ಸುಗ್ಗಿಯ ಸೊಬಗು ಈ ಸಂಕ್ರಾಂತಿ

      

Last Updated : Jan 15, 2018, 09:55 AM IST
ಸುಗ್ಗಿಯ ಸೊಬಗು ಈ ಸಂಕ್ರಾಂತಿ title=
Pic: Youtube

ಸಿಂಗಾರ‍್ದ ಸಿರಿ ಬಂತು
ಸಂಕ್ರಾಂತಿ ಹಬ್ಬ ಬಂತು
ಎಳ್ಳು ಬೆಲ್ಲಕ್ಕೆ ಬಂತು
ಒಳ್ಳೆ ಸಂಕ್ರಾಂತಿ ಹಬ್ಬ ಬಂತು |

ಸಂಕ್ರಾಂತಿಯ ಕುರಿತಾಗಿ ಹೀಗೆ ಜಾನಪದ ಹಾಡುಗಳಲ್ಲಿ ಜನರು ಅದರ ವೈಶಿಷ್ಟ್ಯವನ್ನು ಕುರಿತು ನಾನಾ ರೀತಿಯಲ್ಲಿ ವರ್ಣಿಸುತ್ತಾರೆ. ಈ ಹಬ್ಬ ಬಹುತೇಕವಾಗಿ ಸುಗ್ಗಿಯ ಹಬ್ಬ ಎಂದು ಪರಿಗಣಿಸಲ್ಪಟ್ಟಿದೆ, ಇದನ್ನು ಮಘಿ, ಪೊಂಗಲ್, ಲೋಹ್ರಿ ,ಬಿಹು ಎಂದು ಭಾರತದ ವಿವಿಧ ಭಾಗಗಳೆಲ್ಲಡೆ ಆಚರಿಸುತ್ತಾರೆ. ಸಾಮಾನ್ಯವಾಗಿ ಸಂಕ್ರಾಂತಿ ಎಂದರೆ ಒಂದು ರಾಶಿಯಿಂದ ಇನ್ನೊಂದು ಇನ್ನೊಂದು ರಾಶಿಗೆ ಸ್ಥಿತ್ಯಂತರವಾಗುವುದನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ.

ಸಂಕ್ರಾಂತಿ ಹಬ್ಬವು  ಸುಗ್ಗಿ ಹಬ್ಬ ಎಂದು ಪ್ರಸಿದ್ದಿ ಪಡೆದ ಕಾರಣ ಪ್ರತಿವರ್ಷ ಇದನ್ನು ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸುತ್ತಾರೆ. ಹೆಚ್ಚಾಗಿ ಇದನ್ನು ಜನವರಿ 14 ಅಥವಾ 15 ರಂದು ಹೆಚ್ಚಾಗಿ ಆಚರಿಸಲಾಗುತ್ತದೆ. ಈ ದಿನವನ್ನು ವೈಜ್ಞಾನಿಕವಾಗಿ ನೋಡುವುದಾದರೆ ಈ ದಿನದಂದು ಸೂರ್ಯ ಬೆಳಕು ಮತ್ತು ಕತ್ತಲೆಯನ್ನು ಸಮ ಪ್ರಮಾಣದಲ್ಲಿ ಹಂಚಿಕೊಳ್ಳುತ್ತಾನೆ. ಆದ್ದರಿಂದ ಈ ದಿನವನ್ನು ಖಗೋಳಶಾಸ್ತ್ರದಲ್ಲಿ ಇಕ್ವಿನಾಕ್ಸ್ ಎಂದು ಕರೆಯುತ್ತಾರೆ.ಸಾಮಾನ್ಯವಾಗಿ ಬೇಸಿಗೆಯಲ್ಲಿ ಹಗಲು ಹೆಚ್ಚು, ರಾತ್ರಿ ಕಮ್ಮಿ ಅದೇ ರೀತಿಯಾಗಿ ಚಳಿಗಾಲದಲ್ಲಿ ರಾತ್ರಿ ಹೆಚ್ಚು ಹಗಲು ಕಮ್ಮಿ ಆದರೆ ಈ ಇಕ್ವಿನಾಕ್ಸ್ ದಿನದ ಸಂದರ್ಭದಲ್ಲಿ ಅದು ಸಮನಾಗಿ ಹಂಚಿಕೊಳ್ಳುತ್ತದೆ.

ಇನ್ನು ಹಬ್ಬದ ವಿಷಯಕ್ಕೆ ಬರುವುದಾದರೆ ಕರ್ನಾಟಕದಲ್ಲಿ ಸಂಕ್ರಾಂತಿ ಹಬ್ಬದಲ್ಲಿ ಎಳ್ಳು ಬೆಲ್ಲ ಹಂಚುವ ಸಂಪ್ರದಾಯವಿದೆ. ರೈತರಾದರೆ ಈ ಶುಭ ದಿನದಂದು ಎಳ್ಳು ಬೆಲ್ಲ ಹಂಚಿಕೊಳ್ಳುಲು ಭೇಟಿಯಾಗುತ್ತಾರೆ ಆ ಮೂಲಕ ತಮ್ಮ ನಡುವಿನ ಬಾಂಧವ್ಯ ಇನ್ನು ವೃದ್ದಿಯಾಗಲಿ ಎಂದು ಹರಸುತ್ತಾರೆ. 

ಸಾಮಾನ್ಯವಾಗಿ ಈ ಹಬ್ಬವು ಉತ್ತರಾಯಣದ ಆರಂಭದ ದಿನವಾಗಿದ್ದರಿಂದ ಹುಟ್ಟು ಮತ್ತು ಸಾವುಗಳಿಗೆ ಕೂಡಾ ಶುಭ ದಿನವೆಂದು ಹಿಂದು ಧಾರ್ಮಿಕ ಸಂಪ್ರದಾಯದಲ್ಲಿ ನಂಬಿಕೆ ಇದೆ.ಆದ್ದರಿಂದ ಈ ದಿನದಂದು ಸಾಮಾನ್ಯವಾಗಿ ನದಿ ತೀರದ ಪುಣ್ಯ ಕ್ಷೇತ್ರಗಳಿಗೆ ತೆರಳಿ ನದಿಯಲ್ಲಿ ಮಿಂದು ಸೂರ್ಯ ನಮಸ್ಕಾರ ಮಾಡುತ್ತಾರೆ.ನಂತರ ದೇವಸ್ತಾನಗಳಲ್ಲಿ ದೀಪವನ್ನು ಹಚ್ಚಿ ದಾನವನ್ನು ನೀಡುತ್ತಾರೆ.

Trending News