ಕಿಚ್ಚ-ದಚ್ಚು ಫ್ಯಾನ್ಸ್‌ಗೆ ಗುಡ್‌ ನ್ಯೂಸ್:‌ ಕಾಟೇರ ಸಿನಿಮಾ ನೋಡಲಿದ್ದಾರಂತೆ ಸುದೀಪ್!

Darshan And Sudeep: ಸ್ಯಾಂಡಲ್‌ವುಡ್‌ ಸ್ಟಾರ್‌ ನಟರಾದ ದರ್ಶನ್‌ ಹಾಗೂ ಕಿಚ್ಚ ಸುದೀಪ್‌ ಒಳ್ಳೆ ಗೆಳೆಯರಾಗಿದ್ದು, ಕೆಲವಯ ಬಿನ್ನಾಭಿಪ್ರಾಯವಿದ್ದರಿಂದ ಇಬ್ಬರೂ ದೂರವಾಗಿದ್ದರು. ಆದರೆ ಇತ್ತೀಚೆಗೆ ಕಿಚ್ಚ ಸುದೀಪ್‌ ಕಾಟೇರ ಸಿನಿಮಾ ನೋಡಲಿದ್ದಾರೆಂಬ ಮಾಹಿತಿ ಹೊರ ಬಿದ್ದಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

Last Updated : Jan 6, 2024, 09:37 AM IST
  • ಕಾಟೇರ 7ನೇ ದಿನ 9.52 ಕೋಟಿ ರೂಪಾಯಿ ಗಳಿಕೆ ಮಾಡಿದ್ದು, ಮೊದಲ ವಾರವೇ ಸಿನಿಮಾ 104.58 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗುತ್ತಿದೆ.
  • ಚಂದನವನದಲ್ಲಿ ಒಳ್ಳೆ ಗೆಳೆಯರಾಗಿದ್ದ ನಟ ದರ್ಶನ್ ಮತ್ತು ಕಿಚ್ಚ ಸುದೀಪ್‌ ನಡುವೆ ಕೆಲ ವರ್ಷಗಳಿಂದ ಭಿನ್ನಾಭಿಪ್ರಾಯವಿದೆ ಎನ್ನಲಾಗುತ್ತಿದ್ದು, ಇಬ್ಬರನ್ನು ಒಂದು ಮಾಡಲು ಹಲವು ಮಂದಿ ಪ್ರಯತ್ನ ಪಟ್ಟಿದ್ದಾರೆ.
  • ನಟ ಕಿಚ್ಚ ಸುದೀಪ್, ದರ್ಶನ್‌ನ ಕಾಟೇರ ಸಿನಿಮಾ ನೋಡಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಕಿಚ್ಚ-ದಚ್ಚು ಫ್ಯಾನ್ಸ್‌ಗೆ ಗುಡ್‌ ನ್ಯೂಸ್:‌ ಕಾಟೇರ ಸಿನಿಮಾ ನೋಡಲಿದ್ದಾರಂತೆ ಸುದೀಪ್!  title=

Kiccha Sudeep is Going To Watch Kaatera: ಹೊಸ ವರ್ಷಕ್ಕೂ ಮುನ್ನ ದರ್ಶನ್ ಮತ್ತು ತರುಣ್ ಸುಧೀರ್ ಕಾಂಬಿನೇಷನ್‌ನ ಕಾಟೇರ ಸಿನಿಮಾಕ್ಕೆ ಕನ್ನಡಿಗರು ಭರ್ಜರಿ ಸ್ವಾಗತ ನೀಡಿದ್ದು, ರಿಲೀಸ್‌ ಆದ ಕೇವಲ ಏಳೇ ದಿನಕ್ಕೆ ದಾಖಲೆಯ ಗಳಿಕೆ ಕಂಡಿದೆ. ಕಾಟೇರ  7ನೇ ದಿನ 9.52 ಕೋಟಿ ರೂಪಾಯಿ ಗಳಿಕೆ ಮಾಡಿದ್ದು, ಮೊದಲ ವಾರವೇ ಸಿನಿಮಾ 104.58 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗುತ್ತಿದೆ. ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿದ್ದ 'ಕಾಟೇರ' ಚಿತ್ರ ಮುಂದಿನ ದಿನಗಳಲ್ಲಿ ಬೇರೆ ಭಾಷೆಗಳಲ್ಲಿಯೂ ತೆರೆಗೆ ಅಪ್ಪಳಿಸಲಿದೆ. ಇದರ ಬೆನ್ನಲ್ಲೇ ಕನ್ನಡದ ಸ್ಟಾರ್ ನಟರ ಫ್ಯಾನ್ಸ್ ಬಯಸುತ್ತಿದ್ದ ಗುಡ್ ನ್ಯೂಸ್ ಹೊರಬಿದ್ದಿದೆ. 

ಚಂದನವನದಲ್ಲಿ ಒಳ್ಳೆ ಗೆಳೆಯರಾಗಿದ್ದ ನಟ ದರ್ಶನ್ ಮತ್ತು ಕಿಚ್ಚ ಸುದೀಪ್‌ ನಡುವೆ ಕೆಲ ವರ್ಷಗಳಿಂದ ಭಿನ್ನಾಭಿಪ್ರಾಯವಿದೆ ಎನ್ನಲಾಗುತ್ತಿದ್ದು, ಇಬ್ಬರನ್ನು ಒಂದು ಮಾಡಲು ಹಲವು ಮಂದಿ ಪ್ರಯತ್ನ ಪಟ್ಟಿದ್ದಾರೆ. ಇದಕ್ಕೆ ಇತ್ತೀಚೆಗೆ ನಡೆದ ಸಂಸದೆ ಸುಮಲತಾ ಅಂಬರೀಷ್ ಹುಟ್ಟುಹಬ್ಬದ ಕಾರ್ಯಕ್ರಮ ಕೂಡ ಒಂದಾಗಿದ್ದು, ಹಲವು ವರ್ಷಗಳ ನಂತರ ಇಬ್ಬರು ಒಂದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಇದು ಚಿತ್ರರಂಗ ಮತ್ತು ಫ್ಯಾನ್ಸ್‌ಗೆ ಹೊಸ ಭರವಸೆ ನೀಡಿತ್ತು. 

ಇದನ್ನೂ ಓದಿ: ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ಚಾಲೆಂಜಿಂಗ್‌ ಸ್ಟಾರ್‌

ಇದರ ಬೆನ್ನಲ್ಲೇ ನಟ ಕಿಚ್ಚ ಸುದೀಪ್, ದರ್ಶನ್‌ನ ಕಾಟೇರ ಸಿನಿಮಾ ನೋಡಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಮೊನ್ನೆಯಷ್ಟೇ ಕಾಟೇರ ಚಿತ್ರದ ಸೆಲೆಬ್ರಿಟಿ ಶೋ ಆಯೋಜನೆ ಮಾಡಲಾಗಿದ್ದು, ಅಲ್ಲಿ ಚಿತ್ರರಂಗದ ಹಲವು ಕಲಾವಿದರು ಬಂದು ಕಾಟೇರನ ಅಬ್ಬರ ಕಣ್ತುಂಬಿಕೊಂಡಿದ್ದರು. ಆದರೆ, ಸುದೀಪ್ ಬಂದಿರಲಿಲ್ಲ. ಸದ್ಯ ಮ್ಯಾಕ್ಸ್‌ ಸಿನಿಮಾದ ಚಿತ್ರೀಕರಣ ಒಂದೆರಡು ದಿನಗಳ ಹಿಂದಷ್ಟೇ ಮತ್ತೆ ಆರಂಭವಾಗಿದ್ದರಿಂದ, ನಟ ಕಿಚ್ಚ ಸುದೀಪ್‌  ತಮಿಳುನಾಡಿನ ಮಹಾಬಲಿಪುರಂನಲ್ಲಿ  ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. . ಇದ್ದು, ತಕ್ಷಣ ಕಾಟೇರ ಸೆಲಬ್ರಿಟಿ ಶೋಗೆ ಬರಲು ಆಗಿಲ್ಲ. ಹೀಗಾಗಿ ಸಮಯವಾದ ತಕ್ಷಣ ಕಾಟೇರ ನೋಡುವುದಾಗಿ ತಿಳಿಸಿದ್ದಾರಂತೆ. 

ಕಾಟೇರ ನಿರ್ದೇಶಕ ತರುಣ್ ಸುಧೀರ್, "ಕಾಟೇರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಖುದ್ದು ಕಿಚ್ಚ ಸುದೀಪದ ಅವರಿಗೆ ಕರೆ ಮಾಡಿ ಸೆಲಬ್ರಿಟಿ ಶೋಗೆ ಕರೆದಿದ್ದರು. ಆದರೆ, ಶೂಟಿಂಗ್‌ ಇರುವ ಕಾರಣ ಅವರು ಬಂದಿಲ್ಲ. ಈ ವಾರದಲ್ಲಿ ಆದಷ್ಟು ಬೇಗ 'ಕಾಟೇರ' ನೋಡುವುದಾಗಿ ಹೇಳಿದ್ದಾರೆ. ಅವರು ಬಂದ ತಕ್ಷಣ ತಿಳಿಸುವಂತೆ ರಾಕ್‌ಲೈನ್ ವೆಂಕಟೇಶ್ ಅವರು ಹೇಳಿದ್ದಾರೆ" ಎಂದು  ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ. 
 

ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News