ಚಿಕ್ಕ ವಯಸ್ಸಿನಲ್ಲೇ ʼದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿʼ ಪಡೆದ ಪುಷ್ಪಾ ಡೈರೆಕ್ಟರ್‌ ಪುತ್ರಿ ಸುಕೃತಿ..!

Sukriti Sukumar : ಸುಕುಮಾರ್ ನಿರ್ಮಾಣದ ಪುಷ್ಪಾ 2 ಚಿತ್ರದ ಸಾಂಗ್‌ ರಿಲೀಸ್‌ ಆಗಿದ್ದು, ದೇಶಾದ್ಯಂತ ಸಂಚಲನ ಮೂಡಿಸುತ್ತಿದೆ. ಇದರ ನಡುವೆ ಸುಕುಮಾರ್‌ ಪುತ್ರಿಯ ಕುರಿತ ಸುದ್ದಿಯೊಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಷ್ಟಕ್ಕೂ ಈ ಸ್ಟಾರ್‌ ಡೈರೆಕ್ಟರ್‌ ಪುತ್ರಿ ಯಾರು..? ವೈರಲ್‌ ಆಗುತ್ತಿವ ವಿಚಾರ ಏನು ತಿಳಿಯೋಣ ಬನ್ನಿ..
 

1 /5

ಸುಕುಮಾರ್‌ ಪುಷ್ಪಾ ಮೊದಲ ಭಾಗ ಸಖತ್‌ ಸದ್ದು ಮಾಡಿತ್ತು ಇದೀಗ ಭಾಗ 2 ಬಿಡುಗಡೆಗೆ ರೆಡಿಯಾಗಿದೆ.. ಪುಷ್ಪರಾಜ್ ಪಾತ್ರದಲ್ಲಿ ನಟಿಸಿರುವ ಅಲ್ಲು ಅರ್ಜುನ್ ಅಭಿನಯ ದೇಶವನ್ನೇ ಹುಚ್ಚೆಬ್ಬಿಸಿತ್ತು. ಬನ್ನಿಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಈಗ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಪುಷ್ಪ 2 ಸಿನಿಮಾದ ಬಗ್ಗೆ ನಿರೀಕ್ಷೆ ಹುಟ್ಟು ಹಾಕಿದೆ. ಇದರ ಮಧ್ಯ ಸುಕುಮಾರ್ ಪುತ್ರಿ ಸುಕೃತಿ ವೇಣಿಗೆ ಅತ್ಯುನ್ನತ ಪ್ರಶಸ್ತಿ ಲಭಿಸಿದೆ.  

2 /5

ಸದ್ಯ, ಸುಕುಮಾರ್ ಟಾಲಿವುಡ್ ಇಂಡಸ್ಟ್ರಿಯ ಟಾಪ್ ನಿರ್ದೇಶಕರಲ್ಲಿ ಒಬ್ಬರು. ಅವರು ಆರ್ಯ ಚಿತ್ರದ ಮೂಲಕ ತಮ್ಮನ್ನು ನಿರ್ದೇಶಕರಾಗಿ ಪರಿಚಯಿಸಿಕೊಂಡರು ಮತ್ತು ಪುಷ್ಪ ಚಿತ್ರದ ಮೂಲಕ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡರು. ಸುಕುಮಾರ್ ನಿರ್ಮಾಣದ ಪುಷ್ಪಾ ದೇಶಾದ್ಯಂತ ಸಂಚಲನ ಮೂಡಿಸಿತ್ತು.   

3 /5

ಇದೀಗ ಸುಕುಮಾರ್ ಪುತ್ರಿ ಸುಕೃತಿ ವೇಣಿಗೆ ಅತ್ಯುನ್ನತ ಪ್ರಶಸ್ತಿ ಲಭಿಸಿದೆ. ಗಾಂಧಿ ತಾತ ಚೆಟ್ಟು ಚಿತ್ರದಲ್ಲಿ ಸುಕೃತಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ಸುಕೃತಿ ಅತ್ಯುತ್ತಮ ಬಾಲನಟಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಗೆದ್ದಿದ್ದಾರೆ.  

4 /5

ಮಂಗಳವಾರ ದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸುಕೃತಿ ತನ್ನ ತಾಯಿ ತಬಿತಾ ಸುಕುಮಾರ್ ಅವರೊಂದಿಗೆ ಭಾಗವಹಿಸಿದ್ದರು. ಗಾಂಧಿ ತಾತ ಚೆಟ್ಟು ಚಿತ್ರದಲ್ಲಿ ಸುಕೃತಿ ವೇಣಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರವು ಅನೇಕ ಅಂತರರಾಷ್ಟ್ರೀಯ ಮಟ್ಟದ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿತು.   

5 /5

ಪರಿಸರ ಸಂರಕ್ಷಣೆಯ ಮುಖ್ಯ ಉದ್ದೇಶದಿಂದ ನಿರ್ಮಿಸಲಾದ ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್, ಸುಕುಮಾರ್ ರೈಟಿಂಗ್ಸ್ ಮತ್ತು ಗೋಪಿ ಟಾಕೀಸ್ ಜಂಟಿಯಾಗಿ ನಿರ್ಮಿಸಿದ್ದಾರೆ. ಚಿತ್ರವು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಯಿತು. ಅಲ್ಲದೆ, ಚಿತ್ರವು ದುಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮತ್ತು ಭಾರತೀಯ ಚಲನಚಿತ್ರ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಬಾಲನಟಿಯಾಗಿ ಸುಕೃತಿ ಪ್ರಶಸ್ತಿ ಪಡೆದರು.