ಮಾಧುರಿ ದೀಕ್ಷಿತ್‌‌ ಗೆ ಬ್ಲೌಸ್‌ ಬಿಚ್ಚಿ ಬ್ರಾ ಮೇಲೆ ಬರಲು ಹೇಳಿದ್ದರಂತೆ ಆ ಡೈರೆಕ್ಟರ್!

Madhuri Dixit Movies : ಟಿನು ಸಂದರ್ಶನವೊಂದರಲ್ಲಿ ಈ ವಿಚಾರ ತಿಳಿಸಿದ್ದಾರೆ. ಶನಾಖ್ತ್​​ ಸಿನಿಮಾದ ವೇಳೆ ಈ ಘಟನೆ ನಡೆದಿದೆ. 

Written by - Chetana Devarmani | Last Updated : Nov 5, 2023, 09:10 AM IST
  • ಮಾಧುರಿಗೆ ಬ್ಲೌಸ್‌ ಬಿಚ್ಚಲು ಹೇಳಿದ್ದರಂತೆ ಆ ನಿರ್ದೇಶಕ
  • ಒಪ್ಪಂದಕ್ಕೆ ಸಹಿ ಹಾಕಿ ಬಳಿಕ ಆಕ್ಷೇಪ ಮಾಡಿದ್ದರಂತೆ ಮಾಧುರಿ
  • ಅಮಿತಾಬ್‌ ಬಚ್ಚನ್‌ ಜೊತೆ ಮಾಡಿದ ಈ ಸಿನಿಮಾದಲ್ಲಿ ನಡೆದ ಘಟನೆ
ಮಾಧುರಿ ದೀಕ್ಷಿತ್‌‌ ಗೆ ಬ್ಲೌಸ್‌ ಬಿಚ್ಚಿ ಬ್ರಾ ಮೇಲೆ ಬರಲು ಹೇಳಿದ್ದರಂತೆ ಆ ಡೈರೆಕ್ಟರ್! title=
Madhuri Dixit

Madhuri Dixit With Amitabh Bachchan : 80 ರ ದಶಕದಲ್ಲಿ ಕಾಲಿಯಾ ಮತ್ತು ಶಾಹೆನ್‌ಶಾ ಅಂತಹ ಸೂಪರ್‌ ಹಿಟ್ ಸಿನಿಮಾ ನಿರ್ಮಿಸಿದ ಟಿನು ಆನಂದ್ ಒಮ್ಮೆ 1989 ರಲ್ಲಿ ಶನಾಖ್ತ್ ಎಂಬ ಚಿತ್ರದಲ್ಲಿ ಬಚ್ಚನ್ ಮತ್ತು ಮಾಧುರಿ ದೀಕ್ಷಿತ್ ಅವರನ್ನು ಆಯ್ಕೆ ಮಾಡಿದ್ದರು. ಆ ವೇಳೆಗೆ ಮಾಧುರಿ ದೀಕ್ಷಿತ್ ತೇಜಾಬ್ ಮತ್ತು ರಾಮ್ ಲಖನ್‌ ಹೀಗೆ ಬ್ಲಾಕ್‌ ಬಾಸ್ಟರ್‌​ ಸಿನಿಮಾ ನೀಡಿದ್ದರು​. ಅಮಿತಾಬ್‌ ಆಗಲೇ ಸ್ಟಾರ್​ ಹೀರೋ ಆಗಿದ್ದರು. ಸಂದರ್ಶನವೊಂದರಲ್ಲಿ ನಟ-ನಿರ್ದೇಶಕರು ಚಿತ್ರೀಕರಣದ ಮೊದಲ ದಿನದಲ್ಲಿ, ಮಾಧುರಿಯೊಂದಿಗೆ ಅವರ ವೇಷಭೂಷಣದ ಬಗ್ಗೆ ಜಗಳವಾಗಿತ್ತು ಎಂಬ ವಿಚಾರವನ್ನು ನೆನಪಿಸಿಕೊಂಡಿದ್ದಾರೆ.

ಟಿನು ಸಂದರ್ಶನವೊಂದರಲ್ಲಿ ಈ ವಿಚಾರ ತಿಳಿಸಿದ್ದಾರೆ. ಶನಾಖ್ತ್​​ ಸಿನಿಮಾದ ವೇಳೆ ಈ ಘಟನೆ ನಡೆದಿದೆ. ಮಿಲಿಟರಿ ಅಧಿಕಾರಿಯ ವಿಮಾನವು ಸರೋವರದಲ್ಲಿ ಪತನವಾಗುತ್ತದೆ. ಆ ಅಧಿಕಾರಿ ಜೀವ ಉಳಿಯುತ್ತದೆ, ಆದರೆ ಆತ ಎಲ್ಲ ಹಳೆಯ ನೆನಪನ್ನು ಕಳೆದುಕೊಳ್ಳುತ್ತಾನೆ. ಈ ಸಮಯದಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಆತನ  ಶುಶ್ರೂಷೆ ಮಾಡುವ ಕತೆಯನ್ನು ಈ ಸಿನಿಮಾ ಆಧರಿಸಿದೆ.

ಇದನ್ನೂ ಓದಿ : BBK10: ಬಳೆ ತಂಟೆಗೆ ಹೋದ್ರೆ ಬರೆ ಬೀಳ್ದೇ ಇರುತ್ತಾ? ವಿನಯ್‌ಗೆ ನೀರಿಳಿಸಿದ ಕಿಚ್ಚ ಸುದೀಪ್‌!

ಬಟ್ಟೆಯ ಬಗ್ಗೆ ಮಾಧುರಿ ದೀಕ್ಷಿತ್‌ ಕ್ಯಾತೆ ತೆಗೆದರು ಎಂದು ಟಿನು ಹೇಳಿದ್ದಾರೆ. ಇದೇ ವಿಚಾರಕ್ಕೆ ಮಾಧುರಿ ಜೊತೆಗೆ ಮಾತಿನ ಚಕಮಕಿ ನಡೆಯಿತು ಎಂದಿದ್ದಾರೆ. ಮಾಧುರಿ ದೀಕ್ಷಿತ್​ ತಮ್ಮ ಬ್ಲೌಸ್ ಕಳಚಿ ಬ್ರಾ ಮೇಲೆ ಶೂಟಿಂಗ್​ ಮಾಡುವ ಸೀನ್‌ನಲ್ಲಿ ಈ ಜಗಳ ನಡೆಯಿತು ಎಂದಿದ್ದಾರೆ. 

ಚಿತ್ರದ ನಾಯಕ ಅಮಿತಾಬ್‌ ಬಚ್ಚನ್‌ ಅವರನ್ನು  ಸರಪಳಿಯಲ್ಲಿ ಬಂಧಿಸುವ ಸನ್ನಿವೇಶ..  ವಿಲನ್‌ಗಳು ಇವರನ್ನು ಸರಪಳಿಯಲ್ಲಿ ಕಟ್ಟಿರುತ್ತಾರೆ. ಗೂಂಡಾಗಳ ಕೈಯಿಂದ ನಾಯಕಿ  ಮಾಧುರಿ ದೀಕ್ಷಿತ್ ಅವರನ್ನು ರಕ್ಷಿಸಲು ನಾಯಕ ಪ್ರಯತ್ನಿಸುತ್ತಾನೆ. ಆದರೆ ಅದು ಸಾಧ್ಯವಾಗದಿದ್ದಾಗ ನಾಯಕನನ್ನು ರಕ್ಷಿಸಲು ತನ್ನ ಬ್ಲೌಸ್​ ಕಳಚಿ ಬ್ರಾ ಮೇಲೆ ನಿಲ್ಲುವ ದೃಶ್ಯ ಇದಾಗಿತ್ತು. ಈ ಸೀನ್‌ ಬಗ್ಗೆ ಸಿನಿಮಾಗೆ ಸಹಿ ಹಾಕುವ ಮೊದಲೇ ಹೇಳಲಾಗಿತ್ತಂತೆ. ಕ್ಯಾಮೆರಾ ಮುಂದೆ ನಾಯಕಿ ಬ್ರಾ ಧರಿಸಿ ನಿಲ್ಲುವ ಸೀನ್‌ ಇದೆ ಎಂದು ನಿರ್ಮಾಪಕರು ಮಾಧುರಿ ಅವರಿಗೆ ಒಪ್ಪಂದಕ್ಕೂ ಮುನ್ನವೇ ತಿಳಿಸಿದ್ದರಂತೆ. ಆರಂಭದಲ್ಲಿ ಮಾಧುರಿ ದೀಕ್ಷಿತ್‌ ಇದಕ್ಕೆ ಒಪ್ಪಿದ್ದರು ಎಂದು ಹೇಳಿದ್ದಾರೆ. 

ಇದನ್ನೂ ಓದಿ : ಟೀಸರ್‌ನಿಂದಲೇ ಮೋಡಿಮಾಡಿದ "ದಿಲ್ ಖುಷ್" : ಚಿತ್ರತಂಡಕ್ಕೆ ಶುಭಕೋರಿದ ಡಾರ್ಲಿಂಗ್ ಕೃಷ್ಣ 

ಈ ದೃಶ್ಯಕ್ಕಾಗಿ ಬ್ರಾ ಡಿಸೈನ್ ಕೂಡ ಸಿದ್ಧಪಡಿಸಲಾಗಿತ್ತು. ಎಲ್ಲದ್ದಕ್ಕೂ ಓಕೆ ಎಂದಿದ್ದ ಮಾಧುರಿ, ಶೂಟಿಂಗ್ ವೇಳೆ ಈ ಸೀನ್‌ ಮಾಡಲ್ಲ ಎಂದು ನಿರಾಕರಿಸಿ ಬಿಟ್ಟರಂತೆ. ಇದು ಟಿನು ಮತ್ತು ಮಾಧುರಿ ನಡುವೆ ಜಗಳಕ್ಕೆ ಕಾರಣವಾಯ್ತು. ಹೀಗಾಗಿ ಮಾಧುರಿ ಬದಲಿಗೆ ಬೇರೊಬ್ಬ ನಟಿಯನ್ನು ಹಾಕಿಕೊಳ್ಳಬೇಕೆಂದು ಯೋಚಿಸಲಾಯಿತಂತೆ. ಆದರೆ ಅಂತಿಮವಾಗಿ ಮಧುರಿ ಅವರ PA ಅವರ ಮನವೊಲಿಸಿ ಈ ಸೀನ್‌ ಮಾಡಿಸಿದರಂತೆ. ಈ ಚಿತ್ರವನ್ನು ಕೇವಲ ಐದು ದಿನದಲ್ಲಿ ಚಿತ್ರೀಕರಿಸಲಾಗಿತ್ತು.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News