ಹರಿ ಹರ ವೀರಮಲ್ಲು ಟೀಸರ್‌ ಔಟ್‌..! ಅಬ್ಬರಿಸಿ ಬೊಬ್ಬಿರಿದ ಪವರ್‌ ಸ್ಟಾರ್‌ ‌ಪವನ್‌ ಕಲ್ಯಾಣ್‌

Pawan Kalyan : ಬಹು ನಿರೀಕ್ಷಿತ ಹರಿ ಹರ ವೀರಮಲ್ಲು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಇಂದು (ಮೇ 2) ಬೆಳಿಗ್ಗೆ 9 ಗಂಟೆಗೆ ಬಿಡುಗಡೆಯಾಗದ ಹರಿಹರ ವೀರ ಮಲ್ಲು ಟೀಸರ್ ನೋಡಿ ಅಭಿಮಾನಿಗಳು ಥ್ಲೀಲ್ ಆಗಿದ್ದಾರೆ. 

Written by - Krishna N K | Last Updated : May 2, 2024, 05:14 PM IST
    • ಬಹು ನಿರೀಕ್ಷಿತ ಹರಿ ಹರ ವೀರಮಲ್ಲು ಚಿತ್ರದ ಟೀಸರ್ ಬಿಡುಗಡೆ
    • ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ನಟನೆಯ ಪವರ್‌ ಪ್ಯಾಕ್ಡ್‌ ಸಿನಿಮಾ
    • ಟೀಸರ್ ಅದ್ಭುತವಾಗಿ ಮೂಡಿ ಬಂದಿದ್ದು, ಸಿನಿಮಾದ ಮೇಲಿನ ನಿರೀಕ್ಷೆ ದ್ವಿಗುಣ ಗೊಳಿಸಿದೆ
ಹರಿ ಹರ ವೀರಮಲ್ಲು ಟೀಸರ್‌ ಔಟ್‌..! ಅಬ್ಬರಿಸಿ ಬೊಬ್ಬಿರಿದ ಪವರ್‌ ಸ್ಟಾರ್‌ ‌ಪವನ್‌ ಕಲ್ಯಾಣ್‌ title=

Hari Hara Veera Mallu Teaser : ಆಂಧ್ರ ಪ್ರದೇಶ ರಾಜಕೀಯದಲ್ಲಿ ಜನಸೇನಾನಿಯಾಗಿ ಹೋರಾಡುತ್ತಿರುವ ನಟ, ರಾಜಕಾರಣಿ ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ನಟನೆಯ ಪವರ್‌ ಪ್ಯಾಕ್ಡ್‌ ಸಿನಿಮಾ ಹರಿಹರ ವೀರಮಲ್ಲು ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ಚಿತ್ರದ ಮೇಲಿನ ಕುತೂಹಲ ಹುಟ್ಟಿಸುತ್ತಿದೆ.

ಹೌದು.. ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಬಹು ನಿರೀಕ್ಷಿತ ಹರಿ ಹರ ವೀರಮಲ್ಲು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ಅದ್ಭುತವಾಗಿ ಮೂಡಿ ಬಂದಿದ್ದು, ಸಿನಿಮಾದ ಮೇಲಿನ ನಿರೀಕ್ಷೆ ದ್ವಿಗುಣ ಗೊಳಿಸಿದೆ. ಇಂದು (ಮೇ 2) ಬೆಳಿಗ್ಗೆ 9 ಗಂಟೆಗೆ ಬಿಡುಗಡೆಯಾಗದ ಹರಿಹರ ವೀರ ಮಲ್ಲು ಟೀಸರ್ ನೋಡಿ ಅಭಿಮಾನಿಗಳು ಥ್ಲೀಲ್ ಆಗಿದ್ದಾರೆ. 

ಇದನ್ನೂ ಓದಿ: 7 ದೇಶಗಳಲ್ಲಿ ಶೂಟಿಂಗ್, 38 ಭಾಷೆಗಳಲ್ಲಿ ರಿಲೀಸ್.. ಬಾಹುಬಲಿಗಿಂತಲೂ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾ.. ನಾಯಕ ಯಾರು?

ಪವರ್ ಸ್ಟಾರ್ ಲುಕ್, ಆಕ್ಷನ್ ಸೀಕ್ವೆನ್ಸ್ ಟೀಸರ್ ಕಳೆ ಹೆಚ್ಚಿಸಿವೆ. 17 ನೇ ಶತಮಾನದ ಲುಕ್ ನಲ್ಲಿ ಜನಸೇನಾನಿಯಾಗಿ ಪವನ್ ಕಲ್ಯಾಣ್ ಕಾಣಿಸಿಕೊಂಡಿದ್ದಾರೆ. ಹರಿ ಹರ ವೀರ ಮಲ್ಲು 17 ನೇ ಶತಮಾನದ ಆಕ್ಷನ್ ಡ್ರಾಮಾ ಸಿನಿಮಾ. ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ಈ ಸಿನಿಮಾವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರದ ನಿರ್ದೇಶಕ ಕ್ರಿಶ್ ಜಗರ್ಲಮುಡಿ ನಿರ್ದೇಶಿಸಿದ್ದಾರೆ. 

ಈ ಸಿನಿಮಾದಲ್ಲಿ ಬಾಲಿವುಡ್ ಉದ್ಯಮದ ಬಾಬಿ ಡಿಯೋಲ್ ಮತ್ತು ನೋರಾ ಫತೇಹಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಔರಂಗಜೇಬ್ ಪಾತ್ರದಲ್ಲಿ ಬಾಬಿ ಡಿಯೋಲ್ ಮಿಂಚಿದ್ದಾರೆ.. ಅಂದಿನ ಕಾಲದಲ್ಲಿ ಮೊಘಲ್‌ ಸಾಮ್ರಾಟರ ಅಟ್ಟಹಾಸ ಹಾಗೂ ಅವರ ಕೈಸೇರಿದ ಕೊಹಿನೂರ್‌ ವಜ್ರದ ಕಥೆಯನ್ನೇ ಆಧರಿಸಿ ಈ ಸಿನಿಮಾ ಮಾಡಲಾಗಿದೆ ಎಂದು ಹೇಳಲಾಗಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News