'ಕ್ಯಾಪ್ಟನ್ ಮಿಲ್ಲರ್ʼ ಸ್ಟೋರಿ ಸ್ವಂತದ್ದು ಅಲ್ವ..! ಕಾದಂಬರಿಯಿಂದ ಕದ್ದ ಕಥೆಯಂತೆ

Dhanush Captain miller : ಕಾಲಿವುಡ್‌ ಸೂಪರ್‌ ಸ್ಟಾರ್‌ ನಟ ಧನುಷ್, ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್‌ ಅಭಿನಯದ ಚಿತ್ರದ ಕ್ಯಾಪ್ಟನ್ ಮಿಲ್ಲರ್ ಚಿತ್ರದ ಕಥೆಯನ್ನು ತಮಿಳಿನ ಖ್ಯಾತ ಬರಹಗಾರರ ಕಾದಂಬರಿಯಿಂದ ಕದ್ದಿದ್ದಾಗಿ ಪುಸ್ತಕ ಪ್ರಕಾಶಕರು ಆರೋಪಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.. 

Written by - Krishna N K | Last Updated : Jan 21, 2024, 01:26 PM IST
  • ಬಹುನಿರೀಕ್ಷಿತ ʼಕ್ಯಾಪ್ಟನ್ ಮಿಲ್ಲರ್ʼ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ.
  • ಇದೀಗ ಕ್ಯಾಪ್ಟನ್‌ ಮಿಲ್ಲರ್‌ ಕಾಪಿ ರೈಟ್‌ ಆರೋಪವನ್ನು ಹೊತ್ತಿದೆ.
  • ಕಾಲಿವುಡ್‌ ಸೂಪರ್‌ ಸ್ಟಾರ್‌ ನಟ ಧನುಷ್ ಅಭಿನಯನದ ಸಿನಿಮಾ.
 'ಕ್ಯಾಪ್ಟನ್ ಮಿಲ್ಲರ್ʼ ಸ್ಟೋರಿ ಸ್ವಂತದ್ದು ಅಲ್ವ..! ಕಾದಂಬರಿಯಿಂದ ಕದ್ದ ಕಥೆಯಂತೆ title=

Captain Miller controversy : ಕಳೆದ ವಾರ ಪೊಂಗಲ್ ಹಬ್ಬದಂದು ಬಹುನಿರೀಕ್ಷಿತ ʼಕ್ಯಾಪ್ಟನ್ ಮಿಲ್ಲರ್ʼ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ತಮಿಳು ಸ್ಟಾರ್‌ ನಟ ಧನುಷ್ ಮತ್ತು ಹ್ಯಾಟ್ರೀಕ್‌ ಹೀರೋ ಶಿವರಾಜ್‌ಕುಮಾರ್‌ ನಟಿಸಿದ್ದಾರೆ. ಈ ಚಿತ್ರವನ್ನು ಬಿಗ್‌ ಬಜೆಟ್‌ನಲ್ಲಿ ಸತ್ಯಜ್ಯೋತಿ ಫಿಲಂಸ್ ನಿರ್ಮಿಸಿದೆ. ಅಯಲನ್, ಮಿಷನ್ 1, ಗುಂಟೂರ್ ಕಾರ ಮುಂತಾದ ಹಲವು ಚಿತ್ರಗಳಿಗೆ ಕ್ಯಾಪ್ಟನ್ ಮಿಲ್ಲರ್ ಪೈಪೋಟಿ ನೀಡುವ ಮೂಲಕ, ಮೊದಲ ಕೆಲವು ದಿನಗಳಲ್ಲಿ ಉತ್ತಮ ಕಲೆಕ್ಷನ್ ಮಾಡಿತ್ತು. 

ವರದಿಗಳ ಪ್ರಕಾರ ಈ ಚಿತ್ರವು ಮಿಶ್ರ ವಿಮರ್ಶೆಗಳನ್ನು ಪಡೆದ ನಂತರ, ಬಾಕ್ಸ್‌ ಆಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ. ʼಅಯಲನ್ʼ ಸಿನಿಮಾ ಕುಟುಂಬ ಮತ್ತು ಮಕ್ಕಳಿಗೆ ಸೂಕ್ತವಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಲವರು ಕಾಮೆಂಟ್ ಮಾಡಿದ್ದು, ಕ್ಯಾಪ್ಟನ್ ಮಿಲ್ಲರ್ ಗೋರ ಮತ್ತು ಹಿಂಸಾತ್ಮಕವಾಗಿದೆ ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ದರು. 

ಇದನ್ನೂ ಓದಿ:ಕನ್ನಡ ಸಿನಿಮಾ ಬೆಂಬಲಕ್ಕೆ ನಿಂತ ನ್ಯಾಷುನಲ್ ಕ್ರಶ್ : "ಉಪಾಧ್ಯಕ್ಷ"ನಿಗೆ ರಶ್ಮಿಕಾ ಸಾಥ್

ಆದರೂ, ಕ್ಯಾಪ್ಟನ್ ಮಿಲ್ಲರ್ ತನ್ನ ಕಥೆಯಿಂದಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ತುಳಿತಕ್ಕೊಳಗಾದವರು ಮತ್ತು ಸ್ವಾತಂತ್ರ್ಯ ಹೋರಾಟ ಕಥಾ ಹಂದರ ಹೊಂದಿರುವ ಸಿನಿಮಾ ಸೂಕ್ಷ್ಮ ರಾಜಕೀಯವನ್ನು ಪ್ರೌಢವಾಗಿ ನಿಭಾಯಿಸಿದ್ದಕ್ಕಾಗಿ ಅನೇಕ ವಿಮರ್ಶಕರು ಶ್ಲಾಘಿಸಿದರು. ದೀನದಲಿತರು ಗರ್ಭಗುಡಿ ಪ್ರವೇಶಿಸುವ ದೃಶ್ಯ ಮತ್ತು ಅದಕ್ಕೂ ಮುನ್ನ ಧನುಷ್ ಅವರ ನಟನೆ ಮತ್ತು ಸಂಭಾಷಣೆ ಅನೇಕರ ಮೆಚ್ಚುಗೆಗೆ ಪಾತ್ರವಾಯಿತು. 

ಇದೀಗ ಕ್ಯಾಪ್ಟನ್ ಮಿಲ್ಲರ್ ಚಿತ್ರದ ಕಥೆ ಕುರಿತು ಆರೋಪವೊಂದು ಕೇಳಿ ಬಂದಿದೆ. ಈ ಸಿನಿಮಾ ಸ್ಟೋರಿಯನ್ನು ನಟ, ಬರಹಗಾರ ವೇಲಾ ರಾಮಮೂರ್ತಿಯವರ ಕಾದಂಬರಿಯಿಂದ ತೆಗೆದುಕೊಳ್ಳಲಾಗಿದೆ ಎಂದು ಪ್ರಕಾಶಕ ವೇದಿಯಪ್ಪನ್ ಎಮ್‌ ಮುನಿಸ್ವಾಮಿ ತಮ್ಮ ಫೇಸ್‌ಬುಕ್‌ನಲ್ಲಿ ಆರೋಪಿಸಿ ಪೋಸ್ಟ್ ಮಾಡಿದ್ದಾರೆ. ರಾಮಮೂರ್ತಿಯವರ ಪಟ್ಟದತ್ ಯಾನಾನಿ ಕಾದಂಬರಿಯಿಂದ ಚಿತ್ರದ ಕಥೆಯನ್ನು ಕದ್ದಿರುವುದಾಗಿ ದೂರಿದ್ದಾರೆ.. 

ಇದನ್ನೂ ಓದಿ:ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ನಟಿ ಮೀನಾ?... ಆ ಪಕ್ಷ ಸೇರುವ ಸುಳಿವು ನೀಡಿದ ಹಿರಿಯ ತಾರೆ!

ಅಲ್ಲದೆ, ಜ್ಞಾನ, ಕಲೆ ಸಂಸ್ಕೃತಿಯನ್ನು ಅರಿತು ಹೊಸದನ್ನು ಸೃಷ್ಟಿಸುವಂತಿರಬೇಕು. ಹಾಗೆಯೇ ಅನೇಕರು ಅದನ್ನೇ ಕಾಫಿ ಪ್ಯಾಕ್ ಮಾಡುವ ಮೂಲಕ ಹಣವನ್ನು ಗಳಿಸುತ್ತಾರೆ. ಇತ್ತೀಚಿಗೆ ಈ ಟ್ರೆಂಡ್ ಹೆಚ್ಚಾಗುತ್ತಿದ್ದು ಇದು ಆರೋಗ್ಯಕರವಲ್ಲ. ಸೃಷ್ಟಿಕರ್ತನ ಕೃತಿಯನ್ನು ಕದಿಯುವಷ್ಟು ಮೂರ್ಖತನ ಏನಿರಬಹುದು? ಎಂದು ವೇದಿಯಪ್ಪನ್‌ ಕಿಡಿಯಾರಿದ್ದಾರೆ. ಈ ಕುರಿತು ಕ್ಯಾಪ್ಟನ್‌ ಮಿಲ್ಲರ್‌ ಚಿತ್ರತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News