'ಪುಟಿನ್ ಬುದ್ಧಿವಂತರಾಗಿದ್ದಾರೆ ಎನ್ನುವುದು ಸಮಸ್ಯೆಯಲ್ಲ, ನಮ್ಮ ನಾಯಕರು ತುಂಬಾ ಮೂಕರಾಗಿದ್ದಾರೆ'

ಉಕ್ರೇನ್ ಮೇಲೆ ರಷ್ಯಾ ದೇಶವು ಯುದ್ಧ ಸಾರಿರುವ ಬೆನ್ನಲ್ಲೇ ಈಗ ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಲಿ ಅಧ್ಯಕ್ಷ ಜೋ ಬಿಡೆನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Written by - Zee Kannada News Desk | Last Updated : Feb 27, 2022, 05:29 PM IST
  • ಉಕ್ರೇನ್ ಮೇಲೆ ರಷ್ಯಾ ದೇಶವು ಯುದ್ಧ ಸಾರಿರುವ ಬೆನ್ನಲ್ಲೇ ಈಗ ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಲಿ ಅಧ್ಯಕ್ಷ ಜೋ ಬಿಡೆನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
 'ಪುಟಿನ್ ಬುದ್ಧಿವಂತರಾಗಿದ್ದಾರೆ ಎನ್ನುವುದು ಸಮಸ್ಯೆಯಲ್ಲ, ನಮ್ಮ ನಾಯಕರು ತುಂಬಾ ಮೂಕರಾಗಿದ್ದಾರೆ' title=

ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ದೇಶವು ಯುದ್ಧ ಸಾರಿರುವ ಬೆನ್ನಲ್ಲೇ ಈಗ ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಲಿ ಅಧ್ಯಕ್ಷ ಜೋ ಬಿಡೆನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಫ್ಲೋರಿಡಾದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಅವರು ತೀವ್ರ ಎಡಪಂಥೀಯವಾದಿಗಳು ತಮ್ಮ ವಿರುದ್ಧ ಪಿತೂರಿ ನಡೆಸಿದ್ದಾರೆ ಎಂದು ಅವರು ದೂರಿದ್ದಾರೆ.ರಷ್ಯಾ (Russia Ukraine War) ದೇಶವು ದಾಳಿ ನಡೆಸಲು ಪ್ರಮುಖವಾಗಿ ಬಿಡೆನ್ ಅವರ ನಾಯಕತ್ವವು ಅಸಮರ್ಥವಾಗಿರುವುದೇ ಇದಕ್ಕೆ ಕಾರಣ ಎಂದು ಹೇಳಿದರು.

ಇದನ್ನೂ ಓದಿ: ಬೆಲಾರಸ್ನಲ್ಲಿ ರಷ್ಯಾದ ಶಾಂತಿ ಮಾತುಕತೆಯ ಪ್ರಸ್ತಾಪ ತಿರಸ್ಕರಿಸಿದ ಉಕ್ರೇನ್..!

ಅಷ್ಟೇ ಅಲ್ಲದೆ ಅವರು ಪುಟಿನ್ ಅವರ ಬುದ್ದಿಮತ್ತೆಯನ್ನು ಕೊಂಡಾಡಿದ್ದಾರೆ.ಇದೇ ವೇಳೆ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ಮತದಾನ ನಡೆದಿದೆ ಎಂದು ಆರೋಪಿಸಿದ ಟ್ರಂಪ್ ಒಂದು ವೇಳೆ ಹಾಗೆ ಆಗದೆ ಹೋಗಿದ್ದಲ್ಲಿ ಇಂತಹ ದುರಂತ ಇಂದು ಸಂಭವಿಸುತ್ತಿರಲಿಲ್ಲ ಎಂದು ಅವರು ಹೇಳಿದರು.'ಸಮಸ್ಯೆ ಇರುವುದು ಪುಟಿನ್ ಬುದ್ದಿವಂತರಾಗಿರುವುದರಲ್ಲಿ ಅಲ್ಲ, ಬದಲಾಗಿ ನಾಯಕರು ಮೂಕರಾಗಿರುವುದು ಇದಕ್ಕೆ ಕಾರಣ' ಎಂದು ಅವರು ಹೇಳಿದರು.

ಇದನ್ನೂ ಓದಿ: Russia Ukraine Crisis: ಯುರೋಪಿಯನ್ ಒಕ್ಕೂಟದಿಂದ ದೊಡ್ಡ ಕ್ರಮ, ಪುಟಿನ್‌ಗೆ ದೊಡ್ಡ ಹೊಡೆತ!

ರಷ್ಯಾ ದೇಶವು ಉಕ್ರೇನ್ ಮೇಲೆ ದಾಳಿ ಮಾಡಿದ ಬೆನ್ನಲ್ಲೇ ಅಮೇರಿಕಾ ದೇಶವು ಭದ್ರತಾ ಮಂಡಳಿಯಲ್ಲಿ ರಷ್ಯಾ ವಿರುದ್ಧ ನಿರ್ಣಯ ಮಂಡನೆಯನ್ನು ಮಾಡಿತ್ತು, ಆದರೆ ಅಮೆರಿಕಾಕ್ಕೆ  ಚೀನಾ ಹಾಗೂ ಭಾರತದಂತಹ ದೇಶಗಳ ಬೆಂಬಲ ದೊರೆಯಲಿಲ್ಲ, ಬದಲಾಗಿ ಈ ದೇಶಗಳು ಮತದಾನದಿಂದ ದೂರ ಉಳಿದವು.  ಭಾರತ ದೇಶವು ಇಂತಹ ವಿವಾದಗಳನ್ನು ಮಾತುಕತೆಗಳ ಮೂಲಕ ಪರಿಹರಿಸಿಕೊಳ್ಳಬೇಕು ಹೇಳಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News