ಕೇವಲ 1400 ರೂಪಾಯಿಗೆ ವಿಮಾನಯಾನದ ಅವಕಾಶ, ತಕ್ಷಣ ಟಿಕೆಟ್ ಬುಕ್ ಮಾಡಿ..!

ನೇರ ಸಂಪರ್ಕವು ಪ್ರಯಾಣವನ್ನು ಸುಲಭಗೊಳಿಸುತ್ತದೆ ಮತ್ತು ಅದರ ನೈಸರ್ಗಿಕ ಸೌಂದರ್ಯ,  ವೈವಿಧ್ಯಮಯ ಸಂಸ್ಕೃತಿ ಪ್ರವಾಸಿಗರಿಗೆ ವಿಶಿಷ್ಟ ಅನುಭವವನ್ನು ನೀಡುತ್ತದೆ ಎಂದು ವಿಮಾನಯಾನ ಕಂಪನಿ ಇಂಡಿಗೋ ಹೇಳಿದೆ. 

Written by - Ranjitha R K | Last Updated : Nov 9, 2021, 04:12 PM IST
  • ವಿಮಾನಯಾನ ಸಂಸ್ಥೆ ಇಂಡಿಗೋದಿಂದ ಉತ್ತಮ ಕೊಡುಗೆ
  • ಈಗ 12 ಗಂಟೆಗಳ ಪ್ರಯಾಣ ಕೇವಲ ಕೇವಲ 75 ನಿಮಿಷಗಳಲ್ಲಿ
  • ದೇಶದ ಹಲವು ಮಾರ್ಗಗಳಲ್ಲಿ ಹೊಸ ವಿಮಾನ ಹಾರಾಟ ಆರಂಭ
ಕೇವಲ 1400 ರೂಪಾಯಿಗೆ ವಿಮಾನಯಾನದ ಅವಕಾಶ,  ತಕ್ಷಣ ಟಿಕೆಟ್ ಬುಕ್ ಮಾಡಿ..!  title=
ವಿಮಾನಯಾನ ಸಂಸ್ಥೆ ಇಂಡಿಗೋದಿಂದ ಉತ್ತಮ ಕೊಡುಗೆ (file photo)

ನವದೆಹಲಿ: ಅತ್ಯಂತ ಕಡಿಮೆ ಬೆಲೆಯಲ್ಲಿ  ಈಗ ದೇಶದ ಸುಂದರ ಸ್ಥಳಗಳನ್ನು ಸುತ್ತಾಡಬಹುದು. ಅಷ್ಟೇ ಅಲ್ಲ, ಈಗ ವಿಮಾನದಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣ ಬೆಳೆಸುವುದು ಕೂಡಾ ಸುಲಭವಾಗಲಿದೆ. ವಿಮಾನಯಾನ ಕಂಪನಿ ಇಂಡಿಗೋ (Indigo Offer) ಅನೇಕ ಹೊಸ ಡೈರೆಕ್ಟ್ ವಿಮಾನಗಳನ್ನು ಘೋಷಿಸಿದೆ. ಇದರೊಂದಿಗೆ,  ಪ್ರಯಾಣಿಕರಿಗೆ ಪಾಯಿಂಟ್ ಟು ಪಾಯಿಂಟ್ ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಾವು ಮತ್ತೊಂದು ಹೆಜ್ಜೆ ಇಟ್ಟಿದ್ದೇವೆ ಎಂದು ಇಂಡಿಗೋ ಹೇಳಿದೆ.

ವಿಮಾನಯಾನ ಸಂಸ್ಥೆ ಇಂಡಿಗೋ ನೀಡಿದೆ ಮಾಹಿತಿ : 
ನೇರ ಸಂಪರ್ಕವು ಪ್ರಯಾಣವನ್ನು ಸುಲಭಗೊಳಿಸುತ್ತದೆ ಮತ್ತು ಅದರ ನೈಸರ್ಗಿಕ ಸೌಂದರ್ಯ,  ವೈವಿಧ್ಯಮಯ ಸಂಸ್ಕೃತಿ ಪ್ರವಾಸಿಗರಿಗೆ ವಿಶಿಷ್ಟ ಅನುಭವವನ್ನು ನೀಡುತ್ತದೆ ಎಂದು ವಿಮಾನಯಾನ ಕಂಪನಿ ಇಂಡಿಗೋ (Indigo) ಹೇಳಿದೆ. ಇದು ಪ್ರಯಾಣದ ಯೋಜನೆಯಲ್ಲಿ ಪ್ರಯಾಣಿಕರಿಗೆ ಅನುಕೂಲಕರವಾಗಿರಲಿದೆ. 

ಇದನ್ನೂ ಓದಿ : ಇನ್ನು ಸಿಗುವುದಿಲ್ಲ ಸರ್ಕಾರಿ ನೌಕರರಿಗೆ ಸಿಗುತ್ತಿದ್ದ ಈ ಸೌಲಭ್ಯ, ತಿಳಿದುಕೊಂಡಿರದಿದ್ದರೆ ನಷ್ಟ ಖಂಡಿತಾ

ಇದಕ್ಕೂ ಮೊದಲು, ವಿಮಾನಯಾನವು  ನವೆಂಬರ್ 2, 2021 ರಿಂದ ಶಿಲ್ಲಾಂಗ್ ಮತ್ತು ದಿಬ್ರುಗಢ್ ನಡುವೆ ನೇರ ವಿಮಾನಯಾನವನ್ನು ಪ್ರಾರಂಭಿಸಿದೆ. ಇದರ ಆರಂಭಿಕ ದರ ಕೇವಲ 1,400 ರೂಪಾಯಿಗಳು.

ಬುಕ್ ಮಾಡುವುದು ಹೇಗೆ?
ನೀವು ಸಹ ಅಗ್ಗವಾಗಿ ವಿಮಾನ ಪ್ರಯಾಣ ಮಾಡಲು ಬಯಸಿದರೆ, ಇಂಡಿಗೋ ವೆಬ್‌ಸೈಟ್‌ಗೆ (Website) ಭೇಟಿ ನೀಡುವ ಮೂಲಕ ವಿವರವಾದ ಮಾಹಿತಿಯನ್ನು ಪಡೆಯಬಹುದು. ಇದರ ಹೊರತಾಗಿ, ಪ್ರಯಾಣಿಕರು ಇಂಡಿಗೋ ವಿಮಾನಗಳಿಗೆ (Flight) ವಿಮಾನಯಾನದ ಅಧಿಕೃತ ವೆಬ್‌ಸೈಟ್ https://www.goindigo.in/ ಗೆ ಭೇಟಿ ನೀಡುವ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡಬಹುದು.

ಕೇವಲ 75 ನಿಮಿಷಗಳಲ್ಲಿ 12 ಗಂಟೆಗಳ ಪ್ರಯಾಣ  :
ಯಾವುದೇ ನೇರ ಸಾರಿಗೆಯ ಲಭ್ಯತೆಯಿಲ್ಲದ ಕಾರಣ, ಜನರು ಶಿಲ್ಲಾಂಗ್ ಮತ್ತು ದಿಬ್ರುಗಢ್ ನಡುವೆ ಪ್ರಯಾಣಿಸಲು ರಸ್ತೆ ಮತ್ತು ರೈಲಿನ (Train)  ಮೂಲಕ 12 ಗಂಟೆಗಳ ದೀರ್ಘ ಪ್ರಯಾಣವನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಈಗ ಕೇವಲ 75 ನಿಮಿಷಗಳ ವಿಮಾನವನ್ನು ಆಯ್ಕೆ ಮಾಡುವ ಮೂಲಕ ಎರಡು ನಗರಗಳ ನಡುವೆ ಸುಲಭವಾಗಿ ಹಾರಾಟ ನಡೆಸಬಹುದು. 

ಇದನ್ನೂ ಓದಿ : Electric Vehicle: ಎಲೆಕ್ಟ್ರಿಕ್ ವಾಹನ ಮಾಲೀಕರಿಗೆ ಈ ಸರ್ಕಾರದಿಂದ ಸಿಗಲಿದೆ ಭರ್ಜರಿ ಗಿಫ್ಟ್

ಯಾವ ನಗರಗಳಿಗೆ ಎಷ್ಟು ದರ ಇರಲಿದೆ ಪಟ್ಟಿ ಇಲ್ಲಿದೆ :
- ಜಮ್ಮು ನಿಂದ ಲೇಹ್ -  1854 ರೂ
- ಲೇಹ್ ನಿಂದ ಜಮ್ಮು -  2946 ರೂ
- ಇಂದೋರ್‌ನಿಂದ ಜೋಧ್‌ಪುರ -  2695 ರೂ
- ಜೋಧ್‌ಪುರದಿಂದ ಇಂದೋರ್ -  2735 ರೂ
- ಪ್ರಯಾಗ್‌ರಾಜ್‌ನಿಂದ ಇಂದೋರ್ -  3429 ರೂ
- ಇಂದೋರ್‌ನಿಂದ ಪ್ರಯಾಗ್‌ರಾಜ್ -  3637 ರೂ
- ಲಕ್ನೋದಿಂದ ನಾಗಪುರ -  3473 ರೂ
-ನಾಗ್ಪುರದಿಂದ ಲಕ್ನೋ - 3473 ರೂ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News