ಇಲ್ಲೊಂದಿದೇ 1200 ವರ್ಷಗಳ ಹಿಂದಿನ ಸಮಾಧಿ, ಅದರ ತುಂಬೆಲ್ಲಾ ಚಿನ್ನವೇ ಅಂತೇ !

1200years Tomb : ಪುರಾತತ್ವಶಾಸ್ತ್ರಜ್ಞರು 1,200 ವರ್ಷಗಳಷ್ಟು ಹಳೆಯದಾದ ಸಮಾಧಿಯನ್ನು ಕಂಡು ಹಿಡಿದಿದ್ದಾರೆ. ಈ ಸಮಾಧಿಯಲ್ಲಿ ಅಪಾರವಾದ ಚಿನ್ನದ ನಿಧಿ, ಅಸ್ಥಿಪಂಜರಗಳನ್ನು ಪತ್ತೆ ಹಚ್ಚಲಾಗಿದೆ. 

Written by - Zee Kannada News Desk | Last Updated : Mar 11, 2024, 09:42 PM IST
  • ಎಲ್ ಕ್ಯಾನೊ ಆರ್ಕಿಯಾಲಾಜಿಕಲ್ ಪಾರ್ಕ್‌ನಲ್ಲಿ, ಪನಾಮ ಪುರಾತತ್ವಶಾಸ್ತ್ರಜ್ಞರು ಸಮಾಧಿಯಲ್ಲಿ ಅನೇಕ ಚಿನ್ನದ ನಿಧಿಗಳನ್ನು ಕಂಡುಹಿಡಿದರು.
  • ಪುರಾತತ್ವಶಾಸ್ತ್ರಜ್ಞರು 1,200 ವರ್ಷಗಳಷ್ಟು ಹಳೆಯದಾದ ಸಮಾಧಿಯನ್ನು ಕಂಡು ಹಿಡಿದಿದ್ದಾರೆ.
  • ಪುರುಷ ಮತ್ತು ಮಹಿಳೆಯ ಆಕಾರದ ಕಿವಿಯೋಲೆಗಳು, ಎರಡು ಗಂಟೆಗಳು, ನಾಯಿಯ ಹಲ್ಲುಗಳಿಂದ ವಿನ್ಯಾಸಗೊಳಿಸಿದ ಸ್ಕರ್ಟ್‌ಗಳು ಮತ್ತು ಮೂಳೆ ಕೊಳಲುಗಳನ್ನು ಪತ್ತೆ ಹಚ್ಚಲಾಗಿದೆ.
ಇಲ್ಲೊಂದಿದೇ 1200 ವರ್ಷಗಳ ಹಿಂದಿನ ಸಮಾಧಿ, ಅದರ ತುಂಬೆಲ್ಲಾ ಚಿನ್ನವೇ ಅಂತೇ ! title=

ಅಯೋಧ್ಯೆ ರಾಮಂದಿರ ಆದ ಬಳಿಕ ಹಿಂದೂ ದೇವರುಗಳು, ಹಿಂದೂತ್ವ ಬಗ್ಗೆ ಹಲವರಲ್ಲಿ ಹೆಚ್ಚು ಆಸಕ್ತಿ ಮೂಡಿಸಿದೆ. 2010ರ ನಂತ್ರ ಅನೇಕ ಜಾಗಗಳಲ್ಲಿ ಪುರಾತನ ವಿಗ್ರಹಗಳು, ಮಂಟಪಗಳು, ಶಾಸನಗಳು ಹೆಚ್ಚಾಗಿ ಪತ್ತೆಯಾಗ್ತಿದೆ.

ಸಮಾಧಿ ತುಂಬೆಲ್ಲಾ ಚಿನ್ನ ಪತ್ತೆ!

ಸಮಾಧಿಯಲ್ಲಿ ಬಂಗಾರದ ಕಡಗಗಳು, ಚಿನ್ನದ ಮಣಿಗಳಿಂದ ಅಲಂಕರಿಸಲ್ಪಟ್ಟ ಎರಡು ಬೆಲ್ಟ್‌ಗಳು, ಮೊಸಳೆಗಳನ್ನು ಹೋಲುವ ಕಿವಿಯೋಲೆಗಳು, ಚಿನ್ನದ ಹೊದಿಕೆಯ ತಿಮಿಂಗಿಲ ಹಲ್ಲುಗಳಿಂದ ಮಾಡಿದ ಕಿವಿಯೋಲೆಗಳು ಮತ್ತು ಸುತ್ತಿನ ಚಿನ್ನದ ಫಲಕಗಳು ಸೇರಿವೆ. ಪುರುಷ ಮತ್ತು ಮಹಿಳೆಯ ಆಕಾರದ ಕಿವಿಯೋಲೆಗಳು, ಎರಡು ಗಂಟೆಗಳು, ನಾಯಿಯ ಹಲ್ಲುಗಳಿಂದ ವಿನ್ಯಾಸಗೊಳಿಸಿದ ಸ್ಕರ್ಟ್‌ಗಳು ಮತ್ತು ಮೂಳೆ ಕೊಳಲುಗಳನ್ನು ಪತ್ತೆ ಹಚ್ಚಲಾಗಿದೆ.

ಇದನ್ನು ಓದಿ : ಭಾರತದ ಫಿಲ್ಟರ್ ಕಾಫಿಗೆ ವಿಶ್ವದ ಅಗ್ರ 38 ಕಾಫಿಗಳಲ್ಲಿ ಎರಡನೆಯ ಸ್ಥಾನ

1,200 ವರ್ಷಗಳಷ್ಟು ಹಳೆಯದಾದ ಸಮಾಧಿ!

ಎಲ್ ಕ್ಯಾನೊ ಆರ್ಕಿಯಾಲಾಜಿಕಲ್ ಪಾರ್ಕ್‌ನಲ್ಲಿ, ಪನಾಮ ಪುರಾತತ್ವಶಾಸ್ತ್ರಜ್ಞರು ಸಮಾಧಿಯಲ್ಲಿ ಅನೇಕ ಚಿನ್ನದ ನಿಧಿಗಳನ್ನು ಕಂಡುಹಿಡಿದರು. ಕಳೆದ ಶುಕ್ರವಾರ, ಮಧ್ಯ ಅಮೆರಿಕಾದ ದಕ್ಷಿಣ ದೇಶದ ಪನಾಮ ನಗರದ ಪುರಾತತ್ವ ಉದ್ಯಾನವನದಲ್ಲಿ ಆವಿಷ್ಕಾರವು ಎಲ್ಲರನ್ನು ನಿಬ್ಬೆರಗಾಗಿಸಿದೆ. ಪುರಾತತ್ವಶಾಸ್ತ್ರಜ್ಞರು 1,200 ವರ್ಷಗಳಷ್ಟು ಹಳೆಯದಾದ ಸಮಾಧಿಯನ್ನು ಕಂಡು ಹಿಡಿದಿದ್ದಾರೆ. ಈ ಸಮಾಧಿಯಲ್ಲಿ ಅಪಾರವಾದ ಚಿನ್ನದ ನಿಧಿ, ಅಸ್ಥಿಪಂಜರಗಳನ್ನು ಪತ್ತೆ ಹಚ್ಚಲಾಗಿದೆ.

ಪ್ರಮುಖ ವ್ಯಕ್ತಿಯ ಸಮಾಧಿ!

ಇದು ಅಂದಿನ ಕಾಲದಲ್ಲಿ ಪ್ರಮುಖ ವ್ಯಕ್ತಿಯ ಸಮಾಧಿಯಾಗಿದೆ ಎಂದು ತಿಳಿದು ಬಂದಿದೆ. ಆತನ ದೇಹದ ಜೊತೆ ಹಲವರು ಸಾವನ್ನಪ್ಪಿರುವುದೋ ಅಥವಾ ಬಲಿಯಾಗಿ ಕೊಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಈ ಆವಿಷ್ಕಾರದಲ್ಲಿ ಪುರಾತನ ಕಾಲದಲ್ಲಿ ಸಮಾಧಿ ಮಾಡುವ ಪದ್ಧತಿ ಬಗ್ಗೆಯೂ ತಿಳಿದು ಬಂದಿದೆ.

ಇದನ್ನು ಓದಿ : ಭಾರತ ನಿರ್ಮಿತ ಅಗ್ನಿ-5 ಕ್ಷಿಪಣಿ 'ಮಿಷನ್ ದಿವ್ಯಾಸ್ತ್ರ'  ಮೊದಲ ಪ್ರಾಯೋಗಿಕ ಪರೀಕ್ಷೆ ಯಶಸ್ವಿ : ಪ್ರಧಾನಿ ಮೋದಿ

ಆತನ ಸಾವಿನಿಂದ ಆತನ 31 ಸಹಚರರು ಜೀವತ್ಯಾಗ!

ಪುರಾತತ್ವ ಇಲಾಖೆಯ ನಿರ್ದೇಶಕರಾದ ಡಾ ಜೂಲಿಯಾ ಮೇಯೊ, ಇನ್ನೂ ಸಮಾಧಿ ಸ್ಥಳವನ್ನು ಉತ್ಖನನ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು, ಸಮಾಧಿಯೊಳಗಿನ ಜನರ ಸಂಖ್ಯೆಯನ್ನು ನಿಖರವಾಗಿ ಎಣಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ. ಸಂಸ್ಕೃತಿ ಸಚಿವಾಲಯದ ರಾಷ್ಟ್ರೀಯ ಪರಂಪರೆಯ ನಿರ್ದೇಶಕರಾದ ಲಿನೆಟ್ ಮಾಂಟೆನೆಗ್ರೊ ಅವರು ಪುರಾತತ್ವ ಉದ್ಯಾನವನದಲ್ಲಿ ಉತ್ಖನನ ಕಾರ್ಯವು 2022 ರಲ್ಲಿ ಪ್ರಾರಂಭವಾಯಿತು ಎಂದು ಉಲ್ಲೇಖಿಸಿದ್ದಾರೆ.

ಎಲ್ ಕ್ಯಾನೊ ಫೌಂಡೇಶನ್‌, ಸಾಮಾಜಿಕ ಮಾಧ್ಯಮದಲ್ಲಿ ಸಮಾಧಿಯು ಸ್ಥಳೀಯ ಕೊಕ್ಲೆ ಸಂಸ್ಕೃತಿಯ ಮುಖ್ಯಸ್ಥನಿಗೆ ಸೇರಿರಬಹುದು ಎಂದು ತಿಳಿಸಿದೆ, ಸಾಯುವ ಸಂದರ್ಭದಲ್ಲಿ ಆತನಿಗೆ 30 ವರ್ಷವಿರಬಹುದು. ಆತನ ಸಾವಿನಿಂದ ಆತನ 31 ಸಹಚರರು ಜೀವತ್ಯಾಗ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ಸಮಾಧಿಯಲ್ಲಿ ದೊರೆತ ಸಂಪತ್ತಿನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News