ರೀಲ್ಸ್ ರಾಣಿ ಶೋಕಿಗೆ ಸಾಲ ಮಾಡಿದ್ಲು : ಸಾಲತೀರಿಸಲು ಮನೆಯೊಡತಿ ಕೊಲೆ ಮಾಡಿ ಅಂದರ್ ಆದ್ಲು

Murder In Bengaluru: ಕೋಲಾರ ಮೂಲದ ಮೋನಿಕಾ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿ ಕಂಪನಿಯೊಂದರಲ್ಲಿ ಕಳೆದ ಒಂದು ವರ್ಷದಿಂದ ಡೇಟಾ ಎಂಟ್ರಿ ಕೆಲಸ ಮಾಡುತ್ತಿದ್ದಳು.

Written by - VISHWANATH HARIHARA | Last Updated : May 15, 2024, 04:31 PM IST
  • ರೀಲ್ಸ್ ರಾಣಿ ಶೋಕಿಗೆ ಸಾಲ ಮಾಡಿದ್ಲು
  • ಸಾಲತೀರಿಸಲು ಮನೆಯೊಡತಿ ಕೊಲೆ
  • ಕೆಂಗೇರಿ ಪೊಲೀಸರಿಂದ ಆರೋಪಿ ಅರೆಸ್ಟ್‌
ರೀಲ್ಸ್ ರಾಣಿ ಶೋಕಿಗೆ ಸಾಲ ಮಾಡಿದ್ಲು : ಸಾಲತೀರಿಸಲು ಮನೆಯೊಡತಿ ಕೊಲೆ ಮಾಡಿ ಅಂದರ್ ಆದ್ಲು  title=

ಬೆಂಗಳೂರು: ರೀಲ್ಸ್ ರಾಣಿಯೊಬ್ಬಳು ಶೋಕಿಗಾಗಿ ಸಾಲ ಮಾಡಿದ್ದಾಕೆ ಸಾಲ ತೀರಿಸಲು ತಾನು ಬಾಡಿಗೆಗಿದ್ದ ಮನೆಯೊಡತಿಯನ್ನ ಹತ್ಯೆ ಮಾಡಿ ಕೆಂಗೇರಿ ಪೊಲೀಸರ ಅತಿಥಿಯಾಗಿದ್ದಾಳೆ. ಮೋನಿಕಾ(24) ವರ್ಷ ಅಂದರ್ ಆದವಳು. 

ಕೆಂಗೇರಿಯ ಕೊನಸಂದ್ರದಲ್ಲಿ ವಾಸವಾಗಿದ್ದ ಮೋನಿಕಾ ಮೇ 10ರಂದು ಮನೆಯೊಡತಿ ದಿವ್ಯಾಳನ್ನ ಹತ್ಯೆ ಮಾಡಿ ಆಕೆಯ ಚಿನ್ನದ ಸರ ಕದ್ದು ಏನೂ ಅರಿಯದಂತೆ ಡ್ರಾಮಾ ಮಾಡಿದ್ದಳು. ಕೋಲಾರ ಮೂಲದ ಮೋನಿಕಾ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿ ಕಂಪನಿಯೊಂದರಲ್ಲಿ ಕಳೆದ ಒಂದು ವರ್ಷದಿಂದ ಡೇಟಾ ಎಂಟ್ರಿ ಕೆಲಸ ಮಾಡುತ್ತಿದ್ದಳು.

ಕಳೆದ‌‌ ಮೂರು ತಿಂಗಳಿಂದ ಮೃತೆ ದಿವ್ಯಾ ಮನೆಯಲ್ಲಿ ಬಾಡಿಗೆಯಿದ್ದಳು. ಇತ್ತೀಚೆಗೆ ಕೆಲಸ ಬಿಟ್ಟು ಒಬ್ಬಂಟಿಯಾಗಿ ವಾಸವಾಗಿದ್ದ ಈಕೆ ವಿಪರೀತ ಕೈಸಾಲ ಮಾಡಿಕೊಂಡಿದ್ದಳು. ಯುವಕನೊಬ್ಬನ ಜೊತೆ ಸಲುಗೆ ಬೆಳೆಸಿಕೊಂಡಿದ್ದಳು‌.‌ಯುವಕ ಸಹ ಆಗಾಗ ಮನೆಗೆ ಬಂದು ಹೋಗುತ್ತಿದ್ದ. 

ಇದನ್ನೂ ಓದಿ:  SSLC ಟಾಪರ್‌ ಅಂಕಿತಾ ಓದಿದ ಶಾಲೆಯ ಅಭಿವೃದ್ಧಿಗೆ 1 ಕೋಟಿ ಅನುದಾನ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಇತ್ತ ಕೋನಸಂದ್ರದಲ್ಲಿ ನಾಲ್ಕು ತಿಂಗಳ ಹಿಂದಷ್ಟೇ ಗೃಹ ಪ್ರವೇಶ ಮಾಡಿ ದಿವ್ಯಾ ಕುಟುಂಬ ವಾಸವಾಗಿತ್ತು. ಪತಿ ಗುರುಮೂರ್ತಿ, ಕೆಂಗೇರಿ ಉಪನಗರದ ಶಿವನಪಾಳ್ಯದಲ್ಲಿ ಸಲೂನ್ ಶಾಪ್ ನಡೆಸುತ್ತಿದ್ದರು. ಈ ನಡುವೆ  ದಿವ್ಯಾ ಮೈ‌‌ ಮೇಲಿದ್ದ ಒಡವೆ ಮೇಲೆ ಮೋನಿಕಾಳ ಕಣ್ಣು ಬಿದ್ದಿತ್ತು. ಮೋನಿಕಾಳ ಸಲುಗೆ ಬೆಳೆಸಿಕೊಂಡಿದ್ದ ಯುವಕ ಟಾಟಾ ಎಸಿ ವಾಹನ‌ ಖರೀದಿಗೆ ಹಣ ಅವಶ್ಯಕತೆ ಇತ್ತು. ಮನೆ ಮಾಲೀಕರ ಚಲನವಲನಗಳನ್ನು ಗಮನಿಸಿದ್ದ ಯುವತಿ ದಿವ್ಯಾಳನ್ನು ಕೊಲೆ ಮಾಡಿದ್ರೆ ಸಾಲ ತೀರಿಸಿ ಪ್ರಿಯತಮನಿಗೆ ಹಣ ನೀಡಬಹುದು ಎಂದು ಪ್ಲಾನ್ ಮಾಡಿಕೊಂಡಿದ್ದಳು.

ಅಂತೆಯೇ ಕಳೆದ‌ 10ರಂದು ಬೆಳಗ್ಗೆ ದಿವ್ಯಾ ಪತಿ ಗುರುಮೂರ್ತಿ ಕೆಲಸಕ್ಕೆ ಹೋಗಿದ್ದರು.ಈ ವೇಳೆ‌ ದಿವ್ಯಾ‌ ಒಬ್ಬಂಟಿಯಾಗಿರುವುದನ್ನ ಅರಿತಿದ್ದ ಮೋನಿಕಾ, ಮನೆಗೆ ಹೋಗಿ‌ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಳು. ಬಳಿಕ ಆಕೆ ಮೈಮೇಲಿದ್ದ 36 ಗ್ರಾಂ ಚಿನ್ನದ ಸರ ಕದ್ದು ಗಿರಿವಿ ಅಂಗಡಿಯಲ್ಲಿ ಅಡವಿಟ್ಟು ಏನೂ ಗೊತ್ತಿಲ್ಲದಂತೆ ನಾಟಕ ಮಾಡಿದ್ದಳು. ಇತ್ತ ಗುರುಮೂರ್ತಿ ನಿರಂತರವಾಗಿ ಪೋನ್ ಮಾಡಿದರೂ ದಿವ್ಯಾ ಕರೆ ಸ್ವೀಕರಿಸದಿದ್ದನ್ನ ಕಂಡು ಆತಂಕಕ್ಕೆ‌ ಒಳಗಾಗಿದ್ದ.

ಏನೋ ಅಗಿರಬೇಕೆಂಬ ಭೀತಿಯಿಂದಲೇ‌ ಮನೆಗೆ ಬಂದು ನೋಡಿದಾಗ ಕೊಲೆಯಾಗಿರುವ ವಿಷಯ ಬೆಳಕಿಗೆ ಬಂದಿತ್ತು.  ಕುತ್ತಿಗೆ ಮೇಲೆ ಗಾಯದ ಗುರುತುವಿರುವುದು ಹಾಗೂ ಚಿನ್ನದ‌ ಸರ ಇಲ್ಲದಿರುವುದನ್ನ ಕಂಡು ಪತ್ನಿಯನ್ನ ಹತ್ಯೆ ಮಾಡಿದ್ದಾರೆಂದು ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಡಿಗೆಗಿದ್ದ ಮೋನಿಕಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಾಯ್ಬಿಟ್ಟಿದ್ದಾಳೆ. ಸದ್ಯ ಮೋನಿಕಾಳನ್ನು  ಬಂಧಿಸಿ ಕೆಂಗೇರಿ ಪೊಲೀಸರು ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ:  Pre-Monsoon Season: ಪೂರ್ವ ಮುಂಗಾರು ಹಂಗಾಮಿನ ವೇಳೆ ನಿಮ್ಮ ಭೂಮಿಯನ್ನು ಸಿದ್ದಪಡಿಸುವ ವಿಧಾನ ಹೇಗೆ ಗೊತ್ತೇ...!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News