Pakistan: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ವಿರುದ್ಧ ದೊಡ್ಡ ಕ್ರಮ ಜರುಗಿಸಲು ಸಿದ್ಧತೆ ನಡೆಸಿದ ಶಹಬಾಜ್ ಸರ್ಕಾರ

Pakistan Audio Leak Case: ಆಡಿಯೋ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.ಇಮ್ರಾನ್ ಖಾನ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಶಹಬಾಜ್ ಸಂಪುಟ ಒಪ್ಪಿಗೆ ನೀಡಿದೆ.  

Written by - Nitin Tabib | Last Updated : Oct 2, 2022, 07:51 PM IST
  • ವರದಿಗಳ ಪ್ರಕಾರ, ಇತ್ತೀಚೆಗೆ ಸೋರಿಕೆಯಾದ ಆಡಿಯೊದಲ್ಲಿ, ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ನ ಮೂವರು ನಾಯಕರು
  • ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್ ಅವರೊಂದಿಗೆ ಅಮೆರಿಕನ್ ಸೈಫರ್ ಬಗ್ಗೆ ಮಾತನಾಡುವುದನ್ನು ಕೇಳಬಹುದು.
  • ಹೀಗಾಗಿ ಈ ಸೋರಿಕೆಯಾದ ಆಡಿಯೊದಲ್ಲಿ, ಖಾನ್ ತಮ್ಮ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಿರುವ ಬಗ್ಗೆಯೂ ಮಾತನಾಡುತ್ತಿದ್ದರು ಎನ್ನಲಾಗಿದೆ.
Pakistan: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ವಿರುದ್ಧ ದೊಡ್ಡ ಕ್ರಮ ಜರುಗಿಸಲು ಸಿದ್ಧತೆ ನಡೆಸಿದ ಶಹಬಾಜ್ ಸರ್ಕಾರ title=
Imran Khan In Trouble

Imran Khan In Trouble: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ತಮ್ಮ ದೇಶದಲ್ಲಿಯೇ ಸುತ್ತುವರಿಯಲ್ಪಟ್ಟಿದಾರೆ ಎಂಬಂತೆ ತೋರುತ್ತಿದೆ. ಹೌದು, ಆಡಿಯೋ ಲೀಕ್ ಪ್ರಕರಣದಲ್ಲಿ ಶಹಬಾಸ್ ಸರ್ಕಾರ ಇಮ್ರಾನ್ ಗೆ ಕುಣಿಕೆ ಬಿಗಿಯಲು ಆರಂಭಿಸಿದೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆಡಿಯೋ ಸೋರಿಕೆ ಕುರಿತು ಕಾನೂನು ಕ್ರಮ ಕೈಗೊಳ್ಳಲು ಪಾಕಿಸ್ತಾನದ ಶಹಬಾಜ್ ಷರೀಫ್ ಕ್ಯಾಬಿನೆಟ್ ಶುಕ್ರವಾರ ಔಪಚಾರಿಕವಾಗಿ ನಿರ್ಧಾರ ಅಂಗೀಕರಿಸಿದೆ. ಇದಕ್ಕೂ ಮುನ್ನ ಮತ್ತೊಂದು ಪ್ರಕರಣದಲ್ಲಿ ಇಮ್ರಾನ್ ಖಾನ್ ವಿರುದ್ಧ ಬಂಧನ ವಾರಂಟ್ ಕೂಡ ಜಾರಿಯಾಗಿದೆ.

ಇಮ್ರಾನ್ ಸಂಕಷ್ಟದಲ್ಲಿ ಹೆಚ್ಚಳ
ವರದಿಗಳ ಪ್ರಕಾರ, ಇತ್ತೀಚೆಗೆ ಸೋರಿಕೆಯಾದ ಆಡಿಯೊದಲ್ಲಿ, ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ನ ಮೂವರು ನಾಯಕರು ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್ ಅವರೊಂದಿಗೆ ಅಮೆರಿಕನ್ ಸೈಫರ್ ಬಗ್ಗೆ ಮಾತನಾಡುವುದನ್ನು ಕೇಳಬಹುದು. ಹೀಗಾಗಿ ಈ ಸೋರಿಕೆಯಾದ ಆಡಿಯೊದಲ್ಲಿ, ಖಾನ್ ತಮ್ಮ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಿರುವ ಬಗ್ಗೆಯೂ ಮಾತನಾಡುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ-Myanmar: ನೆಲದಿಂದ ನಡೆದ ಫೈರಿಂಗ್, 3500 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ವಿಮಾನ ಯಾತ್ರಿಗೆ ತಗುಲಿದ ಗುಂಡು

ದೊಡ್ಡ ಕ್ರಮಕ್ಕೆ ಸಿದ್ಧತೆ
ಆಡಿಯೋ ಸೋರಿಕೆಗೆ ಸಂಬಂಧಿಸಿದಂತೆ ಕ್ಯಾಬಿನೆಟ್ ಸೆಪ್ಟೆಂಬರ್ 30 ರಂದು ಸಮಿತಿಯನ್ನು ರಚಿಸಿತು. ಈ ಆಡಿಯೋ ಸೋರಿಕೆಗೆ ಸಂಬಂಧಿಸಿದಂತೆ ಕಾನೂನು ಕ್ರಮಕ್ಕೆ ಸಮಿತಿ ಶಿಫಾರಸು ಮಾಡಿದೆ. 'ಜಿಯೋ ನ್ಯೂಸ್'ನಲ್ಲಿ ಬಿತ್ತರಗೊಂಡ ವರದಿಯ ಪ್ರಕಾರ, ಕ್ಯಾಬಿನೆಟ್ ಸಮಿತಿಯು ಇದೊಂದು ರಾಷ್ಟ್ರೀಯ ಭದ್ರತೆಯ ವಿಷಯವಾಗಿದೆ ಎಂದು ಹೇಳಿದ್ದು, ಇದು ರಾಷ್ಟ್ರೀಯ ಹಿತಾಸಕ್ತಿಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ ಮತ್ತು ಈ ನಿಟ್ಟಿನಲ್ಲಿ ಕಾನೂನು ಕ್ರಮ ಅಗತ್ಯವಾಗಿದೆ ಎಂದಿದೆ. ಫೆಡರಲ್ ಇನ್ವೆಸ್ಟಿಗೇಷನ್ ಎಜೆನ್ಸಿಯು, ಯುಎಸ್ ಸೈಬರ್ ಮತ್ತು ಆಡಿಯೊ ಸೋರಿಕೆಯನ್ನು ತನಿಖೆ ಮಾಡುವ ಕಾರ್ಯವನ್ನು ನಿರ್ವಹಿಸಲಿದೆ.

ಇದನ್ನೂ ಓದಿ-Indonesia: ಫುಟ್ ಬಾಲ್ ಪಂದ್ಯದ ವೇಳೆ ಹಿಂಸಾಚಾರ, 150ಕ್ಕೂ ಹೆಚ್ಚು ಜನ ಸಾವು

ಮರಿಯಂ ನವಾಜ್ ಹೇಳಿದ್ದೇನು?
ಏತನ್ಮಧ್ಯೆ, ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನಾಯಕಿ ಮರಿಯಂ ನವಾಜ್ ಷರೀಫ್ ಅವರು ಶನಿವಾರ ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮತ್ತು ಹಲವಾರು ಆರೋಪಗಳ ಹೊರತಾಗಿಯೂ ಖಾನ್ ಅವರನ್ನು ಬಂಧಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪ ಮಾಡಿದ್ದಾರೆ. ಅವರು ಖಾನ್ ಅವರ ಬನಿ ಗಲಾ ನಿವಾಸದ ಮೇಲೆ ದಾಳಿ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ವಿತ್ತ ಸಚಿವ ಐಸಾಕ್ ದಾರ್ ಖಾನ್ ಅವರು "ಅಧಿಕಾರಕ್ಕಾಗಿ ಹವಣಿಸುತ್ತಿದ್ದಾರೆ" ಮತ್ತು "ಯಾವುದೇ ಬೆಲೆಗೆ" ದೇಶವನ್ನು ಆಳಲು ಬಯಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News