UAE: ಈ ದೇಶದಲ್ಲಿಲ್ಲ ಓಮಿಕ್ರಾನ್‌ನ ಟೆನ್ಷನ್!

UAE: ಪ್ರಪಂಚದ ಬಹುತೇಕ ದೇಶಗಳು ಓಮಿಕ್ರಾನ್ ಬಗ್ಗೆ ಆತಂಕದಲ್ಲಿರುವಾಗ, ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಈ ಬಗ್ಗೆ ಚಿಂತೆಯೇ ಇಲ್ಲ. ಈ ಕೊಲ್ಲಿ ರಾಷ್ಟ್ರವು ಕರೋನಾ ಸಾಂಕ್ರಾಮಿಕವನ್ನು ಎದುರಿಸಲು ಉತ್ತಮ ವ್ಯವಸ್ಥೆಗಳನ್ನು ಮಾಡಿದೆ. ಹಾಗಾಗಿಯೇ, ಈ ಕೋವಿಡ್ ಆತಂಕದ ನಡುವೆಯೂ ಈ ದೇಶ ಪ್ರಪಂಚದಾದ್ಯಂತದ ಪ್ರವಾಸಿಗರಿಗೆ ತನ್ನ ಬಾಗಿಲು ತೆರೆಯಲು ಕಾರಣವಾಗಿದೆ.

Written by - Yashaswini V | Last Updated : Jan 11, 2022, 09:09 AM IST
  • ಯುಎಇ ಕರೋನಾವನ್ನು ಉತ್ತಮವಾಗಿ ನಿಭಾಯಿಸಿದೆ
  • ವ್ಯಾಕ್ಸಿನೇಷನ್ ವೇಗವನ್ನು ನಿರಂತರವಾಗಿ ಹೆಚ್ಚಿಸಿದೆ
  • ಇದಲ್ಲದೆ ಬೃಹತ್ ಪರೀಕ್ಷಾ ಶಿಬಿರಗಳನ್ನು ನಡೆಸಲಾಗುತ್ತಿದೆ
UAE: ಈ ದೇಶದಲ್ಲಿಲ್ಲ ಓಮಿಕ್ರಾನ್‌ನ ಟೆನ್ಷನ್! title=
Omicron cases in UAE

ಅಬುಧಾಬಿ: ಕೊರೊನಾವೈರಸ್‌ನ (Coronavirus) ಹೊಸ ರೂಪಾಂತರವಾದ ಓಮಿಕ್ರಾನ್‌ನಿಂದಾಗಿ (Omicron) ವಿಶ್ವದ ಬಹುತೇಕ ದೇಶಗಳು ಆತಂಕದಲ್ಲಿವೆ. ಕೆಲವು ದೇಶಗಳಲ್ಲಿ ಕಟ್ಟುನಿಟ್ಟಾದ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ ಮತ್ತು ಕೆಲವು ಮತ್ತೆ ದೇಶಗಳು ಲಾಕ್‌ಡೌನ್‌ನಂತಹ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಅದೇ ಸಮಯದಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಒಮಿಕ್ರಾನ್‌ನಿಂದ ಹೆಚ್ಚು ಪ್ರಭಾವಕ್ಕೊಳಗಾಗದ ಏಕೈಕ ದೇಶವಾಗಿದೆ. ಹಾಗಾಗಿಯೇ, ಈ ಗಲ್ಫ್ ದೇಶವು ಪ್ರಪಂಚದಾದ್ಯಂತದ ಪ್ರವಾಸಿಗರಿಗೆ ತನ್ನ ಬಾಗಿಲು ತೆರೆದಿದೆ.

ಬಿಬಿಸಿ ವರದಿಯ ಪ್ರಕಾರ, ವ್ಯಾಕ್ಸಿನೇಷನ್‌ನ (Vaccination) ಉತ್ತಮ ವೇಗ, ವ್ಯಾಪಕ ಮತ್ತು ಕೈಗೆಟುಕುವ ಪರೀಕ್ಷಾ ಸೌಲಭ್ಯಗಳಿಂದಾಗಿ ಯುಎಇ ವಿಶ್ವದ ಇತರ ದೇಶಗಳಿಗಿಂತ ಕರೋನಾ ಸಾಂಕ್ರಾಮಿಕವನ್ನು ಉತ್ತಮವಾಗಿ ನಿಭಾಯಿಸುತ್ತಿದೆ.  ಯುಎಇ (UAE) ಪ್ರಸ್ತುತ ಬ್ಲೂಮ್‌ಬರ್ಗ್‌ನ ಕೋವಿಡ್ ಸ್ಥಿತಿಸ್ಥಾಪಕ ಶ್ರೇಯಾಂಕದಲ್ಲಿ ಅಗ್ರ ರಾಷ್ಟ್ರಗಳಲ್ಲಿ ಒಂದಾಗಿದೆ. ಈ ಶ್ರೇಯಾಂಕದಲ್ಲಿ, 53 ದೇಶಗಳ ಆರೋಗ್ಯ ಸೌಲಭ್ಯದ ಮಾನದಂಡಗಳು, ಕರೋನಾ ಸೋಂಕಿನಿಂದಾಗುವ ಸಾವುಗಳು ಮತ್ತು ಪ್ರಯಾಣದ ಪುನರಾರಂಭದಂತಹ 12 ಸೂಚಕಗಳನ್ನು ಆಧರಿಸಿದೆ. 

ಇದನ್ನೂ ಓದಿ- Omicron ಪತ್ತೆಗೆ ಭಾರತ ನಿರ್ಮಿತ RT-PCR ಕಿಟ್ ಗೆ DCGI ಅನುಮೋದನೆ

'ಎರಡು ವರ್ಷದಲ್ಲಿ ಸಾಕಷ್ಟು ಕೆಲಸ ಮಾಡಲಾಗಿದೆ':
ಇದೆಲ್ಲದರಿಂದ ಯುರೋಪ್‌ನಲ್ಲಿ ಓಮಿಕ್ರಾನ್ (Omicron) ಹರಡಿದ್ದರೂ, ಸೋಂಕನ್ನು ನಿಯಂತ್ರಿಸುವಲ್ಲಿ ಮತ್ತು ದೇಶವನ್ನು ಪ್ರವಾಸಿಗರಿಗೆ ಮುಕ್ತವಾಗಿಡುವಲ್ಲಿ ಯುಎಇ ಯಶಸ್ವಿಯಾಗಿದೆ. ಯುಎಇಯ ಅತ್ಯಂತ ಜನನಿಬಿಡ ನಗರವಾದ ದುಬೈ, ಜಾಗತಿಕ ಪ್ರವಾಸಿ ತಾಣದಿಂದ ತನ್ನ ಜನರನ್ನು ರಕ್ಷಿಸುವ ನಗರವಾಗಿ ರೂಪಾಂತರಗೊಂಡಿದೆ. ಮಿರ್ಜಾಮ್ ಚಾಕೊಲೇಟ್ ಕಂಪನಿಯ ಮುಖ್ಯ ಅಧಿಕಾರಿ ಕ್ಯಾಥಿ ಜಾನ್ಸ್ಟನ್ 30 ವರ್ಷಗಳಿಂದ ದುಬೈನಲ್ಲಿ ವಾಸಿಸುತ್ತಿದ್ದಾರೆ. ಬಿಬಿಸಿಯೊಂದಿಗೆ ಮಾತನಾಡಿದ ಅವರು, 'ಕರೋನಾವನ್ನು ಎದುರಿಸಲು ಇಲ್ಲಿ ಸಾಕಷ್ಟು ಕೆಲಸ ಮಾಡಲಾಗಿದೆ. ಎರಡು ವರ್ಷಗಳ ಹಿಂದಿನದಕ್ಕೆ ಹೋಲಿಸಿದರೆ, ನಾನು ಬೇರೆ ಗ್ರಹಕ್ಕೆ ಬಂದಿದ್ದೇನೆ ಎಂದೆನಿಸುತ್ತಿದೆ. ನಾನು ಅದನ್ನು ಪ್ರೀತಿಸುತ್ತೇನೆ. ಜನರು ಸ್ಥಳೀಯ ಆಲೋಚನೆಗಳು ಮತ್ತು ಯೋಜನೆಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ತಿಳಿಸಿದರು.

ಎಕ್ಸ್‌ಪೋಗೆ ಆಗಮಿಸುತ್ತಿರುವ ಪ್ರವಾಸಿಗರು:
ದುಬೈ ಆರು ತಿಂಗಳ ಅವಧಿಯ 'ಎಕ್ಸ್‌ಪೋ 2020' ಅನ್ನು ಸಹ ಆಯೋಜಿಸುತ್ತಿದೆ, ಇದು ಮಾರ್ಚ್ 2022 ರವರೆಗೆ ನಡೆಯಲಿದೆ. ಈ ಎಕ್ಸ್‌ಪೋದಲ್ಲಿ ಪ್ರಪಂಚದಾದ್ಯಂತದ ಪ್ರಮುಖ ಕಂಪನಿಗಳ ಸ್ಟಾಲ್‌ಗಳನ್ನು ಸ್ಥಾಪಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದು, ಕೊರೊನಾವನ್ನು ಎದುರಿಸಲು ಸರ್ಕಾರ ಮಾಡಿದ ತಂತ್ರವನ್ನು ಕಟ್ಟುನಿಟ್ಟಾಗಿ ಅನುಸರಿಸಿರುವುದೇ ಇದಕ್ಕೆ ಕಾರಣ. ವ್ಯಾಕ್ಸಿನೇಷನ್ (Vaccination) ಹೆಚ್ಚಿನ ವೇಗದಿಂದಾಗಿ, ಸೋಂಕಿನ ಅಪಾಯವು ಸ್ವಯಂಚಾಲಿತವಾಗಿ ಕಡಿಮೆಯಾಗುತ್ತದೆ. ಸಾಂಕ್ರಾಮಿಕ ರೋಗದ ಹೊರತಾಗಿಯೂ, ರೆಸ್ಟೋರೆಂಟ್‌ಗಳು ಇಲ್ಲಿ ತೆರೆಯುತ್ತಿವೆ. ಕಳೆದ ಎರಡು ವರ್ಷಗಳಲ್ಲಿ ಅನೇಕ ರೆಸ್ಟೋರೆಂಟ್‌ಗಳು ತೆರೆದಿವೆ ಎಂದು ಕ್ಯಾಥಿ ಜಾನ್ಸ್ಟನ್ ಹೇಳಿದ್ದಾರೆ. ಸಾಂಕ್ರಾಮಿಕ ರೋಗವು ಅನಿರೀಕ್ಷಿತವಾಗಿ ಸ್ಥಳೀಯ ಪದಾರ್ಥಗಳು ಮತ್ತು ನುರಿತ ಅಡುಗೆಯವರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವನ್ನು ನೀಡಿದೆ ಎಂದವರು ಮಾಹಿತಿ ನೀಡಿದರು.

ಇದನ್ನೂ ಓದಿ- ದೆಹಲಿಯಲ್ಲಿ ಈಗ ಮೂರನೇ ಕೊರೊನಾ ಅಲೆ ಜಾರಿಯಲ್ಲಿದೆ- ಸತ್ಯೆಂದರ್ ಜೈನ್

ಯುಎಇಗೆ ಹೋಗುವ ಮೊದಲು ಇದನ್ನು ಮಾಡಿ:
ಓಮಿಕ್ರಾನ್ ರೂಪಾಂತರದಿಂದಾಗಿ ಪ್ರಯಾಣದ ನಿರ್ಬಂಧಗಳು ವೇಗವಾಗಿ ಬದಲಾಗುತ್ತಿವೆ, ಆದ್ದರಿಂದ ಇತ್ತೀಚಿನ ಪ್ರಕಟಣೆಗಳು ಮತ್ತು ನಿಬಂಧನೆಗಳಿಗಾಗಿ 'ಯುಎಇ ಟ್ರಾವೆಲ್ ಟು ದುಬೈ' ವೆಬ್‌ಸೈಟ್‌ಗೆ ಭೇಟಿ ನೀಡಲು ಮರೆಯದಿರಿ. ಪ್ರಸ್ತುತ, ವಿಶ್ವ ಆರೋಗ್ಯ ಸಂಸ್ಥೆಯಿಂದ ಗುರುತಿಸಲ್ಪಟ್ಟ ಕರೋನಾ ಲಸಿಕೆ  (Corona Vaccine) ತೆಗೆದುಕೊಂಡ ಪ್ರವಾಸಿಗರಿಗೆ ಮಾತ್ರ ದುಬೈ ಮುಕ್ತವಾಗಿದೆ. ಆದಾಗ್ಯೂ, ಪ್ರವಾಸಿಗರು ಕರೋನಾ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಕೋವಿಡ್ ಪರೀಕ್ಷೆಯ ಫಲಿತಾಂಶಗಳು ಮತ್ತು ವ್ಯಾಕ್ಸಿನೇಷನ್ ಸ್ಥಿತಿಯನ್ನು ಪ್ರದರ್ಶಿಸಲು ಬಣ್ಣ ಆಧಾರಿತ ಕೋಡ್ ವ್ಯವಸ್ಥೆಯನ್ನು ಬಳಸುವ ಯುಎಇಯ ಅಧಿಕೃತ ಅಪ್ಲಿಕೇಶನ್ 'ಅಲ್ ಹಸನ್' ಅನ್ನು ಪ್ರಯಾಣಿಕರು ಡೌನ್‌ಲೋಡ್ ಮಾಡಬೇಕು ಎಂದು ಸರ್ಕಾರ ಸಲಹೆ ನೀಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News