ಕ್ರಿಟಿಕ್ಸ್‌ ಅವಾರ್ಡ್‌ ನಾಮಿನೇಷನ್‌ನಲ್ಲಿ ಕಾಟೇರ: 15 ವಿಭಾಗಗಳಲ್ಲಿ ಸ್ಪರ್ಧೆ..

Chandanavana Film Critic Award: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ 'ಕಾಟೇರ' ಚಿತ್ರ 2024ನೇ ಸಾಲಿ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ ನಾಮಿನೇಷನ್ ಲಿಸ್ಟ್‌ನ  15 ವಿಭಾಗಗಳಲ್ಲಿ ಆಯ್ಕೆಯಾಗಿದೆ.   

Written by - Zee Kannada News Desk | Last Updated : Jan 16, 2024, 05:39 PM IST
  • ಚಾಲೆಂಜಿಂಗ್‌ ಸ್ಟಾರ್‌ ನಟ ದರ್ಶನ್‌ ಅಭಿನಯದ 'ಕಾಟೇರ' ಚಿತ್ರ, ಬಾಕ್ಸ್‌ಆಫೀಸ್ನಲ್ಲಿ ಇನ್ನೂ ತನ್ನ ಆರ್ಭಟ ಮುಂದುವರೆದಿದೆ.
  • ಕಾಟೇರ ಚಿತ್ರ ಎಲ್ಲಾ ವಿಭಾಗಗಳಲ್ಲಿ ಕೂಡ ಸಿನಿಮಾ ಅದ್ಭುತ ಎನ್ನುವ ಮಾತುಗಳು ಕೇಳಿಬರ್ತಿದ್ದು, ಹೀಗಾಗಿ ಸಿನಿಮಾ ಹಲವು ಪ್ರಶಸ್ತಿಗಳನ್ನು ಗೆಲ್ಲುವ ಸಾಧ್ಯತೆಯಿದೆ.
  • ಪ್ರತಿ ವರ್ಷ ಬಿಡುಗಡೆಯಾಗುವ ಕನ್ನಡ ಸಿನಿಮಾಗಳನ್ನು ನೋಡಿ ಸಿನಿಮಾ ವಿಮರ್ಶಕರು ವಿವಿಧ ವಿಭಾಗಗಳಲ್ಲಿ ವಿಜೇತರನ್ನು ಆಯ್ಕೆ ಮಾಡುತ್ತಿದ್ದು, ಇದೀಗ 5ನೇ ವರ್ಷ ಪ್ರಶಸ್ತಿ ಪ್ರದಾನ ಮಾಡಲು ವೇದಿಕೆ ಸಿದ್ಧವಾಗುತ್ತಿದೆ.
ಕ್ರಿಟಿಕ್ಸ್‌ ಅವಾರ್ಡ್‌ ನಾಮಿನೇಷನ್‌ನಲ್ಲಿ ಕಾಟೇರ: 15 ವಿಭಾಗಗಳಲ್ಲಿ ಸ್ಪರ್ಧೆ.. title=

Kaatera Movie Nominated For Critics Award: ಕಳೆದ ವರ್ಷ ಚಾಲೆಂಜಿಂಗ್‌ ಸ್ಟಾರ್‌ ನಟ ದರ್ಶನ್‌ ಅಭಿನಯದ 'ಕಾಟೇರ' ಚಿತ್ರ, ಬಾಕ್ಸ್‌ಆಫೀಸ್ನಲ್ಲಿ ಇನ್ನೂ ತನ್ನ ಆರ್ಭಟ ಮುಂದುವರೆದಿದೆ.  18 ದಿನಗಳಿಂದ ಥಿಯೇಟರ್‌ಗಳಲ್ಲಿ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಇದರಲ್ಲಿ ತರುಣ್ ಸುಧೀರ್ ಹಾಗೂ ದರ್ಶನ್ ವಿಭಿನ್ನ ಪ್ರಯೋಗ ಮಾಡಿ ಗೆದ್ದಿದ್ದಾರೆ. ಸದ್ಯ ತರುಣ್ ಸುಧೀರ್ ನಿರ್ದೇಶನ, ದರ್ಶನ್ ನಟನೆ, ಕಥೆ- ಚಿತ್ರಕಥೆ ಎಲ್ಲದರ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗುವುದರ ಜೊತೆಗೆ 'ಕಾಟೇರ' ಚಿತ್ರದಲ್ಲಿ  ನಿರ್ದೇಶನ, ಸಂಭಾಷಣೆ, ಕಲಾವಿದರ ಅಭಿನಯ ಎಲ್ಲದರ ಬಗ್ಗೆಯೂ ಜನ ಮಾತನಾಡುತ್ತಿದ್ದಾರೆ. 

ಕಾಟೇರ ಚಿತ್ರ ಎಲ್ಲಾ ವಿಭಾಗಗಳಲ್ಲಿ ಕೂಡ ಸಿನಿಮಾ ಅದ್ಭುತ ಎನ್ನುವ ಮಾತುಗಳು ಕೇಳಿಬರ್ತಿದ್ದು, ಹೀಗಾಗಿ ಸಿನಿಮಾ ಹಲವು ಪ್ರಶಸ್ತಿಗಳನ್ನು ಗೆಲ್ಲುವ ಸಾಧ್ಯತೆಯಿದೆ. ಸದ್ಯ 2024ನೇ ಸಾಲಿ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ ನಾಮಿನೇಷನ್ ಲಿಸ್ಟ್ ಹೊರ ಬಿದ್ದಿದ್ದು, 15 ವಿಭಾಗಗಳಲ್ಲಿ 'ಕಾಟೇರ' ಸಿನಿಮಾ ಪ್ರಶಸ್ತಿಗಾಗಿ ಕಣದಲ್ಲಿದೆ. ಪ್ರತಿ ವರ್ಷ ಬಿಡುಗಡೆಯಾಗುವ ಕನ್ನಡ ಸಿನಿಮಾಗಳನ್ನು ನೋಡಿ ಸಿನಿಮಾ ವಿಮರ್ಶಕರು ವಿವಿಧ ವಿಭಾಗಗಳಲ್ಲಿ ವಿಜೇತರನ್ನು ಆಯ್ಕೆ ಮಾಡುತ್ತಿದ್ದು, ಇದೀಗ 5ನೇ ವರ್ಷ ಪ್ರಶಸ್ತಿ ಪ್ರದಾನ ಮಾಡಲು ವೇದಿಕೆ ಸಿದ್ಧವಾಗುತ್ತಿದೆ. ಅತ್ಯುತ್ತಮ ಸಿನಿಮಾ, ನಟ, ನಿರ್ದೇಶಕ ಹೀಗೆ ಹಲವು ವಿಭಾಗಗಳಲ್ಲಿ ಸಿನಿಮಾ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು, 'ಕಾಟೇರ' ಸಿನಿಮಾ ಯಾವೆಲ್ಲಾ ಕ್ಯಾಟಗರಿಯಲ್ಲಿ ರೇಸ್‌ನಲ್ಲಿದೆ. ಅದರ ಕಂಪ್ಲೀಟ್ ಲಿಸ್ಟ್ ಇಲ್ಲಿದೆ ನೋಡಿ.

ಅತ್ಯುತ್ತಮ ಚೊಚ್ಚಲ ನಟಿ - ತ್ರಿಪುರಾಂಬ ಪ್ರಶಸ್ತಿ 
 

1. ಆರಾಧನಾ ರಾಮ್ (ಕಾಟೇರ) 
2. ನಿರೀಕ್ಷಾ ರಾವ್ (ರಾಜಯೋಗ) 
3. ಅಮೃತಾ ಪ್ರೇಮ್ (ಟಗರು ಪಲ್ಯ) 
4. ಚೈತ್ರಾ ಎಚ್ಜಿ (ಮಾವು ಬೇವು) 
5. ಪ್ರಿತಿಕಾ ದೇಶಪಾಂಡೆ (ಪೆಂಟಗನ್) 

ಅತ್ಯುತ್ತಮ VFX 
 

1. ಸಪ್ತ ಸಾಗರದಾಚೆ ಎಲ್ಲೋ (A&B) - ಪಿನಾಕಾ ಸ್ಟುಡಿಯೋಸ್ - ರಾಹುಲ್ ವಿ ಗೋಪಾಲಕೃಷ್ಣನ್ 
2. ಕಬ್ಜಾ - ಯುನಿಫೈ ಮೀಡಿಯಾ 
3. ಗುರುದೇವ್ ಹೊಯ್ಸಳ - ಡಿಜಿಟಲ್ ಟರ್ಬೊ ಮೀಡಿಯಾ, ಕುಸಾ
4. ಕಾಟೇರ - ಗಗನ್ ಅಜೈ 
5. ಘೋಸ್ಟ್ - ಅಸೂ ಸ್ಟುಡಿಯೋಸ್ (ಟೆಹ್ರಾನ್), ಮೊಹಮ್ಮದ್ ಅಬ್ದಿ 

ಅತ್ಯುತ್ತಮ ಕಲಾ ನಿರ್ದೇಶನ 
 

1. ಕಬ್ಜ - ಶಿವಕುಮಾರ್ ಜೆ 
2. ಸಪ್ತ ಸಾಗರದಾಚೆ ಎಲ್ಲೋ (A&B) - ಉಲ್ಲಾಸ್ ಹೈದೂರ್ 
3. ಕಾಟೇರ - ಗುಣ 
4. ಘೋಸ್ಟ್ - ಮೋಹನ್ ಬಿ ಕೆರೆ 
5. ಕೈವ - ಧರಣಿ ಗಂಗೆಪುತ್ರ 

ಅತ್ಯುತ್ತಮ ಸಾಹಸ ನೃತ್ಯ ಸಂಯೋಜನೆ 

1. ಸಪ್ತ ಸಾಗರದಾಚೆ ಎಲ್ಲೋ (ಸೈಡ್ ಬಿ) - ಚೇತನ್ ಡಿಸೋಜಾ, ವಿಕ್ರಮ್ ಮೋರೆ 
2. ಗುರುದೇವ್ ಹೊಯ್ಸಳ - ದಿಲೀಪ್ ಸುಬ್ಬರಾಯನ್, ಅರ್ಜುನ್ ರಾಜ್ 
3. ಕಬ್ಜ - ರವಿವರ್ಮ, ವಿಕ್ರಮ್ ಮೋರ್ 
4. ಕೈವ - ಅರ್ಜುನ್ ರಾಜ್, ಡಿಫರೆಂಟ್ ಡ್ಯಾನಿ 
5. ಕಾಟೇರ - ರಾಮ್-ಲಕ್ಷ್ಮಣ್ 

ಅತ್ಯುತ್ತಮ ಛಾಯಾಗ್ರಹಣ 

1. ಸಪ್ತ ಸಾಗರದಾಚೆ ಎಲ್ಲೋ (ಸೈಡ್ ಬಿ) - ಅದ್ವೈತ ಗುರುಮೂರ್ತಿ 
2. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - ಅರವಿಂದ್ ಕಶ್ಯಪ್ 
3. ಸ್ವಾತಿ ಮುತ್ತಿನ ಮಲೆಹನಿಯೇ - ಪ್ರವೀಣ್ ಶ್ರೀಯಾನ್ 
4. ಘೋಸ್ಟ್ - ಮಹೇಂದ್ರ ಸಿಂಹ 
5. ಕಾಟೇರ - ಸುಧಾಕರ್ ಎಸ್ ರಾಜ್ 

ಅತ್ಯುತ್ತಮ ಸಂಪಾದನೆ 

1. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - ಸುರೇಶ್ ಎಂ
2. ಘೋಸ್ಟ್ - ದೀಪು ಎಸ್ ಕುಮಾರ್ 
3. ಶಿವಾಜಿ ಸುರತ್ಕಲ್ 2 - ಆಕಾಶ್ ಶ್ರೀವತ್ಸ 
4. ಕಾಟೇರ - ಕೆ ಎಂ ಪ್ರಕಾಶ್ 
5. ಕೈವ - ಕೆ ಎಂ ಪ್ರಕಾಶ್ 

ಅತ್ಯುತ್ತಮ ನೃತ್ಯ ಸಂಯೋಜನೆ 
 

1. ಪುಷ್ಪಾವತಿ - ಕ್ರಾಂತಿ - ಗಣೇಶ್ 
2. ಪಸಂದಗವ್ನೆ - ಕಾಟೇರ - ಭೂಷಣ 
3. ಕೆಟ್ಟ ನಡತೆ - ಕೆಟ್ಟ ನಡತೆ - ಬಿ ಧನಂಜಯ್ 
4. 90 ಹಾಕು ಕಿಟ್ಟಪ್ಪ - ಕೌಸಲ್ಯ ಸುಪ್ರಜಾ ರಾಮ - ಕಲೈ 
5. ಚುಮು ಚುಮು - ಕಬ್ಜ - ಜಾನಿ ಮಾಸ್ಟರ್ 

ಅತ್ಯುತ್ತಮ ಹಿನ್ನೆಲೆ ಸಂಗೀತ 
 

1. ಘೋಸ್ಟ್ - ಅರ್ಜುನ್ ಜನ್ಯ 
2. ಸಪ್ತ ಸಾಗರದಾಚೆ ಎಲ್ಲೋ - ಚರಣ್ ರಾಜ್ 
3. ಕಾಟೇರ - ವಿ ಹರಿಕೃಷ್ಣ 
4. ವಿರಾಟಪುರ ವಿರಾಗಿ - ಕದ್ರಿ ಮಣಿಕಾಂತ್ 
5. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - ಬಿ ಅಜನೀಶ್ ಲೋಕನಾಥ್ 

ಅತ್ಯುತ್ತಮ ಗಾಯಕಿ 
 

1. ಕಾಯೋ ಶಿವ ಕಾಪಾಡೋ ಶಿವ - ಪೆಂಟಗನ್ - ಸಂಗೀತಾ ಕಟ್ಟಿ 
2. 90 ಹಾಕು ಕಿಟ್ಟಪ್ಪ - ಕೌಸಲ್ಯ ಸುಪ್ರಜಾ ರಾಮ - ಐಶ್ವರ್ಯ ರಂಗರಾಜನ್ 
3. ಪಸಂದಾಗವ್ನೆ - ಕಾಟೇರ - ಮಂಗ್ಲಿ 
4. ಚುಮ್ ಚುಮ್ ಚಲಿ ಚಲಿ - ಕಬ್ಜಾ - ಐರಾ ಉಡುಪಿ 
5. ಮೆಲ್ಲಗೆ - ಸ್ವಾತಿ ಮುತ್ತಿನ ಮಲೆಹನಿಯೇ - ಮಾಧುರಿ ಶೇಷಾದ್ರಿ 

ಅತ್ಯುತ್ತಮ ಪೋಷಕ ನಟಿ

1. ಹೇಮಾ ದತ್ - ತೋತಾಪುರಿ 
2. ಶ್ರುತಿ - ಕಾಟೇರ 
3. ತಾರಾ ಅನುರಾಧ - ಟಗರು ಪಾಳ್ಯ 
4. ಸುಧಾ ಬೆಳವಾಡಿ - ಕೌಸಲ್ಯ ಸುಪ್ರಜಾ ರಾಮ 
5. ಎಂಡಿ ಪಲ್ಲವಿ - 19.20.21 

ಅತ್ಯುತ್ತಮ ನಟ 
1. ರಕ್ಷಿತ್ ಶೆಟ್ಟಿ - ಸಪ್ತ ಸಾಗರದಾಚೆ ಎಲ್ಲೋ 
2. ರಾಜ್ ಬಿ ಶೆಟ್ಟಿ - ಸ್ವಾತಿ ಮುತ್ತಿನ ಮಲೆಹನಿಯೇ 
3. ರಮೇಶ್ ಅರವಿಂದ್ - ಶಿವಾಜಿ ಸುರತ್ಕಲ್ 
4. ಶೃಂಗ ಬಿವಿ - 19.20.21 
5. ದರ್ಶನ್ - ಕಾಟೇರ 

ಅತ್ಯುತ್ತಮ ಸಂಭಾಷಣೆ 
1. ಕೈವ - ರಘು ನಿಡುವಳ್ಳಿ 
2. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - ನಿತಿನ್ ಕೃಷ್ಣಮೂರ್ತಿ 
3. ಕೌಸಲ್ಯ ಸುಪ್ರಜಾ ರಾಮ - ಯದುನಂದನ 
4. ಕಾಟೇರ - ಮಾಸ್ತಿ 
5. ಟಗರು ಪಲ್ಯ - ಉಮೇಶ್ ಕೆ ಕೃಪಾ 

ಅತ್ಯುತ್ತಮ ಚಿತ್ರಕಥೆ 
 

1. ಶಿವಾಜಿ ಸುರತ್ಕಲ್ - ಆಕಾಶ ಶ್ರೀವತ್ಸ - ಅಭಿಜಿತ್ ವೈ.ಆರ್ 
2. ಕೈವ - ಜಯತೀರ್ಥ 
3. ಸ್ವಾತಿ ಮುತ್ತಿನ ಮಲೆಹನಿಯೇ - ರಾಜ್ ಬಿ ಶೆಟ್ಟಿ 
4. ದೂರದರ್ಶನ - ಸುಖೇಶ್ ಶೆಟ್ಟಿ 
5. ಕಾಟೇರ - ತರುಣ್ ಕಿಶೋರ್ ಸುಧೀರ್ ಮತ್ತು ಜಡೇಶಾ ಕೆ ಹಂಪಿ 

ಅತ್ಯುತ್ತಮ ನಿರ್ದೇಶಕ 
 

1. ಜಯತೀರ್ಥ - ಕೈವ 
2. ತರುಣ್ ಕಿಶೋರ್ ಸುಧೀರ್ - ಕಾಟೇರ 
3. ನಿತಿನ್ ಕೃಷ್ಣಮೂರ್ತಿ - ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ 
4. ಮಂಸೋರೆ - 19.20.21 
5. ರಾಜ್ ಬಿ ಶೆಟ್ಟಿ - ಸ್ವಾತಿ ಮುತ್ತಿನ ಮಳೆಹನಿಯೇ 

ಅತ್ಯುತ್ತಮ ಚಿತ್ರ 
 

1. ಸಪ್ತ ಸಾಗರದ ಹಳದಿ 
2. ರೋಡ್ ಡೆವಿಲ್ ಮುಸ್ತಫಾ 
3. 19.20.21 
4. ಕಾಟೇರ 
5. ಕೌಸಲ್ಯಾ ಸುಪ್ರಜಾ ರಾಮಾ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News