Aishwarya Rai Bachchan: ಶಸ್ತ್ರ ಚಿಕಿತ್ಸೆಗೆ ಒಳಗಾಗಲಿರುವ ಐಶ್ವರ್ಯಾ ರೈ ಬಚ್ಚನ್! ಬೇಗ ಗುಣಮುಖರಾಗಲಿ ಎಂದು ಫ್ಯಾನ್ಸ್‌ ಪ್ರಾರ್ಥನೆ

Aishwarya Rai In Cannes Film Festival : ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಇತ್ತೀಚಿನ ದಿನಗಳಲ್ಲಿ 77 ನೇ ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ ನಲ್ಲಿ ರೆಡ್‌ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. 

Written by - Chetana Devarmani | Last Updated : May 19, 2024, 08:01 AM IST
    • ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್
    • ಐಶ್ವರ್ಯಾ ರೈ ಬಚ್ಚನ್ʼಗೆ ಶಸ್ತ್ರ ಚಿಕಿತ್ಸೆ
    • ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ ನಲ್ಲಿ ಐಶ್ವರ್ಯಾ ರೈ
Aishwarya Rai Bachchan: ಶಸ್ತ್ರ ಚಿಕಿತ್ಸೆಗೆ ಒಳಗಾಗಲಿರುವ ಐಶ್ವರ್ಯಾ ರೈ ಬಚ್ಚನ್! ಬೇಗ ಗುಣಮುಖರಾಗಲಿ ಎಂದು ಫ್ಯಾನ್ಸ್‌ ಪ್ರಾರ್ಥನೆ  title=

Aishwarya Rai Bachchan Surgery : ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಇತ್ತೀಚಿನ ದಿನಗಳಲ್ಲಿ 77 ನೇ ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ ನಲ್ಲಿ ರೆಡ್‌ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ ನಲ್ಲಿನ ಐಶ್‌ ಲುಕ್ ಬಹಿರಂಗಗೊಂಡಿದ್ದು, ಇದನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ ಅವರ ಬಟ್ಟೆ ಮತ್ತು ಸೌಂದರ್ಯಕ್ಕಿಂತ ಹೆಚ್ಚಾಗಿ ಕೈಗೆ ಆದ ಗಾಯದ ಐಶ್ವರ್ಯಾ ರೈ ಫ್ಯಾನ್ಸ್ ಚಿಂತಿತರಾಗಿದ್ದಾರೆ. 

ವಿಮಾನ ನಿಲ್ದಾಣದಲ್ಲಿ ಐಶ್ವರ್ಯಾ ರೈ‌ ಕಾಣಿಸಿಕೊಂಡಾಗ ಅವರ ಬಲಗೈ ಗಾಯದ ಬಗ್ಗೆ ಸುದ್ದಿ ಹರಡಿತು. ಇದೀಗ ಈ ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ ಮುಗಿಸಿ ಭಾರತಕ್ಕೆ ವಾಪಸಾದ ಬಳಿಕ  ಐಶ್ವರ್ಯಾ ರೈ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: 69 ವರ್ಷ.. 6 ಸಂಬಂಧ.. ಆದರೂ ಜೀವನದಲ್ಲಿ ಒಬ್ಬಂಟಿ! ಸಿನಿಮಾ ಜಗತ್ತನ್ನು ಆಳಿದ ಈ ತಾರೆ ಯಾರು ಗೊತ್ತೇ?

ತಜ್ಞರು ಮತ್ತು ಅವರ ವೈದ್ಯರೊಂದಿಗೆ ಮಾತನಾಡಿದ ನಂತರ ಐಶ್ವರ್ಯಾ ರೈ ಫ್ರಾನ್ಸ್‌ಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶೀಘ್ರದಲ್ಲೇ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. ಹೀಗಾಗಿ ಭಾರತಕ್ಕೆ ಬಂದರೆ ಮುಂದಿನ ವಾರದ ಅಂತ್ಯದೊಳಗೆ ಶಸ್ತ್ರಚಿಕಿತ್ಸೆ ನಡೆಯಲಿದೆ ಎನ್ನಲಾಗುತ್ತಿದೆ. 

ಐಶ್ವರ್ಯಾ ರೈ ಬಚ್ಚನ್‌ ತಮ್ಮ 12 ವರ್ಷದ ಮಗಳು ಆರಾಧ್ಯ ಬಚ್ಚನ್ ಅವರೊಂದಿಗೆ ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ ಗೆ ತೆರಳಿದ್ದಾರೆ. ಅಭಿಷೇಕ್ ಬಚ್ಚನ್‌ ಈ ಚಲನಚಿತ್ರೋತ್ಸವಕ್ಕೆ ತಮ್ಮ ಪತ್ನಿ ಮಗಳ ಜೊತೆ ಹೋಗಿಲ್ಲ. ರೆಡ್ ಕಾರ್ಪೆಟ್ ಮೇಲೆ ಪ್ಲಾಸ್ಟೆಡ್ ಕೈಯಿಂದಲೇ ಐಶ್ವರ್ಯಾ ರೈ ಬಚ್ಚನ್‌ ಪೋಸ್ ನೀಡಿದ್ದಾರೆ.  

ಇದನ್ನೂ ಓದಿ: Anushka Shetty: ಮದುವೆಗೆ ಸಜ್ಜಾಗುತ್ತಿರುವ ನಟಿ ಅನುಷ್ಕಾ ಶೆಟ್ಟಿ ನಿಜವಾದ ವಯಸ್ಸೆಷ್ಟು ಗೊತ್ತೇ ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News