Bomb Blast: ಮತ್ತೊಮ್ಮೆ ಭೀಕರ ಬಾಂಬ್ ದಾಳಿಗೆ ನಡುಗಿದ ಅಫ್ಘಾನ್ ಭೂಮಿ, 11 ಜನರ ದುರ್ಮರಣ

Terror Attack In Afghanistan: ಅಫ್ಘಾನಿಸ್ತಾನದ ಬದಖ್ಶಾನ್ ಜಿಲ್ಲೆಯಲ್ಲಿ ಡೆಪ್ಯುಟಿ ಗವರ್ನರ್ ನಿಸಾರ್ ಅಹ್ಮದ್ ಅಹ್ಮದಿ ಅವರ ಸ್ಮರಣಾರ್ಥ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ವೇಳೆ ನಡೆದ ಭೀಕರ ಸ್ಫೋಟದಲ್ಲಿ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದಾರೆ.  

Written by - Nitin Tabib | Last Updated : Jun 8, 2023, 09:53 PM IST
  • ನಿಸಾರ್ ಅಹ್ಮದ್ ಅಹ್ಮದಿ ಅವರ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮವನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ವಕ್ತಾರ ಅಬ್ದುಲ್ ನಫಿ ಟಾಕೋರ್ ಹೇಳಿದ್ದಾರೆ.
  • ಮಂಗಳವಾರ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ ಅಹ್ಮದಿ ಸಾವನ್ನಪ್ಪಿದ್ದರು. ಬದಖ್ಶಾನ್ ಪ್ರಾಂತ್ಯದ ರಾಜಧಾನಿ ಫೈಜಾಬಾದ್‌ನಲ್ಲಿ ಈ ದಾಳಿ ನಡೆದಿದ್ದು,
  • ಈ ದಾಳಿಯಲ್ಲಿ ಅವರ ಚಾಲಕ ಕೂಡ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ.
Bomb Blast:  ಮತ್ತೊಮ್ಮೆ ಭೀಕರ ಬಾಂಬ್ ದಾಳಿಗೆ ನಡುಗಿದ ಅಫ್ಘಾನ್ ಭೂಮಿ, 11 ಜನರ ದುರ್ಮರಣ title=

Bomb Blast: ಅಫ್ಘಾನಿಸ್ತಾನದ ಬದಖ್ಶಾನ್ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ. ಕೆಲವು ದಿನಗಳ ಹಿಂದೆ ಹತ್ಯೆಗೀಡಾದ ಉಪ ರಾಜ್ಯಪಾಲ ನಿಸಾರ್ ಅಹಮದ್ ಅಹ್ಮದಿ ಅವರ ಸ್ಮರಣಾರ್ಥ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ನವಾಬಿ ಮಸೀದಿ ಬಳಿ ನಡೆದ ಈ ಸ್ಫೋಟದಲ್ಲಿ ಪ್ರಾಣ ಕಳೆದುಕೊಂಡವರಲ್ಲಿ ಮಾಜಿ ತಾಲಿಬಾನ್ ಪೊಲೀಸ್ ಅಧಿಕಾರಿಯೊಬ್ಬರು ಶಾಮಿಲಾಗಿದ್ದಾರೆ ಮತ್ತು ಭೀಕರ ದಾಳಿಯಲ್ಲಿ 30 ಜನರು ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವಾಲಯದಿಂದ ನೇಮಕಗೊಂಡ ತಾಲಿಬಾನ್ ವಕ್ತಾರ ಅಬ್ದುಲ್ ನಫಿ ಟಾಕೋರ್ ಹೇಳಿದ್ದಾರೆ. ವಕ್ತಾರ ಅಬ್ದುಲ್ ನಫಿ ಟಾಕೋರ್ ಸಾವುನೋವುಗಳ ಸಂಖ್ಯೆ ಹೆಚ್ಚಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ-Harvard University: ಅಮೇರಿಕಾದಲ್ಲಿ ಈ ಭಾರತದ ಸಂಜಾತೆಗೆ ಸಿಕ್ತು ಹಾರ್ವರ್ಡ್ ವಿಶ್ವವಿದ್ಯಾಲಯದ ಮಹತ್ವದ ಜವಾಬ್ದಾರಿ

ಮೊದಲು ಸ್ಫೋಟ ಸಂಭವಿಸಿದೆ
ನಿಸಾರ್ ಅಹ್ಮದ್ ಅಹ್ಮದಿ ಅವರ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮವನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ವಕ್ತಾರ ಅಬ್ದುಲ್ ನಫಿ ಟಾಕೋರ್ ಹೇಳಿದ್ದಾರೆ. ಮಂಗಳವಾರ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ ಅಹ್ಮದಿ ಸಾವನ್ನಪ್ಪಿದ್ದರು. ಬದಖ್ಶಾನ್ ಪ್ರಾಂತ್ಯದ ರಾಜಧಾನಿ ಫೈಜಾಬಾದ್‌ನಲ್ಲಿ ಈ ದಾಳಿ ನಡೆದಿದ್ದು, ಈ ದಾಳಿಯಲ್ಲಿ ಅವರ ಚಾಲಕ ಕೂಡ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ತಾಲಿಬಾನ್‌ನ ಮಾಹಿತಿ ಮತ್ತು ಸಂಸ್ಕೃತಿಯ ಉಸ್ತುವಾರಿ ಮೊಜುದ್ದೀನ್ ಅಹ್ಮದಿ ಗುರುವಾರದ ಸ್ಫೋಟ ಮತ್ತು ಬಾಗ್ಲಾನ್ ಮಾಜಿ ಪೊಲೀಸ್ ಮುಖ್ಯಸ್ಥ ಸೈಫುಲ್ಲಾ ಶಮೀಮ್‌ನ ಸಾವನ್ನು ದೃಢಪಡಿಸಿದ್ದಾರೆ. ಇಲ್ಲಿಯವರೆಗಿನ ವರದಿಗಳ ಪ್ರಕಾರ, ಈ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆಯು ತಕ್ಷಣವೇ ಹೊತ್ತುಕೊಂಡಿಲ್ಲ ಎನ್ನಲಾಗಿದೆ.

ಇದನ್ನೂ ಓದಿ-Indo-US Relations: 'ದೆಹಲಿಗೆ ಹೋಗಿ ಮತ್ತು ನೀವೇ ನೋಡಿ', ಭಾರತದ ಪ್ರಜಾಪ್ರಭುತ್ವದ ಆರೋಗ್ಯ ಪ್ರಶ್ನಿಸುವವರಿಗೆ ಅಮೆರಿಕ ತಿರುಗೇಟು

ಕಾರ್ ಸ್ಫೋಟದಲ್ಲಿ ಇಸ್ಲಾಮಿಕ್ ಸ್ಟೇಟ್ ಭಾಗಿ
ಮಂಗಳವಾರ ನಡೆದ ಕಾರ್ ಬಾಂಬ್ ದಾಳಿಯ ಹೊಣೆಯನ್ನು ತಾಲಿಬಾನ್‌ನ ಇಸ್ಲಾಮಿಕ್ ಸ್ಟೇಟ್ ವಹಿಸಿಕೊಂಡಿದೆ ಎಂಬುದು ಇಲ್ಲಿ ಗಮನಾರ್ಹ. ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ ಅವರು ಈ ದಾಳಿಯನ್ನು ಖಂಡಿಸಿದ್ದಾರೆ, ಮಸೀದಿಗಳ ಮೇಲೆ ಬಾಂಬ್ ಸ್ಫೋಟವು ಭಯೋತ್ಪಾದನಾ ಕೃತ್ಯ ಮತ್ತು ಮಾನವೀಯ ಮತ್ತು ಇಸ್ಲಾಮಿಕ್ ಮಾನದಂಡಗಳಿಗೆ ವಿರುದ್ಧವಾಗಿದೆ ಎಂದು ತಮ್ಮ ಟ್ವೀಟ್‌ನಲ್ಲಿ ಅವರು ಹೇಳಿದ್ದಾರೆ. ಹಲವು ಹಿರಿಯ ತಾಲಿಬಾನ್ ಅಧಿಕಾರಿಗಳು ಬುಧವಾರ ನಿಸಾರ್ ಅಹ್ಮದ್ ಅಹ್ಮದಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ತಾಲಿಬಾನ್ ಸೇನಾ ಮುಖ್ಯಸ್ಥ ಫಸಿಹುದ್ದೀನ್ ಫಿತ್ರತ್ ಅವರು ಬದಖ್ಶಾನ್ನಲ್ಲಿ ಐಎಸ್ ದಾಳಿಯನ್ನು ದಾಳಿಯನ್ನು ಖಂಡಿಸಿದ್ದಾರೆ ಮತ್ತು ತಾಲಿಬಾನ್ ಭದ್ರತಾ ಪಡೆಗಳೊಂದಿಗೆ ಸಹಕರಿಸಲು ಮತ್ತು ಅವರ ಪ್ರದೇಶಗಳಲ್ಲಿ ಅನುಮಾನಾಸ್ಪದ ಚಟುವಟಿಕೆಗಳನ್ನು ವರದಿ ಮಾಡಲು ಜನರಿಗೆ ಕರೆ ನೀಡಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News