ಕರೀನಾ, ಕತ್ರಿನಾ ಮತ್ತು ದೀಪಿಕಾ ನಡುವೆ 'ಶ್ರೀವಲ್ಲಿ' ಪಾತ್ರ ಹೇಗೆ ಸ್ಥಾನ ಗಳಿಸಿತು? ರಶ್ಮಿಕಾಮಂದಣ್ಣ ʼನ್ಯಾಷನಲ್‌ ಕ್ರಷ್‌ʼ ಆದ ಕಥೆ ಇದು!!

Rashmika Mandanna: ಕೇವಲ 8 ವರ್ಷಗಳಲ್ಲಿ, ರಶ್ಮಿಕಾ ಮಂದಣ್ಣ ಮಾಡಿದ ಶೇಕಡಾ 70 ರಷ್ಟು ಚಿತ್ರಗಳು ಹಿಟ್ ಎಂದು ಸಾಬೀತಾಗಿದೆ. ‘ನ್ಯಾಷನಲ್ ಕ್ರಶ್’ ಆಗುವ ಕಥೆಯಷ್ಟೇ ಅವರ ಮೊದಲ ಸಿನಿಮಾದ ಕಥೆಯೂ ಕುತೂಹಲಕಾರಿಯಾಗಿದೆ.  

Written by - Savita M B | Last Updated : Apr 5, 2024, 08:21 AM IST
  • ಮೊದಲೇ ದೊಡ್ಡ ದೊಡ್ಡ ಹಿಟ್‌ ಸಿನಿಮಾಗಳನ್ನು ನೀಡಿದ ಸಾಕಷ್ಟು ನಟ-ನಟಿಯರ ಮಧ್ಯೆ ಸಿನಿರಂಗ ಪ್ರವೇಶಿಸಿ ಹೆಸರು ಗಳಿಸುವುದು ತುಂಬಾ ಕಷ್ಟ.
  • ನಟಿ ನ್ಯಾಷನಲ್‌ ಕ್ರಷ್‌ ಆಗುವ ಹಿಂದೆ ದೊಡ್ಡ ಕುತೂಹಲಕಾರಿಯಾದ ಕಥೆಯೊಂದಿದೆ..
ಕರೀನಾ, ಕತ್ರಿನಾ ಮತ್ತು ದೀಪಿಕಾ ನಡುವೆ 'ಶ್ರೀವಲ್ಲಿ' ಪಾತ್ರ ಹೇಗೆ ಸ್ಥಾನ ಗಳಿಸಿತು? ರಶ್ಮಿಕಾಮಂದಣ್ಣ ʼನ್ಯಾಷನಲ್‌ ಕ್ರಷ್‌ʼ ಆದ ಕಥೆ ಇದು!! title=

National Crush Rashmika Mandanna: ಮೊದಲೇ ದೊಡ್ಡ ದೊಡ್ಡ ಹಿಟ್‌ ಸಿನಿಮಾಗಳನ್ನು ನೀಡಿದ ಸಾಕಷ್ಟು ನಟ-ನಟಿಯರ ಮಧ್ಯೆ ಸಿನಿರಂಗ ಪ್ರವೇಶಿಸಿ ಹೆಸರು ಗಳಿಸುವುದು ತುಂಬಾ ಕಷ್ಟ.. ಆದರೆ ನಟಿ ರಶ್ಮಿಕಾ ಮಂದಣ್ಣ ಇದಕ್ಕೆ ದೊಡ್ಡ ಉದಾಹರಣೆಯಾಗಿದ್ದಾರೆ.. ನಟಿ ನ್ಯಾಷನಲ್‌ ಕ್ರಷ್‌ ಆಗುವ ಹಿಂದೆ ದೊಡ್ಡ ಕುತೂಹಲಕಾರಿಯಾದ ಕಥೆಯೊಂದಿದೆ..  
 
ನಟಿ ರಶ್ಮಿಕಾ ಮಂದಣ್ಣ ಅವರು 28 ವರ್ಷಗಳ ಹಿಂದೆ 5 ಏಪ್ರಿಲ್ 1996 ರಂದು ಕರ್ನಾಟಕದ ಸಣ್ಣ ಪಟ್ಟಣವಾದ ವಿರಾಜಪೇಟೆಯಲ್ಲಿ ಜನಿಸಿದ ರಶ್ಮಿಕಾ ನಟಿಸಿದ ಒಟ್ಟು ಸಿನಿಮಾಗಳನ್ನು ಲೆಕ್ಕ ಹಾಕಿದರೆ ಅದರಲ್ಲಿ ಎಷ್ಟು ಹಿಟ್ ಮತ್ತು ಎಷ್ಟು ಫ್ಲಾಪ್ ಆಗಿವೆ? ಒಂದು ಅಂದಾಜಿನ ಪ್ರಕಾರ ಇದುವರೆಗೆ ರಶ್ಮಿಕಾ ನಟಿಸಿರುವ ಒಟ್ಟು 25 ಚಿತ್ರಗಳಲ್ಲಿ ಶೇ.70ರಷ್ಟು ಹಿಟ್ ಆಗಿವೆ. ಈ ಸರಾಸರಿಯೇ ಸಾಕು ಅವರು ದೊಡ್ಡ ಮಟ್ಟದ ನಟಿಯಾಗಿದ್ದಾರೆ ಎಂಬುದನ್ನು ತೋರಿಸಲು. 2016 ರ 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ರಶ್ಮಿಕಾ ಪಾದಾರ್ಪಣೆ ಮಾಡಿದರು.. 

ಇದನ್ನೂ ಓದಿ: 83ನೇ ವಯಸ್ಸಿನಲ್ಲಿ 29ರ ಪ್ರೇಯಸಿಯಿಂದ 4ನೇ ಮಗುವಿಗೆ ತಂದೆಯಾದ ಖ್ಯಾತ ನಟ!

‘ಫ್ರೆಶ್ ಫೇಸ್’ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂದು ಅವರ ಕಾಲೇಜಿನ ಮುಖ್ಯೋಪಾಧ್ಯಾಯಿನಿ ಸೂಚಿಸಿದಾಗ ರಶ್ಮಿಕಾ ಕಾಲೇಜು ಸೇರಿ ಒಂದು ವಾರವೂ ಕಳೆದಿರಲಿಲ್ಲ. ಇದಾದ ನಂತರ ರಶ್ಮಿಕಾ ಭಾಗವಹಿಸಿದ್ದು ಮಾತ್ರವಲ್ಲದೆ ಸ್ಪರ್ಧೆಯಲ್ಲೂ ಗೆದ್ದಿದ್ದಾರೆ. ಹೀಗಾಗಿ ಅವರು ಮಾಡೆಲಿಂಗ್ ಮಾಡಲು ಪ್ರಾರಂಭಿಸಿದರು. ರಶ್ಮಿಕಾ ಆ್ಯಕ್ಟಿವ್ ಆಗಿರುವುದನ್ನು ಪ್ರೊಡಕ್ಷನ್ ಹೌಸ್ ಗಮನಿಸಿತ್ತು.. 

ಸಂದರ್ಶನವೊಂದರಲ್ಲಿ ನಟಿ ರಶ್ಮಿಕಾ ತಮ್ಮ ಮೊದಲ ಚಿತ್ರ 'ಕಿರಿಕ್ ಪಾರ್ಟಿ' ಚಿತ್ರ ಪ್ರವೇಶದ ಬಗ್ಗೆ ಮಾತನಾಡಿದ್ದರು... "ನನಗೆ ಪ್ರೊಡಕ್ಷನ್ ಹೌಸ್‌ನಿಂದ ಕರೆ ಬಂದು, ನನ್ನನ್ನು ಸಿನಿಮಾದಲ್ಲಿ ನಟಿಸುವಂತೆ ಕೇಳಲಾಯಿತು ಆದರೆ ಅದನ್ನು ನಾನು ತಮಾಷೆ ಎಂದುಕೊಂಡಿದ್ದೆ.. ಆ ಕಾಲ್‌ ಬಂದ ನಂಬರ್‌ನ್ನು ನಾನು ಬ್ಲಾಕ್‌ ಲಿಸ್ಟ್‌ಗೆ ಸೇರಿಸಿದೆ.. ನಾನು ಯಾವ ಸಿನಿಮಾ ಮಾಡಲು ಬಯಸುವುದಿಲ್ಲ ಕಾಲ್‌ ಕಟ್‌ ಮಾಡಿ ಎಂದು ಹೇಳಿದೆ.. ಆಗ ಪ್ರೊಡಕ್ಷನ್‌ ಹೌಸ್‌ ನನ್ನನ್ನು ಭೇಟಿ ಮಾಡುವ ಯೋಚನೆಯಲ್ಲಿತ್ತು.. ನಂತರ ಅವರು ನನ್ನ ಕುಟುಂಬದವರು ಹಾಗೇ ನನ್ನ ಸ್ನೇಹಿತರಿಗೆ ಕಾಲ್‌ ಮಾಡಲು ಪ್ರಾರಂಭಿಸಿದರು.. ಆದರೆ ಅದು ಫಲಿಸದಿದ್ದಾಗ, ನನ್ನ ಪ್ರಾಧ್ಯಾಪಕರನ್ನು ಭೇಟಿ ಮಾಡಿದರು..  ನನ್ನ ಶಿಕ್ಷಕರು ನನಗೆ ವಿವರಿಸಿದಾಗ, ನಾನು ಒಪ್ಪಿಕೊಂಡೆ..ಇದು ನಡೆದದ್ದು 2016 ರಲ್ಲಿ ರಶ್ಮಿಕಾ ಕೇವಲ 20 ವರ್ಷ ವಯಸ್ಸಿನವರಾಗಿದ್ದಾಗ ಇದಾದ ನಂತರ ರಶ್ಮಿಕಾ ಹಿಂತಿರುಗಿ ನೋಡುವ ಅಗತ್ಯವೇ ಇರಲಿಲ್ಲ" ಎಂದು ತಮ್ಮ ನಟನಾ ಜರ್ನಿ ಹೇಗೆ ಪ್ರಾರಂಭವಾಯಿತು ಎಂದು ಹೇಳಿಕೊಂಡಿದ್ದಾರೆ.. 

'ಪುಷ್ಪಾ ದಿ ರೈಸ್' 2021 ರ ದೊಡ್ಡ ಹಿಟ್ ಆಗಿತ್ತು. ಶ್ರೀವಲ್ಲಿ ಪಾತ್ರದಲ್ಲಿ ವಿಚಿತ್ರ ಸ್ಟೆಪ್ ಹಾಕಿ ಕುಣಿಯುತ್ತಿರುವ ರಶ್ಮಿಕಾ ನೋಡಿದ್ರೆ ಈ ಹಿಂದೆ ಇಷ್ಟೊಂದು ಗ್ಲಾಮರಸ್ ಪಾತ್ರಗಳಲ್ಲಿ ನಟಿಸಿದ್ದ ರಶ್ಮಿಕಾ ಅವರೇ ಅನ್ನಿಸಲಿಲ್ಲ. ಸದ್ಯ ಅದರ ಎರಡನೇ ಭಾಗದ ಕೆಲಸವೂ ಶುರುವಾಗಿದೆ. 

ರಶ್ಮಿಕಾ ಅವರನ್ನು ಇಷ್ಟಪಡುವವರ ಸಂಖ್ಯೆ ಎಷ್ಟು ಹೆಚ್ಚಾಯಿತು ಎಂದರೆ ಅವರು ಗೂಗಲ್ ಮತ್ತು ಟ್ವಿಟರ್‌ನಲ್ಲಿ ರಾರಾಜಿಸಲು ಪ್ರಾರಂಭಿಸಿದರು.. ಟ್ವಿಟರ್‌ನಲ್ಲಿ #ರಶ್ಮಿಕಾಮಂದಣ್ಣ ಟ್ಯಾಗ್‌ನಿಂದ ಫೋಟೋಗಳು ಮತ್ತು ಸಿನಿಮಾ ದೃಶ್ಯಗಳು ವೈರಲ್ ಆಗಲು ಪ್ರಾರಂಭಿಸಿದವು. ಇದರ ಪರಿಣಾಮ ಆರಂಭದಲ್ಲಿ ‘ಕರ್ನಾಟಕ ಕ್ರಷ್’ ಎಂದು ಕರೆಯಲಾಗುತ್ತಿತ್ತು.. ದಿನಗಳು ಕಳೆದಂತೆ ಅದು ‘ನ್ಯಾಷನಲ್ ಕ್ರಶ್’ ಆಗಿ ಚೇಂಜ್‌ ಆಯಿತು..

ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾದ ನಟ ದರ್ಶನ್ ಕೈಗೆ ಶಸ್ತ್ರ ಚಿಕಿತ್ಸೆ..! ಬೇಗ ಗುಣಮುಖರಾಗಿ ಬಾಸ್‌ ಎಂದ ಫ್ಯಾನ್ಸ್‌

ದಕ್ಷಿಣ ಭಾರತದ ನಟ ಅಥವಾ ನಟಿ ಬಾಲಿವುಡ್‌ನಲ್ಲಿ ಸ್ಥಾನ ಪಡೆಯುವುದು ಸುಲಭವಲ್ಲ. ಅದಕ್ಕೆ ತನ್ನದೇ ಆದ ಶ್ರಮಬೇಕು... ನಾಗಾರ್ಜುನ, ಚಿರಂಜೀವಿ, ರಜನಿಕಾಂತ್, ತ್ರಿಶಾ ಕೃಷ್ಣನ್, ರಮ್ಯಾ ಕೃಷ್ಣನ್, ತಮನ್ನಾ ಭಾಟಿಯಾ ಮತ್ತು ಕಾಜಲ್ ಅಗರ್ವಾಲ್ ಅವರಂತಹ ಅನೇಕ ನಟರು ಬಾಲಿವುಡ್‌ನಲ್ಲಿ ಕೆಲಸ ಮಾಡುವ ಮೂಲಕ ತಮ್ಮ ಛಾಪನ್ನು ಸ್ಥಾಪಿಸಲು ಪ್ರಯತ್ನಿಸಿದರು. ಆದರೆ ಯಶಸ್ವಿಯಾಗಲಿಲ್ಲ. ಜನರು ಅವರನ್ನು ಗುರುತಿಸುತ್ತಾರೆ ಮತ್ತು ಇಷ್ಟಪಡುತ್ತಾರೆ. ಆದರೆ ಅವರ ದಕ್ಷಿಣ ಭಾರತದ ಚಿತ್ರಗಳಿಗೆ ಸೀಮಿತ ಹೊರತು ಹಿಂದಿ ಚಿತ್ರಗಳಿಗೆ ಅಲ್ಲ.

ಕರೀನಾ, ಕತ್ರಿನಾ ಮತ್ತು ದೀಪಿಕಾ ಪಡುಕೋಣೆಯಂತಹ ದೊಡ್ಡ ಬಾಲಿವುಡ್ ನಟಿಯರು ಈಗಾಗಲೇ ನೆಲೆಗೊಂಡಿರುವಾಗ, ತಮಗಾಗಿ ಒಂದು ಸ್ಥಾನವನ್ನು ಕಂಡುಕೊಳ್ಳುವುದು ದೊಡ್ಡ ವಿಷಯವಾಗಿದೆ. ಅಂದಹಾಗೆ ಈ ದೊಡ್ಡ ಕೆಲಸವನ್ನ ರಶ್ಮಿಕಾ ಮಂದಣ್ಣ ಮಾಡಿದ್ದಾರೆ. ‘ಅನಿಮಲ್’ನಂತಹ ಬ್ಲಾಕ್ ಬಸ್ಟರ್ ಚಿತ್ರ ನೀಡಿದ್ದಾರೆ.. ಸದ್ಯ ಅದರ ಎರಡನೇ ಭಾಗವೂ ಬರಲಿದೆ. ಇದಲ್ಲದೇ 'ಪುಷ್ಪಾ 2' ಚಿತ್ರದಲ್ಲೂ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಅಂದರೆ ಇದು ಕಥೆಯ ಆರಂಭವಷ್ಟೇ. ಈಗ ಅವರು ಕೇವಲ 8 ವರ್ಷ ಪ್ರಯಾಣಿಸಿದ್ದಾರೆ. ಈ ಪಯಣ ಹೀಗೆಯೇ ಮುಂದುವರಿಯುತ್ತದೆ. ಹಾಗಾಗಿ ಶ್ರೀವಲ್ಲಿಯಂತಹ ಇನ್ನಷ್ಟು ವರ್ಚಸ್ವಿ ಪಾತ್ರಗಳು ತೆರೆಮೇಲೆ ಬರುವುದರ ನಿರೀಕ್ಷೆಗಳಿವೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News