WhatsApp ಮೂಲಕ ಹಣ್ಣು-ತರಕಾರಿ, ದಿನಸಿ ಮಾರಾಟಕ್ಕೆ ಮುಂದಾದ Jio

JioMart On WhatsApp: ಇದೀಗ ದಿನಸಿ ಸಾಮಾನುಗಳನ್ನು ಖರೀದಿಸಲು ನೀವು ಎಲ್ಲಿಗೂ ಹೋಗಬೇಕಾಗಿಲ್ಲ. ಹೌದು, ವಾಟ್ಸ್ ಆಪ್ ಮೂಲಕ ನೀವು ನಿಮ್ಮ ದೈನಂದಿನ ದಿನಸಿಯನ್ನು ಖರೀದಿಸಲು ನಿಮಗೆ ಸಾಧ್ಯವಾಗಲಿದೆ. ಜಿಯೋ ಮಾರ್ಟ್ ವಾಟ್ಸ್ ಆಪ್ ಗೆ ಲಗ್ಗೆ ಇಟ್ಟಿರುವುದೇ ಇದಕ್ಕೆ ಕಾರಣ.   

Written by - Nitin Tabib | Last Updated : Aug 29, 2022, 07:04 PM IST
  • ಇನ್ಮುಂದೆ ನೀವು ದಿನಸಿ ಸಾಮಾನುಗಳನ್ನು ಖರೀದಿಸಲು ಎಲ್ಲಿಯೂ ಹೋಗಬೇಕಾಗಿಲ್ಲ,
  • ಏಕೆಂದರೆ ಇದೀಗ WhatsApp ಮೂಲಕ, ನೀವು ನಿಮ್ಮ ದೈನಂದಿನ ಸರಕುಗಳನ್ನು ಖರೀದಿಸಲು ನಿಮಗೆ ಸಾಧ್ಯವಾಗಲಿದೆ.
  • ವಾಸ್ತವದಲ್ಲಿ, JioMart ಇದೀಗ WhatsApp ನಲ್ಲಿ ಬರಲಿದೆ,
WhatsApp ಮೂಲಕ ಹಣ್ಣು-ತರಕಾರಿ, ದಿನಸಿ ಮಾರಾಟಕ್ಕೆ ಮುಂದಾದ Jio title=
JioMart On WhatsApp

JioMart On WhatsApp: ಇನ್ಮುಂದೆ ನೀವು ದಿನಸಿ ಸಾಮಾನುಗಳನ್ನು ಖರೀದಿಸಲು ಎಲ್ಲಿಯೂ ಹೋಗಬೇಕಾಗಿಲ್ಲ, ಏಕೆಂದರೆ ಇದೀಗ WhatsApp ಮೂಲಕ, ನೀವು ನಿಮ್ಮ ದೈನಂದಿನ ಸರಕುಗಳನ್ನು ಖರೀದಿಸಲು ನಿಮಗೆ ಸಾಧ್ಯವಾಗಲಿದೆ. ವಾಸ್ತವದಲ್ಲಿ, JioMart ಇದೀಗ WhatsApp ನಲ್ಲಿ ಬರಲಿದೆ, ಅಂದರೆ, ನೀವು ಮನೆಯಲ್ಲಿ ಕುಳಿತು ಸಂದೇಶ ಕಳುಹಿಸುವ ಅಪ್ಲಿಕೇಶನ್‌ನಿಂದ ಶಾಪಿಂಗ್ ಅನ್ನು ಆನಂದಿಸಲು ಸಾಧ್ಯವಾಗಲಿದೆ. ಕಂಪನಿಯ 45 ನೇ AGM ಸಂದರ್ಭದಲ್ಲಿ ಮುಖೇಶ್ ಅಂಬಾನಿ ಅವರು ಈಗ ಗ್ರಾಹಕರು ತಮ್ಮ WhatsApp ಚಾಟ್‌ ನಡೆಸುವ ಮೂಲಕ Jiomart ನಿಂದ ಶಾಪಿಂಗ್ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ. ಈ ಕುರಿತು ರಿಲಯನ್ಸ್ ರೀಟೈಲ್‌ ಬಿಡುಗಡೆ ಮಾಡಿರುವ ಅಧಿಕೃತ ಮಾಹಿತಿಯ ಪ್ರಕಾರ, "ಈ ಹಿಂದೆ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡದ ಭಾರತದ ಬಳಕೆದಾರರಿಗೆ WhatsApp ನಲ್ಲಿ JioMart ಹೆಚ್ಚು ಉಪಯುಕ್ತವಾಗಿದೆ. ವಿಶೇಷವೆಂದರೆ ಬಳಕೆದಾರರು WhatsApp ಚಾಟ್ ಅನ್ನು ನಿಲ್ಲಿಸದೆಯೇ JioMart ನಲ್ಲಿನ ಸಂಪೂರ್ಣ ದಿನಸಿ ಪಟ್ಟಿಯ ಬ್ರೌಸಿಂಗ್ ಮಾಡಬಹುದು. ಕಾರ್ಟ್‌ಗೆ ಐಟಂಗಳನ್ನು ಸೇರಿಸಬಹುದು ಮತ್ತು ದಿನಸಿ ಖರೀದಿಯನ್ನು ಅಂತಿಮಗೊಳಿಸಲು ಹಣಪಾವತಿಯನ್ನು ಕೂಡ ಮಾಡಬಹುದು" ಎನ್ನಲಾಗಿದೆ.

"ಭಾರತದ ಡಿಜಿಟಲ್ ರೂಪಾಂತರವನ್ನು ವೇಗಗೊಳಿಸಲು ಮತ್ತು ಎಲ್ಲಾ ರೀತಿಯ ಜನರು ಮತ್ತು ವ್ಯವಹಾರಗಳಿಗೆ ಹೊಸ ರೀತಿಯಲ್ಲಿ ಸಂಪರ್ಕ ಸಾಧಿಸಲು ಮತ್ತು ದೇಶದ ಆರ್ಥಿಕ ಬೆಳವಣಿಗೆ ಹೆಚ್ಚಿಸಲು ಅವಕಾಶಗಳನ್ನು ಒದಗಿಸಲು META ಮತ್ತು Jio ಪ್ಲಾಟ್‌ಫಾರ್ಮ್‌ಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆ ಇದಾಗಿದೆ" ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. WhatsApp ನಲ್ಲಿನ JioMart ಭಾರತದಲ್ಲಿನ ವ್ಯವಹಾರಗಳು ಗ್ರಾಹಕರೊಂದಿಗೆ ತೊಡಗಿಸಿಕೊಳ್ಳುವ ರೀತಿಯಲ್ಲಿ ಕ್ರಾಂತಿಯನ್ನುಂಟು ಮಾಡುತ್ತದೆ ಮತ್ತು ಗ್ರಾಹಕರ ಶಾಪಿಂಗ್ ಅನುಭವವನ್ನು ಸರಳಗೊಳಿಸುತ್ತದೆ ಎಂದೂ ಕೂಡ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ-Jio ಬೆನ್ನಲ್ಲೇ ಇದೀಗ ತನ್ನ 5ಜಿ ಸೇವೆಯನ್ನು ಕೂಡ ಘೋಷಿಸಿದೆ ಈ ಕಂಪನಿ, ಬೆಲೆ ವಿವರ ಇಲ್ಲಿದೆ

ಭಾರತದಲ್ಲಿ JioMart ನೊಂದಿಗೆ ನನ್ನ ಪಾಲುದಾರಿಕೆಯನ್ನು ಪ್ರಾರಂಭಿಸಲು ನಾನು  ಉತ್ಸುಕನಾಗಿದ್ದೇನೆ: ಜುಕರ್‌ಬರ್ಗ್
ಏತನ್ಮಧ್ಯೆ, Meta ಸಂಸ್ಥಾಪಕ ಮತ್ತು CEO ಮಾರ್ಕ್ ಜುಕರ್‌ಬರ್ಗ್ ಫೇಸ್‌ಬುಕ್‌ ಮೂಲಕ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ. "ಭಾರತದಲ್ಲಿ ಜಿಯೋಮಾರ್ಟ್‌ನೊಂದಿಗೆ ನಮ್ಮ ಪಾಲುದಾರಿಕೆಯನ್ನು ಪ್ರಾರಂಭಿಸಲು ನಾನು ಉತ್ಸುಕನಾಗಿದ್ದೇನೆ. ಇದು WhatsApp ನಲ್ಲಿ ನಮ್ಮ ಮೊದಲ ಎಂಡ್-ಟು-ಎಂಡ್ ಶಾಪಿಂಗ್ ಅನುಭವವಾಗಿದೆ. ಚಾಟ್ ನಲ್ಲಿ ಜನರು ಇದೀಗ ನೇರವಾಗಿ JioMart ನಿಂದ ದಿನಸಿಗಳನ್ನು ಖರೀದಿಸಬಹುದು" ಎಂದಿದ್ದಾರೆ. ಇದಕ್ಕೂ ಮುಂದುವರೆದು ಮಾತನಾಡಿರುವ ಮೆಟಾ ಸಿಇಒ "ವ್ಯಾಪಾರ ಸಂದೇಶ ಕಳುಹಿಸುವಿಕೆಯು ನಿಜವಾದ ಆವೇಗವನ್ನು ಹೊಂದಿರುವ ಪ್ರದೇಶವಾಗಿದೆ ಮತ್ತು ಅಂತಹ ಚಾಟ್-ಆಧಾರಿತ ಅನುಭವಗಳು ಮುಂಬರುವ ವರ್ಷಗಳಲ್ಲಿ ಜನರು ಮತ್ತು ವ್ಯವಹಾರಗಳು ಸಂವಹನ ಮಾಡುವ ಮಾರ್ಗವಾಗಿದೆ" ಎಂದು ವಿವರಿಸಿದ್ದಾರೆ.

ಇದನ್ನೂ ಓದಿ-8th Pay Commission: ಸರ್ಕಾರಿ ನೌಕರರಿಗೊಂದು ಬಿಗ್ ನ್ಯೂಸ್, ಜಾರಿಯಾಗಲಿದೆ 8ನೇ ವೇತನ ಆಯೋಗ!

ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿದ ಮುಖೇಶ್ ಅಂಬಾನಿ, "ಭಾರತವನ್ನು ವಿಶ್ವದ ಪ್ರಮುಖ ಡಿಜಿಟಲ್ ಸಮಾಜವಾಗಿ ಮುನ್ನಡೆಸುವುದು ನಮ್ಮ ದೃಷ್ಟಿಯಾಗಿದೆ. ಜಿಯೋ ಪ್ಲಾಟ್‌ಫಾರ್ಮ್‌ ಮತ್ತು META, 2020 ರಲ್ಲಿ ತಮ್ಮ ಪಾಲುದಾರಿಕೆಯನ್ನು ಘೋಷಿಸಿದಾಗ, ಮಾರ್ಕ್ ಮತ್ತು ನಾನು ಹೆಚ್ಚಿನ ಜನರು ಮತ್ತು ವ್ಯವಹಾರಗಳಿಗೆ ಸಹಾಯ ಮಾಡಿದೆವು" ಎಂದು ಹೇಳಿದ್ದರು. ಪ್ರತಿಯೊಬ್ಬ ಭಾರತೀಯನ ದೈನಂದಿನ ಜೀವನವನ್ನು ಸುಗಮಗೊಳಿಸುವ ನಿಜವಾದ ಹೊಸ ಪರಿಹಾರವನ್ನು ಕಂಡುಕೊಂಡಿದ್ದೇವೆ"  ಎಂದಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News