ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆ ಸಿನಿಮಾ ಮಾಡೋ ಆಸೆಯಿದೆ -ಶಿವಣ್ಣ

Shivarajkumar: ಶಿವಣ್ಣ.. ಎಲ್ಲರಿಗೂ ಅಚ್ಚುಮೆಚ್ಚು  ವಯಸ್ಸು 62 ಆದರೂ 22ವಯಸ್ಸಿನಂತೆ ನಮ್ಮನ್ನ ಇಂದಿಗೂ ರಂಜಿಸುತ್ತಾ ಒಳ್ಳೊಳ್ಳೆ ಸಿನಿಮಾಗಳನ್ನ ಕೊಡುತ್ತಾ ಅಭಿಮಾನಿಗಳ ಪಾಲಿನ ದೇವರಾಗಿದ್ದಾರೆ.   

Written by - YASHODHA POOJARI | Last Updated : Mar 1, 2024, 11:38 AM IST
  • ಶಿವಣ್ಣ ಮತ್ತು ಪ್ರಭುದೇವ್ ನಟನೆಯ ಕರಟಕ ದಮನಕ ಸಿನಿಮಾ ಮಾರ್ಚ್ 8ಕ್ಕೆ ರಿಲೀಸ್ ಆಗುತ್ತಿದೆ.
  • ಶಿವಣ್ಣ ಜೀ ಕನ್ನಡ ನ್ಯೂಸ್ ಗೆ ಕೊಟ್ಟ ವಿಶೇಷ ಸಂದರ್ಶನದಲ್ಲಿ ಹಲವು ವಿಚಾರಗಳನ್ನ ಮನಸ್ಸು ಬಿಚ್ಚಿಮಾತನಾಡಿದ್ದಾರೆ.
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆ ಸಿನಿಮಾ ಮಾಡೋ ಆಸೆಯಿದೆ -ಶಿವಣ್ಣ title=

Sandalwood Shivanna: ಇದೀಗ ಶಿವಣ್ಣ ಮತ್ತು ಪ್ರಭುದೇವ್ ನಟನೆಯ ಕರಟಕ ದಮನಕ ಸಿನಿಮಾ ಮಾರ್ಚ್ 8ಕ್ಕೆ ರಿಲೀಸ್ ಆಗುತ್ತಿದೆ. ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿ ಇರೋ ಶಿವಣ್ಣ ಜೀ ಕನ್ನಡ ನ್ಯೂಸ್ ಕೊಟ್ಟ ವಿಶೇಷ ಸಂದರ್ಶನದಲ್ಲಿ ಹಲವು ವಿಚಾರಗಳನ್ನ ಮನಸ್ಸು ಬಿಚ್ಚಿಮಾತನಾಡಿದ್ದಾರೆ. 

ಧ್ರುವ ಸರ್ಜಾ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಪ್ರೀತಿಯಿಂದಲೇ ಉತ್ತರಿಸಿದ್ದಾರೆ. ಅವಕಾಶ ಸಿಕ್ಕರೆ ಮುಂದೆ ಧ್ರುವ ಸರ್ಜಾ ಜೊತೆ ನಟಿಸೋದಾಗಿ ಹೇಳಿಕೊಂಡಿದ್ದಾರೆ. ಆಕ್ಷನ್ ಪ್ರಿನ್ಸ್ ಜೊತೆ ಸಿನಿಮಾ ಮಾಡೋ ಆಸೆ ಇದೆ -ಶಿವಣ್ಣ ಜೀ ಕನ್ನಡ ನ್ಯೂಸ್ ಜೊತೆ EXclusive ಆಗಿ ಹೇಳಿದ್ದಾರೆ ಶಿವಣ್ಣ. 

ಇದನ್ನೂ ಓದಿ : Prabhas: ಇಷ್ಟು ವರ್ಷವಾದರೂ ಪ್ರಭಾಸ್‌ ಯಾಕೆ ಮದುವೆಯಾಗಿಲ್ಲ? ಸತ್ಯ ಬಿಚ್ಚಿಟ್ಟ ವೇಣು ಸ್ವಾಮಿ!

"ಧ್ರುವ ಸರ್ಜಾ ನನ್ನ ತಮ್ಮನಿಗಿಂತ ಚಿಕ್ಕವನು. ಧ್ರುವ ನನ್ನ  ತುಂಬಾ ಇಷ್ಟಪಡುತ್ತಾನೆ ನನಗೂ ಆತ ತುಂಬಾ ಇಷ್ಟ ಆಗುತ್ತಾನೆ. ಜೊತೆಗೆ ಯುವ ನಟ ಅವಕಾಶ ಇದ್ರೆ ಪಕ್ಕಾ ಒಟ್ಟಿಗೆ ನಟಿಸುತ್ತೀವಿ" ಅನ್ನೋ ಮೂಲಕ ಧ್ರುವ ಸರ್ಜಾ ಅವರ ಅಪ್ಪಟ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದಾರೆ. 

ನಿಮಗೆಲ್ಲ ಗೊತ್ತಿರೋ ಹಾಗೇ ಧ್ರುವ ಸರ್ಜಾ ಅವರು ಮಾರ್ಟಿನ್ ಸಿನಿಮಾದ  ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ. ಈ ವರ್ಷವೇ ಸಿನಿಮಾ ರಿಲೀಸ್ ಮಾಡೋ ಪ್ಲಾನ್ ನಲ್ಲಿ ಇದ್ದಾರೆ ಮಾರ್ಟೀನ್ ಚಿತ್ರತಂಡ. ಒಟ್ಟಿನಲ್ಲಿ ಶಿವಣ್ಣ ಅಂದ್ರೆ ಎನರ್ಜಿ ಮತ್ತು ಆಕ್ಷನ್ ಅಂದ್ರೆ ಧ್ರುವ ಸರ್ಜಾ.. ಇಬ್ಬರೂ ಒಟ್ಟಿಗೆ ನಟಿಸಿದ್ರೆ ಬೆಂಕಿ ಫಿಕ್ಸ್.

ಇದನ್ನೂ ಓದಿ : Prabhas: ಇಷ್ಟು ವರ್ಷವಾದರೂ ಪ್ರಭಾಸ್‌ ಯಾಕೆ ಮದುವೆಯಾಗಿಲ್ಲ? ಸತ್ಯ ಬಿಚ್ಚಿಟ್ಟ ವೇಣು ಸ್ವಾಮಿ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News