Varuntej-Lavanya: ವರುಣ್-ಲಾವಣ್ಯ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ?

Varuntej-Lavanya Age Diffrence: ನಾಗಬಾಬು ಅವರ ಪುತ್ರ ವರುಣ್‌ತೇಜ್, ಲಾವಣ್ಯ ತ್ರಿಪಾಠಿ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನವೆಂಬರ್ 1 ರಂದು ಇಟಲಿಯಲ್ಲಿ ಹಿರಿಯರ ಸಮ್ಮುಖದಲ್ಲಿ ತಾರಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಅವರಿಬ್ಬರ ವಯಸ್ಸಿನ ಅಂತರದ ಕುರಿತು ಭಾರೀ ಚರ್ಚೆ ಶುರುವಾಗಿದೆ. 

Written by - Savita M B | Last Updated : Nov 4, 2023, 10:55 AM IST
  • ಕೆಲ ದಿನಗಳಿಂದ ಪ್ರೀತಿಸುತ್ತುದ್ದ ಲಾವಣ್ಯ ಹಾಗೂ ವರಣ್‌
  • ವರುಣ್ ಮದುವೆ ಸಮಾರಂಭಕ್ಕೆ ಇಡೀ ಮೆಗಾ ಫ್ಯಾಮಿಲಿ ಸಾಕ್ಷಿಯಾಗಿತ್ತು.
  • ಇದೇ ವೇಳೆ..ಈ ಜೋಡಿಯ ನಡುವಿನ ವಯಸ್ಸಿನ ಅಂತರದ ಬಗ್ಗೆ ಹಲವು ರೀತಿಯ ಸುದ್ದಿಗಳು ಹರಿದಾಡುತ್ತಿವೆ
Varuntej-Lavanya: ವರುಣ್-ಲಾವಣ್ಯ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ? title=

Varuntej-Lavanya: ಕೆಲ ದಿನಗಳಿಂದ ಪ್ರೀತಿಸುತ್ತುದ್ದ ಲಾವಣ್ಯ ಹಾಗೂ ವರಣ್‌ ಜೂನ್ 09 ರಂದು ಕುಟುಂಬ ಸದಸ್ಯರ ಒಪ್ಪಿಗೆಯಂತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಂತರ ಅವರು ನವೆಂಬರ್ 1 ರಂದು ಸಪ್ತಪದಿ ತುಳಿದರು. 

ಆರು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಹಿರಿಯರ ಆಶೀರ್ವಾದ ಪಡೆದು ಇಟಲಿಯಲ್ಲಿ ಅದ್ದೂರಿಯಾಗಿ ಮದುವೆಯಾದರು. ವರುಣ್ ಮದುವೆ ಸಮಾರಂಭಕ್ಕೆ ಇಡೀ ಮೆಗಾ ಫ್ಯಾಮಿಲಿ ಸಾಕ್ಷಿಯಾಗಿತ್ತು. ಮೆಗಾಸ್ಟಾರ್ ಚಿರಂಜೀವಿ ದಂಪತಿ ಜೊತೆಗೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಕುಟುಂಬ, ಗ್ಲೋಬಲ್ ಸ್ಟಾರ್ ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಕೂಡ ಉಪಸ್ಥಿತರಿದ್ದರು. 

ಇದನ್ನೂ ಓದಿ-ಸಂಕಷ್ಟದಲ್ಲಿ ಉರ್ಫಿ ಜಾವೇದ್.. ಕ್ರಿಮಿನಲ್ ಕೇಸ್ ದಾಖಲು.. ಮಾಡಿದ್ದೇನು ಗೊತ್ತಾ?

ಇದೇ ವೇಳೆ..ಈ ಜೋಡಿಯ ನಡುವಿನ ವಯಸ್ಸಿನ ಅಂತರದ ಬಗ್ಗೆ ಹಲವು ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಲಾವಣ್ಯ ಮತ್ತು ವರುಣ್ ನಡುವೆ ಕೇವಲ 11 ತಿಂಗಳ ವಯಸ್ಸಿನ ಅಂತರವಿದೆಯಂತೆ. ವಿಕಿಪೀಡಿಯಾ ಪ್ರಕಾರ ವರುಣ್ ತೇಜ್ ಜನವರಿ 19 1990 ರಂದು ಜನಿಸಿದ್ದು, ಲಾವಣ್ಯ ತ್ರಿಪಾಠಿ ಡಿಸೆಂಬರ್ 15, 1990 ರಂದು ಜನಿಸಿದ್ದಾರೆ. ಇವರಿಬ್ಬರ ನಡುವೆ ಕೇವಲ 11 ತಿಂಗಳ ವಯಸ್ಸಿನ ಅಂತರವಿದೆ ಎಂದು ವರದಿ ಮಾಡಲಾಗಿದೆ. 

ಇನ್ನು ಅದ್ದೂರಿ ಮದುವೆಯಲ್ಲಿ ವರುಣ್ ತೇಜ್ ಮನೀಷ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಕೆನೆ-ಚಿನ್ನದ ಶೇರ್ವಾನಿಯನ್ನು ಧರಿಸಿದ್ದರು. ಮನೀಷ್ ಮಲ್ಹೋತ್ರಾ ಅವರೇ ವಿನ್ಯಾಸಗೊಳಿಸಿದ ಕಾಂಚೀಪುರಂ ಸೀರೆಯನ್ನು ಲಾವಣ್ಯ ಧರಿಸಿದ್ದರು. 

ಇದನ್ನೂ ಓದಿ-BBK10: ʼವಿನಯ್‌ಗೆ ಪ್ರಶ್ನೆ ಮಾಡ.. ಪ್ಲೀಸ್‌ ಸುದೀಪ್‌ ಸರ್ʼ ಗಾಯಕಿಯ ಮನವಿ : ಐಶ್ವರ್ಯ ರಂಗರಾಜನ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾ

 

Trending News