Food influencer: 39ನೇ ವಯಸ್ಸಿನಲ್ಲಿ ಸಾವನ್ನಪ್ಪಿದ ಸಸ್ಯಾಹಾರಿ ಪ್ರಭಾವಿ ಝನ್ನಾ ಸ್ಯಾಮ್ಸೋನೋವಾ! ಸಾವಿಗೆ ಕಾರಣವೇನು?

Vegan influencer Zhanna Samsonova dies: ಸಸ್ಯಾಹಾರಿ ಆಹಾರದಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ವಿಟಮಿನ್ ಬಿ 12 ತುಂಬಾ ಕಡಿಮೆ ಇರುತ್ತದೆ. ಇದು ರಕ್ತಹೀನತೆ, ನರಮಂಡಲದ ಹಾನಿ, ಬಂಜೆತನ ಮತ್ತು ಹೃದ್ರೋಗಕ್ಕೆ ಕಾರಣವಾಗಬಹುದು.

Written by - Puttaraj K Alur | Last Updated : Aug 2, 2023, 02:29 PM IST
  • ಕೇವಲ 39ನೇ ವಯಸ್ಸಿಗೆ ಸಾವನ್ನಪ್ಪಿದ ರಷ್ಯಾದ ಝನ್ನಾ ಸ್ಯಾಮ್ಸೋನೋವಾ!
  • ಸೋಷಿಯಲ್ ಮೀಡಿಯಾದಲ್ಲಿ ಸಸ್ಯಹಾರಿ ಪ್ರಭಾವಿ ಎಂದು ಗುರುತಿಸಿಕೊಂಡಿದ್ದ ಝನ್ನಾ
  • ತೀವ್ರ ಪ್ರೋಟೀನ್ ಕೊರತೆ ಮತ್ತು ಅಪೌಷ್ಟಿಕತೆಗೆ ಕಾರಣದಿಂದ ಸಾವನ್ನಪ್ಪಿರುವ ಶಂಕೆ
Food influencer: 39ನೇ ವಯಸ್ಸಿನಲ್ಲಿ ಸಾವನ್ನಪ್ಪಿದ ಸಸ್ಯಾಹಾರಿ ಪ್ರಭಾವಿ ಝನ್ನಾ ಸ್ಯಾಮ್ಸೋನೋವಾ! ಸಾವಿಗೆ ಕಾರಣವೇನು? title=
ರಷ್ಯಾದ ಝನ್ನಾ ಸ್ಯಾಮ್ಸೋನೋವಾ!

ನವದೆಹಲಿ: ಸೋಷಿಯಲ್ ಮೀಡಿಯಾದಲ್ಲಿ ಆರೋಗ್ಯ ಸಲಹೆ ನೀಡುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ರೆ ನಿಮ್ಮ ಆರೋಗ್ಯಕ್ಕೆ ತೊಂದರೆಯಾಗುವುದು ಖಚಿತ. ಇದಕ್ಕೆ ನಿದರ್ಶನವೆಂಬಂತೆ ರಷ್ಯಾದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ ತಾನು ಸಸ್ಯಹಾರಿ ಪ್ರಭಾವಿ(Vegan influencer) ಎಂದು ಗುರುತಿಸಿಕೊಂಡಿದ್ದ ಝನ್ನಾ ಸ್ಯಾಮ್ಸೋನೋವಾ ಸಾವನ್ನಪ್ಪಿದ್ದಾರೆ.

ಕೇವಲ 39 ವಯಸ್ಸಿಗೆ ಸ್ಯಾಮ್ಸೋನೋವಾ ಸಾವನ್ನಪ್ಪಿದ್ದು, ಆಹಾರದ ವಿಷಯದಲ್ಲಿ ಅತಿಯಾದ ಕಾಳಜಿ ವಹಿಸುವ ಮತ್ತು ಡಯೆಟ್ ಮಾಡುವ ಜನರಿಗೆ ಶಾಕ್ ಉಂಟಾಗಿದೆ. ಸಸ್ಯಾಹಾರಿ ಆಹಾರ ಸೇವನೆಯಿಂದ ತೀವ್ರ ಪ್ರೋಟೀನ್ ಕೊರತೆ ಮತ್ತು ಅಪೌಷ್ಟಿಕತೆಗೆ ಕಾರಣವಾಗಬಹುದು. ಹೀಗಾಗಿಯೇ ಕೇವಲ ಸಸ್ಯಾಹಾರ ಸೇವನೆ ಮಾಡುತ್ತಿದ್ದ ಸ್ಯಾಮ್ಸೋನೋವಾ ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ. ಥೈಲ್ಯಾಂಡ್‌ನ ಫುಕೆಟ್‌ನಲ್ಲಿ ನೆಲೆಸಿದ್ದ ಸ್ಯಾಮ್ಸೋನೋವಾ, ಕಳೆದ 4 ವರ್ಷಗಳಿಂದ ಸಂಪೂರ್ಣವಾಗಿ ಸಸ್ಯಾಹಾರಿ ಆಹಾರವನ್ನೇ ಸೇವಿಸುತ್ತಿದ್ದರಂತೆ. ಅವರು ಹಣ್ಣು, ಸೂರ್ಯಕಾಂತಿ ಬೀಜ, ಹಣ್ಣಿನ ಸ್ಮೂಥಿಗ ಮತ್ತು ಜ್ಯೂಸ್‌ ಸೇವಿಸುತ್ತಿದ್ದಳಂತೆ. ವರದಿಯ ಪ್ರಕಾರ, ಸಾಮಾಜಿಕ ಮಾಧ್ಯಮದಲ್ಲಿ ನಿರಂತರವಾಗಿ ಕಚ್ಚಾ ಆಹಾರಗಳನ್ನು ಪ್ರಚಾರ ಮಾಡುತ್ತಿದ್ದ ಆಕೆ ‘ಹಸಿವಿನಿಂದ ಸಾವನ್ನಪ್ಪಿದ್ದಾರೆ’ ಎಂದು ವರದಿಯಾಗಿದೆ.

ಇದನ್ನೂ ಓದಿ: ಪಾಕ್ ನಲ್ಲಿ ಬಾಂಬ್ ಸ್ಪೋಟಕ್ಕೆ ಕನಿಷ್ಠ 42 ಸಾವು, 111 ಜನರಿಗೆ ಗಾಯ 

Zhanna D’Art ಹೆಸರಿನ ಇನ್ಸ್ಟಾಗ್ರಾಮ್ ಖಾತೆ ಹೊಂದಿರುವ ಸ್ಯಾಮ್ಸೋನೋವಾ ತಾನು ಸೇವಿಸುವ ಸಸ್ಯಹಾರಿ ಆಹಾರಗಳನ್ನು ಹಂಚಿಕೊಳ್ಳುತ್ತಿದ್ದರು. ಈ ಪೋಸ್ಟ್‌ಗಳನ್ನು ಗಮನಿಸಿದ್ರೆ ಆಕೆಯ ಆರೋಗ್ಯ ಕ್ರಮೇಣವಾಗಿ ಹೇಗೆ ಕ್ಷೀಣಿಸುತ್ತಿದೆ ಅನ್ನೋದು ಗೊತ್ತಾಗುತ್ತದೆ. ಆಗ್ನೇಯ ಏಷ್ಯಾದ ಪ್ರವಾಸದ ವೇಳೆ ಆಕೆ ಸಾವನ್ನಪ್ಪಿದ್ದಾಳೆ. 2022ರ ಸೆಪ್ಟೆಂಬರ್‌ನಲ್ಲಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತನ್ನ ಡಯಟ್ ದಿನಚರಿಯ ಬಗ್ಗೆ ಮಾಹಿತಿ ನೀಡಿದ್ದ ಸ್ಯಾಮ್ಸೋನೋವಾ, ‘ಕಳೆದ 5 ವರ್ಷಗಳಿಂದ ನಾನು 80/10/10 ಡಯಟ್ ಮಾದರಿಯನ್ನು ಅನುಸರಿಸುತ್ತಿದ್ದು, ಸಪೂರ್ಣ ಹಣ್ಣು ಆಧಾರಿತ ಕಡಿಮೆ-ಕೊಬ್ಬಿನ ಆಹಾರ ತೆಗೆದುಕೊಳ್ಳುತ್ತಿರುವುದಾಗಿ’ ತಿಳಿಸಿದ್ದಳು.  

ಆಕೆಯ ಆಪ್ತ ಸ್ನೇಹಿತೆಯೊಬ್ಬಳು ಹೇಳಿರುವ ಪ್ರಕಾರ, ‘ಸ್ಯಾಮ್ಸೋನೋವಾಳ ಉಬ್ಬಿದ ಕಾಲುಗಳಲ್ಲಿ ದುಗ್ಧರಸವನ್ನು ಹೊರಬರುತ್ತಿತ್ತು. ಚಿಕಿತ್ಸೆ ಕೊಡಿಸಲು ಆಕೆಯನ್ನು ಮನೆಗೆ ಕಳುಹಿಸಲಾಗಿತ್ತು. ಆದರೆ ಆಕೆ ಮತ್ತೆ ಅಲ್ಲಿಂದ ಓಡಿಹೋಗಿದ್ದಳು. ನಾನು ಅವಳನ್ನು ಫುಕೆಟ್‌ನಲ್ಲಿ ನೋಡಿದಾಗ ಗಾಬರಿಗೊಂಡೆ. ಸ್ಯಾಮ್ಸೊನೊವಾ ‘ಕಾಲರಾ ತರಹದ ಸೋಂಕಿಗೆ" ಬಲಿಯಾದಳು ಎಂದು ಅವರ ತಾಯಿ ನನಗೆ ಹೇಳಿದರು’ ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral News: ರೀಲ್ಸ್ ಮಾಡಲು ಹೋಗಿ 68ನೇ ಮಹಡಿಯಿಂದ ಬಿದ್ದು ‘ಡೇರ್ ಡೆವಿಲ್’ ಸಾವು!

ಸಸ್ಯಾಹಾರಿ ಆಹಾರದಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ವಿಟಮಿನ್ ಬಿ 12 ತುಂಬಾ ಕಡಿಮೆ ಇರುತ್ತದೆ. ಇದು ರಕ್ತಹೀನತೆ, ನರಮಂಡಲದ ಹಾನಿ, ಬಂಜೆತನ ಮತ್ತು ಹೃದ್ರೋಗಕ್ಕೆ ಕಾರಣವಾಗಬಹುದು. ಆಹಾರದಿಂದ ಕೊಬ್ಬಿನ ಅನುಪಸ್ಥಿತಿಯಲ್ಲಿ, ಕೊಬ್ಬು ಕರಗುವ ವಿಟಮಿನ್‌ಗಳು ದೇಹದಿಂದ ಹೀರಲ್ಪಡುವುದಿಲ್ಲವೆಂದು ದೆಹಲಿಯ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನ್ಯೂಟ್ರಿಷನ್ ಮತ್ತು ಡಯೆಟಿಕ್ಸ್ ಪ್ರಾದೇಶಿಕ ಮುಖ್ಯಸ್ಥೆ ರಿತಿಕಾ ಸಮದ್ದಾರ್ ಹೇಳಿದ್ದಾರೆ. ಸ್ಯಾಮ್ಸೋನೋವಾಳ ವಿಷಯದಲ್ಲಿಯೂ ಇದೇ ಆಗಿರಬಹುದು, ಕೇವಲ ಸಸ್ಯಾಹಾರವೊಂದನ್ನೆ ಅವಲಂಬಿಸಿದ್ದ ಆಕೆ ವಿವಿಧ ರೀತಿಯ ಪೋಷಕಾಂಶಗಳ ಕೊರತೆಯಿಂಸ ಸಾವನ್ನಪ್ಪಿರಬಹುದು ಎಂದು ಹೇಳಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News