ವಿಮಾನದಲ್ಲಿ ಸಿಗರೇಟ್ ಸೇದಿ ಜೈಲು ಸೇರಿದ ಯುವತಿ..!

ಇಂಡಿಗೊ ವಿಮಾನದಲ್ಲಿ ಸಿಗರೇಟ್ ಸೇದಿ ಯುವತಿಯೊಬ್ಬಳು ಆತಂಕ ಸೃಷ್ಟಿಸಿದ್ದಾರೆ. ಪಶ್ಚಿಮ ಬಂಗಾಳದ ಪ್ರಿಯಾಂಕ ಚಕ್ರವರ್ತಿ (24) ಎಂಬ ಯುವತಿ ಕೋಲ್ಕತ್ತಾದಿಂದ ಬೆಂಗಳೂರಿಗೆ ಬರ್ತಿದ್ದ ಇಂಡಿಗೊ 6E716 ವಿಮಾನದ ಶೌಚಾಲಯದಲ್ಲಿ  ಧೂಮಪಾನ ಮಾಡಿದ್ದಾರೆ. 

Written by - Channabasava A Kashinakunti | Last Updated : Mar 8, 2023, 01:33 PM IST
  • ಇಂಡಿಗೊ ವಿಮಾನದಲ್ಲಿ ಸಿಗರೇಟ್ ಸೇದಿ ಯುವತಿ
  • ಪಶ್ಚಿಮ ಬಂಗಾಳದ ಪ್ರಿಯಾಂಕ ಚಕ್ರವರ್ತಿ (24) ಎಂಬ ಯುವತಿ
  • ಬೆಂಗಳೂರಿಗೆ ಬರ್ತಿದ್ದ ಇಂಡಿಗೊ 6E716 ವಿಮಾನ
ವಿಮಾನದಲ್ಲಿ ಸಿಗರೇಟ್ ಸೇದಿ ಜೈಲು ಸೇರಿದ ಯುವತಿ..! title=

ಬೆಂಗಳೂರು : ಇಂಡಿಗೊ ವಿಮಾನದಲ್ಲಿ ಸಿಗರೇಟ್ ಸೇದಿ ಯುವತಿಯೊಬ್ಬಳು ಆತಂಕ ಸೃಷ್ಟಿಸಿದ್ದಾರೆ. ಪಶ್ಚಿಮ ಬಂಗಾಳದ ಪ್ರಿಯಾಂಕ ಚಕ್ರವರ್ತಿ (24) ಎಂಬ ಯುವತಿ ಕೋಲ್ಕತ್ತಾದಿಂದ ಬೆಂಗಳೂರಿಗೆ ಬರ್ತಿದ್ದ ಇಂಡಿಗೊ 6E716 ವಿಮಾನದ ಶೌಚಾಲಯದಲ್ಲಿ  ಧೂಮಪಾನ ಮಾಡಿದ್ದಾರೆ. 

ವಿಮಾನ ಮಾರ್ಚ್ 5 ರಂದು ರಾತ್ರಿ 9-50 ಕ್ಕೆ ಕಲ್ಕತ್ತಾದಿಂದ ಹೊರಟಿತ್ತು. ಪ್ರಿಯಾಂಕ ಬೆಂಗಳೂರಿಗೆ ಲ್ಯಾಂಡ್ ಆಗುವ ಅರ್ಧ ಗಂಟೆ ಮೊದಲು ಸಿಗರೇಟ್ ಸೇದಿದ್ದಾಳೆ. ಶೌಚಾಲಯದ ಬಾಗಿಲನ್ನ ತೆಗಿಸಿದಾಗ ಡಸ್ಟ್ ಬಿನ್ ನಲ್ಲಿ ಸಿಗರೇಟ್ ತುಂಡು ಪತ್ತೆಯಾಗಿದೆ. ನಂತರ ಸಿಬ್ಬಂದಿ ಸಿಗರೇಟ್ ಕಂಡು ಡಸ್ಟ್ ಬಿನ್ ಗೆ ನೀರು ಸುರಿದಿದ್ದಾರೆ. ವಿಮಾನ ಬೆಂಗಳೂರಲ್ಲಿ ಲ್ಯಾಂಡ್ ಆದ ಕೂಡಲೆ ಭದ್ರತಾ ವಿಭಾಗಕ್ಕೆ ಒಪ್ಪಿಸಲಾಗಿತ್ತು. ಸಧ್ಯ, ಯುವತಿಯನ್ನ ಇತರರ ಜೀವ ಮತ್ತು ವೈಯಕ್ತಿಕ ಸುರಕ್ಷತೆಗೆ ಅಪಾಯ ಉಂಟು ಮಾಡಿದ ಪ್ರಕರಣದಡಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಅರೆಸ್ಟ್ ಮಾಡಲಾಗಿದೆ.

ಇದನ್ನೂ ಓದಿ : CRIME NEWS : ಬ್ರೇಕಪ್ ಅಂದಿದ್ದಕ್ಕೆ ಆಂಟಿ ಮುಖಕ್ಕೆ ಕುರೂಪ್ ಹಾಕಿದ 19ರ ಯುವಕ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News