Madhuri Dixit: ಮಾಧುರಿ ದೀಕ್ಷಿತ್ ಜೀವನಾಧರಿತ American series ರದ್ದು!

Madhuri Dixit biopic: ಪ್ರಿಯಾಂಕಾ ಚೋಪ್ರಾ ನಿರ್ಮಿಸುತ್ತಿದ್ದ ತನ್ನ ಜೀವನವನ್ನು ಆಧರಿಸಿದ ಸರಣಿಯನ್ನು ಈಗ ರದ್ದುಗೊಳಿಸಲಾಗಿದೆ ಎಂದು ಮಾಧುರಿ ದೀಕ್ಷಿತ್ ಬಹಿರಂಗಪಡಿಸಿದ್ದಾರೆ.

Written by - Chetana Devarmani | Last Updated : Feb 27, 2022, 01:55 PM IST
  • ಮಾಧುರಿ ದೀಕ್ಷಿತ್ ಜೀವನಾಧರಿತ ಸರಣಿ
  • ಪ್ರಿಯಾಂಕಾ ಚೋಪ್ರಾ ನಿರ್ಮಿಸುತ್ತಿದ್ದ ಅಮೆರಿಕನ್ ಸೀರೀಸ್
  • ಮಾಧುರಿ ಜೀವನ ಆಧರಿಸಿದ ಸರಣಿ ಈಗ ರದ್ದು
Madhuri Dixit: ಮಾಧುರಿ ದೀಕ್ಷಿತ್ ಜೀವನಾಧರಿತ American series ರದ್ದು!  title=
ಮಾಧುರಿ ದೀಕ್ಷಿತ್

ನವದೆಹಲಿ: ಪ್ರಸ್ತುತ 'ದಿ ಫೇಮ್ ಗೇಮ್' ಸರಣಿಯಲ್ಲಿ ತನ್ನ ಬಹು ನಿರೀಕ್ಷಿತ OTT ಚೊಚ್ಚಲ ಯಶಸ್ಸಿನ ಖುಷಿಯಲ್ಲಿದ್ದಾರೆ ನಟಿ ಮಾಧುರಿ ದೀಕ್ಷಿತ್ (Madhuri Dixit). 

ಇದನ್ನೂ ಓದಿ:  James: ಅಪ್ಪು ಕೊನೆಯ ಸಿನಿಮಾ 'ಜೇಮ್ಸ್' ನೋಡಲು ಚಿರಂಜೀವಿ, ಜೂ.ಎನ್‌ಟಿಆರ್‌ ಬರ್ತಾರಾ..?

ಪ್ರಿಯಾಂಕಾ ಚೋಪ್ರಾ (Priyanka Chopra) ನಿರ್ಮಿಸುತ್ತಿದ್ದ ತನ್ನ ಜೀವನವನ್ನು ಆಧರಿಸಿದ ಸರಣಿಯನ್ನು ಈಗ ರದ್ದುಗೊಳಿಸಲಾಗಿದೆ ಎಂದು ಮಾಧುರಿ ದೀಕ್ಷಿತ್ ಬಹಿರಂಗಪಡಿಸಿದ್ದಾರೆ.

ಇದು ಮಾಧುರಿಯವರ ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ. ಕೆಲವು ವರ್ಷಗಳ ಹಿಂದೆ ಘೋಷಿಸಲಾದ ಸರಣಿಯನ್ನು (Madhuri Dixit biopic) ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. 

 

 
 
 
 

 
 
 
 
 
 
 
 
 
 
 

A post shared by Priyanka (@priyankachopra)

 

ನಟಿ ಪ್ರಿಯಾಂಕಾ ಒಂದೆರಡು ವರ್ಷಗಳ ಹಿಂದೆ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಈ ಸರಣಿ ನಿರ್ಮಾಣದ ಬಗ್ಗೆ ಘೋಷಿಸಿದ್ದರು.  

ಇದನ್ನೂ ಓದಿ:  ಮಾರ್ಚ್‌ನಲ್ಲಿ ರಿಲೀಸ್ ಆಗಲಿರುವ ಬಿಗ್ ಬಜೆಟ್ ಸಿನಿಮಾಗಳಿಗೆ ಮತ್ತೊಂದು ಸಂಕಷ್ಟ!

ನಟಿ ಮಾಧುರಿ ದೀಕ್ಷಿತ್ ಅವರ ಜೀವನದ ಘಟನೆಗಳನ್ನು ಅಧರಿಸಿದ ಹಾಸ್ಯ ಭರಿತವಾದ ಅಮೆರಿಕನ್ ಸೀರೀಸ್ (American series) ಇನ್ನು ಮುಂದೆ ನಡೆಯುವುದಿಲ್ಲ ಎಂದು ಖುದ್ದು ಅವರೇ ಹೇಳಿದ್ದಾರೆ. ಇದನ್ನು ಶ್ರೀರಾವ್ ಅವರು ಬರೆದು ನಿರ್ದೇಶಿಸುತ್ತಿದ್ದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News