43 ವರ್ಷವಾದರೂ ಸಿಂಗಲ್‌ ಆಗಿರುವ ಸೌತ್‌ ಬ್ಯೂಟಿ ಅನುಷ್ಕಾ ಶೆಟ್ಟಿ ಎಷ್ಟು ಕೋಟಿ ಆಸ್ತಿ ಒಡತಿ ಗೊತ್ತಾ?

Anushka Shetty Net Worth: ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಪ್ರಮುಖ ನಟಿಯಾಗಿರುವ ಅನುಷ್ಕಾ ಶೆಟ್ಟಿಯ ನಿವ್ವಳ ಮೌಲ್ಯದ ಇಂಟ್ರೆಸ್ಟಿಂಹ್‌ ಮಾಹಿತಿ ಇಲ್ಲಿದೆ..   

Written by - Savita M B | Last Updated : May 8, 2024, 04:23 PM IST
  • ಅನುಷ್ಕಾ ಶೆಟ್ಟಿ ಹುಟ್ಟಿದ್ದು ಕರ್ನಾಟಕದ ಮಂಗಳೂರಿನಲ್ಲಿ.
  • ಟಾಲಿವುಡ್ ನಲ್ಲಿ ಬಿಸಿಯಾಗಿದ್ದ ಅನುಷ್ಕಾ ಅವರನ್ನು ತಮಿಳು ಚಿತ್ರರಂಗಕ್ಕೆ ಕರೆತಂದಿದ್ದು ನಿರ್ದೇಶಕ ಸುಂದರ್ ಸಿ
43 ವರ್ಷವಾದರೂ ಸಿಂಗಲ್‌ ಆಗಿರುವ ಸೌತ್‌ ಬ್ಯೂಟಿ ಅನುಷ್ಕಾ ಶೆಟ್ಟಿ ಎಷ್ಟು ಕೋಟಿ ಆಸ್ತಿ ಒಡತಿ ಗೊತ್ತಾ?  title=

Anushka Shetty: ಅನುಷ್ಕಾ ಶೆಟ್ಟಿ ಹುಟ್ಟಿದ್ದು ಕರ್ನಾಟಕದ ಮಂಗಳೂರಿನಲ್ಲಿ. ಆಕೆಯ ಮೂಲ ಹೆಸರು ಸ್ವೀಟಿ ಶೆಟ್ಟಿ, ನಂತರ ಅವರು ಚಿತ್ರರಂಗಕ್ಕೆ ಪ್ರವೇಶಿಸಿದ ನಂತರ ತಮ್ಮ ಹೆಸರನ್ನು ಅನುಷ್ಕಾ ಶೆಟ್ಟಿ ಎಂದು ಬದಲಾಯಿಸಿಕೊಂಡರು. 2005 ರಲ್ಲಿ ಪುರಿ ಜಗನ್ನಾಥ್ ನಿರ್ದೇಶನದ ಸೂಪರ್ ಚಿತ್ರದ ಮೂಲಕ ತೆಲುಗು ಚಿತ್ರರಂಗದಲ್ಲಿ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಚಿತ್ರದ ಟೈಟಲ್‌ನಂತೆ ಚಿತ್ರವೂ ಸೂಪರ್ ಹಿಟ್ ಆಗಿದ್ದು, ಇದರಿಂದ ಅನುಷ್ಕಾಗೆ ಹಲವು ಸಿನಿಮಾ ಅವಕಾಶಗಳು ಒಲಿದು ಬಂದವು

ಟಾಲಿವುಡ್ ನಲ್ಲಿ ಬಿಸಿಯಾಗಿದ್ದ ಅನುಷ್ಕಾ ಅವರನ್ನು ತಮಿಳು ಚಿತ್ರರಂಗಕ್ಕೆ ಕರೆತಂದಿದ್ದು ನಿರ್ದೇಶಕ ಸುಂದರ್ ಸಿ.. ಇವರ ನಿರ್ದೇಶನದ ಎರಡು ಚಿತ್ರಗಳ ಮೂಲಕ ಅನುಷ್ಕಾ ಕಾಲಿವುಡ್‌ಗೆ ಎಂಟ್ರಿ ಕೊಟ್ಟರು, ನಂತರ ಅಲ್ಲಿಯೂ ಟಾಪ್ ಹೀರೋಯಿನ್ ಆದರು.

ಇದನ್ನೂ ಓದಿ-Amruthadhaare Serial: ಅಮೃತಧಾರೆ ಜೈದೇವ್‌ ನಿಜಕ್ಕೂ ಯಾರು ಗೊತ್ತಾ? ಈತನ ಹಿನ್ನಲೆ ಗೊತ್ತಾದ್ರೆ ಶಾಕ್‌ ಆಗ್ತೀರಾ!!

ಅರುಂಧತಿ ಮತ್ತು ಬಾಹುಬಲಿ ಅನುಷ್ಕಾ ವೃತ್ತಿಜೀವನದ ದೊಡ್ಡ ತಿರುವುಗಳಾಗಿವೆ. ಇವೆರಡೂ ಐತಿಹಾಸಿಕ ಚಿತ್ರಗಳಾಗಿದ್ದು, ಅನುಷ್ಕಾ ತಮ್ಮ ಅದ್ಭುತ ಅಭಿನಯದಿಂದ ಅಭಿಮಾನಿಗಳಿಗೆ ಶಾಕ್‌ ನೀಡಿದ್ದರು.. ಅದರಲ್ಲೂ ಬಾಹುಬಲಿಯಲ್ಲಿ ದೇವಸೇನಾ ಪಾತ್ರದಲ್ಲಿ ಅವರಿಗಿಂತ ಉತ್ತಮವಾಗಿ ಯಾರೂ ಮಾಡಲಾರರು ಎನ್ನುವಷ್ಟರ ಮಟ್ಟಿಗೆ ನಟಿಸಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. 

ಇದಾದ ನಂತರ ಮತ್ತೊಂದು ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದ ಅನುಷ್ಕಾ ಆ ನಂತರ ತೂಕ ಇಳಿಸಿಕೊಳ್ಳಲು ಸಾಧ್ಯವಾಗದೇ ಇದ್ದ ಕಾರಣ ಅವರ ಬೇಡಿಕೆಯೂ ಇಳಿಕೆಯಾಗಿತ್ತು. ನಟಿಯ ಕೊನೆಯ ಚಿತ್ರ ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ. ಈ ಚಿತ್ರದ ನಂತರ, ಅನುಷ್ಕಾ ಪ್ರಸ್ತುತ ಮಲಯಾಳಂನಲ್ಲಿ ಒಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ, ಅದು ಬಿಟ್ಟರೆ ಬೇರೆ ಯಾವುದೇ ಚಿತ್ರ ಅವರ ಕೈಯಲ್ಲಿ ಇಲ್ಲ.. 

ಈಗ ನಟಿ ಅನುಷ್ಕಾಗೆ 43 ವರ್ಷ. ಇಂದಿಗೂ ಸಿಂಗಲ್ ಆಗಿ ಉಳಿದಿರುವ ಇವರ ಬಗ್ಗೆ ಪ್ರೇಮದ ವದಂತಿಗಳು ಆಗ್ಗಾಗ್ಗೆ ವೈರಲ್‌ ಆಗುತ್ತಿರುತ್ತವೆ.. ಅದರಲ್ಲೂ ಅನುಷ್ಕಾ ಮತ್ತು ಪ್ರಭಾಸ್ ಬಹಳ ದಿನಗಳಿಂದ ಪ್ರೀತಿಸುತ್ತಿದ್ದಾರೆ ಎಂಬ ವದಂತಿ ದೊಡ್ಡ ಮಟ್ಟಿಗೆ ಹಬ್ಬಿತ್ತು. ಆದರೆ ಇಬ್ಬರೂ ಒಳ್ಳೆಯ ಸ್ನೇಹಿತರು ಎಂದು ಗಾಳಿ ಸುದ್ದಿಗೆ ತೆರೆ ಎಳೆದಿದ್ದರು... ನಂತರ ಅವರು ನಿರ್ಮಾಪಕರ ಜೊತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೂ ಹಬ್ಬಿತ್ತು.

ಇದನ್ನೂ ಓದಿ-ಖ್ಯಾತ ಕಿರುತೆರೆ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್!!

ಸಿನಿಮಾದಲ್ಲಿ ಆಕೆಗೆ ಅಷ್ಟು ಬೇಡಿಕೆ ಇಲ್ಲಬಾದರೂ ನಟಿ ಅನುಷ್ಕಾ ಆಸ್ತಿ ಎಷ್ಟು ಗೊತ್ತಾದ್ರೆ ಶಾಕ್ ಆಗ್ತೀರ. ಹೌದು ಇವರ ಪ್ರಸ್ತುತ ಆಸ್ತಿ ಮೌಲ್ಯ ರೂ.130 ಕೋಟಿ ಎಂದು ಹೇಳಲಾಗಿದೆ. ನಟಿ ಅನುಷ್ಕಾ ಪ್ರತಿ ಚಿತ್ರಕ್ಕೆ ರೂ.5 ಕೋಟಿಯವರೆಗೂ ಸಂಭಾವನೆ ಪಡೆಯುತ್ತಿದ್ದಾರೆ. ಅದೂ ಅಲ್ಲದೆ ಜಾಹೀರಾತುಗಳಲ್ಲಿ ನಟಿಸಲು ರು.1 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. 

ನಟಿ ಅನುಷ್ಕಾ ಕೂಡ ಬೆಂಗಳೂರು, ಹೈದರಾಬಾದ್‌ನಂತಹ ನಗರಗಳಲ್ಲಿ ಐಷಾರಾಮಿ ಮನೆಗಳನ್ನು ಹೊಂದಿದ್ದಾರೆ. ಕಾರುಗಳೆಂದರೆ ತುಂಬಾ ಇಷ್ಟಪಡುವ ಇವರ ಬಳಿ 10 ಐಷಾರಾಮಿ ಕಾರುಗಳಿವೆ. ಸಿನಿಮಾ ಮಾತ್ರವಲ್ಲದೆ ರಿಯಲ್ ಎಸ್ಟೇಟ್ ನಲ್ಲಿಯೂ ಕೋಟಿಗಟ್ಟಲೆ ಹೂಡಿಕೆ ಮಾಡಿ ಅದರ ಮೂಲಕ ಕೋಟಿಗಟ್ಟಲೆ ಸಂಪಾದಿಸಿದ್ದಾರೆ ಅನುಷ್ಕಾ ಶೆಟ್ಟಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News