ITR Filing Date Extended: ತೆರಿಗೆ ಪಾವತಿದಾರರಿಗೆ ಭಾರಿ ನೆಮ್ಮದಿ, ITR ದಾಖಲಿಸುವ ಗಡುವು ವಿಸ್ತರಣೆ

ITR Filing Date Extended - 2020-21ನೇ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವ ಗಡುವನ್ನು ಕೇಂದ್ರವು ಮತ್ತೊಮ್ಮೆ ಡಿಸೆಂಬರ್ 31, 2021 ರಿಂದ ಮಾರ್ಚ್ 15, 2022 ರವರೆಗೆ (ITR Filing Last Date) ಮೂರು ತಿಂಗಳವರೆಗೆ ವಿಸ್ತರಿಸಿದೆ.

Written by - Nitin Tabib | Last Updated : Jan 11, 2022, 06:57 PM IST
  • ಮತ್ತೊಮ್ಮೆ ವಿಸ್ತರಣೆಯಾದ ITR ಫೈಲಿಂಗ್ ಗಡುವು
  • ಇದೀಗ ಮಾರ್ಚ್ 31, 2022ರವರೆಗೆ ಗಡುವು ವಿಸ್ತರಣೆ.
  • ಇದಕ್ಕೂ ಮೊದಲು ಡಿಸೆಂಬರ್ 31, 2021 ITR ದಾಖಲಿಸುವ ಅಂತಿಮ ಗಡುವಾಗಿತ್ತು.
ITR Filing Date Extended: ತೆರಿಗೆ ಪಾವತಿದಾರರಿಗೆ ಭಾರಿ ನೆಮ್ಮದಿ, ITR ದಾಖಲಿಸುವ ಗಡುವು ವಿಸ್ತರಣೆ title=
ITR Filing Date Extended (File Photo)

ITR Filing Date Extended - 2020-21ನೇ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವ ಗಡುವನ್ನು ಕೇಂದ್ರವು ಮತ್ತೊಮ್ಮೆ ಡಿಸೆಂಬರ್ 31, 2021 ರಿಂದ ಮಾರ್ಚ್ 15, 2022 ರವರೆಗೆ (ITR Filing Last Date) ಮೂರು ತಿಂಗಳವರೆಗೆ ವಿಸ್ತರಿಸಿದೆ. ಇದರರ್ಥ ತೆರಿಗೆದಾರರು (Tax Payers ITR) ಇದೀಗ ತಮ್ಮ ಆದಾಯ ತೆರಿಗೆ ರಿಟರ್ನ್ಸ್ (Income Tax Return ಅನ್ನು 2020-2021 ಹಣಕಾಸು ವರ್ಷಕ್ಕೆ ಅಥವಾ 2021-2022 ರ ಮೌಲ್ಯಮಾಪನ ವರ್ಷಕ್ಕೆ ಮಾರ್ಚ್ 15, 2022 ರೊಳಗೆ ಸಲ್ಲಿಸಬಹುದು.

ಹೆಚ್ಚುತ್ತಿರುವ ಕೋವಿಡ್ (Covid-19) ಪ್ರಕರಣಗಳಿಂದಾಗಿ ತೆರಿಗೆದಾರರು ಎದುರಿಸುತ್ತಿರುವ ತೊಂದರೆಗಳಿಂದಾಗಿ ಗಡುವನ್ನು ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಹಣಕಾಸು ಸಚಿವಾಲಯದ ಕಂದಾಯ ಇಲಾಖೆ (CBDT) ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಆದಾಯ ತೆರಿಗೆ ಕಾಯಿದೆ, 1961 ರ (IT Act 1961) ನಿಬಂಧನೆಗಳ ಅಡಿಯಲ್ಲಿ ವಿವಿಧ ಲೆಕ್ಕಪರಿಶೋಧನಾ ವರದಿಗಳ ಇ-ಫೈಲಿಂಗ್‌ನಲ್ಲಿ (Tax Filing) ಎದುರಿಸುತ್ತಿರುವ ಸಮಸ್ಯೆಗಳ ಕಾರಣ, ಸಮಯ ಮಿತಿಯನ್ನು ಸಹ ವಿಸ್ತರಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ-Business Idea: ಉದ್ಯೋಗ ಜೊತೆಗೆ ಈ ವ್ಯವಹಾರ ಪ್ರಾರಂಭಿಸಿ! ಪ್ರತಿತಿಂಗಳು ಲಕ್ಷ ಲಕ್ಷ ಗಳಿಸಿರಿ

ITR ಹೇಗೆ ದಾಖಲಿಸಬೇಕು?
>>  ಎಲ್ಲಕ್ಕಿಂತ ಮೊದಲು ಮೊದಲು https://www.incometax.gov.in/iec/foportal ಗೆ ಲಾಗಿನ್ ಮಾಡಿ.
>>  ಇ-ಫೈಲ್>ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್>ಫೈಲ್ ಇನ್ಕಮ್ ಟ್ಯಾಕ್ಸ್ ರಿಟರ್ನ್ ಗೆ ಹೋಗಿ.
>>  ನಂತರ ಮೌಲ್ಯಮಾಪನ ವರ್ಷ, ಫೈಲಿಂಗ್ ಟೈಪ್ ಮತ್ತು ಸ್ಥಿತಿಯನ್ನು ಆಯ್ಕೆಮಾಡಿ.
>>  Proceed ಮೇಲೆ ಕ್ಲಿಕ್ ಮಾಡಿ.
>>  ITR  ಅನ್ನು ಆಯ್ಕೆ ಮಾಡಿ ಮತ್ತು ಅದನ್ನು ಸಲ್ಲಿಸಲು ಕಾರಣವನ್ನು ಆಯ್ಕೆಮಾಡಿ.

ಇದನ್ನೂ ಓದಿ -ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ: ಆರೋಪಿಗೆ 10 ವರ್ಷ ಜೈಲು ಶಿಕ್ಷೆ

>>  ಅಗತ್ಯ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಪಾವತಿಸುವ ಅಗತ್ಯ ಬಿದ್ದರೆ, ಅದನ್ನು ಪಾವತಿಸಿ.
>>  ಪ್ರೀವ್ಯೂ ಕ್ಲಿಕ್ ಮಾಡುವ ಮೂಲಕ ರಿಟರ್ನ್ ಅನ್ನು ಸಲ್ಲಿಸಿ.
>>  ವೆರಿಫಿಕೆಶನ್ ಗಾಗಿ CONTINUE ಮೇಲೆ ಕ್ಲಿಕ್ ಮಾಡಿ.
>>  ಬಳಿಕ ವೆರಿಫಿಕೆಶನ್ ಮೋಡ್ ಮೇಲೆ ಕ್ಲಿಕ್ ಮಾಡಿ.
>>  EVC/OTP ತುಂಬುವ ಮೂಲಕ ITR ಅನ್ನು ಇ-ಪರಿಶೀಲಿಸಿ. ಪರಿಶೀಲನೆಗಾಗಿ ITR-V ಯ ಸಹಿ ಮಾಡಿದ ಪ್ರತಿಯನ್ನು CPC ಗೆ ಕಳುಹಿಸಿ.

ಇದನ್ನೂ ಓದಿ-ಮುಂಬೈ ಪೊಲೀಸರಿಗೆ ಕರೆ ಮಾಡಿ ಶಾರುಖ್ ಖಾನ್ ಮನ್ನತ್ ಸ್ಫೋಟಿಸುವುದಾಗಿ ಬೆದರಿಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News