Bhairathi Rangal: ಸೆಂಚುರಿ ಸ್ಟಾರ್‌ನ ʻಭೈರತಿ ರಗಲ್ʼ ರಿಲೀಸ್‌ಗೆ ಮುಹೂರ್ತ ಫಿಕ್ಸ್‌!

Bhairathi Rangal Update: ಸ್ಯಾಂಡಲ್‌ವುಡ್‌ ಹ್ಯಾಟ್ರಿಕ್‌ ಹೀರೋ ಶಿವರಾಜ್ ಕುಮಾರ್ ಅಭಿನಯದ ಭೈರತಿ ರಗಲ್ ಸಿನಿಮಾದ ರಿಲೀಸ್‌ ಡೇಟ್‌ ಫಿಕ್ಸ್‌ ಆಗಿದ್ದು, ಇಂದು ಬೆಳಗ್ಗೆ ಈ ಚಿತ್ರದ ಅಪ್ ಡೇಟ್‌ನ್ನು ಸಿನಿತಂಡ ರಿವೀಲ್‌ ಮಾಡಿದೆ.  

Written by - Zee Kannada News Desk | Last Updated : Mar 10, 2024, 11:31 AM IST
  • ಸದ್ಯ ಕರಟಕ ದಮನಕ ಚಿತ್ರದ ಯಶಸ್ಸಿನ ಖುಷಿಯಲ್ಲಿರೋ ಶಿವಣ್ಣ ತಮ್ಮದೇ ನಿರ್ಮಾಣ ಸಂಸ್ಥೆಯ ಭೈರತಿ ರಣಗಲ್ ಸಿನಿಮಾದ ರಿಲೀಸ್‌ ಡೇಟ್‌ ಅನ್ನು ಅನೌನ್ಸ್ ಮಾಡಲಿದ್ದಾರೆ.
  • ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅಭಿನಯದ ಭೈರತಿ ರಗಣಲ್ ಚಿತ್ರವನ್ನು ಮಫ್ತಿ ನಿರ್ದೇಶಕ ನರ್ತನ್ ಆಕ್ಷನ್‌ ಕಟ್‌ ಹೇಳಿದ್ದಾರೆ.
  • ಭೈರತಿ ರಣಗಲ್ ಚಿತ್ರದ ರಿಲೀಸ್‌ ಡೇಟ್‌ ಅನ್ನು ಸಿನಿತಂಡ ಅಧಿಕೃತವಾಗಿ ಇಂದು ಬೆಳಗ್ಗೆ 9 ಗಂಟೆಗೆ ಘೋಷಣೆ ಮಾಡಿದೆ.
Bhairathi Rangal: ಸೆಂಚುರಿ ಸ್ಟಾರ್‌ನ ʻಭೈರತಿ ರಗಲ್ʼ ರಿಲೀಸ್‌ಗೆ ಮುಹೂರ್ತ ಫಿಕ್ಸ್‌! title=

Bhairathi Rangal Release Date: ಕರುನಾಡ ಚಕ್ರವತಿ ಶಿವರಾಜ್ ಕುಮಾರ್ ನಟನೆಯ ಭೈರತಿ ರಗಲ್ ಸಿನಿಮಾದ ಕೆಲಸ ಭರದಿಂದ ಸಾಗುತ್ತಿರುವಾಗ ಹೊಸ ಅಪ್‌ಡೇಟ್‌ ಅನ್ನು ಚಿತ್ರತಂಡ ನೀಡಿದೆ. ಸದ್ಯ ಕರಟಕ ದಮನಕ ಚಿತ್ರದ ಯಶಸ್ಸಿನ ಖುಷಿಯಲ್ಲಿರೋ ಶಿವಣ್ಣ ತಮ್ಮದೇ ನಿರ್ಮಾಣ ಸಂಸ್ಥೆಯ ಭೈರತಿ ರಣಗಲ್  ಸಿನಿಮಾದ ರಿಲೀಸ್‌  ಡೇಟ್‌ ಅನ್ನು ಅನೌನ್ಸ್  ಮಾಡಲಿದ್ದಾರೆ.

ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅಭಿನಯದ ಭೈರತಿ ರಗಣಲ್ ಚಿತ್ರವನ್ನು ಮಫ್ತಿ ನಿರ್ದೇಶಕ ನರ್ತನ್ ಆಕ್ಷನ್‌ ಕಟ್‌ ಹೇಳಿದ್ದಾರೆ. ಈ ಸಿನಿಮಾ ಶೂಟಿಂಗ್‌ ಕೆಲಸಗಳು ತ್ವರಿತಗತಿಯಲ್ಲಿಯೇ ನಡೆಯುತ್ತಿದ್ದು, ಅದರಂತೆಯೇ ಹಂತ ಹಂತವಾಗಿಯೇ ಅಪ್‌ಡೇಟ್‌ಗಳು ಹೊರಬರುತ್ತಿದೆ. ಈ ಚಿತ್ರ ಇದೇ 2024ರ ಆಗಸ್ಟ್‌ 8ರಂದು ತೆರೆ ಕಾಣಲಿದೆ.

 
 
 
 

 
 
 
 
 
 
 
 
 
 
 

A post shared by Geetha Pictures (@geethapictures)

ಇದನ್ನೂ ಓದಿ: Bollywood: ಐಶ್ವರ್ಯಾ ರೈ ಜೊತೆ ಇಂಟಿಮೇಟ್ ಸೀನ್ ಮಾಡಲು ಭಯಪಟ್ಟಿದ್ದರಂತೆ ಈ ಸ್ಟಾರ್‌ ನಟ!

ಭೈರತಿ ರಣಗಲ್ ಚಿತ್ರದ ರಿಲೀಸ್‌ ಡೇಟ್‌ ಅನ್ನು ಸಿನಿತಂಡ ಅಧಿಕೃತವಾಗಿ ಇಂದು ಬೆಳಗ್ಗೆ 9 ಗಂಟೆಗೆ ಘೋಷಣೆ ಮಾಡಿದೆ. ಭೈರತಿ ರಣಗಲ್ ಸಿನಿಮಾ 2017 ರಲ್ಲಿ ತೆರೆಗೆ ಬಂದ ಮಫ್ತಿ ಪ್ರೀಕ್ವೆಲ್ ಆಗಿದೆ. ಇನ್ನೂ ಈ ಚಿತ್ರದಲ್ಲಿ ಶಿವಣ್ಣನ ಜೊತೆ ಸಪ್ತ ಸಾಗರದಾಚೆ ಎಲ್ಲೋ ಬೆಡಗಿ ರುಕ್ಮಿಣಿ ವಸಂತ್  ನಾಯಕಿಯಾಗಿ ಕಾಣಸಿಕೊಳ್ಳಲಿದ್ದಾರೆ.

ಇಂದು ಸಂಜೆ ನಟ ಶಿವರಾಜ್‌ ಕುಮಾರ್‌ ಮನೆಯಲ್ಲಿ ಭೈರತಿ ರಣಗಲ್ ಹಾಗೂ ಫೈರ್ ಫ್ಮೈ  ಸಿನಿಮಾದ ಪ್ರತಿಕಾಗೋಷ್ಠಿ ನಡೆಯಲಿವೆ. ಶಿವಣ್ಣನ ಪುತ್ರಿ ನಿವೇದಿತಾ ನಿರ್ಮಾಣದ ಫೈರ್ ಫ್ಲೈ ಚಿತ್ರದ ಪ್ರೆಸ್‌ ಮೀಟ್‌ ಮೊದಲು ನಡೆಯಲಿದ್ದು, ತದನಂತರ ಭೈರತಿ ರಣಗಲ್ ಸಿನಿಮಾದ ಪ್ರತಿಕಾಗೋಷ್ಠಿ ನಡೆಯುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News