Shivarajkumar: ʻಭೈರತಿ ರಣಗಲ್‌ʼ ಸೀಕ್ರೆಟ್ಸ್ ರಿವೀಲ್‌:‌ ಸೆಂಚುರಿ ಸ್ಟಾರ್ ಹೇಳಿದ್ದೇನು..?

Bhairathi Ranagal Secrets Revealed: ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ನಿನ್ನೆ ನಡೆದ ಭೈರತಿ ರಣಗಲ್ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಚಿತ್ರದ ಹಲವಾರು ಸೀಕ್ರೆಟ್‌ಗಳನ್ನು ರಿವೀಲ್‌ ಮಾಡಿದ್ದಾರೆ. ಹಾಗಾದರೆ  ಶಿವಣ್ಣ ಏನೆಲ್ಲಾ ಹೇಳಿದ್ದಾರೆ? ಇದರ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ.  

Written by - Zee Kannada News Desk | Last Updated : Mar 11, 2024, 09:35 AM IST
  • ನಟ ಶಿವರಾಜ್‌ಕುಮಾರ್‌ ಅವರ ಮನೆಯಲ್ಲಿ ನಡೆದಿದ್ದು, ಆ ವೇಳೆ ಭೈರತಿ ರಣಗಲ್ ಸಿನಿಮಾ ಆಗಸ್ಟ್ 15ರಂದು ರಿಲೀಸ್ ಆಗಲಿದೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
  • ಭೈರತಿ ರಣಗಲ್ ಚಿತ್ರಕ್ಕೆ ನರ್ತನ್ ಆಕ್ಷನ್ ಕಟ್ ಹೇಳುತ್ತಿದ್ದು, ಈ ಸಿನಿಮಾ ಬಹಳ ಆಡಂಬರ ಇಲ್ಲದೆ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಎಂದು ಹೇಳಿದ್ದಾರೆ.
  • ಶಿವಣ್ಣ ಭೈರತಿ ರಣಗಲ್ ಚಿತ್ರೀಕರಣ ಶೇ70 ರಷ್ಟು ಈಗಾಗಲೇ ಮುಗಿದಿದ್ದು, ಮೈಸೂರು, ಬಳ್ಳಾರಿ ಹಾಗೂ ಪೆನುಗೊಂಡ ಬಳಿ ಚಿತ್ರದ ಶೂಟಿಂಗ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
Shivarajkumar: ʻಭೈರತಿ ರಣಗಲ್‌ʼ ಸೀಕ್ರೆಟ್ಸ್ ರಿವೀಲ್‌:‌ ಸೆಂಚುರಿ ಸ್ಟಾರ್ ಹೇಳಿದ್ದೇನು..? title=

Shivarrajkumar Revealed Secrets Of Bhairathi Ranagal: ಕರುನಾಡ ಚಕ್ರವತಿ ಶಿವರಾಜ್‌ಕುಮಾರ್‌ ನಟನೆಯ ಭೈರತಿ ರಣಗಲ್ ಅಪ್‌ಡೇಟ್‌ಗಾಗಿ ಫ್ಯಾನ್ಸ್‌ ಕಾದು ಕಾದು ಸುಸ್ತಾಗಿ, ಸದ್ಯ ನಿನ್ನೆ ಈ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ನಟ ಶಿವರಾಜ್‌ಕುಮಾರ್‌ ಅವರ ಮನೆಯಲ್ಲಿ ನಡೆದಿದ್ದು, ಆ ವೇಳೆ ಭೈರತಿ ರಣಗಲ್ ಸಿನಿಮಾ ಆಗಸ್ಟ್ 15ರಂದು ರಿಲೀಸ್ ಆಗಲಿದೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇನ್ನೂ ಪೆಸ್‌ಮೀಟ್‌ನಲ್ಲಿ ಶಿವಣ್ಣ ಈ ಚಿತ್ರದ ಹಲವಾರು ಸೀಕ್ರೆಟ್‌ಗಳನ್ನು ರಿವೀಲ್‌ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹ್ಯಾಟ್ರಿಕ್‌ ಹೀರೋ ಭೈರತಿ ರಣಗಲ್ ಸಿನಿಮಾವನ್ನು ಗೀತಾ ಶಿವರಾಜ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಇನ್ನೂ ಈ ಚಿತ್ರಕ್ಕೆ ನರ್ತನ್  ಆಕ್ಷನ್ ಕಟ್ ಹೇಳುತ್ತಿದ್ದು,  ಈ ಸಿನಿಮಾ ಬಹಳ ಆಡಂಬರ ಇಲ್ಲದೆ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಎಂದು ಹೇಳಿದ್ದಾರೆ. ಈ ಚಿತ್ರಕ್ಕೆ ನಟಿ ರುಕ್ಮಿಣಿ ವಸಂತ್‌ ನಾಯಕಿಯಾಗಿದ್ದು, ಶೂಟಿಂಗ್‌ಗಾಗಿ ದೇವನಹಳ್ಳಿಯಲ್ಲಿ ಸೆಟ್ ಹಾಕಲಾಗಿದೆ ಎಂದಿದ್ದಾರೆ. 

ಇದನ್ನೂ ಓದಿ: Priya Mani : ಚಂದದ ಸೀರೆಯಲ್ಲಿ ಚಾರುಲತಾ : ಫೋಟೋಸ್ ಇಲ್ಲಿವೆ ನೋಡಿ

ಶಿವಣ್ಣ ಭೈರತಿ ರಣಗಲ್ ಚಿತ್ರೀಕರಣ ಶೇ70 ರಷ್ಟು  ಈಗಾಗಲೇ ಮುಗಿದಿದ್ದು, ಮೈಸೂರು, ಬಳ್ಳಾರಿ ಹಾಗೂ ಪೆನುಗೊಂಡ ಬಳಿ ಚಿತ್ರದ ಶೂಟಿಂಗ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ಸಿನಿಮಾ ಇದೇ ಆಗಸ್ಟ್ 15ರಂದು ರಾಜಾದ್ಯಂತ ತೆರೆಕಾಣಲಿದೆ. ಈ ಚಿತ್ರ ಕನ್ನಡದಲ್ಲಿ ಮಾತ್ರವಲ್ಲದೆ ತಮಿಳು ಹಾಗೂ ತೆಲುಗು ಭಾಷೆಯಲ್ಲಿಯೂ ಬಿಡುಗಡೆ ಆಗಲಿದೆ. ಸೆಂಚುರಿ ಸ್ಟಾರ್‌ ಮಫ್ತಿ, ಮಫ್ತಿ ಬಳಿಕ ಭೈರತಿ ರಣಗಲ್​, ಬಳಿಕ ಸೀಕ್ವೆಲ್ ಸಹ ಬರುತ್ತೆ ಎಂದು ಹೇಳಿದ್ದಾರೆ.

ನಟ ಶಿವರಾಜ್‌ಕುಮಾರ್‌ ಸಿನಿಮಾ ಖರ್ಚಿನ ಬಗ್ಗೆ ನಾನು ಚಿಂತೆ ಮಾಡಿಲ್ಲ, 38 ವರ್ಷದಿಂದ ನನ್ನನ್ನು ಬೆಂಬಲಿಸುತ್ತಾ ಬಂದಿದ್ದೀರಾ, ಯಾವುದೇ ಗಲಾಟೆ ಇಲ್ಲ ಭೈರತಿ ರಣಗಲ್ ಚಿತ್ರ ಖರ್ಚಿನ ಬಗ್ಗೆ ನಾನು ಯಾವತ್ತೂ ಚಿಂತೆ ಮಾಡಿಲ್ಲ ಎಂದು ಮಾತನಾಡಿದ್ದಾರೆ. ಇನ್ನೂ ಚಿತ್ರದ ನಿರ್ದೇಶಕ ನರ್ತನ್‌ ಗೀತಾ ಶಿವರಾಜ್​ಕುಮಾರ್ ಅವರ ಬೆಂಬಲ ಕೂಡ ನಮಗಿದೆ. ಇನ್ನೂ ಈ ಸಿನಿಮಾದಲ್ಲಿ ಶಿವಣ್ಣ 50-50 ಎಂದ ನರ್ತನ್​ ರಾಕ್ಷಸನಾಗಿರುವವರು ರಕ್ಷಕನಾಗೋದು ಹೇಗೆ ಅನ್ನೋದನ್ನು ಸಹ ತೋರಿಸಲಾಗಿದೆ ಎಂದು ಚಿತ್ರಕಥೆಯ ಸೀಕ್ರೆಟ್‌ ರಿವೀಲ್‌ ಮಾಡಿದ್ದಾರೆ. ಆದರೆ ಶಿವಣ್ಣ ಮಾತ್ರ ಅವರ ಕ್ಯಾರೆಕ್ಟರ್ ಬಗ್ಗೆ ಬಿಟ್ಟುಕೊಟ್ಟಿಲ್ಲ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News