Adani Group: ಒಂದೇ ಏಟಿಗೆ ಅರ್ಧದಷ್ಟು ಸಂಪತ್ತನ್ನು ಕಳೆದುಕೊಂಡ ಅದಾನಿ! ಏನಿದು ಸಂಪೂರ್ಣ ಕತೆ !

ಎರಡು ವಾರಗಳ ಹಿಂದಿನವರೆಗೆ ಗೌತಮ್ ಅದಾನಿ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಆದರೆ ಇಂದು ವಿಶ್ವದ 20 ಶ್ರೀಮಂತರ ಪಟ್ಟಿಯಿಂದಲೇ ಹೊರ ಬಿದ್ದಿದ್ದಾರೆ.

Written by - Ranjitha R K | Last Updated : Feb 6, 2023, 12:38 PM IST
  • ಅದಾನಿ ಗ್ರೂಪ್ ಮೇಲೆ ಆತಂಕದ ಕರಿ ಛಾಯೆ
  • ಕೇವಲ ಎರಡು ವಾರಗಳಲ್ಲಿ ಅರ್ಧಕ್ಕೆ ಇಳಿದ ಅದಾನಿ ಸಂಪತ್ತು
  • ವಿಶ್ವದ 20 ಶ್ರೀಮಂತರ ಪಟ್ಟಿಯಿಂದಲೇ ಹೊರಕ್ಕೆ
Adani Group: ಒಂದೇ ಏಟಿಗೆ ಅರ್ಧದಷ್ಟು ಸಂಪತ್ತನ್ನು ಕಳೆದುಕೊಂಡ ಅದಾನಿ! ಏನಿದು ಸಂಪೂರ್ಣ ಕತೆ ! title=

ನವದೆಹಲಿ : Adani Group Share: ಕಳೆದ ಎರಡು ವಾರಗಳಿಂದ ಅದಾನಿ ಗ್ರೂಪ್ ಮೇಲೆ  ಆತಂಕದ ಕರಿ ಛಾಯೆ ಆವರಿಸಿದೆ. ಕೇವಲ ಎರಡು ವಾರಗಳಲ್ಲಿ ಅದಾನಿ ಗ್ರೂಪ್ ಮಾಲೀಕ ಗೌತಮ್ ಅದಾನಿ ಸಂಪತ್ತು ಅರ್ಧಕ್ಕೆ ಇಳಿದಿದೆ ಎನ್ನಲಾಗಿದೆ. ಆದರೆ, ಅದಾನಿ ಗ್ರೂಪ್ ಕೇವಲ ಎರಡು ವಾರಗಳಲ್ಲಿ ಇಷ್ಟು ದೊಡ್ಡ ನಷ್ಟ ಅನುಭವಿಸಿದ್ದು ಹೇಗೆ? ಎನ್ನುವುದೇ ಎಲ್ಲರ ಕುತೂಹಲ. ಎರಡು ವಾರಗಳ ಹಿಂದಿನವರೆಗೆ ಗೌತಮ್ ಅದಾನಿ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಆದರೆ ಇಂದು ವಿಶ್ವದ 20 ಶ್ರೀಮಂತರ ಪಟ್ಟಿಯಿಂದಲೇ ಹೊರ ಬಿದ್ದಿದ್ದಾರೆ. ಎರಡು ವಾರಗಳ ಹಿಂದೆ, ಗೌತಮ್ ಅದಾನಿ ಉದ್ಯಮಿಗಳಾದ ಬಿಲ್ ಗೇಟ್ಸ್ ಮತ್ತು ವಾರೆನ್ ಬಫೆಟ್ ಅವರಿಗಿಂತ ಸುಮಾರು 120 ಡಾಲರ್ ಬಿಲಿಯನ್ ಶ್ರೀಮಂತರಾಗಿದ್ದರು. ಆದರೆ, ನಂತರದ ಬೆಳೆವಣಿಗೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ.

ಏನು ಹೇಳುತ್ತದೆ ಹಿಂಡೆನ್‌ಬರ್ಗ್ ವರದಿ :
ಅದಾನಿ ಕಂಪನಿಗಳಿಗೆ ಶಾರ್ಟ್ ಸೇಲ್ ಮಾಡುತ್ತಿದ್ದ ಅಮೇರಿಕನ್ ಶಾರ್ಟ್ ಸೆಲ್ಲರ್, ಅದಾನಿ ಮೇಲೆ ಕಾರ್ಪೊರೇಟ್ ಇತಿಹಾಸದ ಅತಿದೊಡ್ಡ ವಂಚನೆಯ ಆರೋಪ ಮಾಡಿದೆ. ಹಿಂಡೆನ್‌ಬರ್ಗ್ ಕೂಡಾ ಈ ಕುರಿತು ವರದಿಯನ್ನು ಪ್ರಕಟಿಸಿದೆ. ಇದಾದ ನಂತರ ಅದಾನಿ ಸಂಸ್ಥೆಗಳ ಮೌಲ್ಯ 110 ಶತಕೋಟಿ ಡಾಲರ್ ನಷ್ಟು ಕುಸಿದಿದೆ. ಅಲ್ಲದೆ ಹೂಡಿಕೆದಾರರು ತಮ್ಮ ಷೇರುಗಳನ್ನು ಹಿಂಪಡೆದ ಕಾರಣ, ಈ ಸಂಪತ್ತು ಇಷ್ಟರ ಮಟ್ಟಿಗೆ ಕುಸಿದಿದೆ. 

ಇದನ್ನೂ ಓದಿ : Patanjali Group : ಪತಂಜಲಿ ಫುಡ್ಸ್ ಹೂಡಿಕೆದಾರರಿಗೆ ಭಾರಿ ಹೊಡೆತ, 7000 ಕೋಟಿಗೂ ಹೆಚ್ಚು ನಷ್ಟ!

ಅದಾನಿ ಗ್ರೂಪ್  ಪ್ರತಿಕ್ರಿಯೆ  :
ಆದರೆ ಆದಾನಿ ಗ್ರೂಪ್ ಈ ವರದಿಯನ್ನು "ಆಧಾರರಹಿತ" ಮತ್ತು "ದುರುದ್ದೇಶಪೂರಿತ" ಎಂದು ಕರೆದಿದೆ. ಭಾರತದಲ್ಲಿ ವಿರೋಧ ಪಕ್ಷದ ಸಂಸದರು,  ಹಿಂಡೆನ್‌ಬರ್ಗ್ ವರದಿಯ ನಂತರ ಗದ್ದಲ ಎಬ್ಬಿಸಿದ್ದು, ತನಿಖೆಗೆ ಆಗ್ರಹಿಸುತ್ತಿದ್ದಾರೆ. ಗೌತಮ್ ಅದಾನಿ  60 ವರ್ಷದ ಉದ್ಯಮಿಯಾಗಿದ್ದು,  30 ವರ್ಷಗಳ ಹಿಂದೆ ಅದಾನಿ ಗ್ರೂಪ್ ಅನ್ನು ಪ್ರಾರಂಭಿಸಿದ್ದರು. ಅದಾನಿ ಕಾಲೇಜು ಡ್ರಾಪ್ ಔಟ್ ಆಗಿದ್ದು, ಬಹು ದೊಡ್ಡ  ವ್ಯಾಪಾರ ಸಾಮ್ರಾಜ್ಯವನ್ನೇ ನಿರ್ಮಿಸಿದ್ದಾರೆ. ಅದಾನಿ ವ್ಯಾಪಾರ ವ್ಯವಹಾರವು ಬಂದರುಗಳು, ಮೂಲಸೌಕರ್ಯ, ಇಂಧನ, ಗಣಿಗಾರಿಕೆ ಮತ್ತು ಮಾಧ್ಯಮಗಳಾದ್ಯಂತ ವ್ಯಾಪಿಸಿದೆ.

ಮೋಸ ಮತ್ತು ವಂಚನೆಯ ಆರೋಪ  :
ಅದಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯ ಪಟ್ಟಿಯಲ್ಲಿದ್ದು, ಕಳೆದ ಸೆಪ್ಟೆಂಬರ್‌ನಲ್ಲಿ ಜೆಫ್ ಬೆಜೋಸ್ ಅವರನ್ನು ಹಿಂದಿಕ್ಕಿ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಅದೇ ಸಮಯದಲ್ಲಿ, ಹಿಂಡೆನ್‌ಬರ್ಗ್ ರಿಸರ್ಚ್, ಅದಾನಿ ವಿರುದ್ಧ ಬಿಡುಗಡೆ ಮಾಡಿದ ತನ್ನ ವರದಿಯಲ್ಲಿ, ಅದಾನಿ ಮತ್ತು ಅವನ ಕಂಪನಿಗಳು ವ್ಯಾಪಕ ವಂಚನೆ ಮತ್ತು ಸ್ಟಾಕ್ ಮ್ಯಾನಿಪ್ಯುಲೇಷನ್"ನಲ್ಲಿ ತೊಡಗಿದೆ ಎಂದು ಆರೋಪಿಸಿ ವರದಿಯನ್ನು ಪ್ರಕಟಿಸಿದೆ. ದಶಕಗಳಿಂದ ಈ ರೀತಿಯ ವಂಚನೆ ನಡೆಯುತ್ತಿದೆ ಎಂದು ಆರೋಪಿಸಿದೆ. 

ಇದನ್ನೂ ಓದಿ : PF Rules : ಪಿಎಫ್‌ ಖಾತೆದಾರರ ಗಮನಕ್ಕೆ : ಖಾತೆಗೆ ಸಂಬಂಧಿಸಿದಂತೆ ಹೊಸ ನಿಯಮಗಳು ಜಾರಿ

ಹಿಂಡೆನ್‌ಬರ್ಗ್ ವರದಿಯಲ್ಲಿ 88 ಪ್ರಶ್ನೆ : 
ಹಿಂಡೆನ್‌ಬರ್ಗ್ ತನ್ನ ವರದಿಯಲ್ಲಿ ಅದಾನಿಗೆ 88 ಪ್ರಶ್ನೆಗಳನ್ನು ಕೇಳಿದ್ದು ಅದು ಅವನ ಗುಂಪಿನ ಆರ್ಥಿಕ ಸ್ಥಿತಿಯ ಮೇಲೆ ಅನುಮಾನವನ್ನು ಹುಟ್ಟು ಹಾಕುತ್ತಿದೆ. ಇನ್ನು ಅದಾನಿ ಹಿಂಡೆನ್‌ಬರ್ಗ್ ವರದಿಯನ್ನು "ಭಾರತದ ಮೇಲಿನ ಯೋಜಿತ ದಾಳಿ" ಎಂದು ಕರೆದಿದ್ದಾರೆ. ಈ ಹೂಡಿಕೆ ಸಂಸ್ಥೆಯು ತನ್ನ ಸ್ವಂತ ಆರ್ಥಿಕ ಲಾಭದಲ್ಲಿ ಮಾತ್ರ ಆಸಕ್ತಿ ಹೊಂದಿದೆ ಎಂದು ಹೇಳಿದ್ದಾರೆ.  ಆದರೆ ವರದಿಯ ಮೂಲಕ ಎತ್ತಿರುವ ಪ್ರಶ್ನೆಗಳಿಗೆ ಅದಾನಿ ಗ್ರೂಪ್ ಖಚಿತವಾದ ಉತ್ತರವನ್ನು ಇನ್ನು ಕೂಡಾ ನೀಡಿಲ್ಲ ಎನ್ನಲಾಗಿದೆ. 

ಹೂಡಿಕೆದಾರರ ಪ್ರತಿಕ್ರಿಯೆ ಏನು ? : 
ಜನವರಿ 24 ರಂದು ಹಿಂಡೆನ್‌ಬರ್ಗ್ ವರದಿಯನ್ನು ಪ್ರಕಟಿಸಿದಾಗಿನಿಂದ ಅದಾನಿಯ ಪ್ರಮುಖ ಸಂಸ್ಥೆಯಾದ ಅದಾನಿ ಎಂಟರ್‌ಪ್ರೈಸಸ್‌ನ ಷೇರುಗಳು ಸುಮಾರು 55% ರಷ್ಟು ಕುಸಿದಿವೆ. ಇದರ ಪರಿಣಾಮವಾಗಿ ಕಂಪನಿಯು ಈಗ ಹೊಸ ಹಣವನ್ನು ಸಂಗ್ರಹಿಸಲು ಹೆಣಗಾಡುತ್ತಿದೆ. ಅದಾನಿ ಎಂಟರ್‌ಪ್ರೈಸಸ್‌ನ 20,000 ಕೋಟಿ ಎಫ್‌ಪಿಒ ಕೂಡಾ ರದ್ದಾಗಿದೆ. ಅದಾನಿ ಸಮೂಹದ ಬಹುತೇಕ ಷೇರುಗಳು ಕುಸಿತ ಕಂಡಿವೆ. ಕೆಲವು ಷೇರುಗಳಲ್ಲಿ 5 ಪ್ರತಿಶತ, ಕೆಲವು 10 ಪ್ರತಿಶತ ಮತ್ತು ಕೆಲವು 20 ಪ್ರತಿಶತದಷ್ಟು ಕಡಿಮೆ ಸರ್ಕ್ಯೂಟ್ ಕೂಡ ಕಂಡುಬಂದಿದೆ.

ಇದನ್ನೂ ಓದಿ : DA Hike : ಕೇಂದ್ರ ನೌಕರರು ಮತ್ತು ಪಿಂಚಣಿದಾರರ ಸಿಹಿ ಸುದ್ದಿ : ನಿಮ್ಮ ಡಿಎ ಹೆಚ್ಚಾಗಲಿದೆ!

ಗೌತಮ್ ಅದಾನಿ ಹೇಳುವುದೇನು ? : 
ಈ ಎಲ್ಲಾ ಬೆಳವಣಿಗೆಗಳ ನಡುವೆ, ಗೌತಮ್ ಅದಾನಿ  ತಮ್ಮ  ವ್ಯವಹಾರವು ಗಟ್ಟಿಯಾದ ನೆಲೆಯಲ್ಲಿ ಉಳಿದಿದ್ದು, ಮಾರುಕಟ್ಟೆ ಸ್ಥಿರವಾಗಿದೆ ಎಂದು ಹೇಳಿದ್ದಾರೆ. ಬಲವಾದ ನಗದು ಹರಿವು ಮತ್ತು ಸುರಕ್ಷಿತ ಸಂಪತ್ತಿನೊಂದಿಗೆ ಅತ್ಯಂತ ಸದೃಢ ಬ್ಯಾಲೆನ್ಸ್ ಶೀಟ್ ಅನ್ನು ಹೊಂದಿದ್ದೇವೆ ಎಂದಿದ್ದಾರೆ. ಮಾತ್ರವಲ್ಲ ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ಸಾಲ್ ಮರುಪಾವತಿ ಮಾಡುತ್ತಿರುವ ಉತ್ತಮ ಟ್ರಾಕ್ ರೆಕಾರ್ಡ್ ಅನ್ನು ಸಂಸ್ಥೆ ಹೊಂದಿದೆ ಎನ್ನುತ್ತಾರೆ ಗೌತಮ್ ಅದಾನಿ. 

ಮಾರುಕಟ್ಟೆಯಲ್ಲಿನ ಇತ್ತೀಚಿನ  ಬೆಳವಣಿಗೆಯ ಬಗ್ಗೆ ಸೆಬಿ ನಿಲುವು : 
ತನ್ನ ಮೊದಲ ಹೇಳಿಕೆಯಲ್ಲಿ, ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ)  ಯಾವುದೇ ಮಾಹಿತಿ ಸೆಬಿಯ ಗಮನಕ್ಕೆ ಬಂದರೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ. ಮಾರುಕಟ್ಟೆಯ ನಿಯಂತ್ರಕ ಸೆಬಿಯು "ಮಾರುಕಟ್ಟೆಯ ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ" ಎಂದು ಹೇಳಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News