ಪಿಪಿಎಫ್ ನಲ್ಲಿ ಹಣ ಹೂಡುವವರಿಗೆ 2.69 ಲಕ್ಷ ರೂಪಾಯಿ ಹೆಚ್ಚುವರಿ ಲಾಭ! ಆದರೆ ಈ ವಿಚಾರ ನೆನಪಿರಲಿ !

PPF ಖಾತೆಯಲ್ಲಿನ ಬಡ್ಡಿಯನ್ನು ಪ್ರತಿ ತಿಂಗಳ 5 ರಂದು ಲೆಕ್ಕಹಾಕಲಾಗುತ್ತದೆ.ಹಣಕಾಸು ವರ್ಷಕ್ಕೆ ಒಂದು ಕಂತಿನಲ್ಲಿ PPF ಹೂಡಿಕೆಯನ್ನು ಪಾವತಿಸಿದರೆ, ಹೆಚ್ಚಿನ ಗಳಿಕೆಗಾಗಿ ಈ ಹಣವನ್ನು ಏಪ್ರಿಲ್ 5ರ ಮೊದಲು ಠೇವಣಿ ಮಾಡಬೇಕಾಗುತ್ತದೆ.  

Written by - Ranjitha R K | Last Updated : Apr 4, 2024, 10:16 AM IST
  • PPF ಖಾತೆಯಲ್ಲಿನ ಬಡ್ಡಿಯನ್ನು ಪ್ರತಿ ತಿಂಗಳ 5 ರಂದು ಲೆಕ್ಕಹಾಕಲಾಗುತ್ತದೆ
  • ಇದು ಹೂಡಿಕೆದಾರರಿಗೆ ಮಾಸಿಕ ಬಡ್ಡಿಯ ಲಾಭವನ್ನು ನೀಡುತ್ತದೆ.
  • ಹೂಡಿಕೆಯ ಮೇಲೆ 18.18 ಲಕ್ಷ ರೂಪಾಯಿಗಳ ಬಡ್ಡಿ
ಪಿಪಿಎಫ್ ನಲ್ಲಿ ಹಣ ಹೂಡುವವರಿಗೆ 2.69 ಲಕ್ಷ ರೂಪಾಯಿ ಹೆಚ್ಚುವರಿ ಲಾಭ! ಆದರೆ ಈ ವಿಚಾರ ನೆನಪಿರಲಿ ! title=

PPF Scheme News: ಪಬ್ಲಿಕ್ ಪ್ರಾವಿಡೆಂಟ್ ಫಂಡ್‌ನಲ್ಲಿ ಹೂಡಿಕೆ ಮಾಡಿದ್ದರೆ,ಈ ಸುದ್ದಿ ನಿಮಗೆ  ಬಹಳ ಮುಖ್ಯವಾಗಿರಲಿದೆ. ಪಬ್ಲಿಕ್ ಪ್ರಾವಿಡೆಂಟ್ ಫಂಡ್‌ನಲ್ಲಿ ಹೂಡಿಕೆ ಮಾಡುವವರಿಗೆ ಏಪ್ರಿಲ್ 5 ರ ದಿನಾಂಕವು ಬಹಳ ಮುಖ್ಯವಾಗಿರುತ್ತದೆ.ಏಪ್ರಿಲ್ 5 ರೊಳಗೆ ಈ ಯೋಜನೆಯಲ್ಲಿ  ಹೂಡಿಕೆ ಮಾಡಿದರೆ, ಲಕ್ಷಾಂತರ ರೂಪಾಯಿ ಲಾಭವಾಗಲಿದೆ. ಹೇಗೆ ಎನ್ನುವ ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ. 

PPF ಖಾತೆಯಲ್ಲಿನ ಬಡ್ಡಿಯನ್ನು ಪ್ರತಿ ತಿಂಗಳ 5 ರಂದು ಲೆಕ್ಕಹಾಕಲಾಗುತ್ತದೆ.ಹಣಕಾಸು ವರ್ಷಕ್ಕೆ ಒಂದು ಕಂತಿನಲ್ಲಿ PPF ಹೂಡಿಕೆಯನ್ನು ಪಾವತಿಸಿದರೆ, ಹೆಚ್ಚಿನ ಗಳಿಕೆಗಾಗಿ ಈ ಹಣವನ್ನು ಏಪ್ರಿಲ್ 5ರ ಮೊದಲು ಠೇವಣಿ ಮಾಡಬೇಕಾಗುತ್ತದೆ.ಇದು ಹೂಡಿಕೆದಾರರಿಗೆ ಮಾಸಿಕ ಬಡ್ಡಿಯ ಲಾಭವನ್ನು ನೀಡುತ್ತದೆ. 

ಇದನ್ನೂ ಓದಿ : ಕಡಿಮೆಯಾಗುವುದೇ ಬ್ಯಾಂಕ್ ಲೋನ್ ಮೇಲಿನ ಬಡ್ಡಿ? ಇನ್ನೆರಡು ದಿನಗಳಲ್ಲಿ RBI ನೀಡಲಿದೆ ಉತ್ತರ !

ಹೂಡಿಕೆಯ ಮೇಲೆ 18.18 ಲಕ್ಷ ರೂಪಾಯಿಗಳ ಬಡ್ಡಿ : 
ಪ್ರಸ್ತುತ PPF ಏಪ್ರಿಲ್-ಜೂನ್ 2024 ತ್ರೈಮಾಸಿಕಕ್ಕೆ ವಾರ್ಷಿಕ 7.1 ಬಡ್ಡಿಯನ್ನು ನೀಡುತ್ತಿದೆ. ಈ ಬಡ್ಡಿ ದರವು ಪಿಪಿಎಫ್ ಖಾತೆಯ ಅವಧಿಗೆ 15 ವರ್ಷಗಳವರೆಗೆ ಇರುತ್ತದೆ. ಒಬ್ಬ ವ್ಯಕ್ತಿಯು ಮುಂದಿನ 15 ವರ್ಷಗಳವರೆಗೆ ಏಪ್ರಿಲ್ 5ರಂದು ಅಥವಾ ಅದಕ್ಕೆ ಮೊದಲು ಪ್ರತಿ ವರ್ಷ 1.5 ಲಕ್ಷ ರೂಪಾಯಿಗಳನ್ನು ಠೇವಣಿ ಮಾಡಿದರೆ 18.18 ಲಕ್ಷ ರೂಪಾಯಿಗಳ ಬಡ್ಡಿಯನ್ನು ಗಳಿಸುವುದು ಸಾಧ್ಯವಾಗುತ್ತದೆ. 

5 ನೇ ತಾರೀಕು ದಾಟಿದರೆ ಆಗುವುದು 2.69 ಲಕ್ಷ ನಷ್ಟ :
ಮತ್ತೊಂದೆಡೆ PPF ಖಾತೆದಾರರು ಏಪ್ರಿಲ್ 5ರ ನಂತರ ಠೇವಣಿ ಮಾಡಿದರೆ, 15.84 ಲಕ್ಷ ರೂಪಾಯಿಗಳ ಬಡ್ಡಿಯನ್ನು ಪಡೆಯುತ್ತಾರೆ.ಏಪ್ರಿಲ್ 5ರ ನಂತರ ಒಂದು ದೊಡ್ಡ ಮೊತ್ತವನ್ನು ಹೂಡಿಕೆ ಮಾಡುವುದರಿಂದ PPF ಖಾತೆದಾರರಿಗೆ 2.69 ಲಕ್ಷ ನಷ್ಟ ಉಂಟಾಗಲಿದೆ.

ಇದನ್ನೂ ಓದಿ : ಹಿರಿಯ ನಾಗರಿಕರ ಟಿಕೆಟ್ ವಿನಾಯಿತಿ ರದ್ದು; 5,800 ಕೋಟಿ ಗಳಿಸಿದ ರೈಲ್ವೆ ಇಲಾಖೆ!

ಏಪ್ರಿಲ್‌ನಲ್ಲಿ ಈ ಹಣದ ಮೇಲೆ ಬಡ್ಡಿ ಸಿಗುವುದಿಲ್ಲ :
ಪಿಪಿಎಫ್ ಖಾತೆದಾರರು ಏಪ್ರಿಲ್ 15 ರಂದು ಪಿಪಿಎಫ್ ಖಾತೆಯಲ್ಲಿ ಹಣವನ್ನು ಠೇವಣಿ ಮಾಡುತ್ತಾರೆ ಎಂದಿಟ್ಟು ಕೊಳ್ಳೋಣ. PPF ಖಾತೆಯ ನಿಯಮಗಳ ಪ್ರಕಾರ,ಮಾಸಿಕ ಬಡ್ಡಿಯನ್ನು ಏಪ್ರಿಲ್ 5 ಮತ್ತು ಏಪ್ರಿಲ್ 30ರ ನಡುವಿನ ಕಡಿಮೆ ಬ್ಯಾಲೆನ್ಸ್‌ ಮೇಲೆ ಲೆಕ್ಕಹಾಕಲಾಗುತ್ತದೆ. ಏಪ್ರಿಲ್ 15 ರಂದು ಠೇವಣಿ ಮಾಡಿದ ಮೊತ್ತವು ಏಪ್ರಿಲ್ ತಿಂಗಳಲ್ಲಿ  ಬಡ್ಡಿ ನೀಡುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

ಪ್ರಸ್ತುತ ಸಿಗುತ್ತಿದೆ 7.1 ಶೇಕಡಾ ಬಡ್ಡಿ : 
PPF ಪ್ರಸ್ತುತ ಶೇಕಡಾ 7.1 ರ ದರದಲ್ಲಿ ಬಡ್ಡಿ ನೀಡಲಾಗುತ್ತಿದೆ.ಪ್ರತಿ ತಿಂಗಳ 5 ಮತ್ತು ತಿಂಗಳ ಅಂತ್ಯದ ನಡುವೆ ಉಳಿದಿರುವ ಯಾವುದೇ ಕನಿಷ್ಠ ಬ್ಯಾಲೆನ್ಸ್ ಅನ್ನು ಆ ತಿಂಗಳ ಬಡ್ಡಿಯೊಂದಿಗೆ ವಿಲೀನ ಮಾಡಲಾಗುತ್ತದೆ. ಐದನೇ ತಾರೀಕಿನ ನಂತರ ಠೇವಣಿ ಮಾಡಿದ ಹಣ ಮುಂದಿನ ತಿಂಗಳಿನಿಂದ ಬಡ್ಡಿ ಗಳಿಸುತ್ತದೆ. 

Trending News