ರಾತ್ರಿ ಹೊತ್ತು ನಿದ್ದೆ ಬರುತ್ತಿಲ್ಲವೇ? ಹಾಗಿದ್ದರೆ ಈ ಸರಳ ಅಂಶಗಳನ್ನು ಪಾಲಿಸಿ

ಸರಿಯಾಗಿ ನಿದ್ದೆ ಮಾಡದ್ದಿದರೆ ಹೃದ್ರೋಗ, ಮಧುಮೇಹ, ಸ್ಥೂಲಕಾಯ ಅಷ್ಟೇ ಅಲ್ಲದೆ, ಖಿನ್ನತೆಗೆ ಒಳಗಾಗುವ ಸಾಧ್ಯತೆಗಳೂ ಹೆಚ್ಚು. ಹಾಗಾಗಿ ಉತ್ತಮ ನಿದ್ದೆಗೆ ಇಲ್ಲಿವೆ ಸರಳ ಸೂತ್ರಗಳು...

Last Updated : Mar 15, 2018, 05:51 PM IST
ರಾತ್ರಿ ಹೊತ್ತು ನಿದ್ದೆ ಬರುತ್ತಿಲ್ಲವೇ? ಹಾಗಿದ್ದರೆ ಈ ಸರಳ ಅಂಶಗಳನ್ನು ಪಾಲಿಸಿ title=

ಪ್ರತಿಯೊಬ್ಬ ಮನುಷ್ಯನಿಗೂ ನಿದ್ದೆ ಬಹಳ ಮುಖ್ಯ. ಇಂದಿನ ವೇಗದ ಯಾಂತ್ರೀಕೃತ ಜೀವನ ಶೈಲಿಯಲ್ಲಿ ಕೆಲವರಿಗೆ ನಿದ್ದೆ ಮಾಡಲೂ ಸಮಯ ಸಿಗುವುದಿಲ್ಲ. ಮತ್ತೆ ಕೆಲವರಿಗೆ ಜೀವನದಲ್ಲಿನ ಅತಿಯಾದ ಒತ್ತಡದಿಂದಾಗಿ ನಿದ್ದೆ ಸರಿಯಾಗಿ ಬರುವುದಿಲ್ಲ. ಇನ್ನು ಹಲವರಿಗೆ ದಿನಕ್ಕೆ ಎಷ್ಟು ಗಂಟೆ ನಿದ್ದೆ ಮಾಡಬೇಕು, ಹೇಗೆ ಮಾಡಬೇಕು ಎಂಬ ತಿಳುವಳಿಕೆ ಇರುವುದಿಲ್ಲ. ಇವೆಲ್ಲದರ ಪರಿಣಾಮ ಆರೋಗ್ಯ ಕೆಡುತ್ತದೆ.

ಸರಿಯಾಗಿ ನಿದ್ದೆ ಮಾಡದ್ದಿದರೆ ಹೃದ್ರೋಗ, ಮಧುಮೇಹ, ಸ್ಥೂಲಕಾಯ ಅಷ್ಟೇ ಅಲ್ಲದೆ, ಖಿನ್ನತೆಗೆ ಒಳಗಾಗುವ ಸಾಧ್ಯತೆಗಳೂ ಹೆಚ್ಚು. ಹಾಗಾಗಿ ಉತ್ತಮ ನಿದ್ದೆಗೆ ಇಲ್ಲಿವೆ ಸರಳ ಸೂತ್ರಗಳು...

1. ಉತ್ತಮ ಜೀವನಶೈಲಿ: ಸರಿಯಾದ ಆಹಾರವನ್ನು ಸೇವಿಸಿ, ನಿತ್ಯ ವ್ಯಾಯಾಮ ಮಾಡಿ,  ಖಿನ್ನತೆಯಿಂದ ಹೊರಬರುವ ತಂತ್ರಗಳನ್ನು ತಿಳಿಯಿರಿ. ಹೀಗಿದ್ದಾಗ ನಿದ್ರಾಹೀನತೆಯಂತಹ ಸಮಸ್ಯೆಗಳಿಂದ ಹೊರಬಂದು ಉತ್ತಮ ಜೀವನ ನಡೆಸಲು ಸಾಧ್ಯ. 

2. ಇವನ್ನು ಸೇವಿಸಬೇಡಿ : ಮಲಗುವ ಮುನ್ನ ಕೆಫೀನ್, ನಿಕೋಟಿನ್ ಮತ್ತು ಮದ್ಯಪಾನ ಮಾಡುವುದನ್ನು ನಿಲ್ಲಿಸಿ. ಇವು ನಿಮ್ಮ ನಿದ್ರೆಗೆ ಭಂಗವನ್ನು ತರುತ್ತವೆ.

3. ನಿರ್ದಿಷ್ಟ ನಿದ್ರಾ ಅವಧಿ: ಪ್ರತಿನಿತ್ಯ ನೀವು ಮಲಗುವ ಮತ್ತು ಏಳುವ ಸಮಯದಲ್ಲಿ ಏಕತಾನತೆ ಕಾಪಾಡಿಕೊಳ್ಳಿ. 

4. ಮಧ್ಯಾಹ್ನ ಮಲಗಬೇಡಿ : ಆದಷ್ಟು ಮಧ್ಯಾಹ್ನದ ಹೊತ್ತು ಮಲಗುವುದನ್ನು ತಪ್ಪಿಸಿ. ಏಕೆಂದರೆ ಇದರಿಂದ ನಿಮಗೆ ರಾತ್ರಿ ಸಮಯದಲ್ಲಿ ಸರಿಯಾಗಿ ನಿದ್ದೆ ಬಾರದಿರಬಹುದು. ಒಂದು ವೇಳೆ ಮಧ್ಯಾಹಂದ ವೇಳೆ ನಿದ್ರೆ ಮಾಡಲೇಬೇಕು ಎನಿಸಿದರೆ 15 ರಿಂದ 20 ನಿಮಿಷಗಳವರೆಗೆ ಮಾತ್ರ ನಿದ್ರಿಸಿ. 

5. ಆರಾಮದಾಯಕ ಹಾಸಿಗೆ ಬಳಸಿ : ನಿಮ್ಮ ಮಲಗುವ ಕೋಣೆ ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇರುವುದರ ಜೊತೆಗೆ, ನೀವು ಮಲಗುವ ಹಾಸಿಗೆಯೂ ಆರಾಮದಾಯಕವಾಗಿರಬೇಕು. ಬೆಳಿಗ್ಗೆಯಿಂದ ರಾತ್ರಿಯವರೆಗೆ ದಣಿದಿದ್ದ ದೇಹಕ್ಕೆ ಆರಾಮ ನೀಡುವಂತಹ ವಿಶಾಲವಾದ ಹಾಸಿಗೆ ಮತ್ತು ದಿಂಬು ಬಳಸಿದರೆ ಚೆನ್ನಾಗಿ ನಿದ್ದೆ ಮಾಡಲು ಸಾಧ್ಯ ಎಂದು ಸಂಶೋಧನೆ ಹೇಳಿದೆ.

Trending News