ಕಡ್ಡಾಯ ಗಲ್ಲು ಶಿಕ್ಷೆ ರದ್ದುಗೊಳಿಸಲು ಮುಂದಾದ ಮಲೇಶಿಯಾ

ಮಲೇಷ್ಯಾ ಸರ್ಕಾರವು ಶುಕ್ರವಾರದಂದು ತನ್ನ ಆಶ್ವಾಸನೆಯ ಭಾಗವಾಗಿ ಕಡ್ಡಾಯ ಮರಣದಂಡನೆಯನ್ನು ರದ್ದುಗೊಳಿಸಲು ಒಪ್ಪಿಕೊಂಡಿದೆ, ಈಗ ಜಗತ್ತಿನಾಧ್ಯಂತ ಇರುವ ಮಾನವ ಹಕ್ಕುಗಳ ಹೋರಾಟಗಾರರು ಸರ್ಕಾರದ ನಡೆಯನ್ನು ಸ್ವಾಗತಿಸಿದ್ದಾರೆ, ಅಷ್ಟೇ ಅಲ್ಲದೆ ಜೊತೆಗೆ ಇದನ್ನು ಪ್ರಾಯೋಗಿಕವಾಗಿ ಜಾರಿಗೆ ತರಬೇಕೆಂದು ಅವರು ಒತ್ತಾಯಿಸಿದ್ದಾರೆ.

Written by - Zee Kannada News Desk | Last Updated : Jun 10, 2022, 05:09 PM IST
  • ಈಗಾಗಲೇ ಹಲವಾರು ಬಾರಿ ಸರ್ಕಾರಗಳು ಮರಣದಂಡನೆಯನ್ನು ರದ್ದುಗೊಳಿಸುವುದಾಗಿ ಆಶ್ವಾಸನೆಯನ್ನು ನೀಡಿದ್ದರೂ ಕೂಡ ಅದನ್ನು ಜಾರಿಗೆ ಗೊಳಿಸಲು ವಿಫಲವಾಗಿದ್ದವು,
  • ಈಗ ಮತ್ತೆ ಮಲೇಶಿಯಾ ಸರ್ಕಾರವು ಈಗ ಈ ಉಲ್ಲೇಖ ಮಾಡಿರುವ ಹಿನ್ನೆಲೆಯಲ್ಲಿ ಹೋರಾಟಗಾರರ ಪ್ರತಿಕ್ರಿಯೆ ಬಂದಿದೆ.
ಕಡ್ಡಾಯ ಗಲ್ಲು ಶಿಕ್ಷೆ ರದ್ದುಗೊಳಿಸಲು ಮುಂದಾದ ಮಲೇಶಿಯಾ  title=
ಸಾಂದರ್ಭಿಕ ಚಿತ್ರ

ನವದೆಹಲಿ: ಮಲೇಷ್ಯಾ ಸರ್ಕಾರವು ಶುಕ್ರವಾರದಂದು ತನ್ನ ಆಶ್ವಾಸನೆಯ ಭಾಗವಾಗಿ ಕಡ್ಡಾಯ ಮರಣದಂಡನೆಯನ್ನು ರದ್ದುಗೊಳಿಸಲು ಒಪ್ಪಿಕೊಂಡಿದೆ, ಈಗ ಜಗತ್ತಿನಾಧ್ಯಂತ ಇರುವ ಮಾನವ ಹಕ್ಕುಗಳ ಹೋರಾಟಗಾರರು ಸರ್ಕಾರದ ನಡೆಯನ್ನು ಸ್ವಾಗತಿಸಿದ್ದಾರೆ, ಅಷ್ಟೇ ಅಲ್ಲದೆ ಜೊತೆಗೆ ಇದನ್ನು ಪ್ರಾಯೋಗಿಕವಾಗಿ ಜಾರಿಗೆ ತರಬೇಕೆಂದು ಅವರು ಒತ್ತಾಯಿಸಿದ್ದಾರೆ.

ಈಗಾಗಲೇ ಹಲವಾರು ಬಾರಿ ಸರ್ಕಾರಗಳು ಮರಣದಂಡನೆಯನ್ನು ರದ್ದುಗೊಳಿಸುವುದಾಗಿ ಆಶ್ವಾಸನೆಯನ್ನು ನೀಡಿದ್ದರೂ ಕೂಡ ಅದನ್ನು ಜಾರಿಗೆ ಗೊಳಿಸಲು ವಿಫಲವಾಗಿದ್ದವು, ಈಗ ಮತ್ತೆ ಮಲೇಶಿಯಾ ಸರ್ಕಾರವು ಈಗ ಈ ಉಲ್ಲೇಖ ಮಾಡಿರುವ ಹಿನ್ನೆಲೆಯಲ್ಲಿ ಹೋರಾಟಗಾರರ ಪ್ರತಿಕ್ರಿಯೆ ಬಂದಿದೆ.

ಇದನ್ನೂ ಓದಿ: Rajya Sabha Elections 2022: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ  

ಆಗ್ನೇಯ ಏಷ್ಯಾದ ರಾಷ್ಟ್ರದಲ್ಲಿ ಕೊಲೆ ಮತ್ತು ಮಾದಕವಸ್ತು ಕಳ್ಳಸಾಗಣೆ ಸೇರಿದಂತೆ ಹಲವಾರು ಅಪರಾಧಗಳಿಗೆ ಮರಣದಂಡನೆಯು ಕಡ್ಡಾಯವಾಗಿದೆ, ಆದಾಗ್ಯೂ 2018 ರಿಂದ ಮರಣದಂಡನೆಗಳ ಮೇಲಿನ ನಿಷೇಧವು ಜಾರಿಯಲ್ಲಿದೆ.ಏಕೆಂದರೆ ಆ ವರ್ಷ ಸುಧಾರಣಾವಾದಿ ಮೈತ್ರಿಕೂಟವು ಅಧಿಕಾರಕ್ಕೆ ಬಂದಿದ್ದರಿಂದಾಗಿ ಅಂದಿನಿಂದ ಮರಣ ದಂಡನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವುದಾಗಿ ಅದು ಹೇಳುತ್ತಾ ಬಂದಿದೆ.ಆದರೆ ಇದಕ್ಕೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದಾಗಿ ಈ ಯೋಜನೆ ಸ್ಥಗಿತಗೊಂಡಿತ್ತು.

ಈಗ ಕಡ್ಡಾಯ ಮರಣದಂಡನೆಯನ್ನು ರದ್ದುಗೊಳಿಸಲು ಕ್ಯಾಬಿನೆಟ್ ಶುಕ್ರವಾರ ಒಪ್ಪಿಗೆ ನೀಡಿದೆ ಎಂದು ಕಾನೂನು ಸಚಿವ ವಾನ್ ಜುನೈದಿ ತುವಾಂಕು ಜಾಫರ್ ಹೇಳಿದ್ದಾರೆ.ಮರಣದಂಡನೆಗೆ ಯಾವ ಶಿಕ್ಷೆಯನ್ನು ಬದಲಿಸಬಹುದು ಎಂಬುದರ ಕುರಿತು ಹೆಚ್ಚಿನ ಅಧ್ಯಯನ ನಡೆಸಲಾಗುತ್ತದೆ ಮತ್ತು ಈ ವಿಚಾರದಲ್ಲಿ ಸರ್ಕಾರವು ಎಲ್ಲಾ ಪಕ್ಷಗಳ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ಹೀನ ಕೃತ್ಯ: ಮದುವೆಗೆ ನಿರಾಕರಿಸಿದ ಮಹಿಳೆ ಮೇಲೆ ಆ್ಯಸಿಡ್ ದಾಳಿ

ಇನ್ನೊಂದೆಡೆಗೆ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಹ್ಯೂಮನ್ ರೈಟ್ಸ್ ವಾಚ್‌ನ ಉಪ ಏಷ್ಯಾ ನಿರ್ದೇಶಕ ಫಿಲ್ ರಾಬರ್ಟ್‌ಸನ್ "ಕಡ್ಡಾಯ ಮರಣದಂಡನೆಯನ್ನು ತೆಗೆದುಹಾಕುವುದಾಗಿ ಮಲೇಷ್ಯಾದ ಸಾರ್ವಜನಿಕ ಘೋಷಣೆಯು ಒಂದು ಪ್ರಮುಖ ಹೆಜ್ಜೆಯಾಗಿದೆ.ಆದರೆ ಈ ಪ್ರತಿಜ್ಞೆಯನ್ನು ಜಾರಿಗೆ ತರಲು ಮಲೇಷ್ಯಾ ನಿಜವಾದ ಶಾಸಕಾಂಗ ತಿದ್ದುಪಡಿಗಳನ್ನು ಅಂಗೀಕರಿಸುವುದನ್ನು ನಾವು ನೋಡಬೇಕಾಗಿದೆ.ಸಾಮಾನ್ಯವಾಗಿ ಬಹುತೇಕ ಸರ್ಕಾರಗಳು ಹೆಚ್ಚಿನ ಭರವಸೆಯನ್ನು ನೀಡುತ್ತವೆ, ಆದರೆ ಅದನ್ನು ಜಾರಿಗೆ ತರುವಲ್ಲಿ ವಿಫಲವಾಗುತ್ತವೆ ಎಂದು ಅವರು ಹೇಳಿದರು.

ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಮಲೇಷ್ಯಾದ ಕಾರ್ಯನಿರ್ವಾಹಕ ನಿರ್ದೇಶಕಿ ಕತ್ರಿನಾ ಜೋರೆನ್ ಮಲಿಯಾಮೌವ್ ಅವರು ಈ ಕ್ರಮವನ್ನು ಸರಿಯಾದ ದಿಕ್ಕಿನಲ್ಲಿ ಸ್ವಾಗತಾರ್ಹ ಹೆಜ್ಜೆ ಎಂದು ಶ್ಲಾಘಿಸಿದ್ದಾರೆ ಮತ್ತು ಈ ಕ್ರೂರ ಶಿಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ಒಂದು ಹೆಜ್ಜೆ ಮುಂದೆ ಇಡಬೇಕು ಎಂದು ಒತ್ತಾಯಿಸುವುದಾಗಿ ಅವರು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News