DGCA Latest Rule: ಇನ್ನು ವೈದ್ಯರ ಸರ್ಟಿಫಿಕೆಟ್ ಇದ್ದರೆ ಇವರು ವಿಮಾನ ಹತ್ತಬಹುದು

DGCA Latest Rule:ವಿಮಾನಯಾನ ಕಂಪನಿಗಳ ನಿಯಂತ್ರಣ ಪ್ರಾಧಿಕಾರವಾದ ನಾಗರಿಕ ವಿಮಾನಯಾನ ನಿರ್ದೇಶನಾಲಯ ವಿಮಾನಯಾನ ಕಂಪನಿಗಳಿಗೆ ಕಟ್ಟುನಿಟ್ಟಿನ ಆದೇಶ ಜಾರಿಗೊಳಿಸಿದೆ.  ಈ ಆದೇಶದ ಪ್ರಕಾರ 'ಅಂಗವೈಕಲ್ಯದ ಆಧಾರದ ಮೇಲೆ ಪ್ರಯಾಣಿಕರ ವಿಮಾನ ಪ್ರಯಾಣವನ್ನು  ವಿಮಾನಯಾನ ಸಂಸ್ಥೆ ತಡೆಯುವಂತಿಲ್ಲ. 

Written by - Ranjitha R K | Last Updated : Jul 13, 2022, 12:31 PM IST
  • ಡಿಜಿಸಿಎ ಜಾರಿಗೊಳಿಸಿದೆ ಕಟ್ಟುನಿಟ್ಟಿನ ಆದೇಶ
  • ವಿಕಲಾಂಗ ಪ್ರಯಾಣಿಕರ ಬಗ್ಗೆ ಜಾರಿಗೊಳಿಸಿದೆ ನಿಯಮ
  • ವಿಮಾನಯಾನ ಪ್ರಯಾಣಿಕರು ತಿಳಿದುಕೊಳ್ಳಬೇಕು ಈ ನಿಯಮ
DGCA Latest Rule: ಇನ್ನು ವೈದ್ಯರ ಸರ್ಟಿಫಿಕೆಟ್  ಇದ್ದರೆ ಇವರು  ವಿಮಾನ ಹತ್ತಬಹುದು  title=
DGCA Latest Rule (file photo)

DGCA Latest Rule: ಡಿಜಿಸಿಎ ವಿಮಾನ ಪ್ರಯಾಣದ ನಿಯಮಗಳಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಿದೆ. ಹೊಸ ನಿಯಮದ ಪ್ರಕಾರ, ವಿಕಲಾಂಗ ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸಲು ಯೋಗ್ಯರೇ ಎಂಬುದನ್ನು ವಿಮಾನಯಾನ ಕಂಪನಿಗಳು ನಿರ್ಧರಿಸುವಂತಿಲ್ಲ. ಅದನ್ನು ವೈದ್ಯರು ನಿರ್ಧರಿಸಬೇಕು. ಪರೀಕ್ಷೆಯಲ್ಲಿ ಯಾವುದೇ ಮಾನ್ಯ ಕಾರಣವನ್ನು ನೀಡಿ ವೈದ್ಯರು ವಿಮಾನವನ್ನು ಹತ್ತುವುದನ್ನು ನಿರಾಕರಿಸಿದರೆ, ಆ ವ್ಯಕ್ತಿಗೆ ವಿಮಾನ ಹತ್ತಲು ಅವಕಾಶ ನೀಡಲಾಗುವುದಿಲ್ಲ.  

ವಿಮಾನಯಾನ ಕಂಪನಿಗಳ ನಿಯಂತ್ರಣ ಪ್ರಾಧಿಕಾರವಾದ ನಾಗರಿಕ ವಿಮಾನಯಾನ ನಿರ್ದೇಶನಾಲಯ ವಿಮಾನಯಾನ ಕಂಪನಿಗಳಿಗೆ ಕಟ್ಟುನಿಟ್ಟಿನ ಆದೇಶ ಜಾರಿಗೊಳಿಸಿದೆ.  ಈ ಆದೇಶದ ಪ್ರಕಾರ 'ಅಂಗವೈಕಲ್ಯದ ಆಧಾರದ ಮೇಲೆ ಪ್ರಯಾಣಿಕರ ವಿಮಾನ ಪ್ರಯಾಣವನ್ನು  ವಿಮಾನಯಾನ ಸಂಸ್ಥೆ ತಡೆಯುವಂತಿಲ್ಲ. ಆದರೆ ಹಾರಾಟದ ಸಮಯದಲ್ಲಿ ಪ್ರಯಾಣಿಕರ ಆರೋಗ್ಯವು ಹದಗೆಡಬಹುದು ಎಂದು ವಿಮಾನಯಾನ ಸಂಸ್ಥೆಗೆ ಅನಿಸಿದರೆ, ಅಂಥಹ ಪ್ರಯಾಣಿಕರನ್ನು ವೈದ್ಯರಿಂದ ತಪಾಸಣೆ ನಡೆಸಬೇಕಾಗುತದೆ. ಪ್ರಯಾಣಿಕರ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯರ ಮಾಹಿತಿ ಪಡೆಯಲಾಗುತ್ತದೆ. ಪ್ರಯಾಣಿಕರು ವಿಮಾನ ಯಾನ ಮಾಡಲು ಆರೋಗ್ಯ ದೃಷ್ಟಿಯಿಂದ ಯೋಗ್ಯರಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ವೈದ್ಯರು ತಿಳಿಸುತ್ತಾರೆ. ವೈದ್ಯರ ಸಲಹೆಯ ಮೇರೆಗೆ ಮಾತ್ರ ವಿಮಾನಯಾನ ಸಂಸ್ಥೆಗಳು ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತದೆ.

ಇದನ್ನೂ ಓದಿ : ಓಲಾ ವಿರುದ್ದ 1.5 ಕೋಟಿಗೂ ಅಧಿಕ ದಂಡ ವಿಧಿಸಿದ ಆರ್‌ಬಿಐ.! ಏನಿದು ಪ್ರಕರಣ ?

ಈ ನಿರ್ಧಾರವನ್ನು ಏಕೆ ತೆಗೆದುಕೊಳ್ಳಲಾಗಿದೆ? : 
ವಿಕಲ ಚೇತನ ಮಗುವನ್ನು ವಿಮಾನ ಏರಲು ಇಂಡಿಗೋ ನಿರಾಕರಿಸಿದ  ಘಟನೆಯ ನಂತರ ಡಿಜಿಸಿಎ ಈ ನಿರ್ಧಾರವನ್ನು ತೆಗೆದುಕೊಂಡಿದೆ.  ಈ ಘಟನೆ ನಂತರ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇಂಡಿಗೋದ ಈ ಕ್ರಮಕಡ ವಿರುದ್ದವಾಗಿ ಡಿಜಿಸಿಎ 5 ಲಕ್ಷ ರೂಪಾಯಿ ದಂಡವನ್ನು ಕೂಡಾ ವಿಧಿಸಿದೆ.

ಇಂಡಿಗೋಗೆ 5 ಲಕ್ಷ ದಂಡ : 
ಇಂಡಿಗೋ ನೀಡಿದ ಸ್ಪಷ್ಟನೆಯಲ್ಲಿ, ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ, ವಿಕಲಾಂಗ ಮಗುವನ್ನು ರಾಂಚಿ-ಹೈದರಾಬಾದ್ ವಿಮಾನವನ್ನು ಹತ್ತಲು ಅನುಮತಿಸಲಾಗಿಲ್ಲ ಎಂದು ಹೇಳಿದೆ. ಇದಾದ ಬಳಿಕ ಇಂಡಿಗೋ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಡಿಜಿಸಿಎ 5 ಲಕ್ಷ ದಂಡ ವಿಧಿಸಿತ್ತು. ಮಾತ್ರವಲ್ಲ ಇಂಡಿಗೋ ಉದ್ಯೋಗಿಗಳ ವರ್ತನೆ ತಪ್ಪು ಎಂದು ಹೇಳಿತ್ತು.  

ಇದನ್ನೂ ಓದಿ : Gold Price Today : ಅಗ್ಗವಾಯಿತು ಚಿನ್ನ, ಬೆಳ್ಳಿ ಮಾತ್ರ ಬಲು ದುಬಾರಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News