ರಿಂದ ದೇಶದಲ್ಲಿ ವಾಯು ಸೇವೆಗಳನ್ನು ಮುಚ್ಚಲಾಗಿದೆ. ಎರಡು ತಿಂಗಳ ನಂತರ ಮೇ 25 ರಂದು ದೇಶೀಯ ವಿಮಾನಗಳು ಕೆಲವು ಮಾರ್ಗಗಳಲ್ಲಿ ಪ್ರಾರಂಭವಾಗಿವೆ.

ಎರಡು ವಿಮಾನಯಾನ ಸಂಸ್ಥೆಗಳು ಈಗ ಟ್ರಾವೆಲ್ ಏಜೆಂಟರಿಗೆ ತಮ್ಮ ಗ್ರಾಹಕರಿಗೆ ಮರುಪಾವತಿ ನೀಡಬಹುದು ಅಥವಾ ಮೊತ್ತವನ್ನು ತಮ್ಮ ಕ್ರೆಡಿಟ್ ಶೆಲ್ ಗಳಲ್ಲಿ ಇರಿಸಿಕೊಳ್ಳಬಹುದು. ಭವಿಷ್ಯದ ಬುಕಿಂಗ್‌ನಲ್ಲಿ ಈ ಮೊತ್ತವನ್ನು ಬಳಸಬಹುದು ಎನ್ನಲಾಗಿದೆ.

Trending News