Shilpa Shetty : ಚಪ್ಪಲಿ ಧರಿಸಿ ರಾಷ್ಟ್ರಧ್ವಜ ಹಾರಿಸಿದ ಶಿಲ್ಪಾ ಶೆಟ್ಟಿ.. ನೆಟ್ಟಿಗರ ಆಕ್ರೋಶ

Shilpa Shetty : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ಚಪ್ಪಲಿ ಹಾಕಿಕೊಂಡು ರಾಷ್ಟ್ರಧ್ವಜ ಹಾರಿಸಿದ ಕಾರಣ ನೆಟ್ಟಿಗರು ಅವರ ವಿರುದ್ಧ ಕಿಡಿಕಾರಿದ್ದಾರೆ.    

Written by - Chetana Devarmani | Last Updated : Aug 16, 2023, 11:36 AM IST
  • ದೇಶಾದ್ಯಂತ ಸ್ವಾತಂತ್ರ್ಯೋತ್ಸವದ ಸಂಭ್ರಮ
  • ಸ್ವಾತಂತ್ರ್ಯ ದಿನ ಆಚರಿಸಿದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ
  • ಚಪ್ಪಲಿ ಧರಿಸಿ ಧ್ವಜಾರೋಹಣ ಮಾಡಿದ್ದಕ್ಕೆ ನೆಟ್ಟಿಗರ ಆಕ್ರೋಶ
Shilpa Shetty : ಚಪ್ಪಲಿ ಧರಿಸಿ ರಾಷ್ಟ್ರಧ್ವಜ ಹಾರಿಸಿದ ಶಿಲ್ಪಾ ಶೆಟ್ಟಿ.. ನೆಟ್ಟಿಗರ ಆಕ್ರೋಶ  title=

Shilpa Shetty Independence Day 2023 : ದೇಶಾದ್ಯಂತ ಸ್ವಾತಂತ್ರ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಪ್ರಧಾನಿ ಮೋದಿ ಕೆಂಪು ಕೋಟೆಯ ಮೇಲೆ ಧ್ವಜಾರೋಹಣ ಮಾಡಿ, ದೇಶವನ್ನುದ್ದೇಶಿಸಿ ಮಾತನಾಡಿದರು. ದೇಶದ ಜನತೆ ಹರ್‌ ಘರ್‌ ತಿರಂಗಾ ಅಭಿಯಾನಕ್ಕೆ ಸಾಥ್‌ ನೀಡಿದರು, ಭಾರತ ಮಾತೆಗೆ ಜೈ ಎಂದು ಘೋಷಣೆ ಕೂಗಿದರು. ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಕೂಡ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದರು. ಪತಿ ರಾಜ್ ಕುಂದ್ರಾ, ಮಗ ವಿಯಾನ್, ಮಗಳು ಸಮೀಶಾ ಮತ್ತು ತಾಯಿ ಸುನಂದಾ ಶೆಟ್ಟಿ ಸೇರಿದಂತೆ ಕುಟುಂಬದ ಸದಸ್ಯರೊಂದಿಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದರು. ಆದರೆ ಚಪ್ಪಲಿ ಧರಿಸಿ ರಾಷ್ಟ್ರ ಧ್ವಜಾರೋಹಣ ಮಾಡಿದ್ದಕ್ಕೆ ನೆಟ್ಟಿಗರು ಶಿಲ್ಪಾ ಶೆಟ್ಟಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 

ಮಂಗಳವಾರ ಶಿಲ್ಪಾ ಶೆಟ್ಟಿ ತಮ್ಮ ಕುಟುಂಬ ಸದಸ್ಯರು ಮತ್ತು ಸಿಬ್ಬಂದಿಯೊಂದಿಗೆ ರಾಷ್ಟ್ರಧ್ವಜವನ್ನು ಹಾರಿಸುವ ವಿಡಿಯೋವನ್ನು Instagram ನಲ್ಲಿ ಶೇರ್‌ ಮಾಡಿದ್ದರು. ಶಿಲ್ಪಾ ಶೆಟ್ಟಿ ಬಿಳಿ ಕುರ್ತಾ ಜೊತೆ ಹಸಿರು ಸಲ್ವಾರ್ ಬಾಟಮ್ ಮತ್ತು ಕಿತ್ತಳೆ ಬಣ್ಣದ ದುಪಟ್ಟಾ ಧರಿಸಿದ್ದರು. ಮಕ್ಕಳು ಮತ್ತು ಪತಿಯೊಂದಿಗೆ ರಾಷ್ಟ್ರಧ್ವಜವನ್ನು ಅನಾವರಣಗೊಳಿಸಿದರು. 

ಇದನ್ನೂ ಓದಿ: ಸ್ವಾತಂತ್ರ್ಯ ದಿನದಂದು ಭಾರತೀಯ ಪೌರತ್ವ ಪಡೆದ ಅಕ್ಷಯ್ ಕುಮಾರ್!

ಆದರೆ ಈ ಪೋಸ್ಟ್ ಶೇರ್ ಮಾಡಿದ ನಂತರ ಸಿಕ್ಕಾಪಟ್ಟೆ ಟ್ರೋಲ್‌ ಆಗಿದ್ದಾರೆ. ರಾಷ್ಟ್ರಧ್ವಜಾರೋಹಣ ಮಾಡುವಾಗ ಚಪ್ಪಲಿ ಧರಿಸಿದ್ದಕ್ಕೆ ನೆಟಿಜನ್‌ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ರೋಲರ್‌ಗಳು ಕೆರಳುತ್ತಿರುವಾಗಲೇ ಶಿಲ್ಪಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿವರಣೆ ನೀಡಿದ್ದಾರೆ. "ಧ್ವಜಾರೋಹಣ ಮಾಡುವಾಗ ನೀತಿ ನಿಯಮಗಳ ಅರಿವಿದೆ. ನನ್ನ ದೇಶ, ಧ್ವಜದ ಮೇಲಿನ ಗೌರವವನ್ನು ನೋಡಿ. ನಾನು ಭಾರತೀಯನಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ. ಇಂದಿನ ಆಚರಣೆಯು ಭಾವನೆಯಾಗಿದೆ. ನಕಾರಾತ್ಮಕತೆಯನ್ನು ಹರಡಲು ಅಲ್ಲ. ಸತ್ಯವನ್ನು ತಿಳಿದುಕೊಳ್ಳಿ . ಈ ರೀತಿಯ ವಿಷಯವನ್ನು ನಿಲ್ಲಿಸಿ." ಎಂದು ಪೋಸ್ಟ್ ಮಾಡಿದ್ದಾರೆ.

 

 

ಇನ್ನು ಕೆಲವರು ಶಿಲ್ಪಾ ಶೆಟ್ಟಿಗೆ ಬೆಂಬಲ ನೀಡುತ್ತಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂದು ರಜೆ ಎಂದುಕೊಂಡು ಮಲಗುವವರಿಗಿಂತ ಶಿಲ್ಪಾ ಉತ್ತಮರು ಎನ್ನುತ್ತಿದ್ದಾರೆ. ಇದನ್ನೆಲ್ಲಾ ಕಡೆಗಣಿಸಿ ಮೇಡಂ.. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಎಂದು ಅನೇಕರು ಶಿಲ್ಪಾ ಶೆಟ್ಟಿಗೆ ಬೆಂಬಲಿಸಿದ್ದಾರೆ. 

ಇದನ್ನೂ ಓದಿ: ವಿಜಯ್ - ರಶ್ಮಿಕಾ ಸ್ಪೆಷಲ್ ಡೇ ಸೆಲಿಬ್ರೇಷನ್‌, ಈ ದಿನ ಯಾಕಿಷ್ಟು ವಿಶೇಷ ಗೊತ್ತಾ? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News