Blood Sugar Control Tips: ಆಯುರ್ವೇದದ ಮೂಲಕ ಮಧುಮೇಹವನ್ನು ಹೇಗೆ ನಿಯಂತ್ರಿಸಬೇಕು? ಇಲ್ಲಿವೆ ಕೆಲ ಆಯುರ್ವೇದ ಗಿಡಮೂಲಿಕೆಗಳು!

Diabetes Control Tips: ಮಧುಮೇಹ ಅಥವಾ ಡೈಬೀಟಿಸ್ ನಿಯಂತ್ರಣಕ್ಕೆ ಆಯುರ್ವೇದದಲ್ಲಿ ಕೆಲ ನಿಯಮಗಳನ್ನು ಹೇಳಲಾಗಿದೆ  

Written by - Nitin Tabib | Last Updated : Apr 20, 2024, 09:11 PM IST
  • ಋತುಗಳನ್ನು ಬದಲಾದ ಬಳಿಕ, ಖಂಡಿತವಾಗಿಯೂ ನಿಮ್ಮ ಆಹಾರದ ಪ್ಲಾನ್ ಕೂಡ ಬದಲಿಸಿ ಮತ್ತು
  • ಋತುಮಾನದ ಹಣ್ಣುಗಳು ಮತ್ತು ತರಕಾರಿಗಳಿಂದ ಮಾಡಿದ ಭಕ್ಷ್ಯಗಳನ್ನು ಅದರಲ್ಲಿ ಸೇರಿಸಿ.
  • ಅವು ನಿಮಗೆ ಎಲ್ಲಾ ಪೋಷಕಾಂಶಗಳನ್ನು ಒದಗಿಸುತ್ತವೆ ಮತ್ತು ನಿಮ್ಮ ವೈದ್ಯಕೀಯ ಸ್ಥಿತಿಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
Blood Sugar Control Tips: ಆಯುರ್ವೇದದ ಮೂಲಕ ಮಧುಮೇಹವನ್ನು ಹೇಗೆ ನಿಯಂತ್ರಿಸಬೇಕು? ಇಲ್ಲಿವೆ ಕೆಲ ಆಯುರ್ವೇದ ಗಿಡಮೂಲಿಕೆಗಳು! title=

Home Remedies For Diabetes: ಮಧುಮೇಹ ಒಂದು ಆರೋಗ್ಯ ಸಮಸ್ಯೆಯಾಗಿದ್ದು, ಅದು ಬಳಲುತ್ತಿರುವ ವ್ಯಕ್ತಿಯ ಜೀವನದುದ್ದಕ್ಕೂ ಆತನೊಂದಿಗೆ ಇರುತ್ತದೆ. ಈ ರೋಗವು ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಮತ್ತು ಇಂದು ಈ ಜೀವನಶೈಲಿ ಕಾಯಿಲೆ ವಯಸ್ಸಾದವರಲ್ಲಿ ಮಾತ್ರವಲ್ಲದೆ ಯುವಜನರಲ್ಲಿಯೂ ಕಂಡುಬರುತ್ತದೆ. ಭಾರತದಲ್ಲಿ ಅತಿ ಹೆಚ್ಚು ಜನರು ಮಧುಮೇಹದ ಅಪಾಯದಲ್ಲಿದ್ದಾರೆ ಎಂದು ಹೇಳಲಾಗುತ್ತದೆ ಮತ್ತು ಇದಕ್ಕೆ ಕಾರಣ ನಿರಂತರವಾಗಿ ಬದಲಾಗುತ್ತಿರುವ ಜನರ ಜೀವನಶೈಲಿ.

ಮಧುಮೇಹದಲ್ಲಿ, ಅಧಿಕ ರಕ್ತದ ಸಕ್ಕರೆಯ ಸ್ಥಿತಿಯು ಹಲವು ಅಪಾಯಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ, ಮಧುಮೇಹ ರೋಗಿಗಳಿಗೆ ತಮ್ಮ ಸ್ಥಿತಿಯನ್ನು ನಿಯಂತ್ರಿಸಲು ರಕ್ತದಲ್ಲಿನ ಸಕ್ಕರೆಯ ಹೆಚ್ಚಳವನ್ನು ತಡೆಯಲು ಸಲಹೆ ನೀಡಲಾಗುತ್ತದೆ. ಮಧುಮೇಹವನ್ನು ನಿಯಂತ್ರಿಸಲು, ನಿಮ್ಮ ಆಹಾರ ಮತ್ತು ಜೀವನಶೈಲಿಯಲ್ಲಿ ನೀವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಇದರೊಂದಿಗೆ ಆಂಟಿ ಡಯಾಬಿಟಿಕ್ ಗುಣಲಕ್ಷಣಗಳನ್ನು ಹೊಂದಿರುವ ನೈಸರ್ಗಿಕ ವಸ್ತುಗಳನ್ನು ಸಹ ಸೇವಿಸಬಹುದು.

ಆಯುರ್ವೇದದ ಸಹಾಯದಿಂದ ಈ ರೀತಿ ಮಧುಮೇಹ ನಿಯಂತ್ರಿಸಿ
ಮಧುಮೇಹ ಅಥವಾ ಡೈಬಿಟೀಸ್ ನಿಯಂತ್ರಿಸಲು, ಆಯುರ್ವೇದದಲ್ಲಿ ಕೆಲವು ನಿಯಮಗಳನ್ನು ಉಲ್ಲೇಖಿಸಲಾಗಿದೆ. ಈ ನಿಯಮಗಳ ಸಹಾಯದಿಂದ ನೀವು ಮಧುಮೇಹವನ್ನು ನಿಯಂತ್ರಿಸಬಹುದು

ಹವಾಮಾನ ಬದಲಾವಣೆಯ ಜೊತೆಗೆ ದಿನಚರಿ ಕೂಡ ಬದಲಾಯಿಸಿ
ಬದಲಾಗುತ್ತಿರುವ ತಾಪಮಾನ ಮತ್ತು ಹವಾಮಾನ, ಆರೋಗ್ಯದ ಮೇಲೂ ಅದರ ಪರಿಣಾಮ ಬೀರುತ್ತದೆ. ಹೀಗಾಗಿ, ಆಯುರ್ವೇದದಲ್ಲಿ, ಜನರು ತಮ್ಮ ದೈನಂದಿನ ದಿನಚರಿ ಮತ್ತು ಆಹಾರ ಪದ್ಧತಿಗಳನ್ನು ಹವಾಮಾನ ಬದಲಾದಂತೆ ಬದಲಾಯಿಸಲು ಸಲಹೆ ನೀಡಲಾಗುತ್ತದೆ. ನಿಮ್ಮ ಆಹಾರ ಪದ್ಧತಿಯನ್ನು ಬದಲಾಯಿಸುವುದು ಬದಲಾಗುತ್ತಿರುವ ಹವಾಮಾನಕ್ಕೆ ಹೊಂದಿಕೊಳ್ಳಲು ಮತ್ತು ನಿಮ್ಮ ದೇಹವನ್ನು ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ಋತುಗಳನ್ನು ಬದಲಾದ ಬಳಿಕ, ಖಂಡಿತವಾಗಿಯೂ ನಿಮ್ಮ ಆಹಾರದ ಪ್ಲಾನ್ ಕೂಡ ಬದಲಿಸಿ ಮತ್ತು ಋತುಮಾನದ ಹಣ್ಣುಗಳು ಮತ್ತು ತರಕಾರಿಗಳಿಂದ ಮಾಡಿದ ಭಕ್ಷ್ಯಗಳನ್ನು ಅದರಲ್ಲಿ ಸೇರಿಸಿ. ಅವು ನಿಮಗೆ ಎಲ್ಲಾ ಪೋಷಕಾಂಶಗಳನ್ನು ಒದಗಿಸುತ್ತವೆ ಮತ್ತು ನಿಮ್ಮ ವೈದ್ಯಕೀಯ ಸ್ಥಿತಿಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

ಈ ಗಿಡಮೂಲಿಕೆಗಳನ್ನು ಸೇವಿಸಿ
ಕೆಲವು ಗಿಡಮೂಲಿಕೆಗಳ
ಸೇವನೆಯು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಅವುಗಳನ್ನು ವಿವಿಧ ರೀತಿಯಲ್ಲಿ ಸೇರಿಸಿಕೊಳ್ಳಬಹುದು. ಬನ್ನಿ ಆ ಸಂಗತಿಗಳು ಯಾವುವು ತಿಳಿದುಕೊಳ್ಳೋಣ, 

ಇದನ್ನೂ ಓದಿ-ತನ್ನ ಪತ್ನಿಯ ಸ್ನೇಹಿತೆಯನ್ನು ಎರಡನೇ ಮದುವೆ ಮಾಡಿಕೊಂಡ ಈ ಖ್ಯಾತ ಯುಟ್ಯೂಬರ್ ಬೀದಿಗೆ ಬಂದಿದ್ದ!

ಆಮ್ಲಾ ಮತ್ತು ಒಣಗಿದ ನೆಲ್ಲಿಕಾಯಿ ಪುಡಿ
ಜಾಮೂನ್ ಹಣ್ಣು ಮತ್ತು ಅದರ ಬೀಜದ ಪುಡಿ
ತುಳಸಿ ಎಲೆಗಳು
ಅಮೃತ ಬಳ್ಳಿ
ಕೊತ್ತಂಬರಿ ಬೀಜಗಳ ಪುಡಿ

ಇದನ್ನೂ ಓದಿ- Hair Care Remedies: ಕಪ್ಪು, ದಟ್ಟ ಹಾಗೂ ನೀಳವಾದ ಕೇಶರಾಶಿ ನಿಮ್ಮದಾಗಬೇಕೆ? ಇಲ್ಲಿವೆ 3 ಪರ್ಫೆಕ್ಟ್ ಉಪಾಯಗಳು!

(Disclaimer- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News