ಅಪ್ಪಾಜಿ ಎಂದಿಗೂ ರಾಜಕೀಯ ತಪ್ಪು ಅಂದಿಲ್ಲ, ಅವರಿಗೂ ಅದು ಬೇಕಾಗಿತ್ತು : ಶಿವಣ್ಣ

Shivarajkumar on Rajkumar politics : ದೊಡ್ಮನೆ ಅಂದ್ರೆ ಕನ್ನಡ ಸಿನಿ ಪ್ರೇಕ್ಷಕರಿಗೆ ಇನ್ನಿಲ್ಲದ ಪ್ರೀತಿ. ರಾಘಣ್ಣ, ಶಿವಣ್ಣ, ಪುನೀತ್‌ ಸೇರಿದಂತೆ ದೊಡ್ಮನೆ ಮಂದಿಗೆ ಕರುನಾಡಿನಲ್ಲಿ ವಿಶೇಷ ಗೌರವವಿದೆ. ಇನ್ನು ಇತ್ತೀಚಿಗೆ ರಾಜ್‌ ಸೊಸೆ ಗೀತಾ ಶಿವರಾಜ್‌ಕುಮಾರ್‌ ಕಾಂಗ್ರೆಸ್‌ ಪಕ್ಷದಿಂದ ಲೋಕಸಭೆ ಕಣಕ್ಕಿಳಿದಿರುವ ವಿಚಾರ ಎಲ್ಲರಿದೂ ಗೊತ್ತಿದೆ.

Written by - Krishna N K | Last Updated : Mar 24, 2024, 07:19 PM IST
    • ನಾಡು ನುಡಿ ವಿಚಾರ ಬಂದ್ರೆ ಸ್ವತಃ ರಾಜ್‌ಕುಮಾರ್‌ ಅವರು ಹೋರಾಟಕ್ಕೆ ಇಳಿಯುತ್ತಿದ್ರು.
    • ಎಂದಿಗೂ ಅವರು ರಾಜಕೀಯ ಪ್ರವೇಶವನ್ನು ಬಯಸಿದವರಲ್ಲ.
    • ಆದ್ರೆ ಇದೀಗ ಶಿವರಾಜ್​ಕುಮಾರ್ ನೀಡಿರುವ ಹೇಳಿಕೆ ಚರ್ಚೆಗೆ ಕಾರಣವಾಗಿದೆ.
ಅಪ್ಪಾಜಿ ಎಂದಿಗೂ ರಾಜಕೀಯ ತಪ್ಪು ಅಂದಿಲ್ಲ, ಅವರಿಗೂ ಅದು ಬೇಕಾಗಿತ್ತು : ಶಿವಣ್ಣ title=

Geetha Shivarajkumar : ಇನ್ನು ನಾಡು ನುಡಿ ವಿಚಾರ ಬಂದ್ರೆ ಸ್ವತಃ ರಾಜ್‌ಕುಮಾರ್‌ ಅವರು ಹೋರಾಟಕ್ಕೆ ಇಳಿಯುತ್ತಿದ್ರು. ಆದ್ರೆ ಎಂದಿಗೂ ಅವರು ರಾಜಕೀಯ ಪ್ರವೇಶವನ್ನು ಬಯಸಿದವರಲ್ಲ. ಅವರಂತೆ ಪುನೀತ್ ರಾಜ್‌ಕುಮಾರ್‌ ಅವರು ಸಹ ರಾಜಕೀಯ ಗೋಜಿಗೆ ಹೋಗಿಲ್ಲ. ಆದ್ರೆ ಇದೀಗ ಶಿವರಾಜ್​ಕುಮಾರ್ ನೀಡಿರುವ ಹೇಳಿಕೆ ಚರ್ಚೆಗೆ ಕಾರಣವಾಗಿದೆ. 

ಹೌದು.. ದೊಡ್ಮನೆ ಸೊಸೆ ಗೀತಾ ಶಿವರಾಜ್​ಕುಮಾರ್ ಅವರು ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಈ ಬಾರಿ ಕಾಂಗ್ರೆಸ್‌ನಿಂದ ಲೋಕಸಭೆ ಚುನಾವಣಾ ಅಖಾಡಕ್ಕೆ ಗೀತಕ್ಕ ಧುಮುಕಿದ್ದಾರೆ. ಕಳೆದ ಬಾರಿ ಸೋಲು ಅನುಭವಿಸಿದ್ದ ಗೀತಾ ಶಿವರಾಜ್​ಕುಮಾರ್​ ಈ ಬಾರಿ ಗೆದ್ದೆ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ಇದನ್ನೂ ಓದಿ:ಯುವ ನನ್ನ ಮಗನಲ್ಲ, ಅಪ್ಪು ಮಗ : ತಮ್ಮನನ್ನು ನೆನೆದು ರಾಘಣ್ಣ ಭಾವುಕ

ಇನ್ನು ಪತ್ನಿಯ ಪರ ಶಿವರಾಜ್‌ಕುಮಾರ್‌ ಅವರು ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಕ್ಷೇತ್ರ ಸುತ್ತಿ ಮತಯಾಚನೆ ಮಾಡುತ್ತಿದ್ದಾರೆ. ಅಲ್ಲದೆ, ಶಿವಣ್ಣನಿಗೆ ಗೀತಕ್ಕ ಅವರನ್ನು ಸಂಸದೆಯಾಗಿ ನೋಡುವ ಆಸೆಯೂ ಇದೆ. ಇನ್ನು ಇದೇ ವೇಳೆ ಅಣ್ಣಾವ್ರ ರಾಜಕೀಯ ವಿಚಾರದ ಬಗ್ಗೆ ಹ್ಯಾಟ್ರೀಕ್‌ ಹೀರೋ ನೀಡಿರುವ ಹೇಳಿಕೆ ಮುನ್ನೆಲೆಗೆ ಬಂದಿದೆ.

ಯಾವುದೇ ಕಾರ್ಯಕ್ರಮ ಇದ್ರೂ ರಾಜಕೀಯದವರು ಮನೆಗೆ ಬರುತ್ತಿದ್ದರು. ಅಪ್ಪಾಜಿಗೂ ರಾಜಕೀಯ ಬೇಕಿತ್ತು. ಇಲ್ಲಾ ಅಂದ್ರೆ ಏಕೆ ಬಂಗಾರಪ್ಪ ಅವರ ಮಗಳನ್ನು ತರಬೇಕಿತ್ತು ಅಂತ ಶಿವಣ್ಣ ಹೇಳಿದರು. ಇನ್ನು ಈ ವಿಚಾರದ ಬಗ್ಗೆ ಕೆಲವು ನೆಟ್ಟಿಗರು ಭಿನ್ನವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ, ಕೆಲವರು ಬೆಂಬಲ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News