Madhuri Dixit : ಕೊನೆಗೂ ಬಯಲಾಯ್ತು ʼಮಾಧುರಿ ದೀಕ್ಷಿತ್ʼ ಸೌಂದರ್ಯದ ರಹಸ್ಯ..! ನೀವು ಟ್ರೈ ಮಾಡಿ..

Madhuri Dixit Beauty Tips : 55 ಹರೆಯದಲ್ಲೂ ನಟಿ ಮಾಧುರಿ ದೀಕ್ಷಿತ್‌ ಸುಂದರವಾಗಿ ಕಾಣುತ್ತಿದ್ದಾರೆ. ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವ ಬಿಟೌನ್‌ ಸುಂದರಿ ಇಂದಿನ ಯುವ ನಟಿಯರಿಗೂ ಬ್ಯೂಟಿ ವಿಚಾರದಲ್ಲಿ ಟಾಪ್‌ ಲಿಸ್ಟ್‌ನಲ್ಲಿ ನಿಲ್ಲುತ್ತಾರೆ. ಹಾಗಿದ್ರೆ, ಮಾಧುರಿ ಸೌಂದರ್ಯದ ರಹಸ್ಯವಾದ್ರೂ ಏನು ಅಂತೀರಾ.. ಜಸ್ಟ್‌ ಈ ಸ್ಟೋರಿ ಓದಿ..

Written by - Krishna N K | Last Updated : Apr 29, 2023, 08:29 PM IST
  • 55 ಹರೆಯದಲ್ಲೂ ನಟಿ ಮಾಧುರಿ ದೀಕ್ಷಿತ್‌ ಅದ್ಭುತವಾಗಿ ಕಾಣಿಸುತ್ತಾರೆ.
  • ಇಂದಿನ ನಟಿಯರ ಸಾಲಿನಲ್ಲಿ ಬ್ಯೂಟಿ ವಿಚಾರ ಬಂದ್ರೆ ಮಾಧುರಿ ಫಸ್ಟ್‌.
  • ಸದ್ಯ ಮಾಧುರಿ ಸೌಂದರ್ಯ ರಹಸ್ಯವನ್ನು ತಮ್ಮ ಪ್ಯಾನ್ಸ್‌ಗಳ ಜೊತೆ ಹಂಚಿಕೊಂಡಿದ್ದಾರೆ.
Madhuri Dixit : ಕೊನೆಗೂ ಬಯಲಾಯ್ತು ʼಮಾಧುರಿ ದೀಕ್ಷಿತ್ʼ ಸೌಂದರ್ಯದ ರಹಸ್ಯ..! ನೀವು ಟ್ರೈ ಮಾಡಿ.. title=

Madhuri Dixit : ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್ ಬಗ್ಗೆ ಹೆಚ್ಚಾಗಿ ಹೇಳುವ ಅಗತ್ಯ ಇಲ್ಲ. ತಮ್ಮ ನಟನೆ ಮತ್ತು ಅಮೋಘ ಸೌಂದರ್ಯದ ಮೂಲಕ ಭಾರತೀಯ ಸಿನಿ ರಸಿಕರ ಹೃದಯದಲ್ಲಿ ನೆಲೆಯೂರಿದ ಅಪರೂದ ಸುಂದರಿ ಈಕೆ. 55ನೇ ವಯಸ್ಸಿನಲ್ಲಿಯೂ ಯುವತಿಯಂತೆ ಕಂಗೊಳಿಸುವ ಚೆಲುವೆ ಆಗಾಗ್ಗೆ ತಮ್ಮ ಸೌಂದರ್ಯ ಮತ್ತು ಆರೋಗ್ಯ ಸಲಹೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ.

ಇತ್ತೀಚೆಗಷ್ಟೇ ಮಾಧುರಿ ದೀಕ್ಷಿತ್‌ ನೆನೆ ತಾವು ನಿತ್ಯ ಸೇವಿಸುವ ಪಾನೀಯಗಳ ಬಗ್ಗೆ ಒಂದರ ಹಿಂದೆ ಒಂದರಂತೆ ಮಾಹಿತಿ ಹಂಚಿಕೊಂಡಿದರು. ಚಿಕ್ಕ ವಯಸ್ಸಿನ ಹುಡುಗಿಯರನ್ನೂ ನಾಚಿಸುವಷ್ಟು ಅವರ ಸೌಂದರ್ಯಕ್ಕೆ ಕಾರಣವಾದ ಕೆಲವು ಅಂಶಗಳನ್ನು ತಿಳಿಸಿದ್ದರು. ಹಾಗಿದ್ರೆ, ದಿನನಿತ್ಯ ಮಾಧುರಿ ಸೇವಿಸುವ ಆ ಪಾನೀಯಗಳಾವುದು ಅಂತ ತಿಳಿಯೋಣ ಬನ್ನಿ.

ಇದನ್ನೂ ಓದಿ: Gattimela Serial : ನಟನೆ ಮೇಲಿನ ಕ್ರೇಜ್‌ ಗೆ ಡಾಕ್ಟರ್‌ ವೃತ್ತಿಯನ್ನೇ ಬದಿಗೊತ್ತಿದ "ಗಟ್ಟಿಮೇಳ" ನಟಿ  ಇವರೇ ನೋಡಿ!

ಎಳನೀರು : ಮಾಧುರಿ ದೀಕ್ಷಿತ್ ಎಳ ನೀರುನ್ನು ಕುಡಿಯಲು ಹೆಚ್ಚು ಇಷ್ಟಪಡುತ್ತಾರೆ. ದಿನನಿತ್ಯದ ಆಹಾರದ ಭಾಗವಾಗಿ ಎಳನೀರನ್ನು ಸೇವಿಸುತ್ತಾರೆ. ಈ ಕುರಿತು ಸ್ವತಃ ಅವರೇ.. ʼನನ್ನ ದೈನಂದಿನ ಜೀವನದಲ್ಲಿ ಎಳನೀರನ್ನು ಸೇರಿಸುತ್ತೇನೆʼ ಎಂದು ಹೇಳಿಕೊಂಡಿದ್ದರು. ಅಲ್ಲದೆ, ಇದು ಅವರ ಒತ್ತಡವನ್ನು ನಿವಾರಿಸುತ್ತದೆ, ನನ್ನ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ ಅಂತ ತಿಳಿಸಿಕೊಟ್ಟಿದ್ದರು.

ಮಾಧುರಿ ಚಹಾ ಪ್ರೇಮಿ : ಹೌದು.. ಇದು ನಿಜ ಧಕ್ ಧಕ್ ಹುಡುಗಿ ಚಹಾ ಪ್ರೇಮಿ. ಟೀ ಅಂದ್ರೆ ತುಂಬಾ ಇಷ್ಟ. ಪ್ರತಿ ಗುಟುಕು ಚಹಾವನ್ನು ಆನಂದಿಸಲು ಇಷ್ಟಪಡುತ್ತಾರೆ. ಹೆಚ್ಚಾಗಿ ಅವರು ಕಪ್ಪು-ಟೀ ಮತ್ತು ಕಾಫಿ ಕುಡಿಯಲು ಇಷ್ಟಪಡುತ್ತಾರಂತೆ. ಇದರು ಮನಸ್ಥಿತಿಗೆ ಅನುಗುಣವಾಗಿ ಬದಲಾಗುತ್ತಿರುತ್ತದೆ. ಮಾಧುರಿಗೆ ಪ್ರತಿದಿನ ಒಂದು ಕಪ್ ಟೀ ಕುಡಿಯಲು ಇಷ್ಟವಂತೆ. ಟೀ ಅವರನ್ನು ತಾಜಾ ಮತ್ತು ರೀಚಾರ್ಜ್ ಮಾಡುತ್ತೆ ಅಂತ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Most Controversial Outfit: ವಿಚಿತ್ರ ಉಡುಗೆಯಲ್ಲಿ ಊರ್ಫಿಯನ್ನು ಮೀರಿಸಿದ ಕೇಟಿ ಪೆರ್ರಿ, ಈಕೆಯನ್ನು ನೀವು ನೋಡಿದರೇ ದಂಗ್ ಆಗೋದ್‌ ಗ್ಯಾರಂಟಿ !

ಮಜ್ಜಿಗೆ : ಹಾಲು ಮತ್ತು ಮೊಸರು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಅಂತ ಎಲ್ಲರಿಗೂ ತಿಳಿದಿದೆ. ಇದರ ಹಿಂದಿನ ಕಾರಣ ಅಂದ್ರೆ, ಅವುಗಳು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಅದಕ್ಕಾಗಿಯೇ ಮಾಧುರಿ ದೀಕ್ಷಿತ್ ಪ್ರತಿದಿನ ಊಟದ ನಂತರ ಮಜ್ಜಿಗೆ ಕುಡಿಯಲು ಇಷ್ಟಪಡುತ್ತಾರೆ. ಇದು ದೇಹವನ್ನು ತಂಪಾಗಿಸುತ್ತದೆ ಮತ್ತು ಮುಖ ಹಾಗೂ ತ್ವಚೆಯ ಹೊಳಪನ್ನು ಹೆಚ್ಚುತ್ತದೆಯಂತೆ.

ಪ್ರತಿದಿನ ಸಾಕಷ್ಟು ನೀರು ಕುಡಿಯಿರಿ : ಮಾಧುರಿಯ ಹೊಳೆಯುವ ಮತ್ತು ಯೌವನದ ತ್ವಚೆಯ ಒಂದು ಪ್ರಮುಖ ರಹಸ್ಯ ಅಂದ್ರೆ, ನೀರು. ಮಾಧುರಿ ಹೇಳುವಂತೆ ಪ್ರತಿದಿನ ಕನಿಷ್ಠ 8 ರಿಂದ 10 ಗ್ಲಾಸ್ ನೀರನ್ನು ಕುಡಿಯಬೇಕಂತೆ. ಏಕೆಂದರೆ ಇದು ನಿಮ್ಮ ಚರ್ಮವನ್ನು ಹೈಡ್ರೇಟ್ ಮಾಡಲು ಮತ್ತು ಮೂತ್ರಪಿಂಡಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News