ರಾಜಕೀಯಕ್ಕೆ ಎಂಟ್ರಿ ಕೊಟ್ಟ ಖ್ಯಾತ ನಟ ಮಾಧುರಿ ದೀಕ್ಷಿತ್..! ಈ ಪಕ್ಷದಿಂದ MP ಎಲೆಕ್ಷನ್‌ಗೆ ಸ್ಪರ್ಧೆ 

Madhuri Dixit : ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್ 2024 ರ ಲೋಕಸಭೆ ಚುನಾವಣೆಯಲ್ಲಿ ತನ್ನ ಅದೃಷ್ಟವನ್ನು ಪರೀಕ್ಷಿಸಲಿದ್ದಾರೆ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ ಮಾಧುರಿ ವಾಯುವ್ಯ ಮುಂಬೈನಿಂದ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳಿವೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

Written by - Krishna N K | Last Updated : Nov 16, 2023, 08:33 PM IST
  • ರಾಜಕೀಯಕ್ಕೆ ನಟಿ ಮಾಧುರಿ ದೀಕ್ಷಿತ್‌ ಎಂಟ್ರಿ
  • ವಾಯುವ್ಯ ಮುಂಬೈನಿಂದ ನಟಿಯ ಸ್ಪರ್ಧೆ ಖಚಿತ
  • 2024ರ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿರುವ ನಟಿ
ರಾಜಕೀಯಕ್ಕೆ ಎಂಟ್ರಿ ಕೊಟ್ಟ ಖ್ಯಾತ ನಟ ಮಾಧುರಿ ದೀಕ್ಷಿತ್..! ಈ ಪಕ್ಷದಿಂದ MP ಎಲೆಕ್ಷನ್‌ಗೆ ಸ್ಪರ್ಧೆ  title=

Actress Madhuri mp election : ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಾಲಿವುಡ್‌ ಖ್ಯಾತ ನಟಿ ಮಾಧುರಿ ದೀಕ್ಷಿತ್ ರಾಜಕೀಯ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ. ಮೂಲಗಳ ಪ್ರಕಾರ, ಮಾಧುರಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರೊಂದಿಗೆ  ಸಂಪರ್ಕದಲ್ಲಿದ್ದು, ಈ ಪಕ್ಷದಿಂದಲೇ ತಮ್ಮ ರಾಜಕೀಯ ಜೀವನ ಆರಂಭಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಹೌದು.. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದ ವೇಳೆ ಮಾಧುರಿ ದೀಕ್ಷಿತ್ ಮೈದಾನದಲ್ಲಿದ್ದರು. ಇದೇ ವೇಳೆ ಅವರು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರೊಂದಿಗೆ ಕಾಣಿಸಿಕೊಂಡರು. ಅವರೊಂದಿಗೆ ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ಕೂಡ ಇದ್ದರು. ಅಷ್ಟೇ ಅಲ್ಲ, ಬಿಜೆಪಿ ಮುಖಂಡ ಆಶಿಶ್ ಶೇಲಾರ್ ಕೂಡ ಅಲ್ಲಿದ್ದರು. ಇದಾದ ನಂತರ ಮಾಧುರಿ ದೀಕ್ಷಿತ್ ಅವರು ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳು ರಾಜಕೀಯ ವಲಯದಲ್ಲಿ ಕೇಳಿ ಬಂದವು.

ಇದನ್ನೂ ಓದಿ:ತೆರೆಗೆ ಬರಲು ರೆಡಿ ಎಸ್ತರ್ ನರೋನ್ಹಾ ಹೊಸ ಕನಸು.. ನ.17ಕ್ಕೆ ‘ದಿ ವೆಕೆಂಟ್ ಹೌಸ್’ ರಿಲೀಸ್

ಆದರೆ, ಬಿಜೆಪಿಯ ಹಿರಿಯ ನಾಯಕ ಗೋಪಾಲ್ ಶೆಟ್ಟಿ ಮುಂಬೈ ಉತ್ತರ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. ಗೋಪಾಲ್ ಶೆಟ್ಟಿ 2019 ರ ಚುನಾವಣೆಯಲ್ಲಿ ಊರ್ಮಿಳಾ ಮಾತೋಂಡ್ಕರ್ ಅವರನ್ನು ಸೋಲಿಸಿ ಎರಡನೇ ಬಾರಿಗೆ ಸಂಸದರಾದರು. ಇದಕ್ಕೂ ಮುನ್ನ ಗೋಪಾಲ್ ಶೆಟ್ಟಿ 2014ರಲ್ಲಿ ಸಂಜಯ್ ನಿರುಪಮ್ ಅವರನ್ನು ಸೋಲಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ ಗೋಪಾಲ್ ಶೆಟ್ಟಿ ಬದಲಿಗೆ ಮಾಧುರಿ ದೀಕ್ಷಿತ್ ಅವರನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸುವ ಅಪಾಯವನ್ನು ಬಿಜೆಪಿ ತೆಗೆದುಕೊಳ್ಳುವುದಿಲ್ಲ.

ಮಾಧುರಿ ಈ ಕ್ಷೇತ್ರದಿಂದ ಸ್ಪರ್ಧಿಸಬಹುದು : ಮಾಧುರಿ ವಾಯವ್ಯ ಮುಂಬೈ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ಆದರೆ, ಈ ಸ್ಥಾನ ಶಿವಸೇನೆ ಪಾಲಾಗಿದ್ದು, ಶಿಂಧೆ ಗುಂಪಿಗೆ ಸೇರಿದ ಗಜಾನನ ಕೀರ್ತಿಕರ್ ಇಲ್ಲಿಂದ ಸಂಸದರಾಗಿದ್ದಾರೆ. ಆದರೆ, ಈ ಬಾರಿಯೂ ಅವರ ಸ್ಥಿತಿ ಚೆನ್ನಾಗಿಲ್ಲ.

ಇದನ್ನೂ ಓದಿ:ಗುಂಟೂರ್‌ ಕಾರಂ ಫಸ್ಟ್‌ ಸಿಂಗಲ್‌ ಔಟ್!‌ ಮಾಸ್‌ ಲುಕ್‌ನಲ್ಲಿ ಪ್ರಿನ್ಸ್‌ ಮಹೇಶ್‌ ಬಾಬು..

ಇದೇ ಮಾಧುರಿಗೆ ವರದಾನವಾಗಲಿದೆ ಎನ್ನಲಾಗಿದೆ. ಒಪ್ಪಂದದ ಪ್ರಕಾರ, ಬಿಜೆಪಿ ಈ ಕ್ಷೇತ್ರದಲ್ಲಿ ಮಾಧುರಿ ದೀಕ್ಷಿತ್ ಅವರನ್ನು ಕಣಕ್ಕಿಳಿಸಬಹುದು. ಈ ಬಾರಿಯೂ ಕಾಂಗ್ರೆಸ್‌ನಿಂದ ಸಂಜಯ್ ನಿರುಪಮ್ ಎಂಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಸಧ್ಯ ಕಾಂಗ್ರೆಸ್‌ ನಾಯಕ, ಸಂಸದ ಕೀರ್ತಿಕರ್ ವಿರುದ್ಧ ತಿರುಗಿಬಿಳುವ ಸಂಭವವಿದೆ. ಇಬ್ಬರ ಜಗಳದಲ್ಲಿ ಮೂರನೇ ವ್ಯಕ್ತಿಗೆ ಲಾಭ ಎಂಬಂತೆ ಮಾಧುರಿ ಗೆಲುವಿನ ನಗೆ ಬೀರುವ ಸಾಧ್ಯತೆ ಇದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News