Indian Railways: ಇನ್ಮುಂದೆ ಈ ರೈಲಿನಲ್ಲಿ ಕೇವಲ 500ml ಉಚಿತ ನೀರು ಮಾತ್ರ ಸಿಗಲಿದೆ!

Free Rail Nee Bottle: ಪ್ರಯಾಣಿಕರು ತಮ್ಮ ಪ್ರಯಾಣವನ್ನು ಆರಂಭಿಸಿದ ತಕ್ಷಣ 1 ಲೀಟರ್ ನೀರಿನ ಬಾಟಲಿಯನ್ನು ನೀಡಲಾಗುತ್ತದೆ, ಆದರೆ ಇದೀಗ ರೈಲ್ವೆ ತನ್ನ ನಿಯಮಗಳಲ್ಲಿ ಸ್ವಲ್ಪ ಬದಲಾವಣೆ ಮಾಡಿದೆ. ಈಗ, ವಂದೇ ಭಾರತ್ ರೈಲುಗಳಲ್ಲಿ ಪ್ರಯಾಣಿಸುವಾಗ, ನಿಮಗೆ ಕೇವಲ 500 ಮಿಲಿ ಬಾಟಲಿಯನ್ನು ಸಿಗಲಿದೆ.  

Written by - Nitin Tabib | Last Updated : Apr 24, 2024, 09:45 PM IST
  • ಇದೇ ವೇಳೆ ಪ್ರಯಾಣಿಕರಿಗೆ ಬೇಡಿಕೆಯ ಮೇರೆಗೆ 500 ಎಂಎಲ್‌ನ ಮತ್ತೊಂದು ಬಾಟಲ್ ರೈಲ್ ನೀರ್ ಲಭ್ಯವಿರುತ್ತದೆ ಎಂದು ರೈಲ್ವೆ ಸ್ಪಷ್ಟಪಡಿಸಿದೆ,
  • ಅದಕ್ಕಾಗಿ ಪ್ರಯಾಣಿಕರಿಂದ ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
  • ಅಂದರೆ ಯಾವುದೇ ಶುಲ್ಕವಿಲ್ಲದೆ ನಿಮ್ಮ ಅವಶ್ಯಕತೆಗೆ ಅನುಗುಣವಾಗಿ 500 ಮಿಲಿ ಬಾಟಲಿಯನ್ನು ನೀವು ಹೆಚ್ಚುವರಿಯಾಗಿ ಉಚಿತವಾಗಿ ಪಡೆಯಬಹುದು.
Indian Railways: ಇನ್ಮುಂದೆ ಈ ರೈಲಿನಲ್ಲಿ ಕೇವಲ 500ml ಉಚಿತ ನೀರು ಮಾತ್ರ ಸಿಗಲಿದೆ! title=

Indian Railway Free Water Bottle: ನೀವು ರಾಜಧಾನಿ, ಶತಾಬ್ದಿ, ವಂದೇ ಭಾರತ್‌ನಂತಹ ಪ್ರೀಮಿಯಂ ರೈಲುಗಳಲ್ಲಿ ಪ್ರಯಾಣಿಸಿದರೆ, ಪ್ರಯಾಣದ ಸಮಯದಲ್ಲಿ ರೈಲ್ವೆಯು ನಿಮಗೆ ನೀರಿನ ಬಾಟಲಿಗಳನ್ನು ಒದಗಿಸುತ್ತದೆ. ಪ್ರಯಾಣಿಕರು ಪ್ರಯಾಣ ಆರಂಭಿಸಿದ ತಕ್ಷಣ 1 ಲೀಟರ್ ನೀರಿನ ಬಾಟಲಿ ನೀಡಲಾಗುತ್ತಿತ್ತು. ಇದೀಗ ರೈಲ್ವೇ ತನ್ನ ನಿಯಮಗಳಲ್ಲಿ ಕೊಂಚ ಬದಲಾವಣೆ ತಂದಿದೆ. ಈಗ ವಂದೇ ಭಾರತ್ ರೈಲುಗಳಲ್ಲಿ ಪ್ರಯಾಣಿಸುವಾಗ, ನಿಮಗೆ ಕೇವಲ 500 ಮಿಲಿ ಬಾಟಲಿಯನ್ನು ನೀಡಲಾಗುವುದು ಎನ್ನಲಾಗಿದೆ.

ಇದನ್ನೂ ಓದಿ-EPFO ಖಾತೆಗೆ ಯಾವಾಗ ಬರುತ್ತೆ PF ಬಡ್ಡಿ, ಇಪಿಎಫ್ಓ ನೀಡಿದ ಮಾಹಿತಿ ಇಲ್ಲಿದೆ!

ರೈಲ್ವೆ 500 ಮಿಲಿ ನೀರ್ ಬಾಟಲಿಯನ್ನು ನೀಡಲಿದೆ
ವಂದೇ ಭಾರತ್ ಸೇರಿದಂತೆ ರೈಲ್ವೆಯ ಪ್ರೀಮಿಯಂ ರೈಲುಗಳಲ್ಲಿ ಪ್ರಯಾಣದ ಸಮಯದಲ್ಲಿ 1 ಲೀಟರ್ ನೀರಿನ ಬಾಟಲಿಯನ್ನು ಒದಗಿಸಲಾಗುತ್ತಿಟ್ಟು. ಆದರೆ ಈಗ ಅದನ್ನು 500 ಮಿಲಿಗೆ ಇಳಿಸಲಾಗಿದೆ. ರೈಲುಗಳಲ್ಲಿ ಕುಡಿಯುವ ನೀರು ವ್ಯರ್ಥವಾಗುವುದನ್ನು ತಡೆಯಲು ರೈಲ್ವೆ ಇಲಾಖೆ ಈ ನಿರ್ಧಾರ ಕೈಗೊಂಡಿದೆ. ಎಲ್ಲಾ ವಂದೇ ಭಾರತ್ ರೈಲುಗಳಲ್ಲಿ ಪ್ರತಿ ಪ್ರಯಾಣಿಕರಿಗೆ 500 ಮಿಲಿಯ ಒಂದು ರೈಲ್ ನೀರ್ ಪ್ಯಾಕೇಜ್ಡ್ ಕುಡಿಯುವ ನೀರಿನ ಬಾಟಲಿಯನ್ನು ನೀಡಲಾಗುವುದು ಎಂದು ರೈಲ್ವೆ ನಿರ್ಧರಿಸಿದೆ.

ಇದನ್ನೂ ಓದಿ-Okra For Weight Loss: ತೂಕ ಇಳಿಕೆಗೆ ಒಂದು ಪರಿಣಾಮಕಾರಿ ಮನೆಮದ್ದು ಈ ತರಕಾರಿ! ಈ ರೀತಿ ಬಳಸಿ

ನೀವು ಉಚಿತ ನೀರಿನ ಬಾಟಲಿ ಪಡೆಯುವಿರಿ
ಇದೇ ವೇಳೆ ಪ್ರಯಾಣಿಕರಿಗೆ ಬೇಡಿಕೆಯ ಮೇರೆಗೆ 500 ಎಂಎಲ್‌ನ ಮತ್ತೊಂದು ಬಾಟಲ್ ರೈಲ್ ನೀರ್ ಲಭ್ಯವಿರುತ್ತದೆ ಎಂದು ರೈಲ್ವೆ ಸ್ಪಷ್ಟಪಡಿಸಿದೆ, ಅದಕ್ಕಾಗಿ ಪ್ರಯಾಣಿಕರಿಂದ ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಅಂದರೆ ಯಾವುದೇ ಶುಲ್ಕವಿಲ್ಲದೆ ನಿಮ್ಮ ಅವಶ್ಯಕತೆಗೆ ಅನುಗುಣವಾಗಿ 500 ಮಿಲಿ ಬಾಟಲಿಯನ್ನು ನೀವು ಹೆಚ್ಚುವರಿಯಾಗಿ ಉಚಿತವಾಗಿ ಪಡೆಯಬಹುದು. ಈ ಹಿಂದೆ ರೈಲಿನಲ್ಲಿ ಪ್ರಯಾಣಿಕರಿಗೆ ಒಂದು ಲೀಟರ್ ನೀರಿನ ಬಾಟಲಿಗಳನ್ನು ನೀಡಲಾಗುತ್ತಿತ್ತು, ಆದರೆ ಹೆಚ್ಚಿನ ಪ್ರಯಾಣಿಕರು ಒಂದು ಲೀಟರ್ ನೀರನ್ನು ಬಳಸದಿರುವುದು ಕಂಡುಬಂದಿದೆ. ನೀರು ಪೋಲಾಗುವುದನ್ನು ತಡೆಯಲು 1 ಲೀಟರ್ ಬದಲು ಎರಡು ಭಾಗ ಮಾಡಿ 500 ಮಿ.ಲೀ. ಬಾಟಲಿ ನೀಡಲು ನಿರ್ಧರಿಸಿದೆ. ಇದರಿಂದ ಅಗತ್ಯಬಿದ್ದರೆ ಪ್ರಯಾಣಿಕರು ಯಾವುದೇ ಶುಲ್ಕವಿಲ್ಲದೆ ಮತ್ತೊಂದು ನೀರಿನ ಬಾಟಲಿಯನ್ನು ತೆಗೆದುಕೊಂಡು ಹೋಗಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News