PPF-ಸುಕನ್ಯಾ ಸಮೃದ್ದಿ ನಿಯಮಗಳಲ್ಲಿ ಬದಲಾವಣೆ ! ತಿಳಿದುಕೊಳ್ಳದಿದ್ದಲ್ಲಿ ಇದೇ ತಿಂಗಳ ಅಂತ್ಯಕ್ಕೆ ನಿಷ್ಕ್ರಿಯವಾಗುವುದು ಖಾತೆ

31 ಮಾರ್ಚ್ 2023 ರಂದು ಹಣಕಾಸು ಸಚಿವಾಲಯ ಹೊರಡಿಸಿದ ಅಧಿಸೂಚನೆಯ ಉಳಿತಾಯ ಯೋಜನೆಗಳ ನಿಯಮವನ್ನು ಬದಲಿಸಲಾಗಿದೆ. 

Written by - Ranjitha R K | Last Updated : Sep 6, 2023, 11:50 AM IST
  • 31 ಮಾರ್ಚ್ 2023 ರಂದು ಹಣಕಾಸು ಸಚಿವಾಲಯದಿಂದ ಅಧಿಸೂಚನೆ
  • ಉಳಿತಾಯ ಯೋಜನೆಗಳ ನಿಯಮಗಳಲ್ಲಿ ಬದಲಾವಣೆ
  • ಬದಲಾದ ನಿಯಮವನ್ನು ಪಾಲಿಸದಿದ್ದರೆ ಖಾತೆಯೇ ನಿಷ್ಕ್ರಿಯ
PPF-ಸುಕನ್ಯಾ ಸಮೃದ್ದಿ ನಿಯಮಗಳಲ್ಲಿ ಬದಲಾವಣೆ ! ತಿಳಿದುಕೊಳ್ಳದಿದ್ದಲ್ಲಿ ಇದೇ ತಿಂಗಳ ಅಂತ್ಯಕ್ಕೆ ನಿಷ್ಕ್ರಿಯವಾಗುವುದು ಖಾತೆ  title=

ಬೆಂಗಳೂರು : ನೀವು ಸಹ ಸರ್ಕಾರದಿಂದ ನಿರ್ವಹಿಸುತ್ತಿರುವ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದ್ದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ. 31 ಮಾರ್ಚ್ 2023 ರಂದು ಹಣಕಾಸು ಸಚಿವಾಲಯ ಹೊರಡಿಸಿದ ಅಧಿಸೂಚನೆಯ ಮೂಲಕ, ಉಳಿತಾಯ ಯೋಜನೆಗಳಲ್ಲಿ ಆಧಾರ್  ಅಪ್ಡೇಟ್ ಮಾಡುವಂತೆ ಸೂಚಿಸಲಾಗಿದೆ. ಈ ಅಧಿಸೂಚನೆಯ ಮೂಲಕ, ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC), ಸಾರ್ವಜನಿಕ ಭವಿಷ್ಯ ನಿಧಿ (PPF) ಅಥವಾ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡುವವರು ಆಧಾರ್ ಮತ್ತು PAN ಹೊಂದಿರುವುದು ಅಗತ್ಯವಾಗಿದೆ. 

ಸುಕನ್ಯಾ ಸಮೃದ್ಧಿ 2015 ರಲ್ಲಿ ಪ್ರಾರಂಭ : 
ಸುಕನ್ಯಾ ಸಮೃದ್ಧಿ ಯೋಜನೆಯನ್ನು ಮೋದಿ ಸರ್ಕಾರ 2015 ರಲ್ಲಿ ಪ್ರಾರಂಭಿಸಿತು. ಈ ಯೋಜನೆಯಡಿ ಖಾತೆಯನ್ನು ತೆರೆಯುವ ಮೂಲಕ,  ಮಗಳ ಭವಿಷ್ಯಕಾಗಿ ಹಣವನ್ನು ಸಂಗ್ರಹಿಸಬಹುದು. ಮೇಲೆ ತಿಳಿಸಿದ ಯಾವುದೇ ಯೋಜನೆಗಳಲ್ಲಿ ಹೂಡಿಕೆ ಮಾಡಲು, ಪ್ರಸ್ತುತ ಪ್ಯಾನ್ ಮತ್ತು ಆಧಾರ್ ಕಾರ್ಡ್ ಹೊಂದಿರಬೇಕು. ಈ ಯೋಜನೆಯಲ್ಲೂ ಹೂಡಿಕೆ ಮಾಡುವವರು  6 ತಿಂಗಳೊಳಗೆ ಆಧಾರ್ ಮತ್ತು ಪ್ಯಾನ್ ಸಂಖ್ಯೆಯ ಬಗ್ಗೆ ಮಾಹಿತಿ ನೀಡುವಂತೆ ಮಾರ್ಚ್ 31 ರಂದು ಹಣಕಾಸು ಸಚಿವಾಲಯವು ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆಯ ಮೊದಲು, ಆಧಾರ್ ಇಲ್ಲದೆ ಈ ಯೋಜನೆಯಲ್ಲಿ ಹೂಡಿಕೆಯನ್ನು  ಮಾಡಬಹುದಾಗಿತ್ತು.  ಆದರೆ ಈಗ ಈ ನಿಯಮವನ್ನು ಬದಲಾಯಿಸಲಾಗಿದೆ.

ಇದನ್ನೂ ಓದಿ : ಸರ್ಕಾರದ ಈ ಯೋಜನೆಯಿಂದ ಕೋಟಿಗಳ ಒಡೆಯರಾಗುವರು ಮಹಿಳೆಯರು ! ಮಹಿಳೆಯರಿಗಾಗಿ ಜಾರಿಗೆ ಬಂದಿರುವ ಸ್ಕೀಮ್ ಇದು

ಸೆಪ್ಟೆಂಬರ್ 30ರವರೆಗೆ ಕಾಲಾವಕಾಶ : 
ಕಳೆದ ದಿನಗಳ ಹಿಂದೆ ಹಣಕಾಸು ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಸುಕನ್ಯಾ ಸಮೃದ್ಧಿಯಂತಹ ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಖಾತೆಯನ್ನು ತೆರೆಯುವಾಗ, ಪ್ಯಾನ್ ಕಾರ್ಡ್ ಅಥವಾ ಫಾರ್ಮ್ 60 ಯನ್ನು  ಸಲ್ಲಿಸಬೇಕು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. PAN  ಸಲ್ಲಿಸಲು ಸರ್ಕಾರ ನೀಡಿರುವ ಗಡುವು ಸೆಪ್ಟೆಂಬರ್ 30ಕ್ಕೆ ಮುಕ್ತಾಯವಾಗುತ್ತದೆ. 

ಸಣ್ಣ ಉಳಿತಾಯ ಯೋಜನೆಯ ಖಾತೆಯನ್ನು ತೆರೆಯಲು ಅಗತ್ಯವಿರುವ ದಾಖಲೆಗಳು : 
-ಆಧಾರ್ ಸಂಖ್ಯೆ ಅಥವಾ ಆಧಾರ್ ನೋಂದಣಿ ಸ್ಲಿಪ್ ಅನ್ನು ಹೊಂದಿರಬೇಕು.
- ಇದರ ಹೊರತಾಗಿ, ಖಾತೆಯನ್ನು ತೆರೆಯಲು ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರವನ್ನು ಹೊಂದಿರುವುದು ಅವಶ್ಯಕ.
- ಹೂಡಿಕೆದಾರರು ಸೆಪ್ಟೆಂಬರ್ 30, 2023 ರೊಳಗೆ ಪ್ಯಾನ್ ಕಾರ್ಡ್ ಮತ್ತು ಆಧಾರ್ ಅನ್ನು ಸಲ್ಲಿಸದಿದ್ದರೆ , ಅಕ್ಟೋಬರ್ 1, 2023 ರಿಂದ  ಖಾತೆಯನ್ನು   ನಿಷ್ಕ್ರಿಯಗೊಳಿಸಲಾಗುವುದು.  

ಇದನ್ನೂ ಓದಿ : ಹಿರಿಯ ನಾಗರೀಕರಿಗಾಗಿ ಸರ್ಕಾರದ ಅದ್ಭುತ ಯೋಜನೆ ! ವೃದ್ದಾಪ್ಯದಲ್ಲಿ ಇರುವುದಿಲ್ಲ ಹಣದ ಚಿಂತೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News