6.8 ತೀವ್ರತೆಯ ಭೀಕರ ಭೂಕಂಪನ: ಸಾವಿನ ಸಂಖ್ಯೆ 296ಕ್ಕೆ ಏರಿಕೆ, ಮುಂದುವರೆದ ರಕ್ಷಣಾ ಕಾರ್ಯ

earthquake in Morocco: ಆಫ್ರಿಕನ್ ಮತ್ತು ಯುರೇಷಿಯನ್ ಪ್ಲೇಟ್‌’ಗಳ ನಡುವಿನ ಸ್ಥಳದಿಂದಾಗಿ, ಮೊರಾಕೊದಲ್ಲಿ ಭೂಕಂಪಗಳು ಹೆಚ್ಚಾಗಿ ಕಂಡುಬರುತ್ತವೆ. ರಾಯಿಟರ್ಸ್ ವರದಿ ಪ್ರಕಾರ, ಕಳೆದ ನೂರು ವರ್ಷಗಳಲ್ಲಿ ಈ ಭಾಗದಲ್ಲಿ ಸಂಭವಿಸಿದ ಅತಿ ದೊಡ್ಡ ಭೂಕಂಪ ಇದಾಗಿದೆ

Written by - Bhavishya Shetty | Last Updated : Sep 9, 2023, 08:43 AM IST
    • ಆಫ್ರಿಕಾದ ಮೊರೊಕ್ಕೊದಲ್ಲಿ ಮುಂಜಾನೆ ವೇಳೆ ಭಾರೀ ಪ್ರಮಾಣದ ಭೂಕಂಪನ ಸಂಭವಿಸಿದೆ
    • ರಿಕ್ಟರ್ ಮಾಪಕದಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದೆ
    • ಉತ್ತರ ಆಫ್ರಿಕಾ ರಾಷ್ಟ್ರದ ಈ ಭಾಗದಲ್ಲಿ ಸಂಭವಿಸಿದ ಅತ್ಯಂತ ಶಕ್ತಿಶಾಲಿ ಭೂಕಂಪವಾಗಿದೆ
6.8 ತೀವ್ರತೆಯ ಭೀಕರ ಭೂಕಂಪನ: ಸಾವಿನ ಸಂಖ್ಯೆ 296ಕ್ಕೆ ಏರಿಕೆ, ಮುಂದುವರೆದ ರಕ್ಷಣಾ ಕಾರ್ಯ title=
Earthquake

Magnitude 6.8 earthquake in Morocco: ಆಫ್ರಿಕಾದ ಮೊರೊಕ್ಕೊದಲ್ಲಿ ಮುಂಜಾನೆ ವೇಳೆ ಭಾರೀ ಪ್ರಮಾಣದ ಭೂಕಂಪನ ಸಂಭವಿಸಿದೆ. ಪರಿಣಾಮವಾಗಿ ಅನೇಕ ಕಟ್ಟಡಗಳು ನೆಲಸಮವಾಗಿದ್ದು, ಇಲ್ಲಿಯವರೆಗೆ 296 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ ದೃಢಪಟ್ಟಿದೆ. ರಿಕ್ಟರ್ ಮಾಪಕದಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ನೈಸರ್ಗಿಕ ವಿಕೋಪಕ್ಕೆ ಸಂಬಂಧಿಸಿದಂತೆ, ದೇಶದ ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯು ಎಸ್‌ ಜಿ ಎಸ್) ಕಳೆದ 120 ವರ್ಷಗಳಲ್ಲಿ ಉತ್ತರ ಆಫ್ರಿಕಾ ರಾಷ್ಟ್ರದ ಈ ಭಾಗದಲ್ಲಿ ಸಂಭವಿಸಿದ ಅತ್ಯಂತ ಶಕ್ತಿಶಾಲಿ ಭೂಕಂಪವಾಗಿದೆ ಎಂದು ಹೇಳಿದೆ.

ಇದನ್ನೂ ಓದಿ: 2 ವರ್ಷಗಳ ಬಳಿಕ ತಂಡಕ್ಕೆ ಮರಳಿದ 25 ಹರೆಯದ ಈ ಆಟಗಾರ ಇನ್ಮುಂದೆ ನಾಯಕ! ವಿಶ್ವಕಪ್’ಗೂ ಮುನ್ನ ಘೋಷಣೆ

ಹೃದಯ ವಿದ್ರಾವಕ ದೃಶ್ಯ!

ಆಫ್ರಿಕನ್ ಮತ್ತು ಯುರೇಷಿಯನ್ ಪ್ಲೇಟ್‌’ಗಳ ನಡುವಿನ ಸ್ಥಳದಿಂದಾಗಿ, ಮೊರಾಕೊದಲ್ಲಿ ಭೂಕಂಪಗಳು ಹೆಚ್ಚಾಗಿ ಕಂಡುಬರುತ್ತವೆ. ರಾಯಿಟರ್ಸ್ ವರದಿ ಪ್ರಕಾರ, ಕಳೆದ ನೂರು ವರ್ಷಗಳಲ್ಲಿ ಈ ಭಾಗದಲ್ಲಿ ಸಂಭವಿಸಿದ ಅತಿ ದೊಡ್ಡ ಭೂಕಂಪ ಇದಾಗಿದೆ. ಇದಕ್ಕೂ ಮೊದಲು, 2004 ರಲ್ಲಿ, ಈಶಾನ್ಯ ಮೊರಾಕೊದ ಅಲ್ ಹೋಸಿಮಾದಲ್ಲಿ ಪ್ರಬಲ ಭೂಕಂಪ ಸಂಭವಿಸಿ 628 ಜನರು ಸಾವನ್ನಪ್ಪಿದ್ದು, ಸುಮಾರು 1000 ಜನರು ಗಾಯಗೊಂಡಿದ್ದರು.

ಸುದ್ದಿ ಸಂಸ್ಥೆಗಳ ಪ್ರಕಾರ, ಭೀಕರ ಭೂಕಂಪದಿಂದಾಗಿ ಹಲವು ಹಳೆಯ ಕಟ್ಟಡಗಳು ಕುಸಿದಿವೆ. ನಗರದಲ್ಲಿ ಆಂಬ್ಯುಲೆನ್ಸ್ ಹಾಗೂ ತುರ್ತು ಸೇವೆಗಳ ಕೊರತೆ ಕೂಡ ಕಾಡಿದೆ. ಮತ್ತೆ ಭೂಕಂಪನದ ಭೀತಿಯಿಂದ ಜನರು ಭಯಭೀತರಾಗಿ ಮನೆಯಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಭೂಕಂಪವು ಎಷ್ಟು ಪ್ರಬಲವಾಗಿದೆಯೆಂದರೆ, ಕೇಂದ್ರಬಿಂದುವಾದ ಮರ್ರಾಕೇಶ್‌ನಿಂದ ಸುಮಾರು 350 ಕಿಲೋಮೀಟರ್ ದೂರದಲ್ಲಿರುವ ರಾಜಧಾನಿ ರಬಾತ್‌’ನಲ್ಲಿಯೂ ಇದರ ಪ್ರಭಾವವು ಕಂಡುಬಂದಿದೆ.

ಇದನ್ನೂ ಓದಿ: ಸೆ.16ರ ಬಳಿಕ ಈ ಅದೃಷ್ಟವಂತ ರಾಶಿಯ ಹಣೆಬರಹವೇ ಚೇಂಜ್: ಹಣವೋ ಹಣ, ಇನ್ನೇನಿದ್ದರೂ ಸಿರಿವಂತಿಕೆ ಯೋಗ!

43 ವರ್ಷಗಳ ಹಿಂದೆ ಸಂಭವಿಸಿತ್ತು ದುರಂತ!

43 ವರ್ಷಗಳ ಹಿಂದೆ ಅಂದರೆ 1980 ರಲ್ಲಿ ಮೊರಾಕೊದ ನೆರೆಯ ದೇಶ ಅಲ್ಜೀರಿಯಾದಲ್ಲಿ 7.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದರಲ್ಲಿ ಸುಮಾರು 2500 ಜನರು ಸಾವನ್ನಪ್ಪಿದ್ದು, ಸುಮಾರು ಮೂರು ಲಕ್ಷ ಜನರು ನಿರಾಶ್ರಿತರಾಗಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News