Viral News:ಏಕಕಾಲಕ್ಕೆ 10 ಮಕ್ಕಳನ್ನು ಹೆತ್ತ ಮಹಾತಾಯಿ, ಈ ದಾಖಲೆ ನಿರ್ಮಾಣಗೊಂಡಿದ್ದು ಎಲ್ಲಿ ಗೊತ್ತಾ?

Viral News: Woman Gave Birth To 10 Babies - ಅವಳಿ ಮಕ್ಕಳಿಗೆ ಜನ್ಮ ನೀಡುವ ಸಂಗತಿ ಇಂದಿನ ಕಾಲದಲ್ಲಿ ಸಾಮಾನ್ಯವಾಗಿದೆ. ಆದರೆ, ಹಲವು ಬಾರಿ ಏಕಕಾಲಕ್ಕೆ ಹಲವು ಮಕ್ಕಳನ್ನು ಜನ್ಮ ನೀಡಿದ ವರದಿಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡಿವೆ. 

Written by - Nitin Tabib | Last Updated : Jun 9, 2021, 01:13 PM IST
  • ಏಕಕಾಲಕ್ಕೆ 10 ಮಕ್ಕಳನ್ನು ಹೆತ್ತ ಮಹಾತಾಯಿ.
  • ಏಕಕಾಲಕ್ಕೆ 7 ಗಂಡು ಮತ್ತು ಮೂವರು ಹೆಣ್ಣುಮಕ್ಕಳನ್ನು ಹೆತ್ತ ಸೌಥ್ ಆಫ್ರಿಕಾ ಮಹಾತಾಯಿ
  • ಇದಕ್ಕೂ ಮೊದಲು ಮೊರಾಕ್ಕೋದಲ್ಲಿ ಮಹಿಳೆಯೊಬ್ಬರು 9 ಮಕ್ಕಳನ್ನು ಹೆತ್ತು ವಿಶ್ವದಾಖಲೆ ಬರೆದಿದ್ದಾರೆ.
Viral News:ಏಕಕಾಲಕ್ಕೆ 10 ಮಕ್ಕಳನ್ನು ಹೆತ್ತ ಮಹಾತಾಯಿ, ಈ ದಾಖಲೆ ನಿರ್ಮಾಣಗೊಂಡಿದ್ದು ಎಲ್ಲಿ ಗೊತ್ತಾ? title=
Women Gave Birth To 10 Babies (File Photo)

Viral News: Woman Gave Birth To 10 Babies - ಅವಳಿ ಮಕ್ಕಳಿಗೆ ಜನ್ಮ ನೀಡುವ ಸಂಗತಿ ಇಂದಿನ ಕಾಲದಲ್ಲಿ ಸಾಮಾನ್ಯವಾಗಿದೆ. ಆದರೆ, ಹಲವು ಬಾರಿ ಏಕಕಾಲಕ್ಕೆ ಹಲವು ಮಕ್ಕಳನ್ನು ಜನ್ಮ ನೀಡಿದ ವರದಿಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡಿವೆ. ಆದರೆ, ಈ ಬಾರಿ ಮಹಿಳೆಯೋರ್ವಳು ಎಲ್ಲ ದಾಖಲೆಗಳನ್ನು ಪುಡಿ-ಪುಡಿ ಮಾಡುತ್ತಾ, ಏಕಕಾಲಕ್ಕೆ 10 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸೌಥ್ ಆಫ್ರಿಕಾ (South Africa) ಮೂಲದ 37 ವರ್ಷದ ಈ ಮಹಾತಾಯಿ ತಾನು ಏಕಕಾಲಕ್ಕೆ 10 ಮಕ್ಕಳಿಗೆ ಜನ್ಮ ನೀಡಿರುವುದಾಗಿ ಹೇಳಿಕೊಂಡಿದ್ದಾಳೆ (Viral News). ಒಂದು ವೇಳೆ ಮಹಿಳೆ ಹೇಳಿರುವ ಈ ಸಂಗತಿಯನ್ನು ವೈದ್ಯರು ದೃಢಪಡಿಸಿದರೆ, ಇದೊಂದು ವಿಶ್ವ ದಾಖಲೆಯಾಗಲಿದೆ. ಏಕೆಂದರೆ ಇದಕ್ಕಿಂತ ಮೊದಲು ಮಾಲಿ (Mali) ದ್ವೀಪದ ಮಹಾತಾಯಿಯೊಬ್ಬಳು ಏಕಕಾಲಕ್ಕೆ 9 ಮಕ್ಕಳನ್ನು ಹೆತ್ತು ವಿಶ್ವದಾಖಲೆ ನಿರ್ಮಿಸಿದ್ದಾಳೆ. ಮೇ ತಿಂಗಳಿನಲ್ಲಿ ಮಹಿಳೆ ಈ ದಾಖಲೆ ನಿರ್ಮಿಸಿದ್ದಾಳೆ.

ಗೊಸಿಯಾಮೆ ಥಮಾರಾ ಸಿಥೋಲೆ (Gosiame Thamara Sithole) ಹೆಸರಿನ ಮಹಿಳೆಯೊಬ್ಬರು ತಾವು 7 ಗಂಡುಮಕ್ಕಳನ್ನು ಹಾಗೂ 3 ಹೆಣ್ಣುಮಕ್ಕಳನ್ನು ನೀಡಿರುವುದಾಗಿ ಹೇಳಿಕೊಂಡಿದ್ದಾರೆ. ಮಹಿಳೆಯ ಪತಿ ಟೆಬೇಗೋ ಸ್ತೋತೆಸ್ತಿ ಹೇಳಿರುವ ಪ್ರಕಾರ ಜೂನ್ 7ರಂದು ಪ್ರಿಟೋರಿಯಾದ ಆಸ್ಪತ್ರೆಯೊಂದರಲ್ಲಿ ಸಿಜೇರಿಯನ್ ಸರ್ಜರಿ ನಡೆಸುವ ಮೂಲಕ ಮಕ್ಕಳಿಗೆ ಜನ್ಮ ನೀಡಲಾಗಿದೆ. ಆದರೆ, ಪ್ರೆಗ್ನೆನ್ಸಿಯ ಮೊದಲ ಅವಧಿಯಲ್ಲಿ ವೈದ್ಯರು ಸಿಥೋಲಿ 6 ಮಕ್ಕಳಿದ್ದರು ಎಂದಿದ್ದರು. ಬಳಿಕ ಸ್ಯಾನಿಂಗ್ ನಲ್ಲಿ 8 ಮಕ್ಕಳಿರುವುದು ಗಮನಕ್ಕೆ ಬಂದಿತ್ತು. ಆದರೆ, ಮಹಿಳೆಯ ಡಿಲೇವರಿ ಆದಾಗ 10 ಮಕ್ಕಳಿರುವುದು ಗಮನಕ್ಕೆ ಬಂದಿದೆ.

ಇದನ್ನೂ ಓದಿ-Viral Video: PPE Kit ಧರಿಸಿ Corona Positive ಶವವನ್ನು ನದಿಗೆ ಎಸೆದ್ರು!

ರಿಟೇಲ್ ಸ್ಟೋರ್ ವೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುವ ಸಿಥೋಲಿಗೆ ಈಗಾಗಲೇ ಆರು ವರ್ಷದ ಇಬ್ಬರು ಅವಳಿ ಮಕ್ಕಳಿದ್ದಾರೆ. ಸದ್ಯ ಎಲ್ಲ ಮಕ್ಕಳ ಆರೋಗ್ಯ ಸ್ಥಿತಿ ಸರಿಯಾಗಿದ್ದು ಅವರನ್ನು ಇನ್ನೂ ಕೆಲ ಕಾಲ ಇನ್ಕ್ಯುಬೆಟರ್ ನಲ್ಲಿಡಲಾಗುತ್ತಿದೆ ಎನ್ನಲಾಗಿದೆ. ಈ ಮಕ್ಕಳ ಜನನದಿಂದ ಸಿಥೋಲಿ ಹಾಗೂ ಆಕೆಯ ಪತಿ ತುಂಬಾ ಖುಷಿಯಾಗಿದ್ದಾರೆ.

ಇದನ್ನೂ ಓದಿ-Viral Video: ಇದ್ದಕ್ಕಿದ್ದಂತೆ ಕುದುರೆಯಾದ ತಾಯಿ, ಇಂಟರ್ನೆಟ್ ನಲ್ಲಿ ಭಾರಿ ವೈರಲ್ ಆದ 10 ಸೆಕೆಂಡ್ ಗಳ ವಿಡಿಯೋ

ಸಿಥೋಲಿ ಜನ್ಮ ನೀಡಿರುವ ಮಕ್ಕಳಲ್ಲಿ 7 ಗಂಡು ಮಕ್ಕಳು ಹಾಗೂ ಮೂವರು ಹೆಣ್ಣುಮಕ್ಕಳಿದ್ದಾರೆ ಎಂದು ಸ್ತೋತೆಸ್ತಿ (Teboho Tsotetsi) ಹೇಳಿದ್ದಾರೆ. ಏಳು ತಿಂಗಳು ಏಳು ದಿನಗಳ ಕಾಲ ತಮ್ಮ ಪತ್ನಿ ಗರ್ಭವತಿಯಾಗಿದ್ದಳು ಎಂದು ಅವರು ಮಾಹಿತಿ ನೀಡಿದ್ದಾರೆ.  ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, 'ನಾನು ತುಂಬಾ ಖುಷಿಯಾಗಿದ್ದೇನೆ, ತುಂಬಾ ಭಾವುಕನಾಗಿದ್ದೇನೆ, ಹೆಚ್ಚಿಗೆ ಮಾತನಾಡಲು ನನ್ನಿಂದ ಸಾದ್ಯವಾಗುತ್ತಿಲ್ಲ' ಎಂದು ಹೇಳಿದ್ದಾರೆ. ಇದಕ್ಕೂ ಮೊದಲು ಮಾಲೀ ಮೂಲದ 25 ವರ್ಷದ ಹಲೀಮಾ ಸಿಜೆ (Malian Halima Cisse) ಹೆಸರಿನ ಮಹಿಳೆ ಮೊರಾಕ್ಕೋದಲ್ಲಿ (Morocco) ಏಕಕಾಲಕ್ಕೆ 9 ಮಕ್ಕಳನ್ನು ಜನ್ಮ ನೀಡಿ (Guinness World Record) ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿಸಿದ್ದರು.

ಇದನ್ನೂ ಓದಿ- ಮುಂಬೈ 'Gateway of India'ಗೆ ಅಪ್ಪಳಿಸಿದ ತೌಕ್ತೆ ಚಂಡಮಾರುತ! ಇಲ್ಲಿದೆ ವಿಡಿಯೋ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News