Gita Gopinath To Leave IMF: IMF ನೌಕರಿಯನ್ನು ತೊರೆಯಲಿದ್ದಾರೆಯೇ ಗೀತಾ ಗೋಪಿನಾಥ್? ಅವರ ಮುಂದಿನ ಯೋಜನೆ ಏನು?

Gita Gopinath To Leave IMF: ಗೀತಾ ಅವರು ಮೈಸೂರಿನಲ್ಲಿ ಜನಿಸಿದ್ದಾರೆ. ಅವರು ಐಎಂಎಫ್ ಮುಖ್ಯಸ್ಥೆ ಹುದ್ದೆಯನ್ನು ತಲುಪಿದ ಮೊದಲ ಮಹಿಳೆಯಾಗಿದ್ದಾರೆ. ಇದಲ್ಲದೇ, ರಘುರಾಮ್ ರಾಜನ್ ನಂತರ IFM ನಲ್ಲಿ ಈ ಸ್ಥಾನವನ್ನು ತಲುಪಿದ ಎರಡನೇ ಭಾರತೀಯರಾಗಿದ್ದಾರೆ. 

Written by - Nitin Tabib | Last Updated : Oct 20, 2021, 01:13 PM IST
  • ಗೀತಾ ಅವರು ಮೈಸೂರಿನಲ್ಲಿ ಜನಿಸಿದ್ದಾರೆ.
  • ಅವರು ಐಎಂಎಫ್ ಮುಖ್ಯಸ್ಥೆ ಹುದ್ದೆಯನ್ನು ತಲುಪಿದ ಮೊದಲ ಮಹಿಳೆಯಾಗಿದ್ದಾರೆ.
  • ಇದಲ್ಲದೇ, ರಘುರಾಮ್ ರಾಜನ್ ನಂತರ IFM ನಲ್ಲಿ ಈ ಸ್ಥಾನವನ್ನು ತಲುಪಿದ ಎರಡನೇ ಭಾರತೀಯರಾಗಿದ್ದಾರೆ.
Gita Gopinath To Leave IMF: IMF ನೌಕರಿಯನ್ನು ತೊರೆಯಲಿದ್ದಾರೆಯೇ  ಗೀತಾ ಗೋಪಿನಾಥ್?  ಅವರ ಮುಂದಿನ ಯೋಜನೆ ಏನು? title=
Gita Gopinath To Leave IMF (File Photo)

Gita Gopinath To Leave IMF - ಅಂತರಾಷ್ಟ್ರೀಯ ಹಣಕಾಸು ನಿಧಿ (IMF) ಮುಖ್ಯಸ್ಥೆ ಗೀತಾ ಗೋಪಿನಾಥ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಬರುವ ಜನವರಿಯಲ್ಲಿ ಅವರು ತಮ್ಮ ಹುದ್ದೆಯನ್ನು ತೊರೆಯಲಿದ್ದಾರೆ ಎಂದು ಐಎಂಎಫ್ ಹೇಳಿದೆ. ಇದರೊಂದಿಗೆ ಗೀತಾ ಗೋಪಿನಾಥ್ ಮತ್ತೊಮ್ಮೆ ಹಾರ್ವರ್ಡ್ ವಿಶ್ವವಿದ್ಯಾಲಯದ (Harvard University) ಅರ್ಥಶಾಸ್ತ್ರ ವಿಭಾಗದಲ್ಲಿ ಬೋಧನಾ ಕೆಲಸಕ್ಕೆ ಮರಳಲಿದ್ದಾರೆ ಎಂದು ಹೇಳಲಾಗಿದೆ. ಹಾರ್ವರ್ಡ್ ವಿಶ್ವವಿದ್ಯಾಲಯ ಗೀತಾ ಗೋಪಿನಾಥ್ ಅವರ ರಜೆಯನ್ನು ಒಂದು ವರ್ಷಕ್ಕೆ ವಿಸ್ತರಿಸಿತ್ತು. ಈ ಕಾರಣದಿಂದಾಗಿ, ಅವರಿಗೆ ಮೂರು ವರ್ಷಗಳ ಕಾಲ IMF (International Monetary Fund) ನಲ್ಲಿ ಕೆಲಸ ಮಾಡುವ ಅವಕಾಶವನ್ನು ಲಭಿಸಿತ್ತು. 

49 ವರ್ಷದ ಗೀತಾ ಐಎಂಎಫ್‌ಗೆ ಸೇರುವ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಜಾನ್ ಜ್ವಾನ್‌ಸ್ಟ್ರಾ ಅಂತಾರಾಷ್ಟ್ರೀಯ ಅಧ್ಯಯನ ಮತ್ತು ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಗೀತಾ ಅವರು ಮೈಸೂರಿನಲ್ಲಿ ಜನಿಸಿದ್ದಾರೆ. ಅವರು ಐಎಂಎಫ್ ಮುಖ್ಯಸ್ಥೆ ಹುದ್ದೆಯನ್ನು ತಲುಪಿದ ಮೊದಲ ಮಹಿಳೆಯಾಗಿದ್ದಾರೆ (First Female Chief Economist Of IMF). ಇದಲ್ಲದೇ, ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ನಂತರ ಐಎಫ್‌ಎಂನಲ್ಲಿ ಈ ಸ್ಥಾನವನ್ನು ತಲುಪಿದ  ಎರಡನೇ ಭಾರತೀಯರಾಗಿದ್ದಾರೆ. 

ಗೀತಾ ಗೋಪಿನಾಥ ಕಾರ್ಯಕ್ಕೆ IMF ಪ್ರಶಂಸೆ
ಗೀತಾ ಗೋಪಿನಾಥ (Gita Gopinath) ಅವರ ಜಾಗವನ್ನು ಶೀಘ್ರದಲ್ಲಿಯೇ ಮತ್ತೆ ಭರ್ತಿ ಮಾಡಲಾಗುವುದು ಎಂದು IMF ಹೇಳಿದೆ. ಗೀತಾ ಕೋರೋಣ ಕಾಲದಲ್ಲಿ ಅದ್ಭುತ ಸೇವೆ ಸಲ್ಲಿಸಿದ್ದಾರೆ ಎಂದು IMF ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲೀನಾ ಜಾರ್ಜೀಯಾ ಹೇಳಿದ್ದಾರೆ. ಗೀತಾ ಅಂತಾರಾಷ್ಟ್ರೀಯ ಹಣಕಾಸು ಮತ್ತು ಸೂಕ್ಷ್ಮ ಅರ್ಥಶಾಸ್ತ್ರದ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿದ್ದು, ಇದು ಸಂಸ್ಥೆಗೆ ಲಾಭದಾಯಕವಾಗಿದೆ ಎಂದು IMF ಹೇಳಿದೆ.

ಗೀತಾ ಗೋಪಿನಾಥ್ ಅವರ ಸಂಕ್ಷಿಪ್ತ ವಿವರ ಇಲ್ಲಿದೆ
IMFಗಾಗಿ ನೀತಿಗಳನ್ನು ರೂಪಿಸಲು ಮತ್ತು ಕಾರ್ಯತಂತ್ರಗಳನ್ನು ರೂಪಿಸಲು ಮತ್ತು ವಿವಿಧ ದೇಶಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ಸಹಾಯ ಮಾಡುವುದರ ಜೊತೆಗೆ, ಗೀತಾ ಜಾಗತಿಕ ಆರ್ಥಿಕತೆಯ ಪ್ರಮುಖ ಸಮೀಕ್ಷೆ ಎಂದು ಪರಿಗಣಿಸಲ್ಪಡುವ ವಿಶ್ವ ಆರ್ಥಿಕ ಔಟ್ಲುಕ್ ವರದಿಯನ್ನು ಸಹ ನೋಡಿಕೊಳ್ಳುತ್ತಾರೆ. ನವದೆಹಲಿಯ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ಪದವಿ ಪಡೆದಿರುವ ಗೀತಾ ಗೋಪಿನಾಥ್ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ನಿಂದ ಎಂಎ ಪದವಿ ಪಡೆದಿದ್ದಾರೆ.

ಇದನ್ನೂ ಓದಿ-Indian Economy: ಆರ್ಥಿಕತೆಯ ವಿಷಯದಲ್ಲಿ ಡ್ರ್ಯಾಗನ್ ಹಿಂದಿಕ್ಕಿದ ಭಾರತ

ನಂತರ ಹೆಚ್ಚಿನ ಅಧ್ಯಯನಕ್ಕಾಗಿ ಪ್ರಿನ್ಸ್ ಟನ್ ವಿಶ್ವವಿದ್ಯಾಲಯಕ್ಕೆ ತೆರಳಿದ್ದಾರೆ. ಅಲ್ಲಿಂದ 2001 ರಲ್ಲಿ ಅರ್ಥಶಾಸ್ತ್ರದಲ್ಲಿ ಅಂತಾರಾಷ್ಟ್ರೀಯ ಸ್ಥೂಲ ಅರ್ಥಶಾಸ್ತ್ರ ಮತ್ತು ವ್ಯವಹಾರದಲ್ಲಿ ಪಿಎಚ್‌ಡಿ ಪಡೆದಿದ್ದಾರೆ. 2005 ರಲ್ಲಿ ಹಾರ್ವರ್ಡ್‌ಗೆ ಹೋಗುವ ಮೊದಲು, ಗೀತಾ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದರು. 2003 ಮತ್ತು 2004 ರಲ್ಲಿ ಜರ್ನಲ್ ಆಫ್ ಇಂಟರ್‌ನ್ಯಾಷನಲ್ ಎಕನಾಮಿಕ್ಸ್‌ನಲ್ಲಿ ಪ್ರಕಟವಾದ ಅತ್ಯುತ್ತಮ ಪೇಪರ್‌ಗಾಗಿ ಅವರಿಗೆ ಭಗವತಿ ಪುರಸ್ಕಾರವನ್ನು ನೀಡಲಾಗಿದೆ.

ಇದನ್ನೂ ಓದಿ-Crypto Currencyಗಳ ಹೆಚ್ಚಾಗುತ್ತಿರುವ ಪ್ರಭಾವದ ಕುರಿತು ಆತಂಕ ವ್ಯಕ್ತಪಡಿಸಿದ IMF ಹೇಳಿದ್ದೇನು?

2014 ರಲ್ಲಿ, ಅವರು IMF ನಿಂದ 45 ವರ್ಷದೊಳಗಿನ ಅಗ್ರ 25 ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದಾರೆ ಮತ್ತು 2011 ರಲ್ಲಿ ಅವರನ್ನು ವಿಶ್ವ ಆರ್ಥಿಕ ವೇದಿಕೆಯ ಯುವ ಜಾಗತಿಕ ನಾಯಕ ಎಂದು ಸಂಬೋಧಿಸಲಾಗಿದೆ. ಅವರ ವಿಸ್ತಾರವಾದ ಸಂಶೋಧನೆ ಮತ್ತು ಬರಹಗಳು 2016 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ನೋಟು ರದ್ದತಿಯ ವಿಮರ್ಶೆಯನ್ನು ಒಳಗೊಂಡಿದೆ. ನೋಟು ರದ್ದತಿಯ ಕೆಲವು ದಿನಗಳ ನಂತರ, ಅವರು ಸರ್ಕಾರದ ಈ (ಡಿಮಾನಿಟೈಸೇಶನ್) ಕ್ರಮವು ಭಾರತೀಯ ಆರ್ಥಿಕತೆಗೆ ಧಕ್ಕೆಯುಂಟುಮಾಡುತ್ತಿದೆ ಎಂದು ಪತ್ರಿಕೆಯಲ್ಲಿ ಬರೆದಿದ್ದರು.

ಇದನ್ನೂ ಓದಿ-India Growth Projection By IMF: ಕೋರೋನಾ ಎರಡನೇ ಅಲೆಯಿಂದ ಭಾರತದ ಆರ್ಥಿಕತೆಗೆ ಭಾರಿ ಪೆಟ್ಟು! ಟೆನ್ಶನ್ ಹೆಚ್ಚಿಸಿದ IMF ವರದಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News